ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂತರರಾಷ್ಟ್ರೀಯ ಬಾಕಿ ಪಾವತಿ

 ಮೂಲದೊದನೆ ಪರಿಶೀಲಿಸಿ

ಅಂತರರಾಷ್ಟ್ರೀಯ ಬಾಕಿ ಪಾವತಿ

  ವ್ಯಾಪಾರದ ಬಾಕಿಯನ್ನು ತೀರಿಸಲು ಒಂದು ದೇಶ ಇನ್ನೊಂದಕ್ಕೆ ಹಣ ಸಂದಾಯ ಮಾಡುತ್ತದಷ್ಟೇ. ದೇಶಗಳ ನಡುವೆ ಜರಗುವ ಈ ಹಣ ಸಂದಾಯವನ್ನು ಅಂತರರಾಷ್ಟ್ರೀಯ ಬಾಕಿ ಪಾವತಿ ಎನ್ನುತ್ತಾರೆ.

ಯಾವ ದೇಶದ ನಾಣ್ಯದಲ್ಲಿ ಅಂತರರಾಷ್ಟ್ರೀಯ ಹಣ ಸಂದಾಯ ಮಾಡುವುದು? ಕೊಂಡ ದೇಶದ ಹಣದಲ್ಲೇ, ಮಾರಿದ ದೇಶದ ಹಣದಲ್ಲೇ ಅಥವಾ ಮತ್ತೊಂದು ದೇಶದ ಹಣದಲ್ಲೇ ಎನ್ನುವ ಪ್ರಶ್ನೆ ಏಳುವುದು. ಈ ವಿಷಯದಲ್ಲಿ ವ್ಯಾಪಾರಕ್ಕೊಳಗಾದ ದೇಶಗಳು ಹೇಗೆ ಒಪ್ಪಂದ ಮಾಡಿಕೊಂಡರೂ ಕೊನೆಯಲ್ಲಿ ಒಂದು ದೇಶದ ನಾಣ್ಯ ಇನ್ನೊಂದಕ್ಕೆ ಒಪ್ಪಿಗೆಯಾದ ನಾಣ್ಯವಾಗಿ ಪರಿವರ್ತನೆಯಾಗದೆ ವಿಧಿಯಿಲ್ಲ.

ಪ್ರಪಂಚದಲ್ಲಿ ಚಲಾವಣೆಯಲ್ಲಿರುವ ನಾಣ್ಯಗಳೆಲ್ಲ ಒಂದರಿಂದ ಇನ್ನೊಂದಕ್ಕೆ ನಿರಾತಂಕವಾಗಿ ಪರಿವರ್ತನೆಯಾಗುವುದು ಅಂತರರಾಷ್ಟ್ರೀಯ ಹಣಕಾಸಿನ ವ್ಯವಸ್ಥೆ ಮತ್ತು ಭದ್ರತೆಗೆ ತಳಹದಿ. ಹಾಗಾದ ಪಕ್ಷದಲ್ಲಿ ಅಂತರರಾಷ್ಟ್ರೀಯ ವ್ಯಾಪಾರ ವ್ಯವಹಾರದ ಜೊತೆಗೆ ಅಂತರರಾಷ್ಟ್ರೀಯ ಹಣಕಾಸಿನ ಸಾಧನ ಸಂಪತ್ತುಗಳು ಬೆಳೆಯುವುವು. ಇದರಿಂದ ಅಂತರರಾಷ್ಟ್ರೀಯ ಹಣಕಾಸಿನ ಮೌಲ್ಯ ಹೆಚ್ಚುವುದು. ಆದರೆ ನಾಣ್ಯಗಳ ನಿರಾತಂಕ ಪರಿವರ್ತನೆಗೆ ಇರುವ ಅಡ್ಡಿ ಆತಂಕಗಳೇ ಇಂದಿನ ಹಣಕಾಸು ಪ್ರಪಂಚದ ವಿಶೇಷ ಲಕ್ಷಣವಾಗಿದೆ. ಪ್ರತಿಯೊಂದು ದೇಶವು ಒಂದಲ್ಲೊಂದು ನಿರ್ಬಂಧವನ್ನು ವಿಧಿಸಲು ಹಿಂಜರಿದಿಲ್ಲ. ಹಾಗೆಯೇ ವಿದೇಶಿ ವಿನಿಮಯಗಳ ಮೇಲೆ ಹತೋಟಿಯನ್ನಿಡದ ರಾಷ್ಟ್ರವೊಂದಿಲ್ಲ.

ಬಂಗಾರ ಪ್ರಪಂಚದ ಎಲ್ಲಾ ರಾಷ್ಟ್ರಗಳು ನಿಸ್ಸಂಕೋಚವಾಗಿ ತೆಗೆದುಕೊಳ್ಳುವ, ತೀವ್ರವಾಗಿ ಬಯಸುವ ಅಂತರರಾಷ್ಟ್ರೀಯ ಹಣಸಂದಾಯ ಸಾಧನ. ಆದರೆ ಈ ಲೋಹದ ವಾರ್ಷಿಕ ಉತ್ಪತ್ತಿ ಸಾಕಷ್ಟಿಲ್ಲದೆ ಬಹಳ ಕಡಿಮೆಯಾಗಿದೆ; ಅಲ್ಲದೆ ಉತ್ಪತ್ತಿಯ ಸಣ್ಣ ಭಾಗ ಮಾತ್ರ ಹಣಕಾಸಿನ ವ್ಯವಸ್ಥೆಗೆ ದೊರಕುತ್ತಿದೆ. ಜೊತೆಗೆ ವಿಶ್ವದ ಹಣಕಾಸಿನ ವ್ಯವಹಾರಕ್ಕೆ ಬರುವ ಬಂಗಾರವೆಲ್ಲ ಕೆಲವೇ ರಾಷ್ಟ್ರಗಳ ಹಿಡಿತದಲ್ಲಿರುವುದರಿಂದ ಅಂತರರಾಷ್ಟ್ರೀಯ ಹಣಕಾಸಿನ ಮೌಲ್ಯ ಹೆಚ್ಚಿಸಲು ಬಂಗಾರ ಪ್ರಯೋಜನಕಾರಿಯಾಗಿಲ್ಲ.

ಆದುದರಿಂದ ಪ್ರತಿಯೊಂದು ದೇಶವು ತನ್ನ ಹಣ ಸಂದಾಯ ಸ್ಥಿತಿಯನ್ನು ನೇರವಾಗಿಟ್ಟುಕೊಳ್ಳಲು ಪ್ರಯತ್ನಿಸುತ್ತಿರುತ್ತದೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಇದಕ್ಕಾಗಿ ಒಂದು ನಿಯಮಿತ ಕಾಲಾವಧಿಯಲ್ಲಿ ವಿಶ್ವದ ವಿವಿಧ ರಾಷ್ಟ್ರಗಳಿಂದ ತನಗೆ ಮತ್ತು ತನ್ನ ದೇಶೀಯರಿಗೆ ಬರಬೇಕಾದ ಮತ್ತು ಮಿಕ್ಕೆಲ್ಲಾ ದೇಶಗಳಿಗೂ ಮತ್ತು ದೇಶೀಯರಿಗೂ ತಾನು ಕೊಡಬೇಕಾದ ಆಯವ್ಯಯಪಟ್ಟಿಯನ್ನು ಪ್ರತಿಯೊಂದು ದೇಶವು ತಯಾರಿಸುತ್ತದೆ. ಈ ಲೆಕ್ಕಾಚಾರವನ್ನೇ ಹಣಸಂದಾಯ ಸಮತೋಲನವೆನ್ನುವುದು. ಮಿಕ್ಕೆಲ್ಲಾ ಆಯವ್ಯಯಗಳ ಪಟ್ಟಿಯಂತೆ ಈ ಲೆಕ್ಕದ ಎರಡು ಭಾಗಗಳನ್ನು ಪರಸ್ಪರ ಸರಿತೂಗಿಸಿರುತ್ತದೆ. ಈ ಎರಡೂ ಭಾಗಗಳ ಸರಿಸಮಾನತೆ ದೇಶದ ಹಣ ಸಂದಾಯ ಸ್ಥಿತಿಯಲ್ಲಿ ಸಮತೆ ಇದೆಯೆಂದು ಹೇಳುವುದಿಲ್ಲ. ಹೇಗೆಂದರೆ, ದೇಶದ ಹಣಸಂದಾಯ ಸ್ಥಿತಿಯಲ್ಲಿ ಅಸಮತೆ ಇದ್ದಾಗಲೂ ಕೂಡ ಹಣಸಂದಾಯ ಸಮತೋಲನ ಸಮವಾಗಿಯೇ ಇರುವುದು. ಸರಿಸಮಾನತೆಯನ್ನು ಗಳಿಸಲು ಕೈಗೊಂಡ ವಿವರಗಳನ್ನು ತೋರಿಸುವುದು ಈ ಲೆಕ್ಕದ ವೈಶಿಷ್ಟ್ಯವೆನ್ನಬಹುದು. ಒಂದು ದೇಶದ ಹಣಸಂದಾಯ ವ್ಯವಹಾರಗಳ ತಪಶೀಲುಗಳನ್ನು ತೋರಿಸುವುದಲ್ಲದೆ ಈ ವ್ಯವಹಾರವನ್ನು ಸರಿಸಮಗೊಳಿಸಲು ಮಾಡಿದ ಏರ್ಪಾಡುಗಳನ್ನು ತೋರಿಸುವುದು ಹಣ ಸಂದಾಯ ಸಮತೋಲನದ ಮುಖ್ಯೋದ್ದೇಶವೆನ್ನಬಹುದು.

1965-66 ನೆಯ ಸಾಲಿಗೆ ಅನ್ವಯಿಸುವ ಹಣಸಂದಾಯ ಸಮತೋಲನವನ್ನು ಈ ಪಟ್ಟಿಯಲ್ಲಿ ತೋರಿಸಿದೆ.

 

ಭಾರತ ದೇಶದ 1965-66ನೆಯ ಸಾಲಿನ ಹಣಸಂದಾಯ ಸಮತೋಲನ 

ಜಮಾ ಕೋಟಿ ರೂಪಾಯಿಗಳಲ್ಲಿ

Iಣ ಕೋಟಿ ರೂಪಾಯಿಗಳಲ್ಲಿ

 1. ವ್ಯಾಪಾg:

 ರಫ್ತುಗಳು

 ವ್ಯಾಪಾg ವ್ಯಾತ್ಯಾಸ

2. ಹಣಕಾಸಿಗಲ್ಲದ

 

 

(-553.5)

 

 

 781.8

 

 

ಆಮದು

 

1335.3

 ಂUg

3.ಅಗೋZgಗಳು:

 ರಫ್ತುಗಳು

 ವ್ಯತ್ಯಾಸ

 ಒಟ್ಟು ಚಾಲ್ತಿ

 Svಯ ವ್ಯತ್ಯಾಸ

4.ಂಡವಾಳ:

ಖಾಸಗಿ ಮತ್ತು

ಸರ್ಕಾರಿ Sv

ಗಳಿಂದ

 ವ್ಯತ್ಯಾಸ

 

 

 

 

 

 

 

 

 

ಒಟ್ಟು ವ್ಯತ್ಯಾಸ (ಚಾಲಕ + ಬಂಡವಾಳ Svಗಳು) ವಿದೇಶೀ ನೆರವು ವಿದೇಶೀ ವಿನಿಮಯದ ನಿಧಿಯಿಂದ ಂvUzದ್ದು

ಒಟ್ಟು ಮೊತ್ತ

 

(-69.2)

(-627.7)

 

 

 

 

(-7.2)

 

 

 

 

 

 

 

 

(-736.1)

 

 

201.3

 

 

 

 

 

 

198.8

 

 

 

 

 

 

 

 

 

 

 

 

 

 

718.9

 

17.2

1942.9

 

 

 

 

 

 

 

 

 

 

 

 

 

 

Iಣ ವಿಮೋಚನಾ ನಿಧಿU ಅಂvgರಾಷ್ಟ್ರೀಯ ಹಣ ಕಾಸಿನ ಸಂಸ್ಥೆಯಿಂz ವಾಪಸು ಕೊಂಡ ರೂಪಾಯಿಗಳು ಬ್ಯಾಂಕುಗಳ ಬಂಡವಾಳ ತಪ್ಪು ನೆಪ್ಪುಗಳು

 

 

 

 

 

ಒಟ್ಟು ಮೊತ್ತ

 

 

 

 

 

 

 

 

 

 

 

(-124.0)

 

 

 270.5

 

 

 

206.0

 

 82.9

 

 

 

 

35.7

12.5

 

 

 

 

1942.9

 

ಇದರಲ್ಲಿ ಭಾರತದೇಶದ ಅಂತರರಾಷ್ಟ್ರೀಯ ಹಣಕಾಸಿನ ವ್ಯಾಪಾರ - ವ್ಯವಹಾರವನ್ನೆಲ್ಲಾ ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ. ಮೊದಲನೆ ಮೂರು ಭಾಗಗಳು ಚಾಲ್ತಿಖಾತೆಗೂ ಕೊನೆಯದು ಬಂಡವಾಳ ಖಾತೆಗೂ ಸೇರಿದೆ. ಪ್ರತಿಯೊಂದು ಭಾಗದಲ್ಲೂ ಕಂಡುಬರುವ ವ್ಯತ್ಯಾಸ ಋಣಾಧಿಕ್ಯಾದಿಂದಾಯಿತೆ, ಇಲ್ಲ ಆಯಾಧಿಕ್ಯಾದಿಂದಾಯಿತೆ ಎಂದು ಗುರುತಿಸಬಹದು. ಒಟ್ಟಿನಲ್ಲಿ ಕಂಡುಬರುವ ವ್ಯತ್ಯಾಸವನ್ನು ಹೇಗೆ ಸರಿಸಮಗೊಳಿಸಿದೆ ಎಂದು ಕೊನೆಯಲ್ಲಿ ವಿವರಿಸಿದೆ.

ಅಂತರರಾಷ್ಟ್ರೀಯ ವ್ಯಾಪಾರದ ತಪಶೀಲುಗಳನ್ನು ಮೊದಲನೆಯ ಭಾಗದಲ್ಲಿ ತೋರಿಸಿದೆ. ಇದು ಸಾಮಾನು ಸರಂಜಾಮುಗಳು ಮತ್ತು ಸೇವಾಸೌಕರ್ಯಗಳ ಆಮದು-ರಫ್ತುಗಳನ್ನು ಸೂಚಿಸುತ್ತದೆ. ಕೊನೆಯಲ್ಲಿ ಕಂಡುಬರುವ ತಃಖ್ತೆಯ ಪ್ರಕಾರ ನಿವ್ವಳ ರಫ್ತಿನಿಂದಾದ ವ್ಯಾಪಾರ ವ್ಯತ್ಯಾಸ 553.5 ಕೋಟಿ ರೂಪಾಯಿಗಳು. ಈ ಭಾಗದ ಋಣಾಧಿಕ್ಯದ ಮೊತ್ತವನ್ನು (-553.5 ಕೋಟಿ ರೂಪಾಯಿಗಳು) ತೋರಿಸಿದೆ.

ಎರಡನೆ ಭಾಗ ಹಣಕಾಸಿಗಲ್ಲದ ಬಂಗಾರದ ಚಲನವಲನಗಳನ್ನು ತೋರಿಸುತ್ತದೆ. ಈ ವ್ಯವಹಾರವನ್ನು ಸರ್ಕಾರ ನಿಷೇಧಿಸಿರುವುದರಿಂದ ಆ ಸಾಲಿನಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಯಾವ ವಿಧವಾದ ವ್ಯವಹಾರವೂ ಜರುಗಲಿಲ್ಲವೆಂದು ಕಂಡುಬರುತ್ತದೆ.

ಮೂರನೆಯ ಭಾಗದ ಕೆಳಗೆ ಸಾಲಸೋಲಗಳ ಮೇಲಿನ ಬಡ್ಡಿ ಮತ್ತು ಸಾದಿಲ್ವಾರು, ಪ್ರವಾಸಿಗಳ ಖರ್ಚುವೆಚ್ಚ, ವಿಮಾಖರ್ಚು ಮತ್ತು ಸಾರಿಗೆ ಖರ್ಚುಗಳೆಲ್ಲವನ್ನು ಅಗೋಚರ ಭಾಗದಲ್ಲಿ ಸೇರಿಸಿದೆ. ಈ ವ್ಯವಹಾರಗಳಿಂದ 69.2 ಕೋಟಿ ರೂಪಾಯಿಗಳು ಋಣಾಧಿಕ್ಯವಾಗಿ ಚಾಲ್ತಿಖಾತೆಯ ವ್ಯತ್ಯಾಸ 627.7 ಕೋಟಿ ರೂಪಾಯಿಗಳಿಗೇರಿತು.

ಬಂಡವಾಳದ ಖಾತೆಯಲ್ಲೂ ಋಣವಿಮೋಚನಾ ನಿಧಿಗೆ ಮತ್ತು ಅಂತರರಾಷ್ಟ್ರೀಯ ದ್ರವ್ಯನಿಧಿಗೆ ಮಾಡಿದ ಪಾವತಿಗಳೂ ಸೇರಿ ಈ ಖಾತೆಯ ಋಣಾಧಿಕ್ಯ 108.4 ಕೋಟಿ ರೂ.ಗಳಷ್ಟಾಯಿತು. ಚಾಲ್ತಿ ಮತ್ತು ಬಂಡವಾಳ ಖಾತೆಗಳ ನಿವ್ವಳ ಸಾಲ 736.1 ಕೋಟಿ ರೂ.ಗಳಾದುವು. ಭಾರತಸರ್ಕಾರ, 718.9 ಕೋಟಿ ರೂ.ಗಳಷ್ಟು ವಿದೇಶಿ ನೆರವಿಗೆ 17.2 ಕೋಟಿ ರೂ.ಗಳನ್ನು ವಿದೇಶಿ ವಿನಿಮಯದ ನಿಧಿಯಿಂದ ಹಿಂತೆಗೆದು, ತನ್ನ ಹಣಸಂದಾಯ ಸಮತೋಲನ ಲೆಕ್ಕವನ್ನು ಸರಿತೂಗಿಸಿದೆ.

ಹಣಸಂದಾಯ ಸಮತೋಲನ ಖಾತೆಯ ಲೆಕ್ಕಾಚಾರ ಹೇಗೇ ಇರಲಿ, ಋಣಾಧಿಕ್ಯ ಇಲ್ಲದೆ ಆಯಾಧಿಕ್ಯ ಆ ದೇಶದ ಹಣಸಚಿದಾಯ ಸ್ಥಿತಿಯಲ್ಲಿ ಏರ್ಪಟ್ಟಿರುವ ಅಸಮತೆಯನ್ನು ತೋರಿಸುತ್ತದೆ. ಎರಡನೆಯ ಮಹಾಯುದ್ಧದಿಂದೀಚೆಗೆ ಋಣಾಧಿಕ್ಯದಿಂದ ಉಂಟಾದ ಅಸಮಹಣಸಂದಾಯಸ್ಥಿತಿ ವಿಶ್ವದಾದ್ಯಂತ ಹರಡಿರುವ ಕ್ಲಿಷ್ಟ ಸಮಸ್ಯೆಯಾಗಿದೆ: ವಿಶೇಷವಾಗಿ ಹಿಂದುಳಿದ ಮತ್ತು ಮುಂದುವರಿಯುತ್ತಿರುವ ರಾಷ್ಟ್ರಗಳನ್ನು ಬಹುಕಾಲದಿಂದ ಪೀಡಿಸುತ್ತಿದೆ. ಹಣಸಂದಾಯ ಸ್ಥಿತಿಯ ಅಸಮತೆ ತಾತ್ಕಾಲಿಕವಾಗಿ ಕಂಡುಬರಬಹುದು ಅಥವಾ ಮೂಲಭೂತ ಕಾರಣಗಳಿಂದುಂಟಾಗಿರಬಹುದು ದೇಶದ ಆರ್ಥಿಕ ಸ್ಥಿತಿಯಲ್ಲಿ ನಿಜವಾದ ಕುಂದುಕೊರತೆಗಳೇನೂ ಇಲ್ಲದಿದ್ದರೂ ಅಂತರರಾಷ್ಟ್ರೀಯ ವ್ಯಾಪಾರ ವ್ಯವಹಾರದ ಅತಿರೇಕದಿಂದ ದೇಶದ ಹಣ ಸಂದಾಯ ಸ್ಥಿತಿಯಲ್ಲಿ ತಾತ್ಕಾಲಿಕವಾಗಿ ಅಸಮತೆ ಕಂಡುಬರಬಹುದು. ಹಾಗಲ್ಲದೆ ದೇಶದ ಆರ್ಥಿಕ ವ್ಯವಸ್ಥೆಯ ನ್ಯೂನಾತಿರೇಕಗಳ ಪರಿಣಾಮವಾಗಿ ಹಣಸಂದಾಯ ಸ್ಥಿತಿಯಲ್ಲಿ ಅಸಮತೆ ಅವಿರಳವಾಗಿ ಉದ್ಭವಿಸಬಹುದು. ಇಂಥ ಮೂಲಭೂತ ಅಸಮತೆ, ಮುಂದುವರಿಯುತ್ತಿರುವ ರಾಷ್ಟ್ರಗಳು ಪದೇಪದೇ ಎದುರಿಸುತ್ತಿರುವ ದೊಡ್ಡ ಸಮಸ್ಯೆ. ಇದನ್ನು ನಿವಾರಿಸಲು ದೇಶದ ಆರ್ಥಿಕ ಸ್ಥಿತಿಯಲ್ಲಿ ಮೂಲಭೂತ ಬದಲಾವಣೆಗಳನ್ನು ಮಾಡದೆ ಸಾಧ್ಯವಿಲ್ಲ.

ಪ್ರತಿಯೊಂದು ದೇಶಕ್ಕೂ ತನ್ನದೇ ಆದ ವಿವರಣೆ ಇದ್ದರೂ ಮೂಲಭೂತ ಅಸಮತೆಗೆ ಸ್ಥೂಲವಾಗಿ ಮೂರು ಕಾರಣಗಳನ್ನು ತೋರಿಸಬಹುದು. 1. ಮುಂದುವರಿಯುತ್ತಿರುವ ರಾಷ್ಟ್ರಗಳು ತಮ್ಮ ಆರ್ಥಿಕಾಭಿವೃದ್ದಿಗೆ ಮುಂದುವರಿದ ರಾಷ್ಟ್ರಗಳಿಂದ ಸಾಮಾನು ಸಲಕರಣಗಳನ್ನು ತಾಂತ್ರಿಕ ಸೇವಾ ಸೌಕರ್ಯಗಳನ್ನು ಮತ್ತು ವಿಶೇಷವಾಗಿ ಬಂಡವಾಳವನ್ನು ಆಮದು ಮಾಡಿಕೊಳ್ಳದೆ ಬೇರೆ ಮಾರ್ಗವಿಲ್ಲ. 2. ಮುಂದುವರಿಯುತ್ತಿರುವ ದೇಶಗಳ ರಫ್ತುಗಳಿಗೆ ಪ್ರಪಂಚದ ಮಾರುಕಟ್ಟೆಯಲ್ಲಿರುವ ಅನಾದರ. ಅನಾಸಕ್ತಿ: ಪರಿಣಾಮವಾಗಿ ರಫ್ತುಗಳಲ್ಲಿ ಕಂಡುಬರುವ ಅಸ್ಥಿರತೆ; ಇದಕ್ಕೆ ಕಾರಣವಾಗಿ ಕಂಡುಬರುವ ಮುಂದುವರಿದ ರಾಷ್ಟ್ರಗಳ ಮನೋಭಿಪ್ರಾಯ. 3. ಮುಂದುವರಿದ ರಾಷ್ಟ್ರಗಳು ಮುಂದುವರಿಯುತ್ತಿರುವ ರಾಷ್ಟ್ರಗಳೊಡನೆ ವ್ಯಾಪಾರವನ್ನು ಬೆಳೆಸಲು ಮತ್ತು ಹೆಚ್ಚಿಸಲು ಹಿಂಜರಿಯುತ್ತಿರುವುದು; ತಮ್ಮ ದೇಶದ ವ್ಯಾಪಾರ ವಹಿವಾಟನ್ನು ರಕ್ಷಿಸಲು ವಿಧಿಸಿರುವ ಸುಂಕ, ಸಂಕೋಲೆಗಳನ್ನು ತಗ್ಗಿಸಲು ನಿರ ುತ್ಸಾಹಿಗಳಾಗಿರುವುದು. ಇದರಿಂದಾಗಿ ಹಿಂದುಳಿದ ರಾಷ್ಟ್ರಗಳು ತಮಗೆ ಬೇಕಾಗಿರುವುದು ವ್ಯಾಪಾರ ವೈಶಾಲ್ಯವೆ ಹೊರತು ನೆರವಲ್ಲ ಎಂಬ ವಾದವನ್ನು ಮುಂದೊಡ್ಡಿವೆ.

ಹೀಗಾಗಿ ಅಂತರರಾಷ್ಟ್ರೀಯ ಹಣಕಾಸಿನ ಸಾಧನ ಸಂಪತ್ತುಗಳು ಅಂತರರಾಷ್ಟ್ರೀಯ ವ್ಯಾಪಾರದ ಜೊತೆಗೆ ಹೆಚ್ಚಲು ಸಾಧ್ಯವಿಲ್ಲವಾಗಿದೆ. ವಿಶ್ವದಾದ್ಯಂತ ಕಂಡುಬರುತ್ತಿರುವ ವಿದೇಶಿ ವಿನಿಮಯಗಳ ಕೊರತೆ ಈ ಅವ್ಯವಸ್ಥೆಯ ಪ್ರತೀಕ. ಹಣ ಸಂದಾಯದಲ್ಲಿ ಕೊರತೆಯನ್ನು ಅನುಭವಿಸುತ್ತಿರುವ ರಾಷ್ಟ್ರಗಳು ಬಯಸುತ್ತಿರುವ ನೆರವು, ಬೇಡುತ್ತಿರುವ ಸಾಲಸೋಲಗಳಿಗಿಂತ ಉಳಿತಾಯವನ್ನು ಗಳಿಸಿರುವ ರಾಷ್ಟ್ರಗಳು ನೀಡುತ್ತಿರುವ ನೆರವು ಕೊಡುತ್ತಿರುವ ಸಾಲ ಬಹಳವಾಗಿ ಕಡಿಮೆಯಾಗಿರುವುದರಿಂದ ಹಣಕಾಸಿನ ಸಾಧನಗಳಲ್ಲಿ ಕೊರತೆಯುಂಟಾಗಿ ಅಂತರರಾಷ್ಟ್ರೀಯ ಹಣಕಾಸಿನ ಮೌಲ್ಯ ಕುಗ್ಗಿಹೋಗಿದೆ. ಆದ್ದರಿಂದಲೇ ವಿಶ್ವದ ಗಿರಾಕಿಗೆ ಅನುಗುಣವಾಗಿ ಮತ್ತು ಸರಿಸಮನಾಗಿ ಅಂತರರಾಷ್ಟ್ರೀಯ ಹಣಕಾಸಿನ ಸರಬರಾಜನ್ನು ಹೆಚ್ಚಿಸುವ ಬಗೆ ಹೇಗೆ? ಹೀಗೆ ಹೆಚ್ಚಿಸಿದ ಸರಬರಾಜನ್ನು ಪ್ರಪಂಚದ ರಾಷ್ಟ್ರಗಳ ಅದರಲ್ಲೂ ಮುಂದುವರಿಯುತ್ತಿರುವ ದೇಶಗಳ ಅವಶ್ಯಕತೆಗನುಗುಣವಾಗಿ ವಿತರಣೆ ಮಾಡುವುದು ಹೇಗೆ? ಈ ಪ್ರಶ್ನೆಗಳು ವಿಶ್ವದ ಹಣಕಾಸಿನ ಎಲ್ಲಾ ಸುಧಾರಣೆಗಳ ಮುಖ್ಯ ಉದ್ದೇಶ.

ಸುಮಾರು ಎರಡು ದಶಕಗಳಿಗೂ ಹಿಂದೆ ಸ್ಥಾಪಿಸಿದ ಅಂತರರಾಷ್ಟ್ರೀಯ ದ್ರವ್ಯನಿಧಿ ತಾತ್ಕಾಲಿಕ ಅಸಮತೆಯ ನಿವಾರಣೆಗೆ ಬೇಕಾಗುವ ಅಂತರರಾಷ್ಟ್ರೀಯ ಹಣಕಾಸು ಸಾಧನಗಳನ್ನೊದಗಿಸುತ್ತಿದೆ. ಹಾಗೆಯೇ ವಿಶ್ವಬ್ಯಾಂಕು ದೇಶಗಳ ಆರ್ಥಿಕ ಪ್ರಗತಿ ಮತ್ತು ಏಳಿಗೆಗೆ ಬೇಕಾಗುವ ದೀರ್ಘಾವಧಿ ಬಂಡವಾಳವನ್ನೊದಗಿಸುತ್ತಿದೆ. ಈ ಎರಡೂ ಸಂಸ್ಥೆಗಳೂ ತಮ್ಮ ಚಟುವಟಿಕೆಗಳಲ್ಲಿ ಪ್ರಶಂಸನೀಯವಾದ ಪ್ರಗತಿಯನ್ನು ಸಾಧಿಸಿದೆ. ಆದರೆ ವಿಶ್ವದ ಹಣಕಾಸಿನ ಕೊರತೆಯ ಲಕ್ಷಣ ಮತ್ತು ಪರಿಮಾಣ ಈ ಎರಡೂ ಸಂಸ್ಥೆಗಳ ಶಕ್ತಿ ಸಾಮಥ್ರ್ಯಗಳನ್ನು ಮೀರಿದ್ದರಿಂದ ಅಂತರರಾಷ್ಟ್ರೀಯ ಹಣಕಾಸು ವಹಿವಾಟಿನಲ್ಲಿ ಸುಧಾರಣೆ ಅತ್ಯಗತ್ಯವಾಗಿದೆ. ಇತ್ತೀಚಿನ ಅಂತರರಾಷ್ಟ್ರೀಯ ಹಣಕಾಸಿನ ವಾರ್ಷಿಕಾಧಿವೇಶನದಲ್ಲಿ ಅಂಗೀಕೃತವಾದ `ವಿಶೇಷ ವಾಪಸಾತಿ ಹಕ್ಕುಗಳು' ಎನ್ನುವ ` ಕಾಗದ ಬಂಗಾರ ' ಸುಧಾರಣೆ ಮುಖ್ಯವಾದುವು. ಈ ವಿಶೇಷ ವಾಪಸಾತಿ ಹಕ್ಕುಗಳನ್ನು ಚಲಾಯಿಸುವುದರ ಮುಖಾಂತರ ಪ್ರತಿಯೊಂದು ದೇಶವು ತನ್ನ ಅಂತರರಾಷ್ಟ್ರೀಯ ಜಮೆಗಳನ್ನು ನಿರ್ದಿಷ್ಟ ಪರಿಮಾಣದಲ್ಲಿ ಹೆಚ್ಚಿಸಿಕೊಳ್ಳಲು ಸಾಧ್ಯ. ಹಣ ಸಂದಾಯದ ಅಸಮತೆಯನ್ನು ತಗ್ಗಿಸಲು ಮತ್ತು ಅಂತರರಾಷ್ಟ್ರೀಯ ಹಣಕಾಸಿನ ಮೌಲ್ಯವನ್ನು ಹೆಚ್ಚಿಸಲು ಇದೊಂದು ಉಪಯುಕ್ತ ಸಾಧನವಾಗುವುದರಲ್ಲಿ ಸಂಶಯವಿಲ್ಲ.          

 

(ಎಸ್.ಎಸ್.)