ಮುಂಗಾರು ಮಳೆ - ಮುಂಗಾರು ಮಳೆಯೆ

ಚಿತ್ರ: ಮುಂಗಾರು ಮಳೆ
ಸಾಹಿತ್ಯ: ಯೋಗ್ ರಾಜ್ ಭಟ್
ಸಂಗೀತ: ಮಾನೋ ಮೂರ್ತಿ
ಗಾಯನ: ಸೋನು ನಿಗಮ್


ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ
ನಿನ್ನ ಮುಗಿಲ ಸಾಲೇ, ಧರೆಯ ಕೊರಳ ಪ್ರೇಮದ ಮಾಲೆ,
ಸುರಿವ ಒಲುಮೆಯ ಜಡಿ ಮಳೆಗೆ,ಪ್ರೀತಿ ಮೂಡಿದೇ
ಯಾವ ಚಿಪ್ಪಿನಲೀ ಯಾವ ಹನಿಯು ಮುತ್ತಾಗುವುದೋ
ಒಲವು ಎಲ್ಲಿ ಕುಡಿಯೊಡೆಯುವುದೋ, ತಿಳಿಯದಾಗಿದೆ | ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ

ಭುವಿ ಕೆನ್ನೆ ತುಂಬಾ ಮುಗಿಲು ಸುರಿದ ಮುತ್ತಿನ ಗುರುತು
ನನ್ನ ಎದೆಯ ತುಂಬಾ ಅವಳು ಬಂದ ಹೆಜ್ಜೆಯ ಗುರುತು,
ಹೆಜ್ಜೆ ಗೆಜ್ಜೆಯಾ ಸವಿ ಸದ್ದು, ಪ್ರೇಮ ನಾದವೋ,
ಎದೆ ಮುಗಿಲಿನಲ್ಲೀ ರಂಗು ಚೆಲ್ಲಿ ನಿಂತಳು ಅವಳು,
ಬರೆದು ಹೆಸರ ಕಾಮನ ಬಿಲ್ಲು, ಏನು ಮೋಡಿಯೋ | ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ

ಯಾವ ಹನಿಗಳಿಂದಾ ಯಾವ ನೆಲವು ಹಸಿರಾಗುವುದೋ
ಯಾರ ಸ್ಪರ್ಶದಿಂದಾ ಯಾರ ಮನವು ಹಸಿಯಾಗುವುದೋ,
ಯಾರ ಉಸಿರಲ್ಯಾರ ಹೆಸರೋ,ಯಾರು ಬರೆದರೋ,
ಯಾವ ಪ್ರೀತಿ ಹೂವೂ ಯಾರ ಹೃದಯದಲ್ಲರಳುವುದೊ,
ಯಾರ ಪ್ರೇಮ ಪೂಜೆಗೆ ಮುಡಿಪೊ, ಯಾರು ಬಲ್ಲರೋ | ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ

ಒಲವ ಚಂದಮಾಮ ನಗುತ ಬಂದ ಮನದಂಗಳಕೆ,
ಪ್ರೀತಿ ಬೆಳಕಿನಲೀ ಹೃದಯ ಹೊರಟಿತೇ ಮೆರವಣಿಗೆ,
ಅವಳ ಪ್ರೇಮದೂರಿನ ಕಡೆಗೆ,ಪ್ರೀತಿ ಪಯಣವೋ,
ಪ್ರಣಯದೂರಿನಲ್ಲೀ ಕಳೆದು ಹೋಗೊ ಸುಖವ ಇಂದು
ಧನ್ಯನಾದೆ ಪಡೆದುಕೊಂಡು, ಹೊಸ ಜನ್ಮವೊ | ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ