ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂತಾರಾಷ್ಟ್ರೀಯ ಅಣುಶಕ್ತಿನಿಯೋಗ
ಅಂತಾರಾಷ್ಟ್ರೀಯ ಅಣುಶಕ್ತಿನಿಯೋಗ
ಸಂಪಾದಿಸಿಪರಮಾಣುಶಕ್ತಿಯನ್ನು ಶಾಂತಿಯುತ ಉದ್ದೇಶಗಳಿಗೆ ಅಂದರೆ ಪ್ರಪಂಚದಾದ್ಯಂತ ಸಾರ್ವಜನಿಕ ಆರೋಗ್ಯ ಮತ್ತು ಸಂಪದಭಿವೃದ್ಧಿ ಕಾರ್ಯಗಳಿಗೆ ಮಾತ್ರ ಬಳಸಲು ಸಾಧ್ಯವಾಗುವಂತೆ ಮಾಡುವುದೇ ಇದರ ಮೂಲ ಉದ್ದೇಶ. 1957ರ ಜುಲೈ 29ರಂದು ಅಸ್ತಿತ್ವಕ್ಕೆ ಬಂತು. ಪರಮಾಣುಶಕ್ತಿಯನ್ನು ಉತ್ಪಾದಿಸಲು ಈ ನಿಯೋಗದಿಂದ ಆರ್ಥಿಕ ನೆರವನ್ನು ಪಡೆದ ಯಾವ ರಾಷ್ಟ್ರವಾಗಲಿ ತಾನು ಉತ್ಪಾದಿಸಿದ ಪರಮಾಣುಶಕ್ತಿಯನ್ನು ಯುದ್ಧೋದ್ಯಮಗಳಿಗೆ ಬಳಸಿಕೊಳ್ಳದಂತೆ ನೋಡಿಕೊಳ್ಳಲು ಈ ನಿಯೋಗ ಒಂದು ಹತೋಟಿಕ್ರಮವನ್ನು ಇಟ್ಟುಕೊಂಡಿದೆ. ಇದರ ಕೇಂದ್ರಕಛೇರಿ ಆಸ್ಟ್ರಿಯದ ವಿಯನ್ನಾದಲ್ಲಿದೆ.