ಮತ್ರ್ಯಲೋಕ ಶಿವಲೋಕವೆಂಬುವು ನಿಚ್ಚಣಿಕೆಯಾದವು,


Title vachana saahitya
Author ChennaBasavanna
Year 1144-1168 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಮತ್ರ್ಯಲೋಕ ಶಿವಲೋಕವೆಂಬುವು ನಿಚ್ಚಣಿಕೆಯಾದವು
ದೇವಾ
ನೀವೀ ಕಲ್ಯಾಣಕ್ಕೆ ಬಂದವತರಿಸಿದಲ್ಲಿ. ಸತ್ಯ ಶರಣರೆಲ್ಲರನು ಪಾವನವ ಮಾಡಲೆಂದು ಬಂದಡೆ
ಜನ್ಮದಲ್ಲಿ ಬಂದನೆಂದೆನಬಹುದೆರಿ ಕರ್ತನ ನಿರೂಪು ಭೃತ್ಯಂಗೆ ಬಂದಲ್ಲಿ
ಆ ಭೃತ್ಯ ಕರ್ತನನರಸಿ ಬಂದನಲ್ಲಾ! ಸತ್ಯ ಸದಾಚಾರವ ಹರಡಿ
ಮತ್ರ್ಯರ ಪಾವನವ ಮಾಡಿ ನಿಜಲಿಂಗ ಸಮಾಧಿಯೊಳು
ನಿಲ್ಲುವರಿನ್ನಾರು ಹೇಳಾ
ನೀವಲ್ಲದೆರಿ ಕೂಡಲಚೆನ್ನಸಂಗಮದೇವರು ಸಾಕ್ಷಿಯಾಗಿ ನಿಮಗೆ ಭವವುಂಟೆಂದು ಮನದಲ್ಲಿ ಹಿಡಿದಡೆ ಸಂಗನಬಸವಣ್ಣಾ ನಿಮ್ಮ ಶ್ರೀಪಾದದಾಣೆ!