ಮನವೆಂಬ ಘನದ ತಲೆಬಾಗಿಲಲ್ಲಿ ಸದಾಸನ್ನಹಿತನಾಗಿಪ್ಪೆ ಎಲೆ ಅಯ್ಯಾ. ಸಕಲ ಪದಾರ್ಥಂಗಳು ನಿಮ್ಮ ಮುಟ್ಟಿ ಬಹವಲ್ಲದೆ ನಿಮ್ಮ ಮುಟ್ಟದೆ ಬಾರವೆಂಬ ಎನ್ನ ಮನದ ನಿಷೆ*ಗೆ ನೀನೆ ಒಡೆಯ ಕೂಡಲಚೆನ್ನಸಂಗಯ್ಯಾ.