ಮಾತಿನಲ್ಲಿ ಶುದ್ಧವಿಲ್ಲದವರು ಶರಣರೆ ? ಮನದಲ್ಲಿ ನಿಜವಿಲ್ಲದವರು ಶರಣರೆ ? ಇಂದ್ರಿಯಂಗಳಿಗೆ ಮೈಗೊಡುವವರು ಶರಣರೆ ? ವಿಷಯಕ್ಕೆ ಮುಂದುವರಿವವರು ಶರಣರೆ ? ಅಲ್ಲಲ್ಲ
ಹಿಂದಣ ಮರವೆ ಮುಂದಣ ಎಚ್ಚರಿಕೆಯನರಿತು ಜಾಗ್ರ ಸ್ವಪ್ನ ಸುಷುಪ್ತಿಯ ಹರಿದು
ನಿರಾಳಲಿಂಗದಲ್ಲಿ ನಿಂದಾತ ಶರಣನಲ್ಲದೆ
ಬಣ್ಣಗಾರ ಬಾಯಬಡುಕ ಭವದುಃಖಿಗಳ ಶರಣರೆಂದಡೆ ನಗುವರಯ್ಯಾ ನಿಮ್ಮ ಶರಣರು ಅಖಂಡೇಶ್ವರಾ.