ಮುನ್ನಿನ ಪರಿಯಂತುಟಲ್ಲ. ಆದಡೆಂತಹುದು? ಆಗದಡೆಂತಾಯಿತ್ತು ? (ಆದಡಿಂತಹುದೆ ? ಆಗದಡಿಂತಾಯಿತ್ತು) ಹಲವು ಪರಿ ಬಗೆಯ ಬಯಕೆ ತಾರ್ಕಣೆಯಾದಂತೆ ಗುಹೇಶ್ವರಲಿಂಗ ತನುವ ತನ್ನತ್ತಲೊಯ್ದನು.