ಅಕ್ರಿಫ್ಲೇವಿನ್
ಸಂಪಾದಿಸಿಕಲ್ಲಿದ್ದಲ ಟಾರೆಣ್ಣೆಯಿಂದ ತಯಾರಾದ, ಜೀವಿನಿರೋಧಕ (ಆ್ಯಂಟಿಸೆಪ್ಟಿಕ್), ಕೆಂಬೂದು ಬಣ್ಣದ, ಅಕ್ರಿಡಿನ್ ಸಂಯುಕ್ತ ಪುಡಿ. ಟ್ರಿಪಫ್ಲೇವಿನ್ ಹೆಸರಿನಲ್ಲಿ ಜರ್ಮನಿಯ ಪಾಲ್ ಆರ್ಲಿಕ್ (1912) ಇದನ್ನು ನಂಜು ಕಳೆವ ಮದ್ದಾಗಿ ಬಳಕೆಗೆ ತಂದ ಮೇಲೆ, ಒಂದನೆಯ ಮಹಾಯುದ್ಧದಲ್ಲಿ ಬಹುವಾಗಿ ಬಳಕೆಯಲ್ಲಿತ್ತು. ಸಲ್ಫ, ಜೀವಿರೋಧಕ (ಆಂಟಿಬಯೋಟಿಕ್) ಮದ್ದುಗಳು ಬಂದ ಮೇಲೆ ಇದರ ಬಳಕೆ ತೀರ ಅಪರೂಪ. ಪರಮಾ (ಗೊನೋರಿಯ) ಮೇಹರೋಗದಲ್ಲಿ ಮೂತ್ರನಾಳವನ್ನೂ ಗಾಯಗಳನ್ನೂ ತೊಳೆಯಲು ಇದರ ತಟಸ್ಥ (ನ್ಯೂಟ್ರಲೈಸ್್ಡ) ರೂಪದ ದ್ರಾವಣ ಬಳಕೆಯಲ್ಲಿದೆ. ಮೂತ್ರಜನಕಾಂಗ ಮಂಡಲದ ಜೀವಿನಿರೋಧಕವಾಗಿ ಹೊಟ್ಟೆಗೂ ಸೇವಿಸಬಹುದು.