ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆಲ್ಬರ್ಟ್ 1

ಆಲ್ಬರ್ಟ್ 1

(1875-1934). ಬೆಲ್ಜಿಯಂನ ದೊರೆ. 1909ರಲ್ಲಿ ಸಿಂಹಾಸನವನ್ನೇರಿದ. ಸಾಮಾಜಿಕ ಮತ್ತು ಆರ್ಥಿಕ ಸುಧಾರಣೆಗೆ ಬಹಳ ಶ್ರಮಿಸಿದ. ದೇಶದ ಸೈನ್ಯಬಲವನ್ನು ಮೂರೂವರೆ ಲಕ್ಷಕ್ಕೇರಿಸಿದ. ಕಲೆ ಸಾಹಿತ್ಯಗಳಲ್ಲಿ ಅವನಿಗೆ ಅಧಿಕಾಸಕ್ತಿ; ಅವುಗಳ ಬೆಳೆವಣಿಗೆಗೂ ಅಪಾರ ಪ್ರೋತ್ಸಾಹ ನೀಡಿದ. ಮೊದಲ ಮಹಾಯುದ್ಧ ಪ್ರಾರಂಭವಾಗುವುದಕ್ಕೆ ಮುಂಚೆ, ತನ್ನ ದೇಶದ ತಾಟಸ್ಥ್ಯ ನೀತಿಯನ್ನು ಗೌರವಿಸಬೇಕೆಂದು ಜರ್ಮನಿಯ ದೊರೆಗೆ ತಿಳಿಸಿದ. ಅದನ್ನು ಅಲಕ್ಷಿಸಿ ಜರ್ಮನಿಯ ಸೈನ್ಯ ಬೆಲ್ಜಿಯಂಗೆ ನುಗ್ಗಿದಾಗ ಸೇನಾಧಿಪತ್ಯವನ್ನು ತಾನೇ ವಹಿಸಿ ಹೋರಾಡಿದ. ಯುದ್ಧ ಮುಗಿಯುವವರೆಗೊ ರಣರಂಗದಲ್ಲೇ ನಿಂತು ಇತರ ಸೈನಿಕರಂತೆ ಶತ್ರುವನ್ನೆದುರಿಸಿ ಯುದ್ಧ ಮುಗಿದ ಮೇಲೆ ತನ್ನ ದೇಶ ತಾಟಸ್ಥ್ಯ ನೀತಿಯನ್ನನುಸರಿಸುವುದಿಲ್ಲವೆಂದು ಮಿತ್ರ ರಾಷ್ಟ್ರಗಳಿಗೆ ತಿಳಿಸಿದ. ಬೆಟ್ಟ ಹತ್ತುತ್ತಿದ್ದಾಗ ಅಪಘಾತಕ್ಕೀಡಾಗಿ ಕಾಲವಾದ.