ಮುನ್ನೂರರುವತ್ತು ದಿನ ಶ್ರವವ ಮಾಡಿ ಕಳನೇರಿ ಕೈಮರೆದಂತಾುತ್ತೆನ್ನ ಭಕ್ತಿ. ಎನಿಸು ಕಾಲ ಲಿಂಗಾರ್ಚನೆಯ ಮಾಡಿ ಏವೆನಯ್ಯಾ ಮನದಲ್ಲಿ ದೃಢವಿಲ್ಲದನ್ನಕ್ಕ ಕೊಡನ ತುಂಬಿದ ಹಾಲ ಕೆಡಹಿ ಉಡುಗಲೆನ್ನಳವೆ ಕೂಡಲಸಂಗಮದೇವಾ 298