ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕ್ಯಾಲ್ಸೈಟ್

ಕ್ಯಾಲ್ಸೈಟ್ ಸುಣ್ಣ ಶಿಲೆಯಲ್ಲಿ ಪ್ರಧಾನವಾಗಿರುವ ಖನಿಜ, ಅಚಿಅಔ3, ಜಿಯೊಲೈಟ್ ರಂಧ್ರಗಳಲ್ಲೂ ತಾಮ್ರ, ಸೀಸ, ಬೆಳ್ಳಿ ಮೊದಲಾದ ಲೋಹ ಖನಿಜಗಳೊಡನೆಯೂ ಹರಡಿರುತ್ತದೆ. ಧಾರವಾಡ ಪದರಶಿಲೆಗಳಲ್ಲೂ ಅಲ್ಪಸ್ವಲ್ಪ ದೊರೆಯುವುದು. ಸುಣ್ಣಶಿಲೆಗಳಲ್ಲಿ ಕ್ಯಾಲ್ಸೈಟು ಎಳೆಎಳೆಯಾಗಿಯೂ ರೇಖೆಗಳಂತೆಯೂ ಸಿರಗಳಲ್ಲಿ ಹಬ್ಬಿರುತ್ತದೆ. ಮಡಿಗಳಂತೆಯೂ ಹಬ್ಬಿರುವುದುಂಟು. ಕ್ಯಾಲ್ಸೈಟಿನ ಬಣ್ಣ ಸಾಧಾರಣವಾಗಿ ಬೆಳ್ಳಗೆ; ಕೆಲವು ಕಡೆ ಅದು ಹಸಿರು, ಹಳದಿ, ಬೂದು, ನೀಲಿ ಮತ್ತು ಕಂದು ಬಣ್ಣಗಳ ಛಾಯೆಗಳನ್ನು ತೋರಿಸುವುದುಂಟು. ಅದು ಪಾರಕವಾಗಿ ಇರಬಹುದು ಅಥವಾ ಅಪಾರಕವಾಗಿ ಇರಬಹುದು. ಕ್ಯಾಲ್ಸೈಟಿನಲ್ಲಿ ಡಾಗ್ ಟೂತ್‍ಸ್ಪಾರ್, ನೈಲ್ ಹೆಡ್‍ಸ್ಪಾರ್, ಐಸ್‍ಲ್ಯಾಂಡ್ ಸ್ಪಾರ್ ಮೊದಲಾದ ಹಲವು ವಿಧಗಳಿವೆ.

ಕ್ಯಾಲ್ಸೈಟನ್ನು ಮುಖ್ಯವಾಗಿ ಗಾರೆ ಮತ್ತು ಸಿಮೆಂಟು ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. ಅಲ್ಲದೆ ಲೋಹ ಸಂಶೋಧನೆಯಲ್ಲಿ ಕೂಡ ಇದರ ಉಪಯೋಗ ಉಂಟು. ಕೆಲವು ಪ್ರದೇಶಗಳಲ್ಲಿ ಕ್ಯಾಲ್ಸೈಟನ್ನು ಕಟ್ಟಡಗಳಿಗೆ ಉಪಯೋಗಿಸುತ್ತಾರೆ. ಪ್ರಪಂಚದಲ್ಲಿ ಕ್ಯಾಲ್ಸೈಟು ಹಂಗರಿ, ಬೊಹೇಮಿಯ, ಇಟಲಿ, ಮೊದಲಾದಕಡೆ ಹೇರಳವಾಗಿ ಸಿಗುತ್ತದೆ. ಕರ್ನಾಟಕದಲ್ಲಿ ಅದು ಬೆಟ್ಟದಬೀಡು, ಗೌಡನ ಕೆರೆ ಮತ್ತು ಇತರ ಕಡೆ ಅಲ್ಪಸ್ವಲ್ಪ ಸಿಗುತ್ತದೆ.

(ಕೆ.ಜಿ.ಎಸ್.)