ಮೀಸಲು ಬೀಸರವಾಗದ ಪರಿಯ ನೋಡಾ: ಕಾಲು ತಾಗಿದ ಅಗ್ಘವಣಿ ಕೈಮುಟ್ಟಿದ ಅರ್ಪಿತ ಮನಮುಟ್ಟಿದ ಆರೋಗಣೆಯನೆಂತು ಘನವೆಂಬೆನಯ್ಯಾ ಬಂದ ಪರಿಯಲಿ ಪರಿಣಾಮಿಸಿ ನಿಂದ ಪರಿಯಲಿ ನಿಜಮಾಡಿ ಆನೆಂದ ಪರಿಯಲಿ ಕೈಕೋ ಕೂಡಲಸಂಗಮದೇವಾ.