ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ತೋಟಗಾರಿಕೆ

ತೋಟಗಾರಿಕೆ - ಮಾನವನ ಮತ್ತು ಸಮಾಜದ ಸುಖ, ಸಂತೋಷ, ಆಹಾರ, ವಸತಿ, ಕಲೆ, ಆರೋಗ್ಯ, ಮನೋರಂಜನೆ ಮುಂತಾದ ಎಲ್ಲ ರಂಗಗಳಲ್ಲಿ ಸಸ್ಯ ಸಂಪತ್ತಿನ ವೈe್ಞÁನಿಕ ರೀತಿಯ ಉಪಯೋಗ (ಹಾರ್ಟಿಕಲ್ಚರ್) ತೋಟಗಾರಿಕೆ ಮಾನವ ಜನಾಂಗದ ಜೀವನ ಮತ್ತು ಸಂಸ್ಕøತಿಯ ಜೊತೆಯಲ್ಲಿ ಹಾಸುಹೊಕ್ಕಾಗಿ ಬೆಳೆದು ಬಂದಿದೆ. ಅನಾದಿ ಕಾಲದಿಂದಲೂ ಮನುಷ್ಯನಿಂದ ಬೇರ್ಪಡಿಸಲು ಸಾಧ್ಯವಿಲ್ಲದ ಈ ತೋಟಗಾರಿಕೆ ಒಂದು ಕಲೆ. ಆಧುನಿಕ ವಿe್ಞÁನವಾಗಿ ಮೈ ತಾಳಿ ತೋಟಗಾರಿಕೆ ವಿe್ಞÁನವೆಂದೂ ಪ್ರಖ್ಯಾತಿಯನ್ನು ಪಡೆದಿದೆ. ಎಲ್ಲ ಧರ್ಮಗಳ ಗ್ರಂಥಗಳಲ್ಲಿಯೂ ಇದರ ಉಲ್ಲೇಖವಿದೆ. ನಮ್ಮ ಪುರಾತನ ಪವಿತ್ರ ಗ್ರಂಥಗಳಲ್ಲಿ ತೋಟದ ಪ್ರಸ್ತಾವನೆ ಇದೆ. ತೋಟಕ್ಕೆ ಬಾಗಾಯಿತು ಎಂಬ ಇನ್ನೊಂದು ಹೆಸರು ಬಳಕೆಯಲ್ಲಿದೆ. ಇದನ್ನು ಇಂಗ್ಲಿಷಿನಲ್ಲಿ ಹಾರ್ಟಿಕಲ್ಚರ್ ಎಂದು ಕರೆಯುತ್ತಾರೆ. ಹಾರ್ಟಿಕಲ್ಚರ್ ಎಂಬ ಪದ ಹಾರ್ಟಸ್ (ಎಂದರೆ ಗಾರ್ಡನ್ - ತೋಟ; ಹಣ್ಣು, ತರಕಾರಿ, ಹೂವು ಮುಂತಾದವನ್ನು ಬೆಳೆಸುವ ಸ್ಥಳ) ಮತ್ತು ಕಲ್ಚರ್ (ಎಂದರೆ ಬೇಸಾಯ ಅಥವಾ ಸಾಗುವಳಿ) ಎಂಬ ಎರಡು ಪದಗಳ ಸಮ್ಮಿಲನ. ವ್ಯವಸಾಯ ಕ್ರಮದಲ್ಲಿ ಬೆಳೆಯುವ ಬೆಳೆಗಳಿಗೆ ಮತ್ತು ತೋಟಗಳಲ್ಲಿ ಬೆಳೆಯುವ ಬೆಳೆಗಳಿಗೆ ಮುಲಭೂತ ವ್ಯತ್ಯಾಸವುಂಟು. ವ್ಯವಸಾಯ ಬೆಳೆಗಳನ್ನು ತೆಗೆಯುವ ರೈತ ಪ್ರಕೃತಿಯ ಅಡಿಯಾಳು. ಮಳೆ ಬರಲಿಲ್ಲವೆಂದರೆ ಬೇಸಾಯಗಾರ ಎಲ್ಲ ಹೊಲಗಳಿಗೆ ನೀರು ಹಾಯಿಸಿ ರಾಗಿ ಬೆಳೆಸಲು ಸಾಧ್ಯವಿಲ್ಲ ಅಥವಾ ಮಳೆ ಹೆಚ್ಚಾದರೆ, ಹಿಮ ಬಿಸಿಲು ಗಾಳಿ ಇವು ಹೆಚ್ಚಾದರೆ ಅವನ್ನು ನಿರ್ಲಕ್ಷಿಸಿ ಬೇಸಾಯ ಮಾಡಲು ಸಾಧ್ಯವಿಲ್ಲ. ಆದರೆ ತೋಟಗಾರಿಕೆಯಲ್ಲಿ ರೈತ ಪರಿಸ್ಥಿತಿಯ ಒಡೆಯ. ಮಳೆಗಾಳಿ, ಬಿಸಿಲುಗಳ ತೋಟದ ಬೆಳೆಗಳ ಮೇಲೆ ಉಂಟು ಮಾಡುವ ಪರಿಣಾಮವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡು ಲಾಭದಾಯಕವಾಗಿ ಬೇಸಾಯವನ್ನು ಮುಂದುವರಿಸಬಲ್ಲ. ತೋಟಗಾರಿಕೆಯನ್ನು ಉಪಯೋಗಿಸಿಕೊಳ್ಳುವುದು ಪ್ರತಿಯೋರ್ವನ ಕಲೆ, ಕುಶಲಕಲೆ ಮತ್ತು ಅನುಭವದ ಮೇಲೆ ನಿಂತಿದೆ.

ತೋಟಗಾರಿಕೆಯನ್ನು ಅಭ್ಯಾಸದ ದೃಷ್ಟಿಯಿಂದ ಐದು ಭಾಗಗಳಾಗಿ ವಿಂಗಡಿಸಲಾಗಿದೆ : 1 ಹಣ್ಣಿನ ಬೇಸಾಯ, 2 ತರಕಾರಿ ಬೇಸಾಯ, 3 ಧುವ ಬೆಳೆ, 4 ಹೂವಿನ ಬೇಸಾಯ, 5 ಉದ್ಯಾನಕಲೆ, ಹಣ್ಣು ತರಕಾರಿ ಮತ್ತು ಧ್ರುವ ಬೆಳೆ ಬೇಸಾಯಗಳು ಮನುಷ್ಯನ ಆಹಾರ, ಆರೋಗ್ಯ ಮತ್ತು ಗಳಿಕೆಗೆ ಸಂಬಂಧಿಸಿದೆ. ಕೊನೆಯ ಎರಡು ಬಗೆಗಳು ವಿಲಾಸ, ಕಲೆ, ಸಂತೋಷಗಳಿಗೆ ಸಂಬಂಧಿಸಿವೆ. ಹೆಚ್ಚು ಫಲವನ್ನು ಪಡೆಯಲು ಉತ್ತಮ ಗುಣವುಳ್ಳ ಸಸ್ಯಗಳಿಂದ ಕಣ್ಣು ತೆಗೆದು ಇನ್ನೊಂದು ಬೇರು ಸಸ್ಯಕ್ಕೆ ಕಸಿ ಮಾಡಿ ಅದು ಯಶಸ್ವಿಯಾಗುವಂತೆ ಮಾಡುವುದು ಕಲೆ ಮತ್ತು ಕುಶಲತೆ. ಎಲ್ಲ ಜನರು ಈ ರೀತಿ ಹಣ್ಣು ಕಸಿ ಮಾಡುವುದು ಮತ್ತು ಬೇರೆ ಸಸ್ಯಗಳಿಂದ ಪರಾಗಸ್ಪರ್ಶ ಮಾಡುವುದರಲ್ಲಿ ಯಶಸ್ವಿಯಾಗುವುದು ಸಾಧ್ಯವಿಲ್ಲ. ಆದ್ದರಿಂದ ತೋಟಗಾರಿಕೆಯಲ್ಲಿ ಕುಶಲತೆ ಬಹಳ ಮುಖ್ಯವಾದ ಅಂಶ. ತೋಟಗಾರನದವ ಕಸಿ ಮಾಡುವ ಕಲೆ, ಕಣ್ಣು ಹಾಕುವ ಕಲೆ, ಪರಾಗಸ್ಪರ್ಶ ಮಾಡುವ ಕಲೆ, ಬೇಸಾಯ ಕಲೆ, ಉದ್ಯಾನ ಕಲೆ ಇತ್ಯಾದಿ ಅನೇಕ ಕಲೆಗಳನ್ನು ಅನುಭವದಿಂದ ಪಡೆದುಕೊಳ್ಳಬಹುದು. ಇದಕ್ಕೆ ಅಭ್ಯಾಸ ಮತ್ತು ಸಾಧನೆ ಬೇಕು.

ತೋಟಗಾರಿಕೆಯ ಪ್ರಾಮುಖ್ಯ : ಭಾರತದಲ್ಲಿ ಬಡತನ, ಅನಾರೋಗ್ಯ, ಜನಸಂಖ್ಯೆಯ ಹೆಚ್ಚಳ ನಿರುದ್ಯೋಗ ಮುಂತಾದ ಭಯಂಕರ ಸಮಸ್ಯೆಗಳು ರಾಷ್ಟ್ರದ ಬೆಳವಣಿಗೆಗೆ ಮಾರಕವಾಗಿವೆ. ತೋಟಗಾರಿಕೆ ಈ ಸಮಸ್ಯೆಗಳನ್ನು ಬಗೆಹರಿಸಲು ಪರಿಣಾಮಕಾರಿಯಾದ ಆಯುಧ. ತೋಟದ ಉತ್ಪಾದನೆ ದೇಶದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಸಾಧನೆಯಾಗಬಲ್ಲದು. ಭಾರತದ ಬಹುಪಾಲು ಜನ ಸಮತೂಕ ಆಹಾರವಿಲ್ಲದೇ ರೋಗಪೀಡಿತರಾಗಿದ್ದಾರೆ. ತೋಟಗಳಲ್ಲಿ ಬೆಳೆದ ಹಣ್ಣು ತರಕಾರಿಗಳು ಮನುಷ್ಯನ ಬೆಳವಣಿಗೆಗೆ ಅಗತ್ಯವಾದ ಆಂಶಗಳಿಂದ ಕೂಡಿವೆಯಾಗಿ ಅವನ್ನು ಹೆಚ್ಚಾಗಿ ಉಪಯೋಗಿಸುವುದರಿಂದ ಅನೇಕ ಜನರ ಕಾಯಿಲೆಯನ್ನು ತಡೆಯುವುದು ಸಾಧ್ಯವಾಗುವುದು. ಭಾರತದ ಜನಸಾಂದ್ರತೆ ವಿಪರೀತವಾಗಿದೆ; ಇದರಲ್ಲಿ 50% ಕ್ಕೂ ಹೆಚ್ಚು ಜನ ವ್ಯವಸಾಯವನ್ನು ಮುಖ್ಯ ಕಸುಬಾಗಿ ಅವಲಂಬಿಸಿದ್ದಾರೆ. ದುರದೃಷ್ಟಾವಶಾತ್ ಕಾಲಕ್ಕೆ ಸರಿಯಾಗಿ ಮಳೆ ಬೀಳದೆ ಇದ್ದು ಅವರು ವರ್ಷದ ಬಹುಭಾಗ ಉದ್ಯೋಗರಹಿತರಾಗಿರುವುದುಂಟು. ಇಂಥ ಜನ ತೋಟಗಾರಿಕೆಯಲ್ಲಿ ನಿರತರಾಗಿರುವುದರಿಂದ ಜನಸಂಖ್ಯೆಯ ಸದುಪಯೋಗವಾಗುತ್ತದೆ. ಹೆಚ್ಚು ಜನ ತೋಟಗಾರಿಕೆಯನ್ನು ಕಸುಬಾಗಿ ಸ್ವೀಕರಿಸುವುದರಿಂದ ಹಣ್ಣು, ತರಕಾರಿ, ಹೂವು, ಮತ್ತು ಸಂಬಾರ ಪದಾರ್ಥಗಳ ಉತ್ಪಾದನೆ ಇಮ್ಮಡಿಯಾಗುವುದಲ್ಲದೇ ಇವುಗಳ ಮಾರಾಟ, ಶೇಖರಣೆ, ಸಾಗಾಣಿಕೆ ಮುಂತಾದವುಗಳನ್ನು ನಡೆಸಲು ಉದ್ಯೋಗ ಅವಕಾಶ ಸಿಕ್ಕಿ ನಿರುದ್ಯೋಗ ಸಮಸ್ಯೆ ಪರಿಹಾರವಾಗಲು ನೆರವಾಗುತ್ತದೆ.

ತೋಟಗಾರಿಕೆಯ ಸಾಧ್ಯತೆ : ಕರ್ನಾಟಕ ರಾಜ್ಯದಲ್ಲಿ ಹಣ್ಣು, ತರಕಾರಿ ಹೂವು ಮತ್ತು ಸಂಬಾರ ಪದಾರ್ಥಗಳನ್ನು ಬೆಳೆಯಲು ಸಾಧ್ಯವಾಗುವ ಹಿತಕರ ವಾಯುಗುಣವಿದೆ. ಅದ್ದರಿಂದ ಇಲ್ಲಿ ಬೆಳೆದ ಹೂವು ಮತ್ತು ಸಂಬಾರ ಪದಾರ್ಥಗಳು ಜಗತ್‍ಪ್ರಸಿದ್ಧವಾಗಿವೆ. ಕರ್ನಾಟಕದಲ್ಲಿ ಹೆಚ್ಚು ತೋಟಗಳು ಇರುವ ಕಾರಣ ತೋಟಗಾರಿಕೆಗೆ ಪ್ರೋತ್ಸಾಹ ನೀಡಿ ಮಾರ್ಗದರ್ಶನ ಮಾಡುವ ತೋಟಗಾರಿಕೆ ತಜ್ಞರು ಇಲ್ಲಿದ್ದಾರೆ. ಈ ಉದ್ಯಮಕ್ಕೆ ಬೇಕಾದ ಸಾಮಗ್ರಿಗಳನ್ನು ಮತ್ತು ಆರ್ಥಿಕ ಸಹಾಯವನ್ನು ಹೆಚ್ಚು ಹೆಚ್ಚಾಗಿ ಕೊಡುವ ಯೋಜನೆಗಳನ್ನು ಸರ್ಕಾರ ರೂಪಿಸುತ್ತದೆ. ಬೆಳೆದ ಹಣ್ಣು, ತರಕಾರಿ, ಹೂವು ಮತ್ತು ಸಾಂಬಾರ ಪದಾರ್ಥಗಳನ್ನು ಸುಲಭವಾಗಿ ಸಾಗಿಸಿ ಶೇಖರಿಸಿ, ಉತ್ತಮ ಮಾರುಕಟ್ಟೆಗಳಿಗೆ ಮುಟ್ಟಿಸುವ ಸಾಧನಗಳು ಹೆಚ್ಚುತ್ತಿವೆ. ರೈತರು ತಮ್ಮದೇ ಆದ ಸಹಕಾರ ಸಂಘಗಳನ್ನು ರೂಪಿಸಿಕೊಂಡು ಯೋಗ್ಯ ಬೆಲೆಗೆ ಮಾರುವ, ಶೇಖರಿಸುವ ಸಾಲ ಮತ್ತು ಇತರ ಸೌಲಭ್ಯಗಳನ್ನು ಮಾಡಿಕೊಳ್ಳಲು ಅವಕಾಶವಿದೆ. ಬೇಸಾಯಗಾರರು ತಮ್ಮ ಕೆಲಸಗಳನ್ನು ಬೇಗ ಮತ್ತು ಸುಲಭವಾಗಿ ಮಾಡಿಕೊಳ್ಳಲು ಸಾಧನ ಸೌಕರ್ಯಗಳು ಅಧಿಕವಾಗುತಿವೆ. ತೋಟದ ಬೆಳೆಗಳು ತೋಟಗಾರನಿಗೆ ಹೆಚ್ಚು ಲಾಭವನ್ನು ಮತ್ತು ಇಳುವರಿಯನ್ನು ಕೊಡುತ್ತದೆ. ಇಷ್ಟೆಲ್ಲ ಸೌಲಭ್ಯಗಳು ಇರುವುದರಿಂದ ವ್ಯವಸಾಯಕ್ಕಿಂತಲೂ ತೋಟಗಾರಿಕೆಗೆ ಹೆಚ್ಚಿನ ಭವಿಷ್ಯವಿದೆ.

ಮುಂದುವರಿದ ರಾಷ್ಟ್ರಗಳಲ್ಲಿ ತೋಟಗಾರಿಕೆಯ ಪಾತ್ರ : ಆಧುನಿಕ ಯುಗದಲ್ಲಿ ತೋಟಗಾರಿಕೆ ಕ್ರಾಂತಿಯ ಪರ್ವಕಾಲದಲ್ಲಿದೆ. ಅಮೆರಿಕ, ಕೆನಡ, ಇಂಗ್ಲೆಂಡ್, ಹಾಲೆಂಡ್, ಫ್ರಾನ್ಸ್, ಜಪಾನ್ ಮುಂತಾದ ರಾಷ್ಟ್ರಗಳಲ್ಲಿ ತೋಟಗಾರಿಕೆಯಿಂದ ಆಗಾಧವಾದ ಬದಲಾವಣೆಗಳಾಗಿವೆ. ಇದರಿಂದಾಗಿ ಅಲ್ಲಿಯ ಜನತೆಗೆ ಹೆಚ್ಚು ಮತ್ತು ಉತ್ತಮ ಸೌಲಭ್ಯಗಳು ದೊರಕಿವೆ. ಅಲ್ಲಿಯ ಜನರ ಆರ್ಥಿಕ ಪ್ರಗತಿಯನ್ನು ತೋಟಗಾರಿಕೆ ಉತ್ತಮಗೊಳಿಸುತ್ತಿದೆ. ಆಯಾ ರಾಷ್ಟ್ರಗಳ ಆದಾಯವನ್ನೂ ಜನರ ಆರೋಗ್ಯವನ್ನೂ ಉತ್ತಮಗೊಳಿಸಲು ಪರಿಣಾಮಕಾರಿಯಾಗಿದೆ. ಒಬ್ಬ ಮನುಷ್ಯ ನೂರಾರು ಅಥವಾ ಸಾವಿರಾರು ಎಕರೆ ಭೂಮಿಯನ್ನು ಬೇಸಾಯ ಮಾಡಲು ಸಾಧ್ಯವಾಗುವ ಯಂತ್ರಗಳನ್ನು ಉಪಯೋಗಿಸಿ ಹೆಚ್ಚಿನ ಕಾಲ, ಶ್ರಮ ಮತ್ತು ಹಣವನ್ನು ಉಳಿಸಿ ಆಧಿಕ ಲಾಭವನ್ನು ಪಡೆಯುವ ಸವಲತ್ತು ಲಭ್ಯವಾಗಿದೆ. ಬೇಗ ಮತ್ತು ಹೆಚ್ಚು ಇಳುವರಿ ಕೊಡುವ ಉತ್ತಮ ತಳಿಗಳನ್ನು ಉಪಯೋಗಿಸಿ ಭಾರತದ ಹತ್ತು ಇಪ್ಪತ್ತರಷ್ಟು ಹೆಚ್ಚು ಇಳುವರಿ ಪಡೆಯಬಹುದಾಗಿದೆ. ಕೀಟ ಮತ್ತು ರೋಗಗಳನ್ನು ಹತೋಟಿಯಲ್ಲಿಡಲು ತಜ್ಞರ ಮೇಲೆ ಸಲಹೆ ಮತ್ತು ಸಹಾಯವನ್ನು ಪಡೆಯುತ್ತಾರಲ್ಲದೇ ಇವನ್ನು ನಿವಾರಿಸಲು ಹೆಚ್ಚು ಪರಿಣಾಮಕಾರಿಯಾದ ಕೀಟ ಮತ್ತು ರೋಗನಾಶಕಗಳನ್ನು ಬಳಸುವರು. ಹಣ ಸಹಾಯ ಬೇಕಾದ ಬೇಸಾಯಗಾರರು ಮುಂಗಡವಾಗಿ ಸಾಲ ಪಡೆಯುವ ಯೋಜನೆಗಳು ಉಂಟು. ತೋಟಗಾರಿಕೆಯ ಕೆಲಸಗಳನ್ನು ಪ್ರತ್ಯೇಕ ಸಂಘಸಂಸ್ಥೆಗಳಿಂದ ಗುತ್ತಿಗೆಗೆ ಮಾಡಿಸಿಕೊಳ್ಳುವ ಸಾಧ್ಯತೆಗಳು ಇವೆ. ಮಾರುಕಟ್ಟೆಗಳಲ್ಲಿ ವಿಶೇಷವಾಗಿ ದಾಸ್ತಾನು ಬಂದು ಗಿರಾಕಿಗಳಿಲ್ಲದೇ ತುಂಬಿದಾಗ ಶೈತ್ಯಾಗಾರಗಳಲ್ಲಿ ಶೇಖರಿಸಿಡಬಹುದಾಗಿದ್ದು ಅಪಾರ ನಷ್ಟಗಳಿಂದ ಪಾರಾಗಲು ಹೆಚ್ಚಿನ ಸೌಲಭ್ಯಗಳಿವೆ. ಬಿತ್ತನೆ ಬೀಜ, ಗೊಬ್ಬರ, ಬಾಡಿಗೆ ಯಂತ್ರಗಳು ಮುಂತಾದವನ್ನು ಸಾಲವಾಗಿ ತೆಗೆದುಕೊಳ್ಳುವ ಅವಕಾಶಗಳು ಸುಲಭವಾಗಿವೆ. ಅಲ್ಲದೇ ಸಾಲ ಕಡಿಮೆ ದರದ ಬಡ್ಡಿಯಲ್ಲಿ ಸಿಗುತ್ತದೆ.

ಎರಡನೆಯ ಮಹಾಯುದ್ಧದ ಅನಂತರ ಪ್ರಪಂಚದಲ್ಲಿ ತೋಟಗಾರಿಕೆಯ ಪಾತ್ರ : ಎರಡನೆಯ ಮಹಾಯುದ್ಧದ ಅನಂತರ ಪ್ರಪಂಚದ ಎಲ್ಲಾ ಮೂಲೆಗಳಲ್ಲಿ ಆಹಾರದ ಅಭಾವ ಹೆಚ್ಚಾಗಿ ಕೋಲಾಹಲ ಉಂಟಾಯಿತು. ಅನೇಕ ಕಡೆಗಳಲ್ಲಿ ಧಾನ್ಯಗಳನ್ನು ಮುಖ್ಯಾಹಾರವಾಗಿ ಬಳಸುತ್ತಿದ್ದರೂ, ಅಭಾವ ತಲೆದೋರಿದ ಅನಂತರ ಇದನು ಪರಿಹಾರ ಮಾಡಲು ವಿಶೇಷ ಪ್ರಯತ್ನಗಳು ನಡೆದವು. ಇಂಥ ವಿಶೇಷ ಪ್ರಯತ್ನಗಳಲ್ಲಿ ತೋಟಗಾರಿಕೆ ಯಶಸ್ವಿಯಾಗಿ ಪರಿಣಾಮಕಾರಿಯಾಗಿದೆ. ಇಂದು ಪ್ರಪಂಚದ ಅನೇಕ ರಾಷ್ಟ್ರಗಳಲ್ಲಿ ಹಸಿವಿನೊಡನೆ ಉಗ್ರ ಹೋರಾಟ ನಡೆಯುತ್ತಿದೆ. ಹಲವು ರಾಷ್ಟ್ರಗಳು ಹಸಿವಿನಿಂದ ಮುಕ್ತಿ ಹೊಂದಿವೆ. ಮತ್ತೆ ಕೆಲವು ರಾಷ್ಟ್ರಗಳು ಗೆಲ್ಲುವ ಸ್ಥಿತಿಯಲ್ಲಿವೆ. (ಎಂ.ಎಚ್.ಎಂ.)