ಖಡಕೀ

ಮಹಾರಾಷ್ಟ್ರ ರಾಜ್ಯದ ಪುಣೆ ಜಿಲ್ಲೆಯ ಹವೇಲೀ ತಾಲ್ಲೂಕಿನಲ್ಲಿರುವ ಒಂದು ಸ್ಥಳ. ಉ.ಅ.18036` ಮತ್ತು ಪೂ.ರೇ. 730ಂ 54` ಮೇಲೆ ಪುಣೆಗೆ ವಾಯವ್ಯದಲ್ಲಿ 4 ಮೈ. ದೂರದಲ್ಲಿದೆ. ಪುಣೆಯ ಕಾರ್ಪೊರೇಷನಿನ ಕಕ್ಷೆಯಲ್ಲಿ ಸಮಾವಿಷ್ಟವಾಗಿರುವ ಇದರ ಜನಸಂಖ್ಯೆ 65,551 (1971). ಇದೊಂದು ಸೈನಿಕಠಾಣೆ. ಇಲ್ಲಿ ಯುದ್ಧ ಸಾಮಗ್ರಿಗಳ ಮತ್ತು ತುಪಾಕಿ ಗುಂಡುಗಳನ್ನು ತಯಾರಿಸುವ, ಕೇಂದ್ರಸರ್ಕಾರದ ರಕ್ಷಣಶಾಖೆಯ ಕಾರ್ಖಾನೆ ಇದೆ. ಇದಲ್ಲದೆ ಕಿರ್ಲೋಸ್ಕರ್ ಆಯಿಲ್ ಎಂಜಿನ್ಸ್ ಲಿ. ಮತ್ತು ಸ್ವಸ್ತಿಕ್ ರಬ್ಬರ್ ಪ್ರಾಡಕ್ಟ್ಸ್ ಲಿ. ಮುಂತಾದ ಕಾರ್ಖಾನೆಗಳೂ ಇವಕ್ಕೆ ಸಹಾಯಕವಾಗಿ ಇತರ ಕಾರ್ಖಾನೆಗಳೂ ಇವೆ. ಇಲ್ಲೂ ಇದರ ಸುತ್ತಮುತ್ತಲೂ ಖಡಕೀ ಶಿಕ್ಷಣ ಸಂಘದವರು ನಡೆಸುವ ಅನೇಕ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಿವೆ. ಮುಂಬೈ-ಪುಣೆ ರೈಲು ಮಾರ್ಗದಲ್ಲಿ ಖಡಕೀ ಒಂದು ಪ್ರಮುಖ ನಿಲ್ದಾಣ. ಖಡಕೀಯಲ್ಲಿ 1817ರ ನವೆಂಬರ್ 5ರಂದು ಇಂಗ್ಲಿಷರಿಗೂ ಪೇಶ್ವೆಗಳಿಗೂ ಕದನ ನಡೆಯಿತು. *