ಅಗೇಟ್
ಸಂಪಾದಿಸಿಬೆಣಚುಕಲ್ಲು (ಕ್ವಾಟ್ಸ್ರ್) ಸಮುದಾಯಕ್ಕೆ ಸೇರಿದ ಖನಿಜ. ರಾಸಾಯನಿಕ ಸಂಯೋಜನೆ ಸಿಲಿಕಾನ್ಡೈಆಕ್ಸೈಡ್ (SiO2). ಇದೊಂದು ಪ್ರಶಸ್ತ ಶಿಲೆ ಇದನ್ನು ಪ್ರಥಮ ಬಾರಿಗೆ ಗ್ರೀಸ್ ದೇಶದ ಸಿಸಿಲಿಯಲ್ಲಿರುವ, ಅಕೇಡ್ಸ್ ಎಂಬ ನದಿ ತೀರದಲ್ಲಿ ಗುರುತಿಸಿದುದ ರಿಂದ ಇದಕ್ಕೆ ಅಗೇಟ್ ಎಂದು ಹೆಸರು ಬಂದಿದೆ. ಬಹಳ ಸೂಕ್ಷ್ಮ ಕಣಗಳಿಂದಾದ ಅದರಲ್ಲೂ ಹೆಚ್ಚಾಗಿ ಚಾಲ್ಸಿಡನಿ ಮತ್ತು ಓಸಾರ್ ಎಂಬ ಸಿಕತ ಪ್ರಭೇದಕಣಗಳಿಂದ ಕೂಡಿರುವ ಸಮೂಹ ಖನಿಜ ಇದರ ವಿಶೇಷವೆಂದರೆ ವಿವಿಧ ಛಾಯೆಗಳನ್ನೊಳಗೊಂಡ ಇದರಲ್ಲಿ ಅತೀ ಕಲಾತ್ಮಕವಾಗಿ ನೈಸರ್ಗಿಕವಾಗಿ ಮೂಡಿಬಂದಿರುವ ಎಳೆ ಅಥವಾ ಪಟ್ಟೆ ರಚನೆ ಎದ್ದು ಕಾಣುವುದು. ಇಂತಹ ಪಟ್ಟೆ ರಚನೆಯು ಬೇರಾವ ಪ್ರಶಸ್ತ ಖನಿಜಗಳಲ್ಲಿಯೂ ಕಾಣಬರುವುದಿಲ್ಲ. ಆದ್ದರಿಂದ ಇದನ್ನು ಎಳೆ ಅಥವಾ ಪಟ್ಟೆ ಸುಂದರ ಎಂದೂ ಕೂಡ ಬಣ್ಣಿಸಿರುವುದುಂಟು.
ಈ ರೀತಿಯ ವಿವಿಧ ವರ್ಣವೈಚಿತ್ರ್ಯ. ಪಟ್ಟೆಗಳ ರಚನೆ ಮತ್ತು ಕಾಠಿಣ್ಯ ಈ ಖನಿಜಕ್ಕೆ ಒಂದು ವೈಶಿಷ್ಟ್ಯವನ್ನು ತಂದುಕೊಟ್ಟಿವೆ. ಈ ರೀತಿ ರಚನೆಯಾಗುವಾಗ ಆಗುವ ರಾಸಾಯನಿಕ ವ್ಯತ್ಯಯವೇ ವಿವಿಧ ಬಣ್ಣಗಳಿಂದ ಕೂಡಿದ ಪಟ್ಟೆ ಅಥವಾ ಎಳೆ ರಚನೆಗಳಿಗೆ ಕಾರಣ.
ಅಗೇಟ್ ಸಾಮಾನ್ಯವಾಗಿ ಅಗ್ನಿ ಶಿಲೆಗಳು ಭೂಮಿಯ ಮೇಲ್ಪದರದಲ್ಲಿ ರೂಪುಗೊಳ್ಳು ವಾಗ ಅವುಗಳಲ್ಲಿ ಉಂಟಾದ ರಂಧ್ರಗಳಲ್ಲಿ ಹೆಚ್ಚು ಸಿಲಿಕಾಂಶವುಳ್ಳ ದ್ರವ ರೂಪಕ ವಸ್ತ್ರು ಪಟ್ಟೆಯೋವಾದಿಯಲ್ಲಿ ರಂಧ್ರದ ಕೇಂದ್ರಬಿಂದುವಿನೆಡೆಗೆ ಘನೀಕರಣಗೊಳ್ಳುವಿಕೆಯಿಂದ ರಚನೆಯಾಗುತ್ತದೆ. ಇದಕ್ಕೆ ಚೆನ್ನಾಗಿ ಮೆರುಗು ಕೊಡಬಹುದು. ಈ ಖನಿಜದಲ್ಲಿ ಸೀಳುಗಳಿಲ್ಲ(ಕ್ಲಿವೇಜ್). ಇದರ ಕಾಠಿಣ್ಯ 7. ಸಾಪೇಕ್ಷಸಾಂದ್ರತೆ 2.65-2.66. ಅಗೇಟ್ ವಿವಿಧ ಗಾತ್ರಗಳಲ್ಲಿಯೂ ದೊರಕುತ್ತದೆ ಅತೀ ದೊಡ್ಡ ಗಾತ್ರದ ಅಗೇಟ್ ಡಸ್ಸೆಲ್ಡಾರ್ಫ್ ನಗರದ ವಸ್ತುಪ್ರದರ್ಶನದಲ್ಲಿ 35 ಟನ್ ಭಾರದ ಜಿಯೋಡ್ ಎಂಬ ಹೆಸರಿನಲ್ಲಿ ಇಡಲಾಗಿತ್ತು.
ಅಗೇಟ್ ಉಳಿದ ಎಲ್ಲಾ ರೀತಿಯಲ್ಲೂ ಮತ್ತು ಲಕ್ಷಣಗಳಲ್ಲೂ ಚಿಣಚನ್ನು ಹೋಲುತ್ತದೆ. ಪ್ರಪಂಚದ ಎಲ್ಲಾ ಭಾಗಗಳಲ್ಲೂ ದೊರೆಯುತ್ತದೆ; ವಿಶೇಷವಾಗಿ ಅಮೆರಿಕದ ಪಶ್ಚಿಮ ರಾಜ್ಯಗಳು ಇದರ ಮೂಲ ಎಂದು ಗುರುತಿಸಿರುತ್ತೆ. ಭಾರತದಲ್ಲಿ ಡೆಕ್ಕನ್ ಬಸಾಲ್್ಟ ಶಿಲಾ ಸಮೂಹದಲ್ಲಿ ಹೇರಳವಾಗಿ ದೊರಯುತ್ತದೆ.
ಅಗೇಟ್ನಲ್ಲಿರುವ ಕಾಠಿಣ್ಯತೆ ಹಾಗೂ ನಿರೋಧಕತೆ ಗುಣಗಳಿಗಾಗಿಯೇ ಇದನ್ನು ಕುಟ್ಟಾಣಿಯಾಗಿ ಅರೆಯುವಿಕೆ ಮತ್ತು ರಾಸಾಯನಿಕ ಸಂಯೋಜನೆಗಾಗಿ ಪ್ರಯೋಗಾಲಯಗಳಲ್ಲಿ ಉಪಯೋಗದಲ್ಲಿದೆ. ಇದಲ್ಲದೆ, ಕೈಗಾರಿಕೆಗಳಲ್ಲಿ ಅಲಂಕಾರಿಕ ವಸ್ತುಗಳ ತಯಾರಿಕೆಯಲ್ಲಿಯೂ ಅಗೇಟ್ ಅನ್ನು ಮೂಲ ವಸ್ತುವಾಗಿ ಬಳಸುತ್ತಾರೆ. ಅಗೇಟ್ನ ವಿವಿಧ ಬಗೆಗಳನ್ನು, ಅದರ ಆಕಾರ, ಬಣ್ಣ ಹಾಗೂ ಲಕ್ಷಣಗಳ ಆಧಾರದ ಮೇಲೆ ಗುರುತಿಸಲಾಗುವುದು. ಅವುಗಳಲ್ಲಿ ಪ್ರಮುಖವಾದವುಗಳನ್ನು ಈ ಮುಂದೆ ತಿಳಿಸಿದೆ. ಸೈಕ್ಲೋಪ್್ಸ ಅಥವಾ ಮೆಕ್ಸಿಕನ್ ಅಗೇಟ್ = ಒಂಟಿ ಕಣ್ಣಿನ ಆಕಾರವುಳ್ಳದ್ದಾಗಿದೆ; ಮಾಸ್ ಅಥವಾ ಡೆಂಡ್ರಿಟಿಕ್ ಅಗೇಟ್ = ಪರ್ನ್ ರೂಪವುಳ್ಳದ್ದಾಗಿರುತ್ತದೆ; ಟುರ್ರಿಟೆಲ್ಲಾ ಅಗೇಟ್ = ಟುರ್ರಿಟೆಲ್ಲಿ ಎಂಬ ಜೀವಾವಶೇಷದ ಆಕಾರದಲ್ಲಿರುತ್ತದೆ; ಪೆಟ್ರೋಸ್ಕಿ ಅಗೇಟ್= ಹವಳ ಅಗೇಟ್ ಆಗಿ ಪರಿವರ್ತಿತಗೊಂಡಿದೆ; ರೈನ್ ಬೋ ಅಗೇಟ್ = ಬೆಳಕಿನ ಕಿರಣವನ್ನು ಇಂತಹ ಅಗೇಟ್ ಮೂಲಕ ಪ್ರಸರಿಸಿದಾಗ ಕಾಮನಬಿಲ್ಲಿನ ಆಕಾರದಲ್ಲಿ ಬಣ್ಣಗಳು ಮೂಡುತ್ತವೆ. ಆದುದರಿಂದ, ಇದನ್ನು ರೈನ್ ಬೋ ಅಗೇಟ್ ಎಂಬುದಾಗಿ ಗುರುತಿಸಲಾಗಿದೆ.