ಮಹಾಲಿಂಗಮೋಹಿತನಾದಡೆ ಲೋಕದ ಮೋಹವ


Title vachana saahitya
Author ChennaBasavanna
Year 1144-1168 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಮಹಾಲಿಂಗಮೋಹಿತನಾದಡೆ ಲೋಕದ ಮೋಹವ ಮರೆಯಬೇಕು. ಮಹಾಲಿಂಗಭಕ್ತನಾದಡೆ ಪೂರ್ವಭಕ್ತಿಯ ಮಾಡಲಾಗದು. ಮಹಾಲಿಂಗಪೂಜಕನಾದಡೆ
ಅಜ್ಞಾನಿಗಳ ಕೂಡೆ ಸಂಗ-ಸಂಭಾಷಣೆಯ ಮಾಡಲಾಗದು. ಮಹಾಲಿಂಗವೀರನಾದಡೆ ಪ್ರಳಯಾದಿಗಳಿಗಂಜಲಾಗದು. ಮಹಾಲಿಂಗಪ್ರಸಾದಿಯಾದಡೆ ಸಮತೆ ನೆಲೆಗೊಳ್ಳಬೇಕು. ಮಹಾಲಿಂಗಪ್ರಾಣಿಯಾದಡೆ ಮನದ ಕೊನೆಯಲ್ಲಿ ಲಿಂಗದ ನೆನಹು ಹಿಂಗಲಾಗದು. ಇದು ಕಾರಣ -ಕೂಡಲಚೆನ್ನಸಂಗಯ್ಯನಲ್ಲಿ ಈ ಆರು ಸಹಿತ ಮಹಾಲಿಂಗಭಕ್ತಿ.