ನಾರುಹುಳು - ಇದೊಂದು ದುಂಡು ಹುಳು. ಅಂದರೆ ಈ ಹುಳದ ದೇಹವು ಸಿಲಿಂಡರಿನಂತೆ ಇರುತ್ತದೆ. ಇದನ್ನು ಗಿನಿಯಾ ವರ್ಮ ಎಂದೂ ಡ್ರೈಆಕಂಕುಲಸ್ ಮೆಡಿನೆನ್ಸಿಸ್ ಎಂದೂ ಕರೆಯುತ್ತಾರೆ. ಕನ್ನಡದಲ್ಲಿ ಇದು ನಾರು ಹುಳು. ಕೆಲ ವರ್ಷಗಳ ಹಿಂದೆ ಈ ಹುಳದ ಹಾವಳಿ ವಿಪರೀತಿವಾಗಿತ್ತು. ಕ್ರಿಶ್ಚಿಯನ್ನರಲ್ಲಿ ಬರುವ ಮೋಸೆಸ್‍ನ ಕಾಲದಲ್ಲಿ ಈ ಹುಳದ ತೊಂದರೆ ಜನರನ್ನು ನಡುಗಿಸುತ್ತಿತ್ತು. ಅಂತಲೇ ಅವರು ಇನ್ನು ಫೈಯರಿ ಸರ್ಪೆಂಟ್ (ಬೆಂಕಿಯ ಹಾವು) ಎಂದೇ ಸಂಭೋಧಿಸುತಿದ್ದರು. ಆ ಕಾಲದಲ್ಲಿ ಇದಕ್ಕೆ ಸರಿಯಾದ ಉಪಚಾರ ಲಭ್ಯವಿದ್ದಿದ್ದಿಲ್ಲ. ಮೋಸೆಸ್ ಹೊರಬರುವ ಹುಳುವನ್ನುಒಂದು ಕಡ್ಡಿಗೆ ಸುತ್ತುವುದನ್ನು ಜನರಿಗೆ ಕಲಿಸಿದ್ಧನು. ಅದೇ ಒಂದು ದೊಡ್ಡ ಪವಾಡವೆನಿಸಿತು. ಅಂತೆಯೆ ಅದನ್ನು ಪಾಶ್ಚಮಾತ್ಯ ವೈದ್ಯರು ವೈದ್ಯಕೀಯ ಲಾಂಛನವೆಂದು ಇಟ್ಟುಕೊಂಡಿದ್ದಾರೆ. ಒಂದು ಕೋಲು ಅದನ್ನು ಸುತ್ತಿದ ಹಾವು ಪಾಶ್ಚಮಾತ್ಯ ವೈದ್ಯಕೀಯ ಲಾಂಛನವಾಗಿದೆ.

ಈ ತೊಂದರೆ ಎಲ್ಲ ದೇಶಗಳಲ್ಲೂ ಇತ್ತು. ಭಾರತದಲ್ಲಿ, ಕರ್ನಾಟಕ ರಾಜ್ಯದಲ್ಲಿ ಇದರ ಉಪಟಳ ಇತ್ತು. ಜಾಗತಿಕ ಆರೋಗ್ಯ ಸಂಸ್ಥೆಯವರು ಕುಡಿಯಲು ಸುರಕ್ಷಿತ ನೀರು ಒದಗಿಸಲು ಸಂಕಲ್ಪ ಮಾಡಿದರೋ ಅಂದಿನಿಂದ ಹುಳದ ಹಾವಳಿ ಕರಗುತ್ತ ಬಂದಿತು.

ಇಂದು ಈ ಹುಳು ಹಾಗೂ ಹುಳದಿಂದ ಆಗುವ ಅನಾಹುತಗಳು ಜಗತ್ತಿನಿಂದಲೇ ಮಾಯವಾಗಿವೆ. ಜಗತ್ತಿನಿಂದ ಮರೆಯಾದ ರೋಗಗಳೆಂದರೆ 1. ಮೈಲಿಬೇನೆ 2. ನಾರುಹುಳು.

ನಾರು ಹುಳುಗಳಲ್ಲಿ ಗಂಡು-ಹೆಣ್ಣು ಬೇರೆ ಬೇರೆಯಾಗಿವೆ. ಗಂಡು ಹುಳು ಸಣ್ಣದಿರುತ್ತದೆ (2.5 ಸೆಂ.ಮೀ). ಹೆರ್ಣಣು ಹುಳುವು ದೊಡ್ಡದಿರುತ್ತದೆ (100 - 120 ಸೆಂ.ಮೀ). ಗಂಡು ಮಾನವರ ದೇಹದಲ್ಲಿಯೇ ಮರಣ ಹೊಂದುವುದು. ಹೆಣ್ಣು ಹುಳುವು ಗರ್ಭಧರಿಸಿದ ಮೇಲೆ ಗರ್ಭದಲ್ಲಿಯ ಮರಿಯಗಳು ಒಂದು ಹಂತದವರೆಗೆ ಬೆಳೆಯುವ ತನಕ ವಿಶ್ರಾಂತಿ ಪಡೆಯುತ್ತದೆ. ಮರಿಗಳು ಸರಿಯಾಗಿ ಬೆಳೇದ ಮೇಲೆ ತಾಯಿ ಹುಳು ತಾನು ಕುಳಿತಲ್ಲಿಂದಲೇ ಹಲವಾರು ನಿರ್ಣಯಗಳನ್ನು ತೆಗೆದುಕೊಳ್ಳಬೇಕು. ಮೊದಲನೆಯ ನಿರ್ಣಯವೆಂಧರೆ ಆ ವ್ಯಕ್ತಿಯ ದೇಹದ ಯಾವ ಭಾಗವು ಪದೇ ಪದೇ ನೀರಿನ ಸಂಪರ್ಕದಲ್ಲಿ ಬರುತ್ತದೆ ಎಂಬುದು. ಎರಡನೆಯ ನಿರ್ಣಯವೆಂದರೆ ಗರ್ಭಕ್ಕೆ ದಿನ ತುಂಬಿರುವುದೋ ಇಲ್ಲವೋ. ಮೂರನೆಯ ನಿರ್ಣಯ ಗರ್ಭಿಣಿಯು ತನ್ನ ಪಯಣ ಪ್ರಾರಂಭಿಸಬೇಕೋ ಬೇಡಬವೋ ಎಂಬುದು. ಹುಳು ಪಯಣ ಪ್ರಾರಂಭಿಸಿ ಸರಿಯಾದ ಸ್ಥಳಕ್ಕೆ ತಲುಪುತ್ತದೆ. ಹುಳುವಿನ ಪ್ರಯಾಣದ ಅಚ್ಚರಿಯೆಂದರೆ ಅದು ಚಲಿಸುವುದು ಗೋಚರವಾದರೂ ನೋವು ಇರುವುದೇ ಇಲ್ಲ. ಹುಳು ಚಲಿಸಿದ್ಧ ಮಾರ್ಘದಲ್ಲಿ ಒಂದು ಹನಿ ರಕ್ತವೂ ಒಸರುವುದಿಲ್ಲ. ಇದು ಈ ಹುಳುವಿಗೆ ದೊಡ್ಡ ಆಯುಧ.

ಗರ್ಭಣಿ ಚಲಿಸಲು ಪ್ರಾರಂಭಿಸಿದ ತಕ್ಷಣ ವ್ಯಕ್ತಿಯಲ್ಲಿ ಅಲರ್ಜಿ ತೊಂದರೆಗಳು ತೋರುತ್ತವೆ. ಅವು ಹೈತಿಗೆ ರೂಪದ್ದಲ್ಲಿರಬಹುದು, ವಾಂತಿಯಾಗಿರಬಹುದು. ಇನ್ನಾವುದೋ ರೂಪದಲ್ಲಿರಬಹುದು. ವಿಶೇಷವೆಂಧರೆ ನಾಲಿಗೆಯ ಚಲನೆ ತೊಂದರೆಯಾಗುವುದು.

ಹುಳುವು ತಾನು ಹುಡುಕಿದ ಸ್ಥಳಕ್ಕೆ ಬಂದು ತ್ವಚೆಯ ಬುಡದಲ್ಲಿ ಒಂದು ಸ್ರವಿಕೆಯನ್ನು ಬಿಡುತ್ತದೆ. ಆಗ ಅಲ್ಲಿ ಮುಳ್ಳು ಚುಚ್ಚಿದ ಅನುಭವವಾಗುತ್ತದೆ. ನೋಡುನೋಡತ್ತಲೆ ಅಲ್ಲಿ ಸಣ್ಣ ಬೊಕ್ಕೆ ಏಳುತ್ತದೆ. ತುರಿಕೆಯಾಗುವುದು. ವ್ಯಕ್ತಿ ಆ ಬೊಕ್ಕೆಯ ಮೂಗನ್ನು ಚಿವುಟುತ್ತಾನೆ. ಮೂಗನ್ನು ಚಿವುಟಿದಾಗ ಅಲ್ಲಿಂದ ಕೂದಲಿನಂತಹ ಎಳೆ ಹೊರಬರುತ್ತದೆ. ಇದನ್ನು ನಾನು ವಿಶೇಷ ಆಸ್ಥೆವಹಿಸಿ ಅಭ್ಯಸಿಸಿರುವೆ. ಇದು ಬಸಿರು ಹುಳುವಿನ ಗರ್ಭವಿರಬಹುದು. ಬೇಗನೆ ಈ ಎಳೇಯು ಒಣಗಿ ಮುರಿದುಕೊಳ್ಳುತ್ತದೆ. ಅಲ್ಲಿಂದ ಹಾಲಿನಂಥ ದ್ರವವು ಒಸರುತ್ತದೆ. ಈ ದ್ರವವನ್ನು ಸೂಕ್ಷ್ಮದರ್ಶಕದಲ್ಲಿ ನೋಡಿದರೆ ಸಾವಿರಾರು ನಾರಿನ ಮರಿಗಳು ಓಡಾಡುವದು ಕಾಣುತ್ತದೆ. ಚಿವುಟಿದ ಆ ಭಾಗದಲ್ಲಿ ಚಿಕ್ಕ ಗಾಯ ತೋರುತ್ತದೆ. ಇದೇ ನಾರು ಹುಣ್ಣು.

ಒಂದೊಂದು ಸಲ ನಾರು ಹುಣ್ಣು ಬಹು ದೊಡ್ಡ ಗಾತ್ರವನ್ನೇ ಪಡೆಯುತ್ತದೆ.ರೀ ಹುಣ್ಣಿನ್ಲ್ಲಿ ಹಾಲಿನಂಥ ಪದಾರ್ಥ ಸೇರಿದರೆ ತಾಳಲಾಗದಂಥ ಉರಿ ಕಾಣುತ್ತದೆ. ಹುಣ್ಣಿನಲ್ಲಿ ಬೆಂಕಿಯ ಕೆಂಡವನ್ನು ಇಟ್ಟಂತಾಗುವುದು. ಕೆಲವು ಸಲ ಗರ್ಭಿಣಿ ಹುಳು ದೇಹದೊಳಗೆ ಹರಿದು ಅದರ ಹಾಲಿನಂಥ ದ್ರವ ಅಲ್ಲಿಯೇ ಸೋರುತ್ತದೆ. ಇದು ಭಯಂಕರ ನೋವು ತರುವುದು. ಈ ನೋವು ಎಷ್ಟು ಉಗ್ರವಿರುತ್ತದೆ ಎಂದರೆ ರೋಗಿಗಳು ಉರುಲು ಹಾಕಿಕೊಳ್ಳುವರು. ಆ ಭಾಗದಲ್ಲಿ ದೊಡ್ಡ ಕುರು ಹುಟ್ಟುವುದು. ಕೀವು ತುಂಬುವದು. ಈ ವೇದನೆಯನ್ನು ಸಹಿಸುವದೇ ಅಸಾಧ್ಯ. ಕೀವಿನ ವಾಸನೆ ಉಬ್ಬಳಿಕೆ ಬರುವಂತೆ ಮಾಡುತ್ತದೆ. ಈ ಹುಣ್ಣು ಮಾಯಬೇಕಾದರೆ 6 - 8 ತಿಂಗಳಾದರೂ ಬೇಕು. ಒಂದು ವ್ಯಕ್ತಿಯಲ್ಲಿ ಒಂದೇ ಹುಳುವಿರಬೇಕು ಎಂದೇನು ಇಲ್ಲ. 20 ರಿಂದ 30 ಹುಳು ವಿರಬಹುದು. ಪ್ರತಿ ಹುಳುವಿನ ಹುಣ್ಣು ಬೇರೆ ಬೇರೆ ಕಾರಂ ಈ ಬೇನೆ ಜನರನ್ನು ನೆಲಕ್ಕೆ ಬೀಳಿಸುವುದು. ಅವರನ್ನು ಪೀಡಿಸಿ ಹಣ್ಣುಗಾಯಿ ನೀರುಗಾಯಿ ಮಾಡಿಸುವುದು. ನಾರು ಹುಳುವು ದೇಹದ ಮುಂಗಾಲು, ಮುಂಗೈಗಳಲ್ಲಿ ಕಾಣುವುದು ಜಾಸ್ತಿ. ಆನಂತರ ಬೇಕಾದ ಭಾಗಗಳಲ್ಲಿ ಕಾಣಬಹುದು. ಸ್ತ್ರೀಯರ ಮೋಲೆಯ ಕೆಳೆಗೆ, ಶಿಶ್ನ, ತರಡು, ಗೆಜ್ಜೆ, ಯೋನಿಯ ಸುತ್ತ, ಮೂಗಿನೊಳಗೆ, ಕಂಕುಳಲ್ಲಿ, ನಿತಂಬಗಳಲ್ಲಿ ಮೂಡಬಹುದು.

ಮನುಷ್ಯರಲ್ಲದೆ ನಾರು ಹುಳುವು ಸಾಕು ಪ್ರಾಣಿಗಳಲ್ಲಿಯೂ ಬರಬಹುದು. ನಾನು ಆಕಳು (ಯೋನಿಯ ಸಮೀಪ), ಎಮ್ಮೆ, ನಾಯಿಗಳಲ್ಲಿ ಕಂಡಿದ್ದೇನೆ

ತಣ್ಣೀರಿನಲ್ಲಿ ಹೊರ ಬಂದ ಮರಿಗಳು ಜಿಗಿದಾಡುತ್ತಿರುವಾಗ ಸೈಕ್ಲೋಪ್ಸ್ ಎಂಬ ಜೀವಿಗಳು ಮರಿಗಳನ್ನು ನುಂಗುತ್ತವೆ. ಸೈಕ್ಲೋಪ್ಸ್‍ಗಳು ಸಿಹಿನೀರಿನಲ್ಲಿ ವಾಸಿಸುವ ಜೀವಿಗಳು. ಒಂದೇ ಸೈಕ್ಲೋಪ್ಸ್‍ದಲ್ಲಿ ಹೆಚ್ಚು ಮರಿಗಳು ಸೇರಿದರೆ ಸೈಕ್ಲೋಪ್ಸ್‍ಗಳು ಸುಂದು ಹಿಡಿದು ತಳಕ್ಕೆ ಕೂಡ್ರಿಸುವವು. ಇಂಥ ನೀರನ್ನು ತಂದು ಸೋಸದೆ ಕುಡಿದರೆ ನಾರು ಹುಳುಗಳ ಮರಿಗಳನ್ನು ಪಡೆದ ಸೈಕ್ಲೋಪ್ಸ್‍ಗಳು ಸಹ ಜಠರದಲ್ಲಿ ಸೇರುತ್ತವೆ. ಜಠರದಲ್ಲಿ ಸೈಕ್ಲೋಪ್ಸ್ ಪಚನವಾಗಿ ಬಿಡುತ್ತವೆ. ಅಲ್ಲಿಯೇ ಜಠರದಲ್ಲಿ ರಂದ್ರಕೊರೆದು ಹೊಟ್ಟೆಯ ಹಿಂಬದಿಯಲ್ಲಿ ಸೇರುತ್ತವೆ. ಅಲ್ಲಿಯೇ ಪ್ರಾಯಕ್ಕೆ ಬರುತ್ತವೆ. ಗಂಡು ಹೆಣ್ಣುಗಳ ಮಿಲನವಾಗುತ್ತದೆ. ಗಂಡು ಹುಳುವು ತನ್ನ ಕೆಲಸ ಮುಗಿಸಿ ಅಲ್ಲಿಯೇ ಮರಣ ಹೊಂದುವದು. ಮುಂದಿನ ಕಾರ್ಯವೆಲ್ಲ ಹೆಣ್ಣು ಹುಳುವಿನದೆ.

ಇಂದು ಆರೋಗ್ಯ ಸಂಸ್ಥೆಯವರ ಪ್ರಯತ್ನದಿಂದ ಕುಡಿಯುವ ನೀರು ಸುರಕ್ಷಿತವಾಗಿದೆ. ಕಾರಣ ನಾರುಹುಳು ಜಗತ್ತಿನಿಂದ ಕಾಲು ಕಿತ್ತಿದೆ.

ನಾರು ಉಳು ದೇಹದ ಒಂದೇ ಭಾಗದಲ್ಲಿ ಪದೇ ಪದೇ ಕಂಡರೆ ಆ ಭಾಗ ಕಟ್ಟಿಗೆಯಂತೆ ಬಿರುಸಾಗುತ್ತದೆ. ಇನ್ನು ಕೆಲವು ಬಾರಿ ನಾರು ಹುಳು ತನ್ನ ಪ್ರವಾಸವನ್ನು ಪ್ರಾರಂಭಿಸುವದೇ ಇಲ್ಲ. ಸುಮ್ಮನೆ ಕುಳಿತಲ್ಲಿಯೇಮರಣ ಹೊಂದುತ್ತವೆ. ಅಲ್ಲಿಯೇ ಅವುಗಳ ದೇಹದಲ್ಲಿ ಸುಣ್ಣವು ಶೇಖರಗೊಂಡು ಹುಳುಗಳು ಕಲ್ಲುಗಳಾಗುತ್ತವೆ. (ಡಾ. ಎಸ್.ಜೆ. ನಾಗಲೋಟಿಮಠ)