ಮುನ್ನವೆ ಮುನ್ನವೆ ಮೂರರ ಹಂಬಲ ಹರಿದು
ಚರ ಪರ ವಿರಕ್ತನಾದ ಬಳಿಕ
ಇನ್ನು ಮೂರರ ಚಿಂತೆಯ ಹಂಬಲೇಕೆ? ಆವಾವ ಜೀವಂಗಳು ತಮ್ಮ ತಮ್ಮ ಮಲವ ಮುಟ್ಟವು. ತೊಂಡು ಮುಚ್ಚಿದ ಜೀವಧನದಂತೆ
ಊರೂರ ತಪ್ಪಲು ಹರಿದು
ಜೋಗಿಯ ಕಯ್ಯ ಕೋಡಗದಂತೆ ಅನ್ಯರಿಗೆ ಹಲ್ಲಕಿರಿದು
ವಿರಕ್ತನೆನಿಸಿಕೊಂಬ ಯುಕ್ತಿಹೀನರ ಕಂಡಡೆ
ಎನ್ನ ಮನ ನಾಚಿತ್ತು ಚೆನ್ನರಾಮ.