ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಚಂದ್ರಭಟ್ಟ

ಚಂದ್ರಭಟ್ಟ

ಕನ್ನಡ ಸಾಹಿತ್ಯದಲ್ಲಿ ಚಂದ್ರಭಟ್ಟ ಎಂಬ ಹೆಸರು ಕೆಲವು ಕೃತಿಗಳಲ್ಲಿ ಮತ್ತು ಶಾಸನಗಳಲ್ಲಿ ಕಂಡುಬರುತ್ತದೆ. ಈಗ ಉಪಲಬ್ಧವಿರುವ ಪ್ರಮಾಣಗಳಿಂದ ಚಂದ್ರಭಟ್ಟ ಎಂಬ ಇಬ್ಬರು ಕವಿಗಳು ಇದ್ದುದು ತಿಳಿಯುತ್ತದೆಯೇ ಹೊರತು ಅವರು ಯಾವ ಗ್ರಂಥಗಳನ್ನು ಬರೆದಿದ್ದಾರೆಂಬುದು ಖಚಿತವಾಗಿ ತಿಳಿಯುವುದಿಲ್ಲ.

ಸು. 1025ರಲ್ಲಿದ್ದ ದುರ್ಗಸಿಂಹ ಪೂರ್ವಕವಿಗಳನ್ನು ಹೇಳುವಾಗ ಕನ್ನಡ ಕವಿಗಳ ಸಾಲಿನಲ್ಲಿ ಒಬ್ಬ ಚಂದ್ರನನ್ನು (ಭಟ್ಟ) ಹೆಸರಿಸುತ್ತಾನೆ. 1049ರಲ್ಲಿದ್ದ ಶ್ರೀಧರಾಚಾರ್ಯ ತನ್ನ ಜಾತಕ ತಿಲಕದಲ್ಲಿ ಪೂರ್ವಕವಿಗಳನ್ನು ನೆನೆಯುವಾಗ ಅಂಬುಜಾರಿ (ಅಂಬುಜ+ಅರಿ=ಚಂದ್ರ) ಎಂಬ ಹೆಸರನ್ನು ಹೇಳುತ್ತಾನೆ. ದುರ್ಗಸಿಂಹ ಮತ್ತು ಶ್ರೀಧರಾಚಾರ್ಯರು ಹೇಳುವ ಚಂದ್ರನೇ ಚಂದ್ರಭಟ್ಟ ಎಂದು ಹೇಳಬಹುದಾದರೆ ಈತನ ಕಾಲ ಸುಮಾರು 1000 ಅಥವಾ ಅದಕ್ಕಿಂತ ಸ್ವಲ್ಪ ಹಿಂದೆ ಆಗಬಹುದು. ಸು. 1185ರಲ್ಲಿದ್ದ ರುದ್ರಭಟ್ಟ, ಸು. 1260ರಲ್ಲಿದ್ದ ಕೇಶಿರಾಜ ಮತ್ತು ಸು. 1300ರಲ್ಲಿದ್ದ ¾ಟ್ಟಕವಿ-ಇವರ ಕೃತಿಗಳಲ್ಲಿ ಚಂದ್ರಭಟ್ಟ ಎಂಬ ಹೆಸರು ಸ್ಪಷ್ಟವಾಗಿ ಕಾಣಿಸುತ್ತದೆ. ರುದ್ರಭಟ್ಟ ಪೂರ್ವ ಕವಿಗಳನ್ನು ಹೇಳುವಾಗ ಚಂದ್ರಭಟ್ಟನ ಜತಿ .......... ಮತ್ಕøತಿಯೊಳಿರ್ಕೆ ಎನ್ನುತ್ತಾನೆ. ಚಂದ್ರಭಟ್ಟನ ........ ಸುಮಾರ್ಗಮಿದ¾õÉೂಳೆ ಲಕ್ಷ್ಯಂ ಎಂದು ಶಬ್ದಮಣಿದರ್ಪಣದಲ್ಲಿ ಕೇಶಿರಾಜ ಹೇಳಿದ್ದಾನೆ. ¾ಟ್ಟಕವಿ ತನ್ನ ¾ಟ್ಟಮತದಲ್ಲಿ ಚಂದಿರಭಟ್ಟರ ದಯೆಯಿಂ ಸಂದೆಯ ಮಣಮಿಲ್ಲದಂತು ಕಲ್ವುದು ಮ¿Âಯಂ ಎಂದು ಹೇಳಿದ್ದಾನೆ. ¾ಟ್ಟಕವಿಯ ಈ ಮಾತಿನ ಆಧಾರದಿಂದ, ಚಂದ್ರಭಟ್ಟ ಮಳೆಗೆ ಸಂಬಂಧಿಸಿದಂತೆ ಒಂದು ವೃಷ್ಟಿ ಶಾಸ್ತ್ರಗ್ರಂಥವನ್ನು ಬರೆದಿರಬಹುದು. ರುದ್ರಭಟ್ಟ ಮತ್ತು ಕೇಶಿರಾಜರು ಹೇಳುವ ಜತಿ ಮತ್ತು ಸುಮಾರ್ಗಗಳಿಂದ ಖ್ಯಾತನಾದ ಚಂದ್ರಭಟ್ಟ ಮತ್ತು ¾ಟ್ಟಕವಿ ಹೇಳುವ ಚಂದ್ರಭಟ್ಟ ಒಬ್ಬನೇ ಇರಬಹುದು.

ಧಾರವಾಡ ಜಿಲ್ಲೆಯ ಹೊಟ್ಟೂರಿನ ರಾಜವಲ್ಲಭ ಬರೆದ ಶಾಸನವೊಂದನ್ನು ಚಂದ್ರಭಟ್ಟ ವಿಸ್ತರಿಸಿ ತಿದ್ದಿ ಬರೆದುದು ಆ ಶಾಸನದ ಅಂತ್ಯಪದ್ಯದಿಂದ ತಿಳಿಯುತ್ತದೆ. ಈ ಶಾಸನದಲ್ಲಿ ಚಂದ್ರಭಟ್ಟನಿಗೆ ವಾಕ್ಪತಿ ಎಂಬ ವಿಶೇಷಣವಿದೆ. ಶಾಸನದ ಕಾಲ 1067. ಮತ್ತೊಂದು ಶಾಸನ ಇದೇ ಧಾರವಾಡ ಜಿಲ್ಲೆಯ ಗದಗು ತಾಲ್ಲೂಕಿನ ಕೋಟವುಮಚಿಗಿ ಗ್ರಾಮಕ್ಕೆ ಸೇರಿದ್ದು. ಇದರ ಕಾಲ 1099. ಈ ಶಾಸನದ ಕೊನೆಯ ಭಾಗದಲ್ಲಿ ಅಪೂರ್ಣವಾಗಿರುವ ಒಂದು ಕಂದಪದ್ಯ..........ಚಂದ್ರಭಟ್ಟ ಕವಿ ವಿರಚಿಸಿದಂ ಎಂದು ಹೇಳುತ್ತದೆ.

ರುದ್ರಭಟ್ಟ, ಕೇಶಿರಾಜ ಮತ್ತು ¾ಟ್ಟಕವಿಗಳು ಹೇಳಿರುವ ಚಂದ್ರಭಟ್ಟ ಹಾಗೂ ಶಾಸನಗಳಲ್ಲಿ ಕಂಡುಬರುವ ಚಂದ್ರಭಟ್ಟ ಒಬ್ಬನೇ ಆಗಿರುವ ಸಾಧ್ಯತೆಗಳೇ ಹೆಚ್ಚು. ಈ ಚಂದ್ರಭಟ್ಟ ಮತ್ತು ದುರ್ಗಸಿಂಹ, ಶ್ರೀಧರಾಚಾರ್ಯ ಇವರು ಹೇಳಿದ ಚಂದ್ರ (ಭಟ್ಟ) ಇವರಿಬ್ಬರೂ ಬೇರೆ ಬೇರೆ ಎಂದು ಹೇಳಬಹುದು. (ಎಸ್‍ಎಚ್.ಸಿ.)