ಮುಕ್ತಿಯೆಂದು ಮನದಲ್ಲಿ ಹೊಳೆದು


Title vachana saahitya
Author ChennaBasavanna
Year 1144-1168 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಮುಕ್ತಿಯೆಂದು ಮನದಲ್ಲಿ ಹೊಳೆದು ಕಾಮಿಸುವನ್ನಕ್ಕ ಪ್ರಸಾದಸಾಹಿತ್ಯವಾಗದು. ಪರವೆಂದು ಮನದಲ್ಲಿ ಹೊಳೆದು ಕಾಮಿಸುವನ್ನಕ್ಕ ಜಂಗಮಸಾಹಿತ್ಯವಾಗದು. ಲಿಂಗವ ಬೆರಸಿಹೆನೆಂದು ಮನದಲ್ಲಿ ಹೊಳೆದು ಕಾಮಿಸುವನ್ನಕ್ಕ ಶಿವಲಿಂಗಸಾಹಿತ್ಯವಾಗದು. ವಿಶೇಷ ತತ್ವ ಉಂಟೆಂದು ಮನದಲ್ಲಿ ಹೊಳೆದು ಕಾಮಿಸುವನ್ನಕ್ಕ ಶ್ರೀಗುರುಸಾಹಿತ್ಯವಾಗದು. ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ_ ಇಂತೀ ಚದುರ್ವಿಧಲಿಂಗ ಏಕೀಕರಿಸಿ ಪ್ರಾಣಲಿಂಗವಾದ ಮಹಾಮಹಿಮಂಗೆ ಕಾಮಿಸಲಿಲ್ಲ
ಕಲ್ಪಿಸಲಿಲ್ಲ
ಭಾವಿಸಲಿಲ್ಲ ಚಿಂತಿಸಲಿಲ್ಲ. ಆತ ನಿಶ್ಚಿಂತ ಪರಮಸುಖಿ
ಆತನಿರ್ದುದೆ ಕೈಲಾಸ
ಕೂಡಲಚೆನ್ನಸಂಗಮದೇವಾ.