ಮುತ್ತು ನೀರಲ್ಲಿ ಹುಟ್ಟಿ ಮತ್ತೆ ನೀರಪ್ಪುದೆ ಗುರುಕಾರುಣ್ಯವ ಹಡೆದ ಭಕ್ತನು ಹಿಂದಣ ಪೂರ್ವಾಶ್ರಯವ ಬೆರಸಿದಡೆ
ಗುರುದ್ರೋಹ ಲಿಂಗದ್ರೋಹ ಜಂಗಮದ್ರೋಹ ಆಚಾರದ್ರೋಹ ಪ್ರಸಾದದ್ರೋಹ. ಇಂತೀ ಪಂಚಮಹಾಪಾತಕಂಗಳು ಭಕ್ತಂಗಲ್ಲದೆ ಭವಿಗೆಲ್ಲಿಯದೊ ಗುರುವಿದು
ಲಿಂಗವಿದು
ಜಂಗಮವಿದು ಆಚಾರವಿದು
ಪ್ರಸಾದವಿದೆಂದರಿಯದಿದ್ದಡೆ ಕುಂಭಿಪಾತಕ ನಾಯಕನರಕ ಕೂಡಲಸಂಗಮದೇವಾ.