ಮಾಯದ ಕಾಯದಲ್ಲಿ ಹುಟ್ಟಿದ ಕಷ್ಟಗುಣಂಗಳ ಬಿಟ್ಟು ನಿಷೆ*ಯಿಂದ ಬಂದು ನಿಮ್ಮ ಚರಣಕೆರಗಿದೆನು ಮೊರೆಹೊಕ್ಕೆನು ಕೃಪೆಯಿಂದಲೆನಗೆ ಉಪದೇಶಪ್ರಸಾದವನಿತ್ತು ಸಲಹಾ ಬಸವಣ್ಣಗುರುವೆ ಕೂಡಲಸಂಗಮದೇವಾ