ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಗ್ನಿಪುರಾಣ

ಅಗ್ನಿಪುರಾಣ

ಸಂಸ್ಕೃತದಲ್ಲಿರುವ ಹದಿನೆಂಟು ಮುಖ್ಯಪುರಾಣಗಳಲ್ಲೊಂದು. ಅಗ್ನಿದೇವತೆಯಿಂದ ವಸಿಷ್ಠಮುನಿಗೆ ಉಪದಿಷ್ಟವಾದುದೆಂದು ಪ್ರತೀತಿ. ಕಾಲ ಸುಮಾರು ಕ್ರಿ.ಶ. 7ನೆಯ ಶತಮಾನ. ಪ್ರಧಾನವಾಗಿ ಶೈವಮತಕ್ಕೆ ಸಂಬಂಧಪಟ್ಟ ವಿಚಾರಗಳಲ್ಲದೆ ಜಗತ್ತಿನ ಸೃಷ್ಟಿ, ಧರ್ಮಶಾಸ್ತ್ರ, ರಾಜಧರ್ಮ, ಆಯುರ್ವೇದ, ಅಲಂಕಾರ, ಛಂದಸ್ಸು ಮುಂತಾದ ಅನೇಕ ವಿಷಯಗಳನ್ನೊಳಗೊಂಡು ವಿಶ್ವಕೋಶದಂತಿದೆ.          

(ಬಿ.ಕೆ.ಎಸ್.)