ಅಂಗ, ಲಿಂಗ ಸಂಪಾದಿಸಿ

ವೀರಶೈವ ದರ್ಶನದಲ್ಲಿ ಕಾಣಬರುವ ಬಹು ಮುಖ್ಯವಾದ ಪಾರಿಭಾಷಿಕ ಪದಗಳು. ಅಂಗ ಎಂದರೆ ಜೀವ, ಲಿಂಗ ಎಂದರೆ ಶಿವ. ಜೀವಾತ್ಮ ಮತ್ತು ಪರಮಾತ್ಮರ ಐಕ್ಯ ಎಂದು ವೇದಾಂತಿಗಳು ಹೇಳುವ ಮಾತನ್ನು ಲಿಂಗಾಂಗ ಸಾಮರಸ್ಯ ಎಂದು ವೀರಶೈವರು ಹೇಳುತ್ತಾರೆ.