ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂತಃಕ್ಷೇಪೋಕ್ತಿ

ಅಂತಃಕ್ಷೇಪೋಕ್ತಿ

ಸಂಪಾದಿಸಿ

(ಇಂಟರ್ಪೊಲೇಷನ್ ಫಾರ್ಮುಲ) ಆಧುನಿಕ ಅಂಕಶಾಸ್ತ್ರಕ್ಕೆ ಒಂದು ಅಂಗವಾದ ಅಂತಃಕ್ಷೇಪ ಸಿದ್ಧಾಂತವೆಂಬ ಶಾಸ್ತ್ರದಲ್ಲಿ ಬ್ರಹ್ಮಗುಪ್ತನೆಂಬುವನು ಖಂಡಖಾದ್ಯಕವೆಂಬ ತನ್ನ ಇನ್ನೊಂದು ಗ್ರಂಥದಲ್ಲಿ ಮೊಟ್ಟಮೊದಲನೆಯ ಉಕ್ತಿಯನ್ನು ಕೊಟ್ಟು ಹೊಸದೊಂದು ಶಾಸ್ತ್ರವನ್ನು ಆರಂಭಿಸಿದನು. ಇದನ್ನು ಭಾರತದಲ್ಲಿ ಯಾರೂ ಮುಂದುವರಿಸಲಿಲ್ಲ. ಬ್ರಹ್ಮಗುಪ್ತನ ಉಕ್ತಿಯನ್ನು ನ್ಯೂಟನ್-ಸ್ಟರ್ಲಿಂಗ್ ಸಂಕ್ಷೇಪೋಕ್ತಿಗೆ ಹೋಲಿಸಬೇಕು.