ಜಪಾನ್ ದೇಶದ ಅತ್ಯಂತ ಜನಪ್ರಿಯ ಪತ್ರಿಕೆಗಳಲ್ಲೊಂದು. ಅಸಾಹಿ ಶಿಂಭೂನ್ ಎಂದರೆ ಉದಯ ಭಾಸ್ಕರ ಪತ್ರಿಕೆ ಎಂದು ಅರ್ಥ. ವಿಶೇಷ ಲೇಖನ ಪ್ರಕಟಣೆಗಳಲ್ಲಿ, ತಾಂತ್ರಿಕ ಬೆಳೆವಣಿಗೆಯಲ್ಲಿ ಇದು ಅತ್ಯಂತ ಮಹತ್ತ್ವದ್ದಾಗಿದೆ. ಪಾಶ್ಚಾತ್ಯ ದೇಶಗಳಿಂದ ತರಿಸಿಕೊಳ್ಳುವ ವಸ್ತುಗಳ ಬಗ್ಗೆ ಮಾಹಿತಿನೀಡಲು ಕೆಲವು ವ್ಯಾಪಾರಿಗಳು ಒಸಾಕ ನಗರದಲ್ಲಿ ಈ ಪತ್ರಿಕೆಯನ್ನು ಸ್ಥಾಪಿಸಿದರು (1879). ಕೆಲವು ಕಾಲದ ಮೇಲೆ ರಾಜಕಾರಣವನ್ನು ಮುಖ್ಯ ಗುರಿಯನ್ನಾಗಿಟ್ಟುಕೊಂಡು ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಪಣತೊಟ್ಟು ಈ ಪತ್ರಿಕೆಯನ್ನು ಟೋಕಿಯೊ ನಗರಕ್ಕೆ ವರ್ಗಾಯಿಸಲಾಯಿತು.