ಮೇರುಗುಣವನರಸುವುದೆ ಕಾಗೆಯಲ್ಲಿ ಪರುಷಗುಣವನರಸುವುದೆ ಕಬ್ಬುನದಲ್ಲಿ ಸಾಧುಗುಣವನರಸುವುದೆ ಅವಗುಣಿಯಲ್ಲಿ ಚಂದನಗುಣವನರಸುವುದೆ ತರುಗಳಲ್ಲಿ ಸರ್ವಗುಣಸಂಪನ್ನ ಲಿಂಗವೆ ನೀನೆನ್ನಲ್ಲಿ ಅವಗುಣವನರಸುವರೆ ಕೂಡಲಸಂಗಮದೇವಾ 67