ಮೂರೊಂದಾದ ಕಿಚ್ಚು ಧಾರಿಣಿಯೆಲ್ಲವ ಸುಡುವುದ ಕಂಡೆ. ಧರೆಯ ಮೇಲಣ ಮನುಜರು ಉರಿಯ ಬೀಜವ ಪವಣಿಗೆಯ ಮಾಡಿ ಶರೀರವನಳಿದು ಸದಾಶಿವ ಸದಾಶಿವಯೆನುತ್ತ ಮನುಜತ್ವವಳಿದು ದೇವನಾದುದ ಕಂಡು ಇದ ಶಿವಜೀವೈಕ್ಯವೆಂಬೆನು ಕಾಣಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.