ಅಗರ್ತಲ

ಸಂಪಾದಿಸಿ

ತ್ರಿಪುರ ರಾಜ್ಯದ ರಾಜಧಾನಿ ಹಾಗೂ ಮುಖ್ಯ ಪಟ್ಟಣ ಜನಸಂಖ್ಯೆ 189,327. ಶಿಕ್ಷಣ, ವ್ಯಾಪಾರ ವಾಣಿಜ್ಯ - ಮುಂತಾದುವುಗಳ ದೃಷ್ಟಿಯಿಂದ ಹಿಂದುಳಿದಿರುವ ಒಂದು ಚಿಕ್ಕ ಪಟ್ಟಣ. ಇಲ್ಲಿ ಹೋರಾ ನದಿ ಹರಿಯುತ್ತದೆ. ಇದು ಬಂಗ್ಲಾದೇಶ ಮತ್ತು ಭಾರತಗಳ ಗಡಿಯಾಗಿದೆ. ಕೃಷಿಗೆ ಫಲವತ್ತಾದ ಮೈದಾನ.

ತ್ರಿಪುರ ಪ್ರಾಂತದಲ್ಲೇ ಪ್ರಮುಖ ರೈಲುನಿಲ್ದಾಣವುಳ್ಳ ಪಟ್ಟಣ. ಇಲ್ಲಿಂದ ಬ್ರಹ್ಮಪುತ್ರ ಪ್ರದೇಶದ ಕೆಲವು ಪಟ್ಟಣಗಳಿಗೆ ರೈಲು ಸಂಪರ್ಕವಿದೆ. ಭಾರತ ಮತ್ತು ಬಂಗ್ಲಾದೇಶ ಗಡಿಪ್ರದೇಶದಲ್ಲಿರುವ ಈ ಪಟ್ಟಣದಲ್ಲಿ ಸೇನಾಶಿಬಿರಗಳಿವೆ. ಈ ಪ್ರದೇಶದಲ್ಲಿ ಅಧಿಕವಾಗಿ ಮಳೆಯಾಗುವುದರಿಂದ ಹವಾಗುಣ ಅಷ್ಟು ಹಿತಕರವಾಗಿಲ್ಲ. ಪ್ರವಾಹಗಳಿಂದಾಗಿ ಜನ ಆಗಾಗ ತೊಂದರೆಗೊಳಗಾಗುತ್ತಾರೆ. ಇದೇ ಇಲ್ಲಿನ ಅಲ್ಪ ಜನಸಂಖ್ಯೆಗೆ ಕಾರಣ. ಗುಡ್ಡಗಾಡಿನ ಪ್ರದೇಶದಲ್ಲಿರುವ ಈ ಪಟ್ಟಣದ ನಿವಾಸಿಗಳಿಗೆ ಇತ್ತೀಚೆಗೆ ರಾಜ್ಯಸರ್ಕಾರ ಮತ್ತು ಕೇಂದ್ರಸರ್ಕಾರದ ನೆರವು ಹೆಚ್ಚಾಗಿ ದೊರೆತಿದೆ.

ವಾಣಿಜ್ಯ ಕೇಂದ್ರ ಕೋಲ್ಕೊತ ವಿಶ್ವವಿದ್ಯಾಲಯಕ್ಕೆ ಸೇರಿದ 4 ಕಾಲೇಜುಗಳಿವೆ. ಮಹಾರಾಜರ ಅರಮನೆ ಹಾಗೂ ಒಂದು ದೇವಾಲಯವಿದೆ.