ಅಂಗಿರಸ

ಮಹರ್ಷಿ ಮತ್ತು ದೇವತೆಗಳಿಗೆ ಪುರೋಹಿತ. ಯಾಗಗಳಲ್ಲಿ ಇವನ ಪಾತ್ರ ಹಿರಿದು. ಬ್ರಹ್ಮಮಾನಸಪುತ್ರನೆಂದೂ ಅಗ್ನಿಯ ತಂದೆಯೆಂದೂ ಅಗ್ನಿಯ ಮಗಳಾದ ಆಗ್ನೇಯಿಯ ಪುತ್ರನೆಂದೂ ಈತನ ಕುಲ ಗೋತ್ರದ ವಿಚಾರವಾಗಿ ನಾನಾ ಅಭಿಪ್ರಾಯಗಳಿವೆ. ಸತಿ ಎಂಬ ಪತ್ನಿಯಲ್ಲಿ ಅಥರ್ವಾಂಗಿರಸವನ್ನು ಪಡೆದ. ಒಮ್ಮೆ ಅಗ್ನಿ ಕೋಪಗೊಂಡು ಎಲ್ಲೋ ಅವಿತುಕೊಂಡಾಗ ಬ್ರಹ್ಮ ಅವನ ಸ್ಥಾನಕ್ಕೆ ಅಂಗಿರಸವನ್ನು ನಿಯಮಿಸಿದನೆಂದೂ ಕೊಂಚ ಕಾಲದ ಅನಂತರ ಅಗ್ನಿ ಪಶ್ಚಾತ್ತಾಪದಿಂದ ಹಿಂತಿರುಗಿದಾಗ ಅವನ ಸ್ಥಾನವನ್ನು ಬಿಟ್ಟುಕೊಟ್ಟನೆಂದೂ ಮಹಾಭಾರತದ ವನಪರ್ವದಲ್ಲಿ ಉಲ್ಲೇಖವಿದೆ.                     

 (ಎ.ಎಂ.)