ಮಡಕೆ ದೈವ ಮೊರ ದೈವ ಬೀದಿಯ ಕಲ್ಲು ದೈವ ಹಣಿಗೆ ದೈವ ಬಿಲ್ಲನಾರಿ ದೈವ ಕಾಣಿರೊ ! ಕೊಳಗ ದೈವ ಗಿಣ್ಣಿಲು ದೈವ ಕಾಣಿರೊ ! ದೈವ ದೈವವೆಂದು ಕಾಲಿಡಲಿಂಬಿಲ್ಲ ದೈವನೊಬ್ಬನೆ ಕೂಡಲಸಂಗಮದೇವ.