ಮಾಡಿದ ಮಾಟವನರಿಯದ ಭಕ್ತ. ಕೂಡಿದ ಕೂಟವನರಿಯದ ಭಕ್ತ. ಮಾಟ ಕೂಟವೆಂಬ ಕೋಟಲೆಯನುಳಿದ ನಿಸ್ಸಂಗತ್ವ ನಿರಾಭಾರಿ ನಿಸ್ಸೀಮ ನಿರ್ದೇಹಿ ನಿಜದಲ್ಲಿ ಅಡಗಿದ ನಿತ್ಯ ಮುಕ್ತನಯ್ಯಾ ಭಕ್ತನು ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.