ರಾಮ ಭಾರತದ ರಾಷ್ಟೀಯ ಮಹಾಕಾವ್ಯಗಳಲ್ಲಿ ಒಂದಾದ ವಾಲ್ಮೀಕಿ ರಾಮಾಯಣದ ನಾಯಕಪಾತ್ರ ಪುರಾಣ ಪ್ರಕಾರ ವಿಷ್ಣುವಿನ ದಶಾವತಾರಗಳಲ್ಲಿ ಒಂದು, ಏಳನೆಯ ಅವತಾರ. ವಿಷ್ಣುವಿನ ದಶಾವತಾರಗಳಲ್ಲಿ ರಾಮಾವತಾರವೇ ಶ್ರೇಷ್ಠವೆಂಬ ಭಾವನೆಯಿದೆ. ರಾಮಾಯಣದ ಕಥೆಯಂತೆ ರಾಮ ದಶರಥನ ಹಿರಿಯ ಮಗ. ಇವನ ತಾಯಿ ಕೌಸಲ್ಯೆ. ಭರತ, ಲಕ್ಷ್ಮಣ, ಶತ್ರುಘ್ನ ಇವನ ಸಹೋದರರು. ಚೈತ್ರಶುಕ್ಲ ನವಮಿ ಪುನರ್ವಸು ನಕ್ಷತ್ರದಲ್ಲಿ ರಾಮ ಜನಿಸಿದ. ಇವನ ಕುಲಗುರು ವಶಿಷ್ಠ. ವಿದ್ಯಾಗುರು ವಿಶ್ವಾಮಿತ್ರ. ಬಾಲ್ಯದಲ್ಲಿಯೇ ರಾಮ ಸುಬಾಹು ತಾಟಕಿಯರನ್ನು ಕೊಂದ. ಸೀತಾಪರಿಣಯದಿಂದ ಹಿಂದಿರುಗುವಾಗ ಪರುಶರಾಮನ ಗರ್ವಭಂಗ ಮಾಡಿದ. ಅಯೋಧ್ಯೆಯಲ್ಲಿ ರಾಮನಿಗೆ ದಶರಥ ಪಟ್ಟಾಭಿಷೇಕ ಮಾಡಲು ಹವಣಿಸಿದಾಗ ಕೈಕೇಯಿಯ ದಾಸಿಯಾದ ಮಂಥರೆ ಅದಕ್ಕೆ ವಿಘ್ನ ತಂದೊಡ್ಡಿ ರಾಮನ ಹದಿನಾಲ್ಕು ವರ್ಷಗಳ ವನವಾಸಕ್ಕೆ ಕಾರಣಳಾದಳು. ರಾಮ ಸೀತಾಲಕ್ಷ್ಮಣರೊಡನೆ ವನವಾಸಕ್ಕೆ ಹೋದ. ಅರಣದ್ಯದಲ್ಲಿ ರಾವಣ ಸೀತಾಪಹರಣವನ್ನು ಮಾಡಲು ಸುಗ್ರೀವ, ಹನುವಂತ ಮುಂತಾದ ವಾನರರ ಸ್ನೇಹದಿಂದ ಸಮುದ್ರಕ್ಕೆ ಸೇತುವೆಯನ್ನು ಕಟ್ಟಿ, ಆ ಮೂಲಕ ಲಂಕೆಗೆ ಹೋಗಿ ರಾವಣ ಮತ್ತು ಅವನ ಸಂಬಂಧಿಕರನ್ನು ನಾಶಮಾಡಿ ರಾವಣನ ತಮ್ಮನಾದ ವಿಭೀಷಣನಿಗೆ ಪಟ್ಟಕಟ್ಟಿ. ಸೀತೆಯನ್ನು ಕೂಡಿಕೊಂಡು ಲಕ್ಷ್ಮಣನೊಡನೆ ಅಯೋಧ್ಯೆಗೆ ಮರಳಿಬಂದ, ಅಯೋಧ್ಯೆಯಲ್ಲಿ ಪಟ್ಟಾಭಿಷಿಕ್ತನಾದ.
ವಾಲ್ಮೀಕಿಯ ಪ್ರಕಾರ ರಾಮ ಆದರ್ಶನಾಯಕ. ಸತ್ಯವಂತ, ಸದಾಚಾರಿ, ಸುಶೀಲ, ಪರಾಕ್ರಮಿ, ಗಂಡಸರನ್ನೂ ಮೋಹಗೊಳಿಸುವ ರೂಪುಳ್ಳವನು. ಏಕಪತ್ನೀವ್ರತಸ್ಥ. ಪಿತೃವಾಕ್ಯ ಪರಿಪಾಲಕ. ಆದರ್ಶ ಸಹೋದರತ್ವಕ್ಕೆ ರಾಮಲಕ್ಷ್ಮಣರು ಸಂಕೇತ, ರಾಮ ಮಾನವತೆಯ ಎಲ್ಲ ಆದರ್ಶಗಳ ಸಾಕಾರ ರೂಪ. ಭಾರತೀಯ ಸಂಸ್ಕøತಿಯ ಪ್ರತೀಕವಾಗಿ ರಾಮನೂ ರಾಮಾಯಣವೂ ಜನಮನದಲ್ಲಿ ಇಂದಿಗೂ ಉಳಿದು ಬಂದಿದೆ. ರಾಮನಿಗೆ ಚಂಪಕ ಪುಷ್ಪ, ತುಳಸೀದಳ ಜಾಜಿಕುಸುಮ, ಕಮಲ, ಪಾರಿಜಾತಾದಿ ಪುಷ್ಪಗಳು ಅತ್ಯಂತ ಪ್ರಿಯವಾದವುಗಳು. ಸೀತೆಯನ್ನು ಕಾಡಿಗೆ ಅಟ್ಟಿದ್ದು, ವಾಲಿಯನ್ನು ಮರೆಯಿಂದ ಕೊಂದದ್ದು, ಶೂದ್ರ ತಪಸ್ವಿ ಶಂಬೂಕನನ್ನು ವಧಿಸಿದ್ದು- ಈ ಕಲವು ಘಟನೆಗಳು ರಾಮನ ಬದುಕಿನ ದೃಷ್ಟಿಯಿಂದ ಅತ್ಯಂತ ಮಹತ್ತ್ವದವುಗಳಾಗಿ ಸಾಕಷ್ಟು ಜಿe್ಞÁಸೆಗೆ ಕಾರಣವಾಗಿವೆ. (ನೋಡಿ- ರಾಮಾಯಣ)