ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕು ಕುಪ್ಪುರು ಗದ್ದಿಗೆಯಲ್ಲಿ ಸಮಾಧಿಸ್ಥನಾಗಿರುವ ಮಹಾತ್ಮ ಮರುಳ ಸಿದ್ಧನನ್ನು ಈ ಹೆಸರಿನಿಂದ ಕರೆಯುತ್ತಾರೆ. ಈತ ಸು. 350 ವರ್ಷಗಳಷ್ಟು ಪ್ರಾಚೀನನೆಂದು ತಿಳಿದು ಬಂದಿದೆ. ಈತ ಈ ಭಾಗದಲ್ಲಿ ಪ್ರಸಿದ್ಧನಾಗಿ ಅನೇಕ ಪವಾಡಗಳನ್ನು ಮೆರೆದನೆಂದು ಹೇಳಲಾಗಿದೆ. ಈತನನ್ನು ಕುರಿತು ಹಲವಾರು ಕೃತಿಗಳನ್ನು ರಚಿಸಿ ಆ ಭಾಗದಲ್ಲಿ ಈಗಲೂ ಹಾಡುತ್ತಾರೆ. ವೀರಶೈವ ಮತ ಚರಿತ್ರೆಯಲ್ಲಿ ಪ್ರಸಿದ್ಧರಾದ ಆಚಾರ್ಯ ಮರುಳುಸಿದ್ಧ, ಹೂಲಿಯ ಮರುಳುಸಿದ್ಧ, ಉಜ್ಜಯನಿಯ ಮರುಳಸಿದ್ಧ ಇವರುಗಳಿಂದ ಈತ ಭಿನ್ನನೆಂದು ಇತಿಹಾಸಜ್ಞರ ಅಭಿಪ್ರಾಯ.