ಮನೆಯೆನ್ನದು, ತನುವೆನ್ನದು, ಧನವೆನ್ನದೆನ್ನೆನಯ್ಯಾ.


Title vachana saahitya
Author Akka Mahaadevi
Year 1130-1160 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಮನೆಯೆನ್ನದು
ತನುವೆನ್ನದು
ಧನವೆನ್ನದೆನ್ನೆನಯ್ಯಾ. ಮನ ನಿಮ್ಮದು
ತನು ನಿಮ್ಮದು
ಧನ ನಿಮ್ಮದು ಎಂದಿಪ್ಪೆನಯ್ಯಾ. ಸತಿಯಾನು
ಪತಿಯುಂಟು
ಸುಖ ಉಂಟೆಂಬುದ ಮನ
ಭಾವದಲ್ಲಿ ಅರಿದೆನಾದಡೆ
ನಿಮ್ಮಾಣೆಯಯ್ಯಾ. ನೀನಿರಿಸಿದ ಗೃಹದಲ್ಲಿ ನಿನ್ನಿಚ್ಫೆಯವಳಾಗಿಪ್ಪೆನಲ್ಲದೆ ಅನ್ಯವನರಿಯೆ ಕಾಣಾ ಚೆನ್ನಮಲ್ಲಿಕಾರ್ಜುನಾ.