ಮಾಡಿ ಮಾಟವ ಮರೆದು ಕೂಡಿ ಕೂಟವ ಮರೆದು ಬಯಲ ಸಮರಸದೊಳಗೆ ಬಯಲ ಬಯಲಾಗಿಪ್ಪವರಾರು ಹೇಳಾ ಬಸವಣ್ಣನಲ್ಲದೆ ? ತನ್ನ [ಅ] ಭಿನ್ನವ ಮಾಡಿ ಅನ್ಯವೇನೂ ಇಲ್ಲದೆ ತನ್ನ ತಾ ಮರೆದಿಪ್ಪವರಾರು ಹೇಳಾ ಬಸವಣ್ಣನಲ್ಲದೆ ? ಗುಹೇಶ್ವರಾ ನಿಮ್ಮ ಶರಣ ಸಂಗಬಸವಣ್ಣನ ನಿಲವಿಂಗೆ ನಮೋ ನಮೋ ಎಂಬೆನು.