ಮರುಳುಂಡ ಮನುಷ್ಯನ ಇರವಿನ ಪರಿಯಂತೆ ವಿವರವನರಿಯಬಾರದು ನೋಡಾ_ಶಿವಜ್ಞಾನ. ಅದನರಿದೆಹೆನರಿದೆಹೆನೆಂದು ನೆನೆಯ ಹೋದರೆ ಅದು ಮುಂದುದೋರದು. ಮರೆದೆಹೆನೆಂದು ಭಾವಿಸ ಹೋದಡೆ ತೆರಹುಗೊಡದು ! ಗುಹೇಶ್ವರಾ ನಿಮ್ಮ ನೆರೆ ಅರಿದ ಶರಣರು; ನಿಸ್ಸೀಮಸುಖಿಗಳು ನೋಡಾ.