ಮೂಲದೊಡನೆ ಪರಿಶೀಲಿಸಿ
ಕಾಂತೀಯ ಅನುರಣನ ಚಿತ್ರಣ
ಕಾಂತೀಯ ಅನುರಣನದಿಂದ (ಒಚಿgಟಿeಣiಛಿ ಖesoಟಿಚಿಟಿಛಿe) ವಸ್ತುಗಳ ಚಿತ್ರಣವನ್ನು ಪಡೆಯಬಲ್ಲ ತಾಂತ್ರಿಕತೆಯ ಬಳಕೆಯಿಂದ ಇತ್ತೀಚಿನ ಕಾಲದಲ್ಲಿ ರೋಗ ತಪಾಸಣೆಯ ಮತ್ತು ರೋಗ ಎಚ್ಚರಿಕೆ ಕ್ರಮಗಳಲ್ಲಿ ಅಪಾರ ಸುಧಾರಣೆಗಳು ಕಂಡುಬಂದಿವೆ. ಇದನ್ನು ಇಂಗ್ಲಿಷ್ ಭಾಷೆಯಲ್ಲಿ ಮ್ಯಾಗ್ನೆಟಿಕ್ ರೆಸೊನೆನ್ಸ್ ಇಮೇಜಿಂಗ್ (ಒಖI - ಒಚಿgಟಿeಣiಛಿ ಖesoಟಿಚಿಟಿಛಿe Imಚಿgiಟಿg) ಎಂದು ಕರೆಯುತ್ತಾರೆ. ಇದು ಉನ್ನತ ಗುಣಮಟ್ಟದ ಮೂರು ಆಯಾಮದ ಪ್ರತಿಬಿಂಬಗಳನ್ನು ಯಾವುದೇ ಕೋನದಲ್ಲಿ ಮತ್ತು ದಿಕ್ಕಿನಲ್ಲಿ ಪಡೆಯುವ ವಿಧಾನ. ಶಸ್ತ್ರಕ್ರಿಯೆ ಯನ್ನು ಮಾಡಿ ಮಾನವನ ದೇಹದೊಳಗಿನ ಅವಯವಗಳ ನೋಟವನ್ನು ಪಡೆಯುವ ಅಗತ್ಯವಿಲ್ಲದೆಯೇ ಬಹಳ ಕಡಮೆ ಕಾಲಾವಧಿಯಲ್ಲಿ ದೇಹದ ಅಂಗಭಾಗಗಳ ಒಳಗಿನ ನೋಟವನ್ನು ಇದು ಒದಗಿಸುತ್ತದೆ. ಇದು ಸರ್ವತೋಮುಖವಾದ, ಶಕ್ತಿಶಾಲಿಯಾದ ಮತ್ತು ಸಂವೇದನೆಯುಳ್ಳ ತಂತ್ರವಾಗಿದ್ದು ವೈದ್ಯಕೀಯ ಚಿಕಿತ್ಸೆ, ರೋಗ ತಪಾಸಣೆ, ಚಿಕಿತ್ಸೆ ಹಾಗೂ ಮರುಪರೀಕ್ಷಾ ಕ್ರಿಯೆಗಳಿಗೆ ಒಂದು ಪ್ರಮುಖವಾದ ವಿಧಾನವಾಗಿದೆ.
ಕಾಂತೀಯ ಅನುರಣನ ಚಿತ್ರಣಕ್ಕೆ ಸಂಬಂಧಿಸಿದ ಮಹತ್ವದ ಸಂಶೋಧನೆಗಳನ್ನು ಗುರುತಿಸಿ 2003ನೇ ವರ್ಷದ ಜೀವವಿಜ್ಞಾನ ಅಥವಾ ವೈದ್ಯಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಅಮೆರಿಕಾದ ಇಲಿನಾಯ್ಸ್ ವಿಶ್ವ ವಿದ್ಯಾಲಯದ ಪೌಲ್ ಸಿ. ಲಾಟೆರ್‍ಬರ್ ಮತ್ತು ಸಂಯುಕ್ತ ರಾಜ್ಯದ ನೊಟಿಂಗಾಮ್ ವಿಶ್ವವಿದ್ಯಾಲಯದ ಸರ್ ಫೀಟರ್ ಮಾನ್ಸ್ ಫೀಲ್ಡ್ ಅವರಿಗೆ ಜಂಟಿಯಾಗಿ ಕೊಡಲಾಯಿತು. ಈ ಸಂದರ್ಭದಲ್ಲಿ, ಕಾಂತೀಯ ಅನುರಣನ ಚಿತ್ರಣದ ಕ್ರಿಯೆಯನ್ನು ವಿವಿಧ ಬಗೆಯ ರಚನಾ ಕೃತಿಗಳ ದೃಶ್ಯೀಕರಣಕ್ಕಾಗಿ ಉಪಯೋಗಿಸುವುದಕ್ಕೆ ಸಂಬಂಧಿಸಿ ದಂತೆ ಈ ಇಬ್ಬರು ವಿಜ್ಞಾನಿಗಳ ಪ್ರಮುಖ ಸಾಧನೆಗಳನ್ನು ಪರಿಗಣಿಸಲಾಯಿತು. ಕಾಂತೀಯ ಅನುರಣನದ ಮೂಲಕ ದೇಹದೊಳಗಿನ ವಿವಿಧ ಭಾಗಗಳ ಪ್ರತಿಬಿಂಬಗಳನ್ನು ಪಡೆಯುವ ಆಧುನಿಕ ಸಲಕರಣೆಗಳ ಅಭಿ ವೃದ್ಧಿಗೆ ಈ ಸಂಶೋಧನೆಗಳು ದಾರಿಮಾಡಿಕೊಟ್ಟವು. ಇದು ವೈದ್ಯಕೀಯ ರೋಗ ತಪಾಸಣೆ ಮತ್ತು ಸಂಶೋಧನೆಯ ಮುನ್ನಡೆಯನ್ನು ಪ್ರತಿನಿಧಿಸುತ್ತದೆ. ಕಾಂತೀಯ ಅನುರಣನ ಚಿತ್ರಣವು ಪರಮಾಣುಗಳ ಕಾಂತೀಯ ಅನುರಣನಾ ತತ್ವಗಳನ್ನು ಆಧಾರವಾಗಿ ಹೊಂದಿದೆ. ಅಣುಗಳ ಬಗ್ಗೆ ರಾಸಾಯನಿಕ ಮತ್ತು ಭೌತಿಕ ವಾದ ಸೂಕ್ಷ್ಮದರ್ಶಕ ನೋಟವನ್ನು ಪಡೆಯಲು ವಿಜ್ಞಾನಿಗಳು ವರ್ಣಪಟಲ ದರ್ಶಕ ತಂತ್ರವನ್ನು ಉಪಯೋಗಿ ಸುತ್ತಾರೆ. ಅದರ ಉಗಮದ ಪ್ರಕಾರ ಆ ತಂತ್ರವನ್ನು ಪರಮಾಣು ಸಂಬಂಧಿ ಕಾಂತೀಯ ಅನುರಣನ ಪ್ರತಿಬಿಂಬ ವೆಂದು ಸೂಚಿಸಬಹುದಾಗಿದೆ. ಆದರೆ ಇದು ಅದಕ್ಕೆ ಸಂಬಂಧಿಸಿದ ದಾಖಲೆಯಲ್ಲ್ಲಿ ಕಾಂತೀಯ ಅನುರಣನಾ ಪ್ರತಿಬಿಂಬಕ್ಕೆ ಸಂಬಂಧಿಸಿದ ಕ್ರಿಯೆಗಳು ವಿಕಿರಣ ಕ್ರಿಯೆ ಅಥವಾ ಪರಮಾಣು ಶಕ್ತಿ ಕ್ರಿಯೆಗೆ ಸೇರಿದುದೆಂದು ತಪ್ಪಾಗಿ ಸೂಚಿತವಾಗಿದೆ. ಆದರೆ ವೈದ್ಯ ಕ್ಷೇತ್ರದಲ್ಲಿ ಬಳಕೆಯಾದಾಗ ಕಾಂತೀಯ ಅನುರಣನಾ ಚಿತ್ರಣ ಎಂದು ನಾಮಕರಣಗೊಂಡಾಗ ಪರಮಾಣು ಜಗತ್ತಿನ ಋಣಾತ್ಮಕ ಅರ್ಥದೊಡನೆ ಸೇರಿದುದನ್ನು ನಿವಾರಿಸಿತು.
ಕಾಂತೀಯ ಅನುರಣನಾ ಚಿತ್ರಣದ (ಕಾನುಚಿತ್ರಣ) ಕಾರ್ಯತಂತ್ರವನ್ನು ಅರ್ಥಮಾಡಿಕೊಳ್ಳಲು ಮತ್ತು ಆ ದಿಕ್ಕಿನಲ್ಲಿ 2003ನೇ ಇಸವಿಯ ನೊಬೆಲ್ ಪ್ರಶಸ್ತಿಯ ವಿಜೇತರ ವೈಜ್ಞಾನಿಕ ಕಾಣಿಕೆಯನ್ನು ತಿಳಿಯಲು ಅವು ಗಳು ಆಧಾರ ಹೊಂದಿರುವ ಮೂಲತಂತ್ರದ ತತ್ವವನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಕಾನುಚಿತ್ರಣ ತಂತ್ರವೇ ಹೆಚ್ಚು ಕ್ರಾಂತಿಕಾರವಾದುದು. ಆ ಕ್ಷೇತ್ರದಲ್ಲಿ ಕಾರ್ಯಮಾಡಿದ ಮಾಡಿದ ವಿಜ್ಞಾನಿಗಳಿಗೆ ಮೂರು ಸನ್ನಿವೇಶಗಳಲ್ಲಿ ನೊಬೆಲ್ ಪ್ರಶಸ್ತಿಯನ್ನು ಕೊಡಲಾಗಿದೆ.
ಕಾಂತೀಯ ಅನುರಣನಾ ಚಿತ್ರಣದ ಜನನ
ರಸಾಯನಶಾಸ್ತ್ರ ಮತ್ತು ಜೀವವಿಜ್ಞಾನದಲ್ಲಿ ದ್ರವ್ಯವೊಂದರ ಅಣುಗಳ ರಸಾಯನಿಕ ಸ್ವಭಾವವನ್ನು ಗುರುತಿಸುವ ವಿವಿಧ ಬಗೆಯ ಉದ್ದೇಶಗಳಿಗೆ ವರ್ಣಪಟಲದರ್ಶಕವನ್ನು ಉಪಯೋಗಿಸಲಾಗುತ್ತದೆ. ಪ್ರತಿಯೊಂದು ಅಣುವೂ ತನ್ನದೇ ಆದ ಗುಣಲಕ್ಷಣಗಳನ್ನು ಪಡೆದಿದ್ದು ಅದು ಬೆಳಕು ಅಥವಾ ಕ್ಷ-ಕಿರಣ ಮೊದಲಾದವುಗಳಿರುವಾಗ ಹೇಗೆ ಪ್ರತಿಕ್ರಿಯೆ ತೋರಿಸುತ್ತದೆ ಎನ್ನುವುದನ್ನು ವರ್ಣಪಟಲದರ್ಶಕವು ತಿಳಿಸುತ್ತದೆ. ಅವುಗಳಿಗೇ ಪ್ರತ್ಯೇಕವಾಗಿ ರುವ ಲಕ್ಷಣಗಳನ್ನು ಅರಿಯಲು ವಿವಿಧ ಬಗೆಯ ವರ್ಣಪಟಲದರ್ಶಕ ತಂತ್ರಗಳನ್ನು ಉಪಯೋಗಿಸಲಾಗುತ್ತದೆ.
1950ರ ದಶಕದಲ್ಲಿ ಅಮೆರಿಕಾದ ಸ್ಟಾನ್‍ಫೋರ್ಡ್ ವಿಶ್ವವಿದ್ಯಾಲಯದ ಫೆಲಿಕ್ಸ್‍ಬ್ಲಾಚ್ ಮತ್ತು ಹಾರ್ವರ್ಡ್ ವಿಶ್ವವಿದ್ಯಾಲಯದ ಎಡ್‍ವರ್ಡ್ ಮಿಲ್ಸ್ ಪರ್ಸೆಲ್ ಕಾನುಚಿತ್ರಣ ತಾಂತ್ರಿಕತೆಯನ್ನು ಕಂಡುಹಿಡಿದರು. ಅವರು ಅಭಿವೃದ್ಧಿಪಡಿಸಿದ ಪರಮಾಣು ಕಾಂತೀಯತೆಯ ನಿಖರ ಅಳತೆಗಳ ಹೊಸ ವಿಧಾನಕ್ಕೆ ಮತ್ತು ಅದಕ್ಕೆ ಸಂಬಂಧಿ ಸಿದ ಸಂಶೋಧನೆಗಳಿಗಾಗಿ ಅವರಿಗೆ 1950ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಕೊಡಲಾಯಿತು.
ಪರಮಾಣುವಿನ ಮೂಲಭೂತ ಭೌತರಚನಾಕೃತಿಯು ನಮ್ಮ ಸೌರವ್ಯೂಹದ ವ್ಯವಸ್ಥೆಯನ್ನು ಹೋಲುತ್ತದೆ. ಪರ ಮಾಣುವಿನ ನಬ್ಬೀಜದಲ್ಲಿ ಧನವಿದ್ಯುದಾವೇಶವುಳ್ಳ ಪ್ರೋಟಾನ್‍ಗಳು ಮತ್ತು ವಿದ್ಯುದಾವೇಶವಿರದ ನ್ಯೂಟ್ರಾನ್ ಗಳು ಹಾಗೂ ಪರಮಾಣುವಿನ ಸುತ್ತ ಚಲಿಸುತ್ತಿರುವ ಋಣವಿದ್ಯುದಾವೇಶಪ್ರೇರಿತ ಎಲೆಕ್ಟ್ರಾನ್‍ಗಳು ಇರುತ್ತವೆ. ಕಾಂತೀಯ ಕ್ಷೇತ್ರದಲ್ಲಿ ಪದಾರ್ಥವೊಂದನ್ನು ಇಟ್ಟಾಗ ಪರಮಾಣುವಿನ ಕೆಲವು ಕೇಂದ್ರಗಳು ಸೂಕ್ಷ್ಮರೂಪದ ದಿಕ್ಸೂಚಿ ಮುಳ್ಳುಗಳ ರೀತಿ ವರ್ತಿಸುತ್ತವೆ ಎನ್ನುವುದನ್ನು ಬ್ಲೋಚ್ ಮತ್ತು ಪರ್ಸೆಲ್‍ರವರು ಗಮನಿಸಿದರು. ಅದನ್ನು ಪರಮಾಣುವಿನ ತಿರುಗುವಿಕೆ ಎಂದು ಕರೆಯುತ್ತಾರೆ. ಅತ್ಯಂತ ಸಣ್ಣ ಗಾತ್ರದ ದಿಕ್ಸೂಚಿ ಮುಳ್ಳುಗಳು ಅಥವಾ ಪರಮಾಣು ಭ್ರಮಣೆಗಳು ಪರಮಾಣು ಚಲನಶಾಸ್ತ್ರದ ನಿಯಮಗಳಿಗೆ ಅನುಗುಣವಾಗಿ ಕಾಂತೀಯ ಕ್ಷೇತ್ರದಲ್ಲಿ ತಮ್ಮ ಭ್ರಮಣೆಯನ್ನು ಕೆಲವು ರೀತಿಯಲ್ಲಿ ಮಾತ್ರವೇ ಹೊಂದಿಸಿಕೊಳ್ಳುತ್ತವೆ. ಆ ವಾಲುವಿಕೆಯ ಕ್ರಿಯೆಯ ವಿವಿಧ ಶಕ್ತಿಮಟ್ಟಗಳಿಗೆ ಅನುಗುಣವಾಗಿ ನಡೆಯುತ್ತದೆ. ಆ ಭ್ರಮಣ ಕ್ರಿಯೆಗಳನ್ನು ರೇಡಿಯೋ ಅಲೆಗಳಿಗೆ ತೆರೆದಿಟ್ಟಾಗ ಅವುಗಳ ಕಂಪನವು ಶಕ್ತಿಯ ಅಂತರಗಳಿಗೆ ಸರಿಯಾಗಿ ಹೊಂದಿಕೆಯಾದಾಗ ಆ ಭ್ರಮಣ ಕ್ರಿಯೆಗಳು ಆ ಅಂತರಗಳ ನಡುವೆ ಬದಲಾಗತೊಡಗಬಹುದು. ಈ ಕ್ರಿಯೆಯನ್ನು ಅನುರಣನ ಅಥವಾ ಅನುಕಂಪನವೆನ್ನುತ್ತಾರೆ. ಶಕ್ತಿಯ ವಿವಿಧ ಮಟ್ಟದ ಅಂತರಗಳನ್ನು ಅಳತೆ ಮಾಡುವ ಒಂದು ವಿಧಾನವಾಗಿ ರೇಡಿಯೋ ಅಲೆಗಳ ಕಂಪನವನ್ನು ನಿಧಾನಗತಿಯಲ್ಲಿ ಬದಲಾವಣೆ ಮಾಡಲಾಗುವುದು. ಅನುಕಂಪನದಲ್ಲಿ, ಆ ಭ್ರಮಣೆಗಳು ಮೀಟಲ್ಪಟ್ಟು, ಸಂಕೇತವನ್ನು ಉತ್ಪನ್ನ ಮಾಡಿ ಶೋಧಕದಲ್ಲಿ ಗುರುತಿಸಲ್ಪಡುತ್ತವೆ. ಅಂದರೆ ಪರಮಾಣು ಕೇಂದ್ರವು ತನ್ನ ಹಿಂದಿನ ಶಕ್ತಿಯ ಮಟ್ಟಕ್ಕೆ ಹಿಂದಿರುಗಿದಾಗ ರೇಡಿಯೋ ಅಲೆಗಳು ವಿಸರ್ಜಿತವಾಗು ತ್ತವೆ. ಆ ಸಂಕೇತದ ಬಲವನ್ನು ಚಿತ್ರರೂಪದಲ್ಲಿ ಸೂಚಿಸಿದಾಗ, ಅದು ಕಂಪನದ ನಿಯಮಿತ ಕ್ರಿಯೆಗಾಗಿ ನಕ್ಷೆಯಲ್ಲಿ ವ್ಯಕ್ತವಾಗುತ್ತದೆ. ಅದನ್ನೇ ಪರಮಾಣು ಸಂಬಂಧಿ ಕಾಂತೀಯ ಅನುರಣನ ವರ್ಣಪಟ್ಟಿ ಎಂದು ಕರೆಯುತ್ತಾರೆ. ಆ ಪರಮಾಣು ಸಂಬಂಧಿ ಕಾಂತೀಯ ಅನುರಣನ ವರ್ಣಪಟ್ಟಿಯಲ್ಲಿರುವ ಏರಿಕೆಯ ಶಿಖರಗ ಳನ್ನು ವ್ಯಾಖ್ಯಾನಿಸಿದಾಗ, ಅದರ ಸಹಾಯದಿಂದ ಮೂರು ಆಯಾಮದ ಚಿತ್ರವನ್ನು ರಚಿಸಬಹುದಲ್ಲದೆ ಆ ಅಣುವನ್ನು ಅಧ್ಯಯನ ಮಾಡಲು ಸಹಾಯವಾಗುವುದು.
ಪರಮಾಣು ಅನುರಣನ ಕ್ರಿಯೆಗೆ ಸಹಾಯಕವಾಗುವ ಕಂಪನವು ಅಯಸ್ಕಾಂತೀಯ ಕ್ಷೇತ್ರದ ಬಲ ಮತ್ತು ಪರಮಾಣುವಿನ ವಿಧದ ಮೇಲೆ ಮಾತ್ರವೇ ಅವಲಂಬಿತವಾಗಿರುವುದಲ್ಲದೇ ಪರಮಾಣುವಿನ ಸ್ಥಾನಿಕ ಪರಿಸ್ಥಿತಿಯ ಮೇಲೆಯೂ ಅವಲಂಬಿಸಿರುತ್ತದೆ. ಅದರ ಜೊತೆಗೆ ಪರಮಾಣು ನಬ್ಬೀಜದ ವಿವಿಧ ಪರಮಾಣು ಸಂಬಂಧಿ ಭ್ರಮಣೆಗಳೂ ಸಹ ಒಂದು ಮತ್ತೊಂದರ ಮೇಲೆ ಪರಿಣಾಮ ಬೀರಿ, ಸುಧಾರಿತವಾದ ರಚನಾ ಪ್ರತಿಗಳನ್ನು ಉತ್ಪತ್ತಿಮಾಡುತ್ತವೆ. ಅಂದರೆ ಪರಮಾಣು ಸಂಬಂಧಿ ಕಾಂತೀಯ ಅನುರಣನೆಯ ವರ್ಣಪಟಲದ ಶಿಖರಗಳ ಸಂಖ್ಯೆ ಹೆಚ್ಚುತ್ತದೆ.
ಈ ಪರಮಾಣು ಕಾಂತೀಯ ಅನುರಣನೆಯನ್ನು (ಓಒಖ) ರಾಸಾಯನಿಕ ವಿಜ್ಞಾನದಲ್ಲಿ ಉಪಯೋಗಿಸುವುದು ಅನುಕೂಲಕರವೆಂಬುದನ್ನು ಇದು ಸ್ಪಷ್ಟಪಡಿಸುತ್ತದೆ. ಸಂಯುಕ್ತ ವಸ್ತುವಿನಲ್ಲಿರುವ ರಾಸಾಯನಿಕಗಳ ಸಂಖ್ಯೆ ಮತ್ತು ವಿಧವನ್ನು ನಿರ್ಧರಿಸಲು ಈ ಸಂಕೇತಗಳನ್ನು ಉಪಯೋಗಿಸಬಹುದು. 1950 ಮತ್ತು 1970ರ ಅವಧಿಯ ನಡುವೆ ಈ ಅನುರಣನಾ ಚಿತ್ರಣ ಕ್ರಿಯೆಯನ್ನು ಅಣುಗಳ ರಸಾಯನಿಕ ಮತ್ತು ಭೌತಿಕ ಅಣುಗಳ ವಿಶ್ಲೇಷಣೆಗೆ ಉಪಯೋಗಿಸ ಲಾಯಿತು. ಆದರೆ ಈ ವಿಧಾನವನ್ನು ಉಪಯೋಗಿಸುವುದರಲ್ಲಿ ಪ್ರಮುಖವಾಗಿ ಅದರ ಕಡಿಮೆ ಸಂವೇದನೆಗೆ ಸಂಬಂಧಿಸಿದ ಕೆಲವು ಸಮಸ್ಯೆಗಳಿದ್ದವು. ಆದ ಕಾರಣ ಆ ವಿಧಾನವನ್ನು ಬಳಸಿ ದಾಗ ಸಾಂದ್ರವಾದ ದ್ರವಗಳನ್ನು ಕುರಿತು ಅಧ್ಯಯನ ಮಾಡಲು ಮಾತ್ರ ಸಾಧ್ಯವಾಯಿತು ಮತ್ತು ಅತಿಚಿಕ್ಕಸಂಖ್ಯೆ ಯಷ್ಟು ಅಣುಗಳಿರುವೆಡೆ ಮಾತ್ರ ಉಪಯೋಗಿಸಲು ಅವಕಾಶವಿತ್ತು.
ಈ ವಿಚಾರಗಳಲ್ಲಿ ಮತ್ತಷ್ಟು ಸಂಶೋಧನೆಗಳಾಗುತ್ತಿರುವಾಗ 1966ರಲ್ಲಿ ಒಂದು ಪ್ರಮುಖವಾದ ಮುನ್ನಡೆಯು ಸಂಭವಿಸಿತು. ಸ್ವಿಡ್ಸರ್‍ಲ್ಯಾಂಡ್‍ನ ರಿಚರ್ಡ್ ಆರ್ ಎನ್ರ್ಸ್ ಮತ್ತು ಅಮೆರಿಕಾದ ವೆಸ್ಟನ್ ಎ. ಅಂಡರ್‍ಸನ್‍ರವರು ಪರಮಾಣು ಸಂಬಂಧಿ ಕಾಂತೀಯ ಅನುರಣನಾ ವರ್ಣಪಟಲದ ಸೂಕ್ಷ್ಮ ಸಂವೇದನೆಯನ್ನು ನಾಟಕೀಯ ವಾದ ರೀತಿಯಲ್ಲಿ ವರ್ಧಿಸಲು ಸಾಧ್ಯವೆನ್ನುವುದನ್ನು ಕಂಡುಹಿಡಿದರು. ಕಂಪನವನ್ನು ನಿಧಾನವಾಗಿ ಹೆಚ್ಚಿಸು ವುದಕ್ಕೆ ಬದಲಾಗಿ ಆ ಮಾದರಿಯನ್ನು ಕಿರಿದಾದ ಮತ್ತು ತೀವ್ರತರ ಸಾಂದ್ರತೆಯ ರೇಡಿಯೋ ಕಂಪನದ ಮಿಡಿತಗಳಿಗೆ ಒಳಪಡಿಸಿದಾಗ ಅದು ಬದಲಾಗುವುದನ್ನು ಕಂಡುಕೊಂಡರು. ಆ ಮಿಡಿತಗಳಿಗೆ ಒಳಪಡಿಸಿದ ಕೆಲವು ಸೆಕೆಂಡುಗಳ ನಂತರ ಪರಮಾಣು ಕೇಂದ್ರದಿಂದ ಸಂಕೇತವು ವಿಸರ್ಜಿತವಾಗುತ್ತದೆ. ಆನಂತರ ಕಾಲದ ಉತ್ಪನ್ನವಾಗಿ ಮಿಡಿತವು ಹೊರಬಂದ ಮೇಲೆ ಸಂಕೇತವನ್ನು ಅಳತೆಮಾಡಬಹುದು. ಪ್ರತಿಯೊಂದು ಮಿಡಿತದ ನಂತರದ ಸಂಕೇತಗಳ ದಾಖಲೆಗಳನ್ನು ಗಣಕಯಂತ್ರದಲ್ಲಿ ಸಂಕಲನ ಮಾಡಬಹದು. ಒಂದೇ ಒಂದು ಸಮಸ್ಯೆ ಯೆಂದರೆ ಪರಮಾಣು ಕಾಂತೀಯ ಅನುರಣನಾ (ಓಒಖ) ಸಂಕೇತವನ್ನು ಕಾಲದ ಉತ್ಪನ್ನ ಕ್ರಿಯೆಯಾಗಿ ಅಳತೆಮಾಡಲು ಸರಳವಾದ ರೀತಿ ಪರಿವರ್ತಿಸಿ ತಿಳಿಸಲು ಸಾಧ್ಯವಿಲ್ಲ. ಅನ್ಸ್ರ್ಟ್‍ರವರು ಈ ಅನುರಣನ ಕಂಪನಗಳ ಮೇಲೆ ಫೋರಿಯರ್ ವರ್ಗಾಂತರ (ಫೋರಿಯರ್ ಟ್ರಾನ್ಸ್‍ಫಾರ್ಮ್) ಕ್ರಿಯೆಯನ್ನು ನಡೆಸಿದಾಗ, ಆ ಮಾಹಿತಿಗಳನ್ನು ಸಂಕೇತಗಳಾಗಿ ವಿಶ್ಲೇಷಿಸಿ ಅನುರಣನಾ ಚಿತ್ರಣದ ವರ್ಣಪಟ್ಟಿಯಾಗಿ ನಡೆಸಲು ಪರಿವರ್ತಿಸಬಹುದು. ಇದನ್ನು ಗಣಕ ಯಂತ್ರದಲ್ಲಿ ವೇಗವಾಗಿ ನಡೆಸಲು ಸಾಧ್ಯ.
ಅನ್ರ್ಸ್‍ರವರ ಶೋಧನೆಯ ಆಧುನಿಕ ಅನುರಣನಾ ಚಿತ್ರಣದÀ ವರ್ಣ ಪಟಲದರ್ಶಕಕ್ಕೆ ಆಧಾರವಾಗಿ ಮಾರ್ಪ ಟ್ಟಿದ್ದು ಅದನ್ನು ಫೋರಿಯರ್ ಟ್ರಾನ್ಸ್‍ಫಾರ್ಮ್ ಎಂದು ಕರೆಯುತ್ತಾರೆ. ಈ ವಿಧಾನದಿಂದ ಸಂವೇದನೆಯನ್ನು 10ರಿಂದ 100ರಷ್ಟು ಹೆಚ್ಚಿಸಲು ಸಹಾಯವಾಗುತ್ತದೆ. ಏಕೆಂದರೆ ಆ ಮಿಡಿತದ ಪ್ರತಿಕ್ರಿಯೆಯಲ್ಲಿ ಎಲ್ಲಾ ಅನುರಣನ ಕಂಪನಗಳ ಮಾಹಿತಿಗಳು ಒಂದೇ ವೇಳೆಯಲ್ಲಿ ಒಳಗೊಂಡಿರುತ್ತವೆ. ಅಲ್ಪ ಪ್ರಮಾಣದ ಪದಾರ್ಥ ವಿದ್ದಾಗಲೂ ಸಹ ರಾಸಾಯನಿಕವಾಗಿ ಆಸಕ್ತಿಯಿರುವ ಸಮಸ್ಥಾನಿಗಳನ್ನು ಅಧ್ಯಯನ ಮಾಡಿ ತಿಳಿಯಲು ಫೋರಿಯರ್ ಟ್ರಾನ್ಸ್ ಫಾರ್ಮ್ ಸಾಧ್ಯಮಾಡಿಕೊಡುತ್ತದೆ. ಆ ಸಮಸ್ಥಾನಿಗಳು ಸ್ವಾಭಾವಿಕವಾಗಿ ಕಡಮೆ ಪ್ರಮಾಣದಲ್ಲಿ ಅಥವಾ ಕಡಮೆ ಸಾಂದ್ರತೆಯಲ್ಲಿ ಇದ್ದರೂ ಸಹ ಅಧ್ಯಯನಮಾಡಿ ತಿಳಿಯಲು ಸಾಧ್ಯ.
1960 ಮತ್ತು 1970ರ ಅವಧಿಯಲ್ಲಿ ಪರಮವಾಹಕ ಪದಾರ್ಥಗಳು ಸುಧಾರಣೆಗೊಂಡುದರಿಂದ ಹೊಸದಾದ ಮತ್ತು ಉತ್ತಮ ಆಯಸ್ಕಾಂತಗಳನ್ನು ವಿನ್ಯಾಸ ಮಾಡಲು ಅವು ಸಹಾಯಕವಾದವು. ಉನ್ನತ ಗುಣಮಟ್ಟದ ಮತ್ತು ಸ್ಥಿರತೆಯುಳ್ಳ ಕಾಂತೀಯಕ್ಷೇತ್ರಗಳು ಉತ್ತಮ ಸಂವೇದನೆ ಮತ್ತು ವಿವರ ಸ್ಪಷ್ಟತೆಯನ್ನು ಒಳಗೊಂಡ ವರ್ಣಪಟಲ ವನ್ನು ಪಡೆಯಲು ಆಗ ಇದ್ದ ಅನುರಣನ ಕಂಪನಗಳ ತಾಂತ್ರಿಕತೆಯಿಂದ ಸಾಧ್ಯವಿರಲಿಲ್ಲ. ಅದಕ್ಕಾಗಿ ಮತ್ತಷ್ಟು ಸಂಶೋಧನೆಗಳು ನಡೆಯಬೇಕಾಯಿತು.
ಎರಡು ಆಯಾಮದ ಫೋರಿಯರ್ ಟ್ರಾನ್ಸ್‍ಫಾರ್ಮ್
1975ರಲ್ಲಿ ಎನ್ಸ್ರ್ಟ್ ಮತ್ತು ಸಹ ಕಾರ್ಯನಿರತರು ಮೇಲೆ ತಿಳಿಸಿದ ಅಗತ್ಯಗಳಿಗೆ ಬೇಕಾದ ಮುನ್ನಡೆಯನ್ನು ಸಾಧಿಸಲು ಅವರ ಸಂಶೋಧನೆಯಾದ ಎರಡು ಆಯಾಮದ ಫೋರಿಯರ್ ಟ್ರಾನ್ಸ್‍ಫಾರ್ಮ್ ಸಹಾಯಕವಾ ಯಿತು. ಒಂದು ಆಯಾಮದಿಂದ ಎರಡು ಆಯಾಮದ ಫೋರಿಯರ್ ಟ್ರಾನ್ಸ್‍ಫಾರ್ಮ್ ಆಗಿ ವರ್ಗಾಂತರಿಸುವ ಕ್ರಿಯೆಯು ಒಂದು ಕ್ರಾಂತಿಕಾರಕ ವಿಧಾನವಾಗಿದ್ದು ಅದು ಅನುರಣನಾ ಚಿತ್ರಣದÀ ತಾಂತ್ರಿಕತೆಯಲ್ಲಿ ಅನೇಕ ಹೊಸ ಸಾಧ್ಯತೆಗಳನ್ನು ಸೇರಿಸಿತು. ಒಂದು ಆಯಾಮದ ಅನುರಣನಾ ಚಿತ್ರಣದÀ ಕ್ರಿಯೆಯು ಪರಮಾಣು ಭ್ರಮಣೆಗಳನ್ನು ಮಿಡಿತಕ್ಕೆ ಒಳಗಾಗುವಂತೆ ಮಾಡುತ್ತದೆ. ಆ ಸಂಕೇತವನ್ನು ಸ್ವೀಕಾರಕದಲ್ಲಿ `ಣ' ಕಾಲದ ನಂತರ ಗುರುತಿಸಬಹುದು. ಅದನ್ನು ಆ ನಂತರ ಕಾಲ `ಣ' ಯ ಉತ್ಪನ್ನವಾಗಿ ನಕ್ಷೆಯಾಗಿ ಗುರುತಿಸಲು ಮಿಡಿತದ ನಂತರ ಸಾಧ್ಯವಾಗಬಹುದು. ಎರಡು ಆಯಾಮದ ಅನುರಣನಾ ಚಿತ್ರಣದÀ ಕ್ರಿಯೆಯಲ್ಲಿ ಪರಮಾಣು ಭ್ರಮಣೆಗಳು ಎರಡು ಮಿಡಿತಗಳಿಗೆ ಒಳಗಾಗುತ್ತವೆ. ಅದು `ಣ1' ಕಾಲದ ಅಂತರದೊಡನೆ ಒಳಗಾಗುತ್ತದೆ. ಎರಡನೆಯ ಮಿಡಿತದ ನಂತರ ಆ ಸಂಕೇತವನ್ನು ಒಂದು ಆಯಾಮದ ಅನುರಣನಾ ಚಿತ್ರಣದÀ ಕ್ರಿಯೆಯ ರೀತಿಯಲ್ಲಿಯೇ `ಣ2' ಕಾಲದ ನಂತರ ಪ್ರಯೋಗದ ಮೊದಲ ಭಾಗಕ್ಕೆ ಹಿಂದಿರುಗಿ, `ಣ1' ಅಳತೆಗಳೊಡನೆ ಪುನರಾವರ್ತನೆಯಾಗುತ್ತದೆ.
`ಣ1'ನ ವಿದ್ಯುದಾವೇಶ ಸಂಕೇತವನ್ನು ಪರಿವರ್ತನೆ 'ಣ2' ಕಾಲಾವಧಿಯಲ್ಲಿ ಅಳತೆ ಮಾಡಬಹುದು. ಇವು ಎರಡು ಆಯಾಮದ ಪಟ್ಟಯನ್ನು ಒದಗಿಸುತ್ತದೆ. ಅದರಲ್ಲಿ ಸಂಕೇತದ ತೀವ್ರತೆಯು `ಣ1' ಮತ್ತು `ಣ2' ಗಳೆರಡರ ಉತ್ಪನ್ನ ಕ್ರಿಯೆಯ ರೀತಿಯಲ್ಲಿರುತ್ತದೆ. ಫೋರಿಯರ್ ವರ್ಗಾಂತರದ ನಂತರ ಈ ಎರಡು ಚಲಾಂತರಗಳಿಗೆ ಸಂಬಂಧಿಸಿದಂತೆ ಎರಡು ಆಯಾಮದ ಅನುರಣನಾ ವರ್ಣಪಟ್ಟಿಯನ್ನು ಪಡೆಯಲು ಸಾಧ್ಯವಾಗುವುದು ಮತ್ತು ಎರಡು ಆಯಾಮದ ಆಣುವಿನ ರಚನಾ ಕೃತಿ ಪಡೆಯಲು ಸಹಾಯಕವಾಗುತ್ತದೆ.
1991ರಲ್ಲಿ ಎನ್ಸ್ರ್ಟ್‍ರವರಿಗೆ ಮಿಡಿತಗಳ ಫೋರಿಯರ್ ವರ್ಗಾಂತರ ಅನುರಣನಾ ಚಿತ್ರಣದÀ ಕ್ರಿಯೆಗಳ ಸಾಧನೆಗಳಿಗಾಗಿ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿಯು ದೊರಕಿತು. ಅವರ ಕಾಣಿಕೆಯು ಅಣುವಿನಲ್ಲಿ ಪರ ಮಾಣುಗಳು ಪರಸ್ಪರ ಹತ್ತಿರವಾಗಿರುವ ಅಳತೆಯನ್ನು (ಉದಾಹರಣೆಗೆ ಪರಮಾಣುಗಳು ಒಂದು ಮತ್ತೊಂದ ರೊಡನೆ ಆವೃತವಾಗಿರುವುದನ್ನು) ತಿಳಿಯಲು ಸಹಾಯಕವಾಯಿತು. ಅನುರಣನಾ ಚಿತ್ರಣದÀ ವರ್ಣಪಟ್ಟಿ ಯಲ್ಲಿನ ಸಂಕೇತಗಳನ್ನು ಅರ್ಥಮಾಡಿಕೊಳ್ಳಲು ಇದರಲ್ಲಿ ಸಾಧ್ಯವಾಗುತ್ತದೆ. ಇದರ ಸಹಾಯದಿಂದ ಅಣುವಿನ ಗೋಚರದ ಬಗೆಗೆ ಅದರ ರಚನಾ ವಿಧಾನಗಳ ಬಗ್ಗೆ ಆಲೋಚನೆ ಮಾಡಿ ತಿಳಿಯಲು ಸಾಧ್ಯವಾಗಬಹುದು.
ಈ ವಿಧಾನವು ಹೋಲಿಕೆಯಲ್ಲಿ ಚಿಕ್ಕಗಾತ್ರದ ಅಣುಗಳಿಗೆ ಹೆಚ್ಚು ಸೂಕ್ತವಾಗುತ್ತದೆ. ಆದರೆ ದೊಡ್ಡ ಗಾತ್ರದ ಅಣುಗಳಿಗೆ ಸಂಬಂಧಿಸಿದಂತೆ, ವಿವಿಧ ಪರಮಾಣು ಅನುರಣನಗಳ ನಡುವೆ ಇರುವ ವ್ಯತ್ಯಾಸದಿಂದ ಗುರುತಿಸಿ ತಿಳಿಯಲು ಕಷ್ಟವಾಗಿದೆ. ಈ ವಿಧದಲ್ಲಿ ಅನುರಣನಾ ಚಿತ್ರಣದÀ ವರ್ಣಪಟ್ಟಿಯಲ್ಲಿ ಸಾವಿರಾರು ಶಿಖರಗಳ ನಕ್ಷೆಯಿದ್ದು ಶಿಖರವು ಯಾವ ಪರಮಾಣುವಿಗೆ ಸಂಬಂಧಿಸಿದೆ ಎನ್ನುವುದನ್ನು ತಿಳಿಯಲು ಅಸಾಧ್ಯವಾಗುತ್ತದೆ. ಈ ಸಮಸ್ಯೆ ಯನ್ನು ಅಂತಿಮವಾಗಿ ಬಿಡಿಸಿದವರು ಸ್ವಿಸ್ ದೇಶದ ರಸಾಯನ ಶಾಸ್ತ್ರಜ್ಞ ಕುರ್ಟ್ ವುತ್ರಿಚರ್‍ರವರು.
ಕಾನುಚಿತ್ರಣ ತಾಂತ್ರಿಕತೆಯ ಅನ್ವಯಗಳು
ವೈದ್ಯಕೀಯ ಕ್ಷೇತ್ರದಲ್ಲಿ ಕಾಂತೀಯ ಅನುರಣನ ಚಿತ್ರಣದ ಪರಿಣಾಮಗಳು ಅನೇಕ ರೀತಿಯದ್ದಾಗಿವೆ. ಕಾನು ಚಿತ್ರಣದ ಆನ್ವಯಗಳಲ್ಲಿ ಶಸ್ತ್ರಕ್ರಿಯೆಯ ಯೋಜನಾ ವಿಧಾನ, ವಾಸ್ತವ ಕಾಲದಲ್ಲಿಯೇ ಹೃದಯ ಕ್ರಿಯೆಯ ಛಾಯಾಗ್ರಹಣ, ಮಾಂಸಖಂಡ ಮತ್ತು ಅಸ್ತಿಪಂಜರದ ಗುಣಲP್ಪ್ಷಣಗಳ ನಿರ್ಧಾರ ಹಾಗೂ ಮೆದುಳಿನ ಪ್ರತಿಬಿಂಬ ಗ್ರಹಣ ಕ್ರಿಯೆಗಳು ಸೇರಿದ್ದು ಅವು ಈಗ ವೈದ್ಯಕ್ಷೇತ್ರದ ನಿತ್ಯವಿಧಿಗಳಾಗಿವೆ. ಕೆಳಗೆ ಕೊಟ್ಟಿರುವ ವಿವರಣೆಗಳು ವಿವಿಧ ವೈದ್ಯಕೀಯ ಕ್ಷೇತ್ರಗಳಲ್ಲಿ ಕಾನುಚಿತ್ರಣದ ಆನ್ವಯಗಳÀನ್ನು ಸಂಕ್ಷಿಪ್ತವಾಗಿ ತಿಳಿಸುತ್ತದೆ.
ಮೆದುಳು ಹಾಗೂ ಮೆದುಳು ಬಳ್ಳಿ: ನರಸಂಬಂಧ ಕೆಲ ರೋಗಗಳನ್ನು ತಪಾಸಣೆ ಮಾಡುವ ಪ್ರಮುಖ ರೋಗ ತಪಾಸಣಾ ಸಲಕರಣೆಯಾಗಿ ಕಾನ್ಮಚಿತ್ರಣವು ಕಾರ್ಯ ನಿರ್ವಹಿಸುತ್ತದೆ. ಅನೇಕ ರೀತಿಯ ರಕ್ತ ಪೆಡಸಣೆ ರೋಗ, ಅಲ್ಜೆಮರ್ ಅಥವಾ ಅಪಸ್ಮಾರ ಮುಂತಾದ ನರಸಂಬಂಧ ರೋಗಗಳ ಪ್ರಮುಖ ರೋಗತಪಾಸಣಾ ಸಲಕರಣೆಯಾಗಿ ಕಾನುಚಿತ್ರಣವು ನೆರವಾಗುತ್ತದೆ. ಮೆದುಳು ಮತ್ತು ಮೆದುಳು ಬಳ್ಳಿಯ ರೋಗದ ಗಡ್ಡೆಗಳು, ಸಾಂಕ್ರಾಮಿಕ ರೋಗಗಳು ಹಾಗೂ ನ್ಯೂನತೆಗಳನ್ನು ತಪಾಸಣೆ ಮಾಡಲು ಸಹ ಇದು ಸಹಾಯ ಮಾಡುತ್ತದೆ. ಕಾನುಚಿತ್ರಣದ ಸಹಾಯದಿಂದ ನರಗಳ ವ್ಯೂಹದಲ್ಲಿ ಉರಿಮೂತ್ರವು ಯಾವ ನಿರ್ದಿಷ್ಟ ಸ್ಥಳದಲ್ಲಿದೆ ಎನ್ನುವು ದನ್ನೂ, ಅದು ಎಷ್ಟರ ಮಟ್ಟಿಗೆ ತೀವ್ರವಾಗಿದೆ ಹಾಗೂ ಚಿಕಿತ್ಸೆಯಿಂದ ಅದು ಎಷ್ಟು ಪ್ರಭಾವಗೊಂಡಿದೆ ಎನ್ನುವು ದನ್ನೂ ನೋಡಲು ಸಾಧ್ಯವಿದೆ. ಮೊದಲಿಗೆ ರೋಗವನ್ನು ಪತ್ತೆಮಾಡಿ ತಿಳಿಯುವುದು ಈ ರೋಗಗಳ ಪರಿ ಣಾಮಕಾರಿ ಚಿಕಿತ್ಸೆಗೆ ಪ್ರಮುಖ ಕೀಲಿಕೈಯಾಗಿದೆ. ಅದು ಮಾಂಸಖಂಡಗಳಿಂದ ಬೆನ್ನುನೋವು ಮತ್ತು ಮೆದುಳು ಬಳ್ಳಿಯಲ್ಲಿ ಇರುವ ಉರಿಮೂತ್ರದಿಂದಾದ ಬೆನ್ನುನೋವನ್ನು ಪ್ರತ್ಯೇಕಮಾಡಿ ತಿಳಿಯಲು ಸಹಾಯವಾಗುತ್ತದೆ.
ಸ್ತನಗಳು: ಮೆದುವಾದ ಅಂಗಾಂಶಗಳ ನಡುವೆ ಇರುವ ಹೋಲಿಕೆ ವ್ಯತ್ಯಾಸಗಳನ್ನು ಉತ್ಕøಷ್ಟವಾದ ರೀತಿಯಲ್ಲಿ ಪ್ರದರ್ಶನ ಮಾಡಿ ತೋರಿಸುವ ಕಾನುಚಿತ್ರಣದ ಸಾಮಥ್ರ್ಯದ ಸಹಾಯದಿಂದ ಸ್ತನ ಅರ್ಬುದ ರೋಗ ತಪಾಸಣೆ ಹಾಗೂ ವಿಶ್ಲೇಷಣೆಯ ಪ್ರಮುಖ ಸಲಕರಣೆಯಾಗಿ ಕಾರ್ಯನಿರ್ವಹಿಸಿ ಆ ರೋಗದ ಚಿಕಿತ್ಸೆಗೆ ನೆರವಾಗುತ್ತಿದೆ.
ಎದೆ ಮತ್ತು ಉದರ: ಎದೆ ಮತ್ತು ಹೊಟ್ಟೆಯ ಒಳಗಿನ ಅಂಗಭಾಗಗಳಾದ ಪಿತ್ತಜನಕಾಂಗ, ಮೂತ್ರಜನಕಾಂಗ ಮತ್ತು ಮೇದೋಜೀರಕಾಂಗಗಳನ್ನೂ ಸಹ ಕಾನುಚಿತ್ರಣದ ನೆರವಿನಿಂದ ಸಂಪೂರ್ಣವಾಗಿ ಪರೀಕ್ಷಿಸಲು ಸಾಧ್ಯವಿದೆ. ರೋಗದ ಗಡ್ಡೆಗಳು ಮತ್ತು ಅಂಗಭಾಗಗಳ ಕಾರ್ಯಚಟುವಟಿಕೆಯ ಏರುಪೇರುಗಳನ್ನು ತಪಾಸಣೆ ಮಾಡಿ ವಿಶ್ಲೇಷಿಸಲು ಈ ಪರೀಕ್ಷೆಗಳು ನೆರವಾಗುತ್ತವೆ.
ಹೃದಯ: ಅಂಗಭಾಗವನ್ನು ಛೇದನ ಮಾಡದೆಯೇ ಹೃದಯ ಸಮಸ್ಯೆಗಳಾದ ಜನ್ಮಜಾತಹೃದಯ ರೋಗ (ಹುಟ್ಟುವಾಗಲೇ ಇರುವ ಹೃದಯ ತೊಡಕುಗಳು)ಹೃದಯದ ರಕ್ತನಾಳಗಳ ಪೆಡಸುತನ ದ ರೋಗ ಹಾಗೂ ಹೃದಯದಲ್ಲಿರುವ ಬೇರೆ ತೊಂದರೆಗಳನ್ನು ತಪಾಸಣೆಮಾಡಿ ತಿಳಿಯಲು ಕಾನುಚಿತ್ರಣವು ಸಹಾಯ ಒದಗಿಸುತ್ತದೆ.
ರಕ್ತನಾಳಗಳು: ಜೀವಸತ್ವದ ಕೊರತೆ ಮತ್ತು ಮೆದುಳು, ಕತ್ತು, ಕಾಲುಗಳು ಅಥವಾ ದೇಹದ ಬೇರೆ ಭಾಗದ ಪ್ರದೇಶಗಳಲ್ಲಿ ರಕ್ತನಾಳಗಳು ಗಡಸಾಗುವುದರಿಂದ ಅವು ಕಿರಿದಾಗಿ ರಕ್ತ ಸರಬರಾಜಿನ ಕೊರತೆ ಆ ಅಂಗಕ್ಷೇತ್ರಗಳಲ್ಲಿ ಸಂಭವಿಸಿರುವುದನ್ನು ಕಾನುಚಿತ್ರಣದ ಸಹಾಯದಿಂದ ವಿಶ್ಲೇಷಣೆ ಮಾಡಿ ತಿಳಿಯಲು ಸಾಧ್ಯ.
ಮಾಂಸಖಂಡ-ಅಸ್ತಿಪಂಜರ: ಮೂಳೆಗಳ ಸುತ್ತಮುತ್ತ ಇರುವ ಮೃದು ಅಂಗಾಂಗಗಳ ರಚನಾ ಕೃತಿಯ ಸ್ಪಷ್ಟ ವಿವರಗಳ ಚಿತ್ರಗಳನ್ನು ಕಾನುಚಿತ್ರಣ ಒದಗಿಸಬಲ್ಲದು. ಈ ಅನುಕೂಲತೆಯಿಂದಾಗಿ ಬೆನ್ನುಹುರಿ ಮತ್ತು ಮೊಣಕಾಲು, ತೋಳು, ಜನನಾಂಗ ಪ್ರದೇಶ ಮತ್ತು ಪೃಷ್ಠ, ಮೊಳಕೈ, ಮಣಿಕಟ್ಟು ಮುಂತಾದ ಸಂಧಿ ಪ್ರದೇಶಗಳ ತಪಾಸಣೆಗೆ ಇದು ಉತ್ತಮ ಐಚ್ಛಿಕ ಸಲಕರಣೆಯಾಗಿ ಕಾರ್ಯನಿರ್ವಹಿಸುತ್ತಿದೆ; ಅಸ್ತಿ ರಜ್ಜು ಹಾಗೂ ಮಾಂಸಖಂಡಗಳ ಹಾನಿಯನ್ನು ಸ್ಪಷ್ಟವಾಗಿ ನೋಡಲು ಸಹಾಯಮಾಡುತ್ತದೆ.
ಶ್ವಾಸಕೋಶಗಳು: ಇತ್ತೀಚಿನ ತಾಂತ್ರಿಕತೆಯ ಮುನ್ನಡೆಗಳು ಕಾನುಚಿತ್ರಣವನ್ನು ಗಣನೀಯವಾಗಿ ಸುಧಾರಣೆ ಮಾಡಿರುವುದರಿಂದ ಹೀಲಿಯಮ್ ಮತ್ತು ಕ್ಸೆಗಾನ್ ಮುಂತಾದ ವಿರಳ ಅನಿಲಗಳನ್ನು ಉಪಯೋಗಿಸಿಕೊಂಡು ಶ್ವಾಸಕೋಶಗಳ ಕಾಂತೀಯ ಅನುರಣನ ಚಿತ್ರಣಕ್ಕೆ ಉಪಯೋಗಿಸಲಾಗುತ್ತದೆ. ಈ ತಾಂತ್ರಿಕತೆಯ ಸಹಾಯ ದಿಂದ ಅಂಗಶಾಸ್ತ್ರಜ್ಞರು ಲೋಮನಾಳಗಳ ಪೆಡಸುತನ, ಶ್ವಾಸಕೋಶಗಳಲ್ಲಿ ರಕ್ತಕಣಗಳು ಉನ್ನತವಾಗಿರುವುದು ಮುಂತಾದವನ್ನು ಚಿಕಿತ್ಸೆಗೆ ಮೊದಲೇ ತಿಳಿದು ಅವುಗಳನ್ನು ನಿವಾರಣೆ ಮಾಡಲು ಸಹಾಯ ಮಾಡುತ್ತದೆ. ಈ ತೊಂದರೆಗಳಿಂದ ರೋಗಿಯು ಸಾವಿಗೀಡಾಗುವುದಕ್ಕೆ ಮೊದಲೇ ಈ ರೋಗಗಳನ್ನು ಗುರುತಿಸಿ ಚಿಕಿತ್ಸೆ ನಡೆಸಲು ಕಾನುಚಿತ್ರಣವು ಸಹಾಯ ಮಾಡುತ್ತದೆ.
ಅರ್ಬುದ ರೋಗಗಳು: ಅರ್ಬುದ ರೋಗದ ರೋಗತಪಾಸಣೆ, ಚಿಕಿತ್ಸೆ ಮತ್ತು ರೋಗ ಸುಧಾರಣೆಯನ್ನು ತಿಳಿಯಲು ಕಾನುಚಿತ್ರಣ ಪರೀಕ್ಷಾ ವಿಧಾನಗಳು ಅತಿ ಹೆಚ್ಚು ಪ್ರಮುಖವಾದವು. ಅದು ಒದಗಿಸುವ ಪ್ರತಿಬಿಂಬಗಳ ಸಹಾಯದಿಂದ ಅರ್ಬುದ ರೋಗದ ಗಡ್ಡೆಗಳ ಗಡಿಗಳನ್ನು ಕರಾರುವಾಕ್ಕಾಗಿ ತಿಳಿಯಲು ಸಾಧ್ಯ. ಇದರಿಂದಾಗಿ ನಿಖರವಾದ ರೀತಿಯಲ್ಲಿ ಅಂಗ ಶಸ್ತ್ರಕ್ರಿಯೆ ಮಾಡಿ ಅರ್ಬುದ ರೋಗ ಭಾಗವನ್ನು ಬೇರ್ಪಡಿಸಿ ತೆಗೆದು ನಿಖರವಾಗಿ ವಿಕಿರಣ ಚಿಕಿತ್ಸೆ ಮಾಡಲು ಕಾನುಚಿತ್ರಣವು ಸಹಾಯ ಮಾಡುತ್ತದೆ.
ರೋಗಿಗಳ ನರಳುವಿಕೆಯನ್ನು ಕಡಮೆಮಾಡಲು: ಈ ಹಿಂದೆ ಛೇದನ ಶಸ್ತ್ರಕ್ರಿಯೆಯ ಮೂಲಕ ಪರೀಕ್ಷೆಗಳನ್ನು ನಡೆಸುತ್ತಿದ್ದುದನ್ನು ಬಿಟ್ಟುಬಿಡುವುದರಿಂದ ಅನೇಕ ರೋಗಗಳಿಗೆ ಶಸ್ತ್ರಕ್ರಿಯೆಗಳ ಅಗತ್ಯವಿಲ್ಲವಾಗುವುದರಿಂದ ಕಾನುಚಿತ್ರಣವು ರೋಗಿಗಳು ನರಳುವುದನ್ನು ಕಡಮೆ ಮಾಡುತ್ತದೆ. ಈ ವಿಧಾನಕ್ಕೆ ಛೇದನ ಕ್ರಿಯೆಯ ಅಗತ್ಯವಿರುವ ಯಾವುದೇ ಉಪಕರಣವನ್ನು ಉಪಯೋಗಿಸುವುದಿಲ್ಲವಾದ್ದರಿಂದ ಶಸ್ತ್ರಕ್ರಿಯೆಯಲ್ಲಾಗುತ್ತಿದ್ದ ಸೋಂಕನ್ನು ಇದು ಪೂರ್ಣವಾಗಿ ನಿವಾರಣೆ ಮಾಡುತ್ತದೆ.
ಕಾರ್ಯನಿರ್ವಹಿಸುವ ಮಾರ್ಗದರ್ಶಿ: ಹೊಸ ತಾಂತ್ರಿಕತೆಯ ಅಭಿವೃದ್ಧಿಗಳು ಹೆಚ್ಚಿನ ಮುನ್ನಡೆಗೆ ಸಹಾಯಕವಾಗಿ ಈಗ ಶಸ್ತ್ರಚಿಕಿತ್ಸೆಯ ಕೊಠಡಿಯಲ್ಲಿ ಕಾನುಚಿತ್ರಣದ ಮಾರ್ಗದರ್ಶನವಿರುವ ಶಸ್ತ್ರಕ್ರಿಯೆಯು ನಡೆಯುವಂತಾ ಗಿದೆ. ಈ ಮುನ್ನಡೆಯ ಪರಿಣಾಮವಾಗಿ ಶಸ್ತ್ರಚಿಕಿತ್ಸೆಯ ಕಾಲದಲ್ಲೇ ಶಸ್ತ್ರವೈದ್ಯರಿಗೆ ದೇಹದ ಒಳಗಿನ ಅಂಗಭಾಗ ಗಳ ಬಗೆಗೆ ದೃಶ್ಯ ಪ್ರತಿಬಿಂಬಗಳನ್ನು ದೊರಕಿಸಿ ಅದರ ಮಾರ್ಗದರ್ಶನದಿಂದ ಶಸ್ತ್ರಕ್ರಿಯೆಯನ್ನು ಮುಂದುವರೆಸ ಬಹುದಾದ ಅನುಕೂಲತೆಗಳನ್ನು ಒದಗಿಸುತ್ತಿದೆ.
ಕ್ರಮಾನುಗತಿ ನಿರ್ದೇಶನ: 1980ರ ಆರಂಭದಲ್ಲಿ ಕುರ್ಟ್ ವುತ್‍ರಿಚ್‍ರವರು ಕಾನುಚಿತ್ರಣವನ್ನು ಬಳಸಿಕೊಂಡು ಪ್ರೋಟೀನ್ ಮುಂತಾದ ಜೈವಿಕ ಅಣುಗಳನ್ನು ಸಹ ಅರ್ಥಮಾಡಿಕೊಳ್ಳಲು ಅನುಕೂಲವಾಗುವಂತೆ ವಿಸ್ತರಿಸಬಹುದೆಂಬ ನೂತನ ಕಲ್ಪನೆಯನ್ನು ಅಭಿವೃದ್ಧಿಪಡಿಸಿದರು. ಪ್ರತಿಯೊಂದು ಕಾನುಚಿತ್ರಣದ ಸಂಕೇತವನ್ನು ಜಲಜನಕದ ನಬ್ಬೀಜದ (ಅಂದರೆ ಪ್ರೋಟಾನ್) ಜೊತೆ ಕ್ರಮವಾದ ರೀತಿ ಜೋಡಣೆ ಮಾಡುವ ವಿಧಾನವನ್ನು ಅವರು ಕಂಡುಹಿಡಿದರು. ಈ ವಿಧಾನವನ್ನು ಕ್ರಮಾನುಗತಿಯ ನಿರ್ದೇಶನವೆಂದು ಕರೆಯುತ್ತಾರೆ. ಈಗ ಇದು ಎಲ್ಲಾ ಅನುರಣನಾ ವಿಧಾನದ ವಿಶ್ಲೇಷಣೆಗಳ ಆಧಾರಸ್ತಂಭವಾಗಿದೆ. ಹೆಚ್ಚಿನ ಸಂಖ್ಯೆಯ ಜಲಜನಕದ ಎರಡೆರಡು ನಬ್ಬೀಜಗಳ ನಡುವಿನ ಅಂತರಗಳನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎನ್ನುವುದನ್ನು ಅವರು ತೋರಿಸಿದರು. ಅನಂತರ ಈ ಮಾಹಿತಿಯನ್ನು ಗಣಿತೀಯ ವಿಧಾನದೊಂದಿಗೆ ಬಳಸಿಕೊಂಡು ಅಣುವಿನ ಮೂರು ಆಯಾಮದ ರಚನಾಕೃತಿಯನ್ನು ತಿಳಿದುಕೊಳ್ಳಲು ಉಪಯೋಗಿಸಿದರು. ಈ ತಂತ್ರವನ್ನು ಈ ಮುಂದೆ ತಿಳಿಸಿದ ರೀತಿ ಸರಳವಾಗಿ ತಿಳಿಸಬಹುದು. ಒಂದು ಮನೆಯ ಎಲ್ಲಾ ಭಾಗಗಳ ಅಳತೆಗಳನ್ನು ತಿಳಿದುಕೊಂಡಿದ್ದರೆ ಅದರ ಸಹಾಯದಿಂದ ಮನೆಯ ಮೂರು ಆಯಾಮದ ಚಿತ್ರವನ್ನು ಬರೆಯಬಹುದು. ಅದೇ ವಿಧಾನದ ರೀತಿ ಸಸಾರಜನಕವೊಂದರ ಹೆಚ್ಚಿನ ಸಂಖ್ಯೆಯ ಚಿಕ್ಕ ದೂರಗಳನ್ನು ಅಳತೆ ಮಾಡುವುದರ ಮೂಲಕ ಅದರ ಮೂರು ಆಯಾಮದ ಚಿತ್ರವನ್ನು ರಚಿಸಲು ಸಾಧ್ಯವಾಗಬಹುದು. ಪರಮಾಣು ಕಾಂತೀಯ ಅನುರಣನಾ ವರ್ಣಪಟಲ ದರ್ಶಕದ ಸಹಾಯದಿಂದ ಒಂದು ದ್ರಾವಕದಲ್ಲಿರುವ ಜೈವಿಕ ಅಣುಗಳಿಗಾಗಿ ಮೂರು ಆಯಾಮದ ರಚನಾ ಕೃತಿಯನ್ನು ರಚಿಸಲು ಸಾಧ್ಯವಾಗುವುದನ್ನು ತೋರಿಸಿಕೊಟ್ಟ ವುಡ್‍ರಿಚ್‍ರವರಿಗೆ 2002ರ ರಾಸಾಯನಿಕ ಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ನೀಡಲಾಯಿತು.
ಕಾನುಚಿತ್ರಣದ ಕಲ್ಪನೆ
ಪರಮಾಣು ಕಾಂತೀಯ ಅನುರಣನಾ ಚಿತ್ರಣದ ತಂತ್ರವನ್ನು ಆರಂಭಿಸಿದ ವರ್ಷಗಳಲ್ಲಿ ಆ ತಂತ್ರವನ್ನು ರಾಸಾಯನಿಕ ಸಂಯುಕ್ತವಸ್ತುಗಳ ರಚನಾಕೃತಿಯನ್ನು ನಿರ್ಧಾರ ಮಾಡಲು ಉಪಯೋಗಿಸುತ್ತಿದ್ದು ಈ ತಂತ್ರವ ನ್ನು ಜೀವಶಾಸ್ತ್ರ ಮತ್ತು ವೈದ್ಯವಿಜ್ಞಾನ ಕ್ಷೇತ್ರಗಳಲ್ಲಿ ಉಪಯೋಗಿಸಲು ಸ್ವಲ್ಪಮಟ್ಟಿನ ಕಾಲವು ಅಗತ್ಯವಾಯಿತು. ಆದರೆ ವಿಜ್ಞಾನಿಗಳು ರಾಸಾಯನಿಕ ಸಂಯುಕ್ತಗಳು ದ್ರಾವಣದಲ್ಲಿ ಮತ್ತು ಜೈವಿಕ ಅಣುಗಳು ಮಾನವನ ದೇಹ ದೊಳಗೆ ಇರುವುದನ್ನು ಹಾಗೂ ಅವುಗಳ ನಡುವೆ ಮೂಲ ಸಂಬಂಧವಿರುವುದನ್ನು ಬೇಗ ಕಂಡುಕೊಂಡರು.
ಮಾನವನ ದೇಹದ ತೂಕದಲ್ಲಿ ಸುಮಾರು ಮೂರನೇ ಒಂದು ಪ್ರಮಾಣದಷ್ಟು ನೀರಿನಿಂದಾಗಿದೆ. ನೀರು ಜಲಜನಕ ಮತ್ತು ಆಮ್ಲಜನಕದ ಪರಮಾಣುಗಳಿಂದಾದ ಅಣು. ಆದುದರಿಂದ ಜಲಜನಕ ಪರಮಾಣುಗಳ ನಬ್ಬೀಜಗಳು ಪರಮಾಣು ಭ್ರಮಣೆಗಳ ರೀತಿ ವರ್ತಿಸುವ ಸಾಮಥ್ರ್ಯವನ್ನು ಹೊಂದಿದೆ. ದೇಹವನ್ನು ಪ್ರಬಲ ಅಯಸ್ಕಾಂತ ಕ್ಷೇತ್ರಕ್ಕೆ ಒಡ್ಡಿದಾಗ ಜಲಜನಕ ಪರಮಾಣುಗಳು ಪ್ರಬಲ ಅಯಸ್ಕಾಂತ ದಿಕ್ಕಿನಲ್ಲಿ ತಿರುಗಿ ನಿಲ್ಲುತ್ತವೆ. ರೇಡಿಯೋ ಅಲೆಗಳ ಮಿಡಿತಗಳನ್ನು ಆರೋಪಿಸಿದಾಗ ಪರಮಾಣು ಕೇಂದ್ರದ ಶಕ್ತಿ ಪ್ರಮಾಣವು ಬದಲಾಗುತ್ತದೆ. ಆ ಮಿಡಿತದ ನಂತರ ಅನುರಣನ ಅಲೆಯು ವಿಸರ್ಜಿತವಾಗುತ್ತದೆ. ಈ ಹಿಂದೆ ವಿವರಿಸಿದ ರೀತಿಯಲ್ಲಿ ಪರಮಾಣು ಕೇಂದ್ರವು ತನ್ನ ಹಿಂದಿನ ಸ್ಥಿತಿಗೆ ಮರಳಿದಾಗ ಅನುರಣನ ಅಲೆಯು ವಿಸರ್ಜಿತವಾಗುತ್ತದೆ.
1970ರ ದಶಕದಲ್ಲಿ ಪರಮಾಣು ಕೇಂದ್ರದ ಆಂದೋಲನಗಳ ಚಿಕ್ಕ ವ್ಯತ್ಯಾಸಗಳನ್ನು ಗುರುತಿಸಲು ಕಾನುಚಿತ್ರಣದ ತಂತ್ರವು ನೆರವಾಯಿತು. ವಾಸ್ತವವಾಗಿ, ದೇಹದಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ನೀರಿನ ಅಂಶವು ಈ ತಂತ್ರವನ್ನು ವೈದ್ಯಕೀಯ ಕ್ಷೇತ್ರದಲ್ಲಿ ಉಪಯೋಗಿಸಲು ಸಹಾಯಮಾಡುತ್ತದೆ. ಸಾಮಾನ್ಯವಾಗಿ, ದೇಹದ ಲ್ಲಿರುವ ಅಂಗಾಂಶಗಳ ಮತ್ತು ಅಂಗಗಳ ನಡುವೆ ಇರುವ ನೀರಿನ ಪ್ರಮಾಣವು ಬೇರೆಬೇರೆಯಾಗಿರುತ್ತದೆ. ಅದರ ಜೊತೆಗೆ, ಅನೇಕ ರೋಗಗಳಲ್ಲಿ ರೋಗಸ್ಥಿತಿಯ ಅರಿವಿನ ಕ್ರಿಯೆಯು ನಿರ್ದಿಷ್ಟ ಅಂಗಾಂಶ ಅಥವಾ ಅಂಗದಲ್ಲಿನ ನೀರಿನ ಪ್ರಮಾಣವು ಬದಲಾಗುವಂತೆ ಮಾಡುತ್ತದೆ. ಆದುದರಿಂದ ಅಂಗಾಂಶಗಳು ಮತ್ತು ಅಂಗಗಳ ವಿವರಪೂರ್ಣವಾದ ಪ್ರತಿಬಿಂಬವನ್ನು ಪಡೆಯಲು ಹಾಗೂ ಪರೀಕ್ಷೆಗೆ ಒಳಪಡಿಸಲ್ಪಟ್ಟ ಜಾಗದಲ್ಲಿರುವ ನೀರಿನ ಅಂಶವÀನ್ನು ಮತ್ತು ನೀರಿನ ಅಣುಗಳ ಚಲನೆಗಳನ್ನು ಅರಿಯಲು ಸಾಧ್ಯವಾಗುತ್ತದೆ ಎಂದು ಹೇಳ ಬಹುದು. ಇದನ್ನು ತಿಳಿದ ವಿಜ್ಞಾನಿಗಳು ಕಾನುಚಿತ್ರಣ ತಂತ್ರವನ್ನು ವೈದ್ಯಕೀಯಕ್ಷೇತ್ರದ ಹೆಚ್ಚಿನ ವಿಭಾಗಗಳಲ್ಲಿ ಉಪಯೋಗಿಸಿಕೊಳ್ಳಲು ಅಗತ್ಯವಾದ ಆಲೋಚನೆಗಳನ್ನು ಒದಗಿಸಿದರು.
ಕಾನುಚಿತ್ರಣ ತಂತ್ರದ ಅಭಿವೃದ್ಧಿ
ಎನ್ಸ್ರ್ಟ್ ಮತ್ತು ಅವರ ಸಹಕಾರ್ಯಕರ್ತರುಗಳ ಪ್ರಯತ್ನಗಳಿಂದ ಸುಧಾರಿಸಿದ ಕಾನುಚಿತ್ರಣ ತಂತ್ರವು ವೈದ್ಯ ಕೀಯ ಕ್ಷೇತ್ರಗಳಲ್ಲಿ ಅದರ ಬಳಕೆಗೆ ಆಧಾರವಾಯಿತು. ಆರಂಭದ ಅರ್ಬುದ ರೋಗಲಕ್ಷಣಗಳನ್ನು ತಿಳಿಯಲು ಕಾಂತೀಯ ಅನುರಣನ ವಿಧಾನವನ್ನು ಉಪಯೋಗಿಸುವ ಬಗ್ಗೆ 1969ರಲ್ಲಿ ರೇಮಾಂಡ್ ವಿ ಡಮಾಡಿಯನ್ ಎಂಬ ನ್ಯೂಯಾರ್ಕ್‍ನ ಶಸ್ತ್ರವೈದ್ಯರು ಆಲೋಚಿಸತೊಡಗಿದರು. 1970ರಲ್ಲಿ ಪ್ರಯೋಗಾಲಯದ ಇಲಿಗಳಲ್ಲಿ ವೇಗವಾಗಿ ಬೆಳೆಯುವ ರೋಗದ ಗಡ್ಡೆಗಳನ್ನು ಶಸ್ತ್ರಕ್ರಿಯೆಯ ಮೂಲಕ ತೆಗೆದು ಅದರ ಕಾಂತೀಯ ಅನುರಣನ ಸಂಕೇತಗಳು ಸ್ವಾಭಾವಿಕ ಅಂಗಾಂಶಗಳ ಸಂಕೇತಗಳಿಗಿಂತ ಬೇರೆಯಾಗಿರುವುದನ್ನು ತೋರಿಸಿದರು. 1971 ರಲ್ಲಿ ಡಮಾಡಿಯನ್‍ರವರು ಅಂಗಾಂಶಗಳು ಮತ್ತು ರೋಗದ ಗಡ್ಡೆಗಳಿಗೆ ಸಂಬಂಧಿಸಿದಂತೆ ಪರಮಾಣು ಕಾಂತೀಯ ವಿಶ್ರಾಂತಿಕಾಲಗಳು ಬೇರೆಯಾಗಿರುವುದನ್ನು ಪ್ರಾಯೋಗಿಕವಾಗಿ ತೋರಿಸಿದರು. ಇದರಿಂದ ಉತ್ಸಾಹಿತರಾದ ವಿಜ್ಞಾನಿಗಳು ಕಾಂತೀಯ ಅನುರಣದಿಂದ ರೋಗವನ್ನು ಪತ್ತೆ ಮಾಡಲು ಸಾಧ್ಯವಾಗುವುದನ್ನು ಅಧಿಕೃತವಾಗಿ ಪರಿಗಣಿಸಿದರು. 1977ರಲ್ಲಿ ರೇಮಂಡ್ ಡಮಾಡಿಯನ್‍ರವರು ಪೂರ್ಣದೇಹದ ಕಾಂತೀಯ ಅನುರಣನ ಚಿತ್ರಣವನ್ನು ಪಡೆಯಲು ಸಾಧ್ಯವೆನ್ನುವುದನ್ನು ಮೊದಲ ಬಾರಿಗೆ ಸ್ಪಷ್ಟವಾಗಿ ತೋರಿಸಿದರು.
ಇದೇ ಕಾಲದಲ್ಲಿಯೇ 1972ರಲ್ಲಿ ಪೌಲ್ ಲೌಟಿರ್‍ಬಾರ್ ಕಾನುಚಿತ್ರಣಕ್ಕೆ ಗಣಕಾಧಾರಿತ ಟೊಮೋಗ್ರಫಿ ಅವಲೋಕನದ (ಅಂಖಿ Sಛಿಚಿಟಿ ಅomಠಿuಣeಡಿ ಂiಜeಜ ಖಿomogಡಿಚಿಠಿhಥಿ Sಛಿಚಿಟಿ) ಕಲ್ಪನೆಯನ್ನು ಸೇರಿಸಿದರು. ಇದರ ಸೇರ್ಪಡೆಯಿಂದ ಮೊದಲಬಾರಿಗೆ ಕಾಂತೀಯ ಅನುರಣನ ಚಿತ್ರಣವನ್ನು (ಒಖI) ಪಡೆದರು. ಅಯಸ್ಕಾಂತ ಕ್ಷೇತ್ರದಲ್ಲಿ ಏರಿಳಿತ ಪ್ರಮಾಣವನ್ನು ಸೇರಿಸುವುದರಿಂದ ಬೇರೆ ತಂತ್ರಗÀÀಳಿಂದ ನೋಡಿ ತಿಳಿಯಲು ಸಾಧ್ಯವಿರದ ರಚನಾಕೃತಿಗಳ ಎರಡು ಆಯಾಮದ ಪ್ರತಿಬಿಂಬಗಳನ್ನು ಸೃಷ್ಟಿಮಾಡಲು ಸಾಧ್ಯವಾಗುವುದೆಂದು ಲೌಟಿರ್‍ಬರ್ 1973ರಲ್ಲಿ ಕಂಡು ಹಿಡಿದರು. ಏರಿಳಿತಗಳ ಪ್ರಮಾಣ ಪಡೆದ ಅಯಸ್ಕಾಂತಗಳನ್ನು ಪ್ರಮುಖ ಅಯಸ್ಕಾಂತಕ್ಕೆ ಸೇರಿಸುವುದರಿಂದ ಕೊಳವೆಗಳ ಅಡ್ಡ ಛೇದನದ ಪ್ರತಿಬಿಂಬಗಳನ್ನು ಪಡೆದು ಭಾರಜಲವನ್ನು ಸುತ್ತುವರೆದ ಸಾಮಾನ್ಯ ನೀರನ್ನು ವೀಕ್ಷಿಸಲು ಸಾಧ್ಯವಾಗುವುದನ್ನು ವಿವರಿಸಿದರು. ಈ ತಂತ್ರಜ್ಞಾನಕ್ಕೆ ಮೊದಲು ಬೇರಾವುದೇ ವಿಧದ ಪ್ರತಿಬಿಂಬ ಗ್ರಹಣ ವಿಧಾನವು ಸಾಮಾನ್ಯ ನೀರು ಮತ್ತು ಭಾರತರ ನೀರಿನ ನಡುವೆ ಇರುವ ವ್ಯತ್ಯಾಸವನ್ನು ಗುರುತಿಸುವ ಸಾಮಥ್ರ್ಯವನ್ನು ಪಡೆದಿರಲಿಲ್ಲ.
ಅಯಸ್ಕಾಂತ ಕ್ಷೇತ್ರದ ಏರಿಳಿತಗಳ ಪ್ರಮಾಣವನ್ನು ಉಪಯೋಗಿಸಿಕೊಂಡು ಅನುರಣನದೊಳಗೆ ಇರುವ ವ್ಯತ್ಯಾಸ ಗಳನ್ನು ಹೆಚ್ಚು ನಿಖರವಾಗಿ ತಿಳಿಯಲು ಸಾಧ್ಯವಾಗುವುದೆಂಬುದನ್ನು ಪೀಟರ್ ಮ್ಯಾನ್ಸ್‍ಫೀಲ್ಡ್ ತೋರಿಸಿದರು. ಲೌಟಿರ್‍ಬರ್‍ರವರು ಪ್ರತಿಪಾದಿಸಿದ ಏರಿಳಿತ ಪ್ರಮಾಣ ವಿಧಾನದಿಂದ ಉತ್ಪನ್ನವಾದ ಸಂಕೇತಗಳನ್ನು ವೇಗವಾಗಿ ವಿಶ್ಲೇಷಣೆ ಮಾಡುವ ವಿಧಾನವನ್ನು ಪೀಟರ್ ಮ್ಯಾನ್ಸ್‍ಫೀಲ್ಡ್‍ರವರು ರೂಪಿಸಿದರು ಮತ್ತು ಅವುಗಳನ್ನು ಪರಿವರ್ತಿಸಿ ಪ್ರತಿಬಿಂಬವನ್ನು ಪಡೆದರು. ಗುರುತಿಸಿದ ಸಂಕೇತಗಳನ್ನು ಹೇಗೆ ವೇಗವಾಗಿ ಹಾಗೂ ಪರಿಣಾಮಕಾರಿ ಯಾಗಿ ವಿಶ್ಲೇಷಿಸಿ ಪ್ರತಿಬಿಂಬವಾಗಿ ಪರಿವರ್ತಿಸಲು ಸಾಧ್ಯವಿದೆ ಎಂದು ತೋರಿಸಿದರು. ಪ್ರಾಯೋಗಿಕ ವಿಧಾನಕ್ಕೆ ಇದು ಪ್ರಮುಖವಾದ ಹೆಜ್ಜೆಯಾಗಿ ದಾರಿಮಾಡಿಕೊಟ್ಟಿತು. ಈ ವಿಧಾನವನ್ನು ಬಳಸಿಕೊಂಡು ಮೊದಲಬಾರಿಗೆ 1970ರ ದಶಕದಲ್ಲಿ ಮಬ್ಬಾಗಿರುವ ಪ್ರತಿಬಿಂಬವನ್ನು ಸೃಷ್ಟಿಸಿದರು. ಅದು ಪ್ರಾಯೋಗಿಕ ಉದ್ದೇಶಗಳಿಗೆ ಬಳಸುವಷ್ಟು ಸ್ಪಷ್ಟವಾಗಿರಲಿಲ್ಲ. ಆ ತಂತ್ರದ ಪೂರ್ಣ ಸಾಮಥ್ರ್ಯವನ್ನು ತಿಳಿಯಲು ಆಗ ತನಗೆ ಸಾಧ್ಯವಿರಲಿಲ್ಲ ವೆಂದು ಅವರೇ ಒಪ್ಪಿಕೊಳ್ಳುತ್ತಾರೆ. ಪೂರ್ಣ ದೇಹದ ಪ್ರತಿಬಿಂಬವನ್ನು ಅದರ ಸಹಾಯದಿಂದ ಪಡೆಯಲು ಸಾಧ್ಯವೇ ಎಂದು ಅವರನ್ನು ಜನರು ಕೇಳುತ್ತಿದ್ದರು. ಆ ರೀತಿಯ ಪ್ರತಿಬಿಂಬವನ್ನು ಪಡೆಯಲು ಸಾಧ್ಯವಿದ್ದು ಅವು ಸ್ಪಷ್ಟವಾಗಿದ್ದರೆ ಮಾತ್ರ ವೈದ್ಯಕ್ಷೇತ್ರದಲ್ಲಿ ಉಪಯೋಗಿಸಲು ಸಾಧ್ಯವಾಗುವುದೆಂದು ಅವರಿಗೆ ತಿಳಿಸಿದರು. ಈ ಬಗ್ಗೆ ಸ್ಪಷ್ಟವಾದ ನಿಲುವನ್ನು ತಾಳಲು ಇದು ಅವರನ್ನು ಪ್ರೇರೇಪಿಸಿತು.
ಅವರು ಅದಕ್ಕಾಗಿ ಛಲದಿಂದ ಕಾರ್ಯನಿರ್ವಹಿಸತೊಡಗಿದರು. ಮೆದುಳಿನ ರೀತಿಯ ಆವಯವಗಳಲ್ಲಿ ಬದಲಾ ವಣೆಗಳಾಗುವುದನ್ನು ವಾಸ್ತವ ಕಾಲದಲ್ಲಿಯೇ ಸತತವಾಗಿ ವೀಕ್ಷಿಸಲು ಸಾಧ್ಯವಾಗುವಂತೆ ಈ ಕಾಂತೀಯ ಅನು ರಣನ ಚಿತ್ರಣ ತಂತ್ರಜ್ಞಾನದ ವೇಗವು ಹೆಚ್ಚುವಂತೆ ಮಾಡಲು ಪ್ರಯತ್ನಿಸಿದರು. 1977ರಲ್ಲಿ ಮ್ಯಾನ್‍ಫೀಲ್ಡ್ ರವರು ಪ್ರತಿಧ್ವನಿ-ಸಮತಲ ಚಿತ್ರಗ್ರಹಣ (ಇPI - ಇಛಿho Pಟಚಿಟಿಚಿಡಿ Imಚಿgiಟಿg) ತಂತ್ರವನ್ನು ಅಭಿವೃದ್ಧಿಪಡಿಸಿದರು; ಏರಿಳಿತದ ಅತ್ಯಂತ ವೇಗದ ಬದಲಾವಣೆಗಳಿಂದ ಅತಿ ಶೀಘ್ರಗತಿಯ ಪ್ರತಿಬಿಂಬವನ್ನು ಪಡೆಯಬಹುದಾಗಿದೆ ಎಂದು ತೋರಿಸಿದರು. ಪ್ರತಿಬಿಂಬಗ್ರಹಣಕ್ಕೆ ಕಾಂತೀಯ ಅನುರಣನಗಳನ್ನು ಪ್ರಮುಖವಾದ ಆಧಾರವನ್ನಾಗಿ ಸಲು ಈ ಶೋಧನೆಗಳು ಸಹಾಯಮಾಡಿದವು. ಆ ನಂತರದ ವರ್ಷಗಳಲ್ಲಿ ಈ ವಿಧಾನದಿಂದ ವೀಡಿಯೋ ದರ ಗಳಲ್ಲೇ (30 ಮಿಲಿ ಸೆಕೆಂಡಿಗೆ ಒಂದು ಪ್ರತಿಬಿಂಬದಂತೆ) ದೇಹದೊಳಗಿನ ಅಂಗಾಂಗಗಳ ಪ್ರತಿಬಿಂಬಗಳನ್ನು ಪಡೆಯಲು ಸಾಧ್ಯವಾಯಿತು.
ಸಾಂಪ್ರದಾಯಕವಾದ ಕ್ಷ-ಕಿರಣಗಳ ತಪಾಸಣೆಯ ವಿಧಾನಗಳಿಗಿಂತ ಕಾಂತೀಯ ಅನುರಣನ ಚಿತ್ರಣವು ಕೆಲವು ಪ್ರಮುಖ ಅನುಕೂಲಕರ ಗುಣಗಳನ್ನು ಪಡೆದಿದೆ. ಕ್ಷ-ಕಿರಣ ಸಂಶೋಧನೆಗಾಗಿ ಜರ್ಮನಿಯ ವಿಲ್‍ಹೆಲ್ಮ್ ರಾಂಟೆಜನ್ 1901ರ ಭೌತಶಾಸ್ತ್ರದÀ ನೊಬೆಲ್ ಪ್ರಶಸ್ತಿಯನ್ನು ಪಡೆದರು. ಗಣಕಾಧಾರಿತ ಟೊಮೋಗ್ರಫಿ ಸ್ಕ್ಯಾನಿಂಗ್‍ಗಿಂತಲೂ (ಅಂಖಿ) ಇದು ಉತ್ತಮವಾದುದು. ಕ್ಷಕಿರಣ ಅಥವಾ ಕ್ಯಾಟ್ ವಿಧಾನಗಳು ಅಯಾನೀಕೃತ ವಿಕಿರಣದ ಮೇಲೆ ಅವಲಂಬಿತವಾಗಿದ್ದು ಕಾಂತೀಯ ಅನುರಣನ ಚಿತ್ರಣವು (ಒಖI) ರೇಡಿಯೋ ಕಂಪನದ ಅಲೆಗಳನ್ನು ಉಪಯೋಗಿಸುವುದರಿಂದ ಇದು ಅತ್ಯಂತ ವಿಶಿಷ್ಟ ಅದ್ವಿತೀಯ ಪ್ರತಿಬಿಂಬ ಗ್ರಹಣ ತಾಂತ್ರಿಕತೆ ಯಾಗಿದೆ. ಕಾಂತೀಯ ಅನುರಣನ ಚಿತ್ರಣವು ಮೃದು ಅಂಗಾಂಶಗಳಲ್ಲಿನ ಅತಿ ಸೂಕ್ಷ್ಮ ವ್ಯತ್ಯಾಸಗಳನ್ನು ತೋರಿಸು ತ್ತದೆಯಲ್ಲದೆ ಇದರಿಂದ ಯಾವುದೇ ದಿಕ್ಕಿನಿಂದ ಬೇಕಾದರೂ ಪ್ರತಿಬಿಂಬಗಳನ್ನು ಪಡೆಯಲು ಸಾಧ್ಯವಿದ್ದು ವಿವಿಧ ಅಂಗಾಂಶಗಳನ್ನು ಎದ್ದು ಕಾಣುವಂತೆ ತೋರಿಸಲು ಸಹಾಯಕ. ಆದರೆ ದೇಹದೊಳಗೆ ಕಾಂತೀಯ ಲೋಹವನ್ನು ಹೊಂದಿರುವ ರೋಗಿಗಳನ್ನು ಅಥವಾ ಹೃದಯ ಮಿಡಿತ ಸ್ಥಿರವಾಗಿ ಕಾಯ್ದುಕೊಳ್ಳುವ ಉಪಕರಣವನ್ನು (ಪೇಸ್ ಮೇಕರ್) ಅಳವಡಿಸಿಕೊಂಡ ವ್ಯಕ್ತಿಯನ್ನು ಕಾಂತೀಯ ಅನುರಣನ ಚಿತ್ರಣದ ಸಹಾಯದಿಂದ ಪರೀಕ್ಷಿಸಲು ಸಾಧ್ಯವಿಲ್ಲ. ಏಕೆಂದರೆ ಇದರ ಪ್ರಬಲ ಅಯಸ್ಕಾಂತ ಕ್ಷೇತ್ರವು ರೋಗಿಯ ದೇಹದೊಳಗಿರುವ ಉಪಕರಣಗಳ ಮೇಲೆ ಪರಿಣಾಮ ಬೀರುತ್ತದೆ.
ವೈದ್ಯಕೀಯ ರೋಗತಪಾಸಣೆಗಳಲ್ಲಿ ಕಾಂತೀಯ ಅನುರಣನ ಚಿತ್ರಣವು ವ್ಯಾವಹಾರಿಕವಾದ, ಬಹುಮುಖ ಸಾಮಥ್ರ್ಯಹೊಂದಿದ ಮತ್ತು ಅತಿಹೆಚ್ಚು ಬಳಕೆಯ ತಾಂತ್ರಿಕ ಸಾಧನವಾಗಿ ಬಳಕೆಯಾಗಲು ಲಾಟೆರ್Àಬುರ್ ಮತ್ತು ಮ್ಯಾನ್ಸ್‍ಫೀಲ್ಡ್‍ರವರ ಕಾರ್ಯಗಳಿಂದ ಸಾಧ್ಯವಾಯಿತು. ಮೊದಲ ಕಾಂತೀಯ ಅನುರಣನ ಚಿತ್ರಣ ಉಪಕರಣಗಳು 1980ರ ದಶಕದ ಆರಂಭದಲ್ಲಿ ದೊರಕತೊಡಗಿದವು. 2002ರ ವೇಳೇಗೆ ವಿಶ್ವಾದ್ಯಂತ ಸುಮಾರು 22000 ಕಾಂತೀಯ ಅನುರಣನ ಚಿತ್ರಣದ ಕ್ಯಾಮೆರಾಗಳು ಬಳಕೆಗೆ ಬಂದಿದ್ದವು ಮತ್ತು ಅವುಗಳ ನೆರವಿನಿಂದ 60ದಶಲಕ್ಷ ರೋಗ ಪರೀಕ್ಷೆಗಳನ್ನು ನಡೆಸಲಾಗಿದೆ.
ಬೇರೆ ಪ್ರತಿಬಿಂಬ ಗ್ರಹಣ ತಂತ್ರಗಳಿಗೆ ಹೋಲಿಸಿದಾಗ ಕಾಂತೀಯ ಅನುರಣನ ಚಿತ್ರಣದ ಶ್ರೇಷ್ಠತೆಯ ಅರಿವಾಗು ತ್ತದೆ. ಅನೇಕ ರೋಗಗಳನ್ನು ತಪಾಸಣೆಮಾಡುವ ವಿಧಾನಗಳನ್ನು ಇದು ಗಣನೀಯವಾಗಿ ಸುಧಾರಿಸಿತು. ಶಸ್ತ್ರ ಕ್ರಿಯೆಗಳ ಮೂಲಕ ಅಂಗಗಳನ್ನು ಅನೇಕ ವಿಧದಲ್ಲಿ ಛೇದನಮಾಡಿ ಪರೀಕ್ಷಿಸಬೇಕಾಗುವ ವಿಧಾನಗಳನ್ನು ಇದು ನಿವಾರಿಸಿತು. ಅದುದರಿಂದ ಅನೇಕ ರೋಗಿಗಳು ರೋಗ ತಪಾಸಣೆಗಾಗಿಯೇ ಅನುಭವಿಸಬೇಕಾಗಿದ್ದ ತೊಂದರೆ ಗಳು ಹಾಗೂ ನರಳಿಕೆಗಳನ್ನು ನಿವಾರಿಸಿತು.
ಕಾಂತೀಯ ಅನುರಣನ ಚಿತ್ರಣ ತಂತ್ರವು ಇನ್ನೂ ವೇಗದ ಸುಧಾರಣೆಯನ್ನು ಪಡೆಯತ್ತಿದೆ. ಆದರೆ ಲೌಟರ್ ಬುರ್ ಮತ್ತು ಮ್ಯಾನ್ಸ್‍ಫೀಲ್ಡ್‍ರವರ ಕ್ರಾಂತಿಕಾರಿ ಆಲೋಚನೆಗಳನ್ನು ಮಾನವ ಸಮುದಾಯವು ಮುಂದೆ ನೆನಪಿಸಿಕೊಳ್ಳುವುದು ಖಂಡಿತ. ಅವರ ಆಲೋಚನೆಗಳೇ ಕಾಂತೀಯ ಅನುರಣನ ಚಿತ್ರಣದ ಪ್ರತಿಬಿಂಬಗಳನ್ನು ಪಡೆಯಲು ಸಹಾಯಮಾಡಿದವು. ಅದರ ಸಾಮಥ್ರ್ಯವನ್ನು ಇಂದು ನಾವು ನೋಡುತ್ತಿದ್ದೇವೆ. ನೋಬಲ್ ಸದಸ್ಯರ ಸಭೆಯು ಇದರ ಬಗೆಗೆ ತಿಳಿಸುವಾಗ ಕಾಂತೀಯ ಅನುರಣನ ಚಿತ್ರಣದ ಅಭಿವೃದ್ಧಿಯು ವೈದ್ಯಕೀಯ ರೋಗತಪಾಸಣೆ ಮತ್ತು ಸಂಶೋಧನೆಗಳ ಮುನ್ನಡೆಯನ್ನು ಸೂಚಿಸುತ್ತದೆ ಎಂದು ಪ್ರತಿಪಾದಿಸಿದೆ. ನೋವಿರದ, ನಮ್ಮ ದೇಹದ ಒಳಗಿನ ಭಾಗವನ್ನು ಯಾವುದೇ ಅಪಾಯವಿರದ ರೀತಿ ಅಥವಾ ಶಸ್ತ್ರಛೇದನ ಕ್ರಿಯೆಯ ಅಗತ್ಯವಿಲ್ಲದೆಯೇ ಅತ್ಯಂತ ಸ್ಪಷ್ಟರೂಪದ ಪ್ರತಿಬಿಂಬಗಳನ್ನು ನೋಡಲು ಇದರಿಂದ ನಮಗೆ ಸಾಧ್ಯವಾಗಿದೆ. 2003ನೇ ಇಸವಿಯ ದೇಹಶಾಸ್ತ್ರ ಅಥವಾ ವೈದ್ಯ ವಿe್ಞÁನಕ್ಕೆ ದೊರೆತ ನೋಬೆಲ್ ಪ್ರಶಸ್ತಿಯು ಈ ಇಬ್ಬರು ಶ್ರೇಷ್ಠ ವಿe್ಞÁನಿಗಳ ಮಾನವೀಯ ಸೇವೆಯನ್ನು ಅನುಸರಿಸಿದ್ದಕ್ಕೆ ದ್ಯೋತಕವಾಗಿದೆ.
(ಬಿ.ಬಿ.ಚಿನ್ಮಯಕುಮಾರ್)