ಭ ಘೋಷ-ಓಷ್ಠ್ಯ-ಸ್ಟರ್ಶ ವ್ಯಂಜನ ಧ್ವನಿ. ಸಂಸ್ಕøತದ ತ ಎನ್ನುವ ಅಕ್ಷರವನ್ನು ಬಹುವಾಗಿ ಹೋಲುವ ರೂಪವೇ ಮೌರ್ಯರ ಕಾಲದಲ್ಲಿದ್ದು ಸುಮಾರಾಗಿ ಆರನೆಯ ಶತಮಾನದ ತನಕ ಮುಂದುವರಿಯುತ್ತದೆ. ಒಂಬತ್ತನೆಯ ಶತಮಾನದಲ್ಲಿ ಅಕ್ಷರದ ಕೆಳಭಾಗದಲ್ಲಿ ವಿಶೇಷ ಬದಲಾವಣಿಗಳುಂಟಾಗುತ್ತವೆ. ಎರಡು ಭಾಗಗಳನ್ನೊಳಗೊಂಡ ಈ ಅಕ್ಷರ ಹದಿಮೂರನೆಯ ಶತಮಾನದ ತನಕ ಮುಂದುವರಿಯುತ್ತದೆ. ವಿಜಯನಗರ ಕಾಲದಲ್ಲಿ ಈ ಎರಡು ಭಾಗಗಳೂ ಒಂದುಗೂಡುತ್ತವೆ. ಮಹಾಪ್ರಾಣದ ಸಂಕೇತವಾದ ಹೊಕ್ಕಳು ಸೀಳಿಕೆ ಕಾಣಿಸುತ್ತದೆ. 6ನೆಯ ಶತಮಾನದಲ್ಲಿ ಕಾಣಿಸಿಕೊಂಡ ತಲೆಕಟ್ಟು ಸ್ಥಿರವಾಗುತ್ತದೆ. ಇದೇ ರೂಪ ಮುಂದುವರಿಯುತ್ತದೆ. (ಎ.ವಿ.ಎನ್.)



ಆಶೋಕ ಕ್ರಿ.ಪೂ. 3ನೆಯ ಶತಮಾನ ಸಾತವಾಹನ ಕ್ರಿ. ಶ. 2ನೆಯ ಶತಮಾನ ಕದಂಬ. ಕ್ರಿ. ಶ. 5ನೆಯ ಶತಮಾನ ಗಂಗ ಕ್ರಿ.ಶ. 6ನೆಯ ಶತಮಾನ ಬಾದಾಮಿ ಚಳುಕ್ಯ ಕ್ರಿ.ಶ. 6ನೆಯ ಶತಮಾನ ರಾಷ್ಟ್ರಕೂಟ ಕ್ರಿ.ಶ. 9ನೆಯ ಶತಮಾನ ಕಲ್ಯಾಣ ಚಾಳುಕ್ಯ. ಕ್ರಿ. ಶ. 10ನೆಯ ಶತಮಾನ ಕಳಚೂರಿ ಹೊಯ್ಸಳ, ಮತ್ತು ಸೇವುಣ ಕ್ರಿ. ಶ. 13ನೆಯ ಶತಮಾನ ವಿಜಯನಗರ. ಕ್ರಿ.ಶ. 15ನೆಯ ಶತಮಾನ ಮೈಸೂರು ಅರಸರು. ಕ್ರಿ.ಶ. 18ನೆಯ ಶತಮಾನ