ಮಹಾಜ್ಞಾನದೊಳಗೆ ಪರಮಾನಂದ ನಿಜಬಿಂದು. ಆ ನಿಜದೊಳಗೆ ಪರಮಾಮೃತ ತುಂಬಿ
ಮೊದಲ ಕಟ್ಟೆಯೊಡೆದು ನಡುವಳ ಕಟ್ಟೆಯನಾಂತುದು
ಮೊದಲ ಕಟ್ಟೆಯು
ನಡುವಳ ಕಟ್ಟೆಯು ಒಡೆದು
ಕಡೆಯ ಕಟ್ಟೆಯನಾಂತುದು
ಮೊದಲ ಕಟ್ಟೆಯು
ನಡುವಳ ಕಟ್ಟೆಯು
ಕಡೆಯ ಕಟ್ಟೆಯು ಕೂಡಿ ಕಟ್ಟೆ ಕಟ್ಟೆಯನಾಂತುದು. ಈ ಮೂರು ಕಟ್ಟೆಯೊಡೆದ ಮಹಾಜಲವನು ಪರಮ ಪದವಾಂತುದು. ಆ ಪರಮ ಪದದಲ್ಲಿ ಎರಗಿ
ನಾನು ಪಾದೋದಕ ಸಂಬಂಧಿಯಾಗಿ
ಎನ್ನ ನಾನರಿಯದಾದೆ ಕಾಣಾ ಗುಹೇಶ್ವರಾ.