ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪೊಟ್ಟಲಕೆರೆ

ಪೊಟ್ಟಲಕೆರೆ - ಇದು ಕಲ್ಯಾಣ ಚಾಳುಕ್ಯರಿಗೆ ಸೇರಿದ್ದು. ಕಲ್ಯಾಣ ಪಟ್ಟಣಕ್ಕೆ ಮೊದಲು ರಾಜಧಾನಿಯಾಗಿದ್ದ ಸ್ಥಳ. ದೇವರ ದಾಸಿಮಯ್ಯ ಹಾಗೂ ಶಂಕರ ದಾಸಿಮಯ್ಯಗಳು ಇಲ್ಲಿ ಪವಾಡಗಳನ್ನು ಮೆರೆದಂತೆ ಬಸವ ಪುರಾಣದಲ್ಲಿ ಕಥೆ ಇದೆ. ಸಮಯ ಪರೀಕ್ಷೆ ಮತ್ತು ತ್ರೈಲೋಕ್ಯ ಚೂಡಾಮಣಿಗಳನ್ನು ಬರೆದ ಬ್ರಹ್ಮ ಶಿವ (1125) ಇಲ್ಲಿಯವನು ಎಂದು ಕವಿಚರಿತ್ರೆಯಲ್ಲಿ ಹೇಳಿದೆ. ಇಲ್ಲಿಯ ಒಂದು ಶಾಸನದಲ್ಲಿ ಭಾಸ್ಕರ ಕವಿ ಎಂಬುವನ ಹೆಸರು ಬಂದಿದೆ.

ಕನ್ನಡಿಗರ ರಾಜಧಾನಿಯೆನಿಸಿದ್ದ ಈ ಪಟ್ಟಣ ಈಗ ಆಂಧ್ರಪ್ರದೇಶಕ್ಕೆ ಸೇರಿದೆ. (ಬಿ.ಎಸ್.)