ಕಲ್ಕಿ ೨ : ವಿಷ್ಣುವಿನ ಹತ್ತನೆಯ ಹಾಗೂ ಕೊನೆಯ ಅವತಾರ. ಕಲಿಯುಗದ ಕೊನೆಯಲ್ಲಿ ಆಗಲಿದೆ. ಕಲಿಮಹಾಪುರುಷನ ಪ್ರಭಾವದಿಂದ ಜನರಲ್ಲಿ ಧರ್ಮ, ದಯೆ ಮೊದಲಾದ ಗುಣಗಳು ಅಳಿದು ಅಧರ್ಮ ಅತಿ ಹೆಚ್ಚಿದಾಗ ವಿಷ್ಣು ಕಲ್ಕಿಯಾಗಿ ಅವತರಿಸಿ ಅಶ್ವಾರೂಢನಾಗಿ, ಖಡ್ಗ ಹಿಡಿದು ಹೊರಟು ಮ್ಲೇಚ್ಛ ಸಮೂಹವನ್ನು ಸಂಹರಿಸಿ, ಜಗತ್ತಿನಲ್ಲಿ ಧರ್ಮಸಂರಕ್ಷಣೆ ಮಾಡಿ ಶಾಂತಿಸೌಖ್ಯಗಳನ್ನು ನೆಲೆಗೊಳಿಸುತ್ತಾನೆಂದು ನಂಬಿಕೆ. ಕಲ್ಕಿಯ ಕಲ್ಪನೆ ಹಿಂದೆ ಹರಿದಾಸರಿಗೂ ಈಚೆಗೆ ಅನೇಕ ಲೇಖಕರಿಗೂ ಕಾವ್ಯ ಸಾಮಗ್ರಿಯನ್ನೊದಗಿಸಿದೆ. (ಟಿ.ಎನ್.ಎನ್.ಆರ್.)