ಸಾಮರ್ಥ್ಯವನ್ನು (ಪವರ್) ಅಳೆಯುವ ಏಕಮಾನ (ಹಾರ್ಸ್ ಪವರ್, ಸಂಕೇತ H.P) ಬಲ (ಫೋರ್ಸ್- ಸಂಕೇತ F) ಕಾರ್ಯ ಅಥವಾ ಕೆಲಸ (ವರ್ಕ್-ಸಂಕೇತ W) ಮಾಡುತ್ತದೆ. ಬಲ ಮತ್ತು ಅದರ ಚಲನೆಯ ದಿಕ್ಕಿನಲ್ಲಿ ಬಲಪ್ರಯೋಗಗೊಂಡ ಬಿಂದುವಿನ ಸ್ಥಾನಪಲ್ಲಟ ಇವುಗಳ ಗುಣಲಬ್ಧ ಒಂದು ಬಲ ಮಾಡಿದ ಕೆಲಸ, ಚಿತ್ರದಲ್ಲಿ ಈ ದೂರ . ಆದ್ದರಿಂದ . ಕೆಲಸವನ್ನು (W) ಮಾಡಬಲ್ಲ ಕ್ಷಮತೆಗೆ ಶಕ್ತಿ (ಎನರ್ಜಿ-ಸಂಕೇತ E) ಎಂದು ಕರೆಯುತ್ತಾರೆ. ಕಾಲದಿಂದ ಭಾಗಿಸಿ ದೊರೆಯುವ ಭಾಗಲಬ್ಧ ಆ ಬಲದ ಸಾಮರ್ಥ್ಯ (ಸಂಕೇತ P). ಆದ್ದರಿಂದ P=E/T ಅಥವಾ E=PT. ಕೆಲಸ ನಡೆಯುವ ಕಾಲದರವನ್ನು ಸಾಮರ್ಥ್ಯ ನಿರ್ಧರಿಸುತ್ತದೆ. ಒಂದು ಜೌಲ್ ಕೆಲಸವನ್ನು ಒಂದು ಸೆಕೆಂಡಿನಲ್ಲಿ ಕೆಲಸವ ಮಾಡಬಲ್ಲ ಸಾಮರ್ಥ್ಯ - ಒಂದು ವಾಟ್. 746 ವಾಟ್ಗಳು 1 ಅಶ್ವಸಾಮರ್ಥ್ಯಕ್ಕೆ ಸಮ. ಜೇಮ್ಸ್‌ವಾಟ್ ಬಲಿಷ್ಠಕುದುರೆಗಳ ಸಾಮರ್ಥ್ಯವನ್ನು ಪ್ರಾಯೋಗಿಕವಾಗಿ ಪರಿಶೀಲಿಸಿ 1 ಮಿನಿಟಿಗೆ 33000 ಅಡಿ-ಪೌಂಡ್ ಕೆಲಸ (W ಪೌಂಡ್ ತೂಕವನ್ನು ಊರ್ಧ್ವವಾಗಿ a ಅಡಿ ಮೇಲಕ್ಕೆ ಎತ್ತುವಾಗ ಆಗುವ ಕೆಲಸ aw ಅಡಿ ಪೌಂಡ್) ಅಥವಾ 1 ಸೆಕೆಂಡಿಗೆ 550 ಅಡಿ-ಪೌಂಡ್ ಕೆಲಸ 1 ಅಶ್ವ ಸಾಮರ್ಥ್ಯಕ್ಕೆ ಸಮವೆಂದು ನಿರ್ಧರಿಸಿ ಸಾಮರ್ಥ್ಯದ ಈ ಏಕಮಾನವನ್ನು ಹೆಸರಿಸಿದ. 154 ಪೌಂಡ್ ಭಾರದ ಒಬ್ಬ ಮನುಷ್ಯ 50 ಅಡಿ ಎತ್ತರದ ಮಹಡಿಯನ್ನು 14 ಸೆಕೆಂಡುಗಳಲ್ಲಿ ಏರಿದರೆ ಅವನ ಅಶ್ವಸಾಮರ್ಥ್ಯ = 1 h p. ವಿದ್ಯುಚ್ಛಕ್ತಿಯ ಮಾನದಲ್ಲಿ 746 ವಾಟ್ಗಳೂ ಉಷ್ಣಶಕ್ತಿಯ ಮಾನದಲ್ಲಿ 2545 ಬಿ. ಟಿ. ಯು. ಗಳೂ (ಬ್ರಿಟಿಷ್ ಥರ್ಮಲ್ ಯೂನಿಟ್) 1 ಅಶ್ವ ಸಾಮರ್ಥ್ಯಕ್ಕೆ ಸಮಾನ. ಮೆಟ್ರಿಕ್ ವ್ಯವಸ್ಥೆಯಲ್ಲಿ ಮಿನಿಟಿಗೆ 4500 ಕಿ.ಗ್ರಾಂ-ಮೀಟರ್ 1 ಅಶ್ವಸಾಮರ್ಥ್ಯ ಎಂದು ವ್ಯಾಖ್ಯಿಸಲಾಗಿದೆ.