ಮನಸ್ಥಂ ಮನಮಧ್ಯಸ್ಥಂ ಮನಸಾ ಮನವರ್ಜಿತಂ ಮನಸಾ ಮನ ಆಲೋಕ್ಯ ಸ್ವಯಂ ಸಿದ್ಧಾಂತಯೋಗಿನಃ ಅರಿದೆನೆಂಬ ಅರಿವು ಅರಿವನೆ ಗುಂಗಿತ್ತು ಮರೆದೆನೆಂಬ ಮರಹು ಮರಹನೆ ನುಂಗಿತ್ತು. ನೆನಹೆ ಅವಧಾನಗೆಟ್ಟಿತ್ತು ಕೂಡಲಚೆನ್ನಸಂಗನೆಂಬ ಲಿಂಗ ಅವಧಾನವಿಲ್ಲಾಗಿ.