ಮೂಲದೊಡನೆ ಪರಿಶೀಲಿಸಿ

 ಕುಂತಳ  

ಪ್ರಾಚೀನ ಕಾಲದಲ್ಲಿ ಪ್ರಖ್ಯಾತಿ ಪಡೆದಿದ್ದ ಒಂದು ಕರ್ಣಾಟಕದಲ್ಲಿದ್ದ ಜನಪದ ರಾಜ್ಯ. ಸಾತವಾಹನ ಮನೆತನದ ಒಬ್ಬ ರಾಜ ಕುಂತಲ ವಿಷಯದಲ್ಲಿ ಹುಟ್ಟಿದ್ದರಿಂದ ಇವನಿಗೆ ಕುಂತಲ ಶಾತಕರ್ಣಿ ಎಂಬ ಹೆಸರಿತ್ತೆಂದು ತಿಳಿದು ಬಂದಿದೆ. 4-5ನೆಯ ಶತಮಾನಗಳ ವಾಕಾಟಕದ ಶಾಸನಗಳಲ್ಲಿ ಕುಂತಳದ ಉಲ್ಲೇಖವಿದೆ. ಮಾನಾಂಕನೆಂಬ ರಾಷ್ಟ್ರಕೂಟ ಅರಸನು 5ನೆಯ ಶತಮಾನದಲ್ಲಿ ಕುಂತಳ ದೇಶವನ್ನು ಆಳುತಿದ್ದ. 6ನೆಯ ಶತಮಾನದ ವರಾಹಮಿಹಿರನ ಬೃಹತ್‍ಸಂಹಿತೆಯಲ್ಲಿಯೂ ಇದರ ಹೆಸರು ಉಕ್ತವಾಗಿದೆ. ಕುಂತಲವಿಷಯ ಕರ್ಣಾಟಧರಾ ಮಂಡಲದ ಮಧ್ಯದಲ್ಲಿತ್ತೆಂದು ಹಂಯ ಒಂದು ಶಾಸನ ಹೇಳುತ್ತದೆ. ಕನ್ನಡ ನಾಡಿನಲ್ಲಿ ದೊರೆತ 10ನೆಯ ಶತಮಾನದಿಂದೀಚಿನ ಶಾಸನಗಳಿಂದ ಶಿವಮೊಗ್ಗೆಯಿಂದ ಉತ್ತರಕ್ಕೆ Wಟz(ವಾಟಕದ) ಮೇಲಿನ ಕರ್ಣಾಟಕದ ಎಲ್ಲ ಜಿಲ್ಲಗಳೂ ಕುಂತಳ ದೇಶಕ್ಕೆ ಸೇರಿದ್ದುವೆಂದು ವ್ಯಕ್ತವಾಗುತ್ತದೆ. ಇದಕ್ಕೆ ಶಾಸನಗಳಲ್ಲಿ ಕುಂತಲ ಸಪ್ತಾರ್ಥಲಕ್ಷ (ಏಳೂವರೆ ಲಕ್ಷ ಗ್ರಾಮಗಳನ್ನೊಳಗೊಂಡ ದೇಶ) ಎಂಬ ಹೆಸರಿದೆ. ಚಾಳುಕ್ಯರು ಕಲ್ಯಾಣ ರಾಜಧಾನಿಯಿಂದ ಈ ದೇಶವನ್ನು ಅಳುತಿದ್ದರು. ಮೇಲೆ ಹೇಳಿರುವ ರಾಷ್ಟ್ರಕೂಟ ಮಾನಾಂಕನ ರಾಜಧಾನಿಯಾಗಿದ್ದ ಮಾನಪುರ ಈಗಿನ ಸಾತಾರಾ ಜಿಲ್ಲೆಯಲ್ಲಿರುವ ಮಾಣ್ ಎಂಬುದು. ಅದ್ದರಿಂದ ಸಾತಾರಾ ಜಿಲ್ಲೆಯವರೆಗಾದರೂ ಕುಂತಳ ದೇಶ ವ್ಯಾಪಿಸಿತ್ತೆಂಬುದು ಸ್ಪಷ್ಟ. ಅಶ್ಮPಕ್ ಮತ್ತು ದರ್ಭದ ರಾಜರುಗಳನ್ನು ಸೋಲಿಸಿದುದಾಗಿ ಮಾನಾಂಕ ಹೇಳಿಕೊಂಡಿರುವುದರಿಂದಲೂ ದರ್ಭದ ಒಡೆಯರಾಗಿದ್ದ ವಾಕಾಟಕರು ಕುಂತಳ ರಾಜರನ್ನು ಜೈಸಿರುವುದಾಗಿ ಕೇಳಿಕೊಂಡಿರುವುದರಿಂದಲೂ ಕೂಂತಲ ರಾಜ ಅಶ್ಮದ (ಈಗಿನ ಅಹಮದ್ ನಗರ ಮತ್ತು ಬೀದರ ಜಿಲ್ಲೆಗಳು) ಮತ್ತು ದರ್ಭಗಳಿಗೆ ನೆರೆ ರಾಜ್ಯವಾಗಿದ್ದಿರಬೇಕು. ಸೊಡ್ಡಲ ದೇವನೆಂಬ ಸಂಸ್ಕøತಕವಿ ತನ್ನ 'ಉದಯ ಸುಂದರಿ'ಯಲ್ಲಿ ಗೋದಾವರಿ ತಿರದ ಪ್ರತಿಷ್ಠಾನ (ಈಗಿನ ಔರಂಗಾಬಾದ್ ಜಿಲ್ಲೆಯ ಪ್ಶೆಠಣ) ಕುಂತಲದ ರಾಜಧಾನಿಯಾಗಿತ್ತೆಂದು ಹೇಳಿದ್ದಾನೆ.(ಎನ್.ಎಲ್.ಆರ್.)