ಮಾಂಸಕ್ಕೆ ಮೆಚ್ಚಿದ ಅರಸುಗಳು ನಾಯಂಜಲ ತಿಂದು ನರಕಕ್ಕಿಳಿದು ಹೋದರು. ಸೂಳೆಗೆ ಮೆಚ್ಚಿದವರು ಸೂಳೆಯ ಬಂಟರೆಂಜಲ ತಿಂದು ನರಕಕ್ಕಿಳಿದು ಹೋದರು-ಇದು ಲೋಕವರಿಯಲುಂಟು. ಲಿಂಗವ ಮೆಚ್ಚಿದ ಸದ್ಭಕ್ತರು ಗುರುಲಿಂಗಜಂಗಮದ ಒಕ್ಕು ಮಿಕ್ಕ ಪ್ರಸಾದವ ಕೊಂಡು ಆಗಳೆ ಅಂತೆ ಮೋಕ್ಷವನೈದಿದರು
ಶಿವರಹಸ್ಯದಲ್ಲಿ; ಶ್ವಾನೋಚ್ಛಿಷ್ಟಾಯತೇ ರಾಜಾ ವೇಶ್ಯೋಚ್ಛಿಷ್ಟಂ ಜಗತ್ತ್ರಯಂ ಜಂಗಮೋಚ್ಛಿಷ್ಟಭುಂಜಾನೋ ಸದ್ಯೋ ಮುಕ್ತೋ ನ ಸಂಶಯಃ ಎಂದುದಾಗಿ ಗುರುಲಿಂಗಜಂಗಮದ ಪ್ರಸಾದವ ಕೊಂಬವರ ಕಂಡು ನಿಂದಿಸುವರ ಬಾಯಲ್ಲಿ ಬಾಲಹುಳು ಸುರಿಯದೆ ಮಾಣ್ಬವೆ ಕೂಡಲಚೆನ್ನಸಂಗಮದೇವಾರಿ