ಮಣ್ಣಿಲ್ಲದ ಹಾಳ ಮೇಲೆ ಕಣ್ಣಿಲ್ಲದಾತ ಮಣಿಯ ಕಂಡ ಕೈಯಿಲ್ಲದಾತ ಪವಣಿಸಿದ ಕೊರಳಿಲ್ಲದಾತ ಕಟ್ಟಿಕೊಂಡ ! ಅಂಗವಿಲ್ಲದ ಸಿಂಗಾರಕ್ಕೆ ಭಂಗವುಂಟೆ ಗುಹೇಶ್ವರಾ ?