ಮನಕ್ಕೆ ಮನೋಹರವಾದಡೆ ಮನಕ್ಕೆ ಭಂಗ ನೋಡಾ. ತನುವಿನಲ್ಲಿ ಸುಖವ ಧರಿಸಿಕೊಂಡಡೆ ಆ ತನುವಿಂಗೆ ಕೊರತೆ ನೋಡಾ. ಅರಿವನರಿದು ಸುಖವಾಯಿತ್ತೆಂದಡೆ [ಆ] ಅರಿವಿಂಗೆ ಭಂಗ ನೋಡಾ_ಗುಹೇಶ್ವರಾ.