ಮಾಡಬಾರದ ಭಕ್ತಿಯನೆ ಮಾಡಿ ನೋಡಬಾರದ ನೋಟವನೆ ಕೂಡಿ ಸ್ತುತಿಸುವರೆ ಸ್ತುತಿಗೆ ಬಾರದೆ ಮುಟ್ಟುವ[ರೆ] ಮುಟ್ಟಬಾರದೆ ಬಟ್ಟಬಯಲಾಗಿ ಹೋದ ಮರುಳುಶಂಕರದೇವರ ಮಹಾತ್ಮೆಗೆ ನಮೋ ನಮೋ ಎಂದು ಬದುಕಿದೆನು ಕಾಣಾ ಕೂಡಲಚೆನ್ನಸಂಗಮದೇವಾ