ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸಮ್ಮಿಶ್ರ ವಸ್ತುಗಳು ಮತ್ತು ಅವುಗಳ ತಾಂತ್ರಿಕತೆ

ಸಮ್ಮಿಶ್ರ ವಸ್ತುಗಳು ಮತ್ತು ಅವುಗಳ ತಾಂತ್ರಿಕತೆ

	ಸಮ್ಮಿಶ್ರ ವಸ್ತುಗಳು: 	ಎರಡು ಅಥವಾ ಹೆಚ್ಚಿನ ಮೂಲ ಪದಾರ್ಥಗಳ ಮಿಶ್ರಣದಿಂದ ಮೂಡಿ ಬಂದ ವಿಶೇಷ ಗುಣಗಳುಳ್ಳ ನೂತನ ವಸ್ತುಗಳು. ಈ ವಸ್ತುಗಳ ಗುಣಲಕ್ಷಣಗಳು ನೂತನವಾಗಿ ಮೈದಳೆದು ಕಂಡು ಮಿಶ್ರಣಕ್ಕೆ ಮುಂಚೆ ಬಳಸಿದ ಪದಾರ್ಥಗಳ ವೈಯಕ್ತಿಕ ಗುಣ ಲಕ್ಷಣಗಳಿಗೆ ಯಾವ ನೇರ ಹೋಲಿಕೆಗಳೂ ಇರುವುದಿಲ್ಲ. ವೈವಿಧ್ಯಮಯ ಗುಣಲಕ್ಷಣಗಳ ಹೊಂದಾಣಿಕೆಯಿಂದಾಗಿ, ತನ್ನದೇ ಆದ ವಿಶಿಷ್ಟ ಗುಣಗಳುಳ್ಳ ಇನ್ನೊಂದು ವಸ್ತುವಿನ ಪರಿವರ್ತನೆಯ ವಿಧಿ: ಸಂಕರ್ಮ (ಸಿನರ್ಜಿ).

ಸಮ್ಮಿಶ್ರ ವಸ್ತುವಿನ ಲಕ್ಷಣ ಅರಿಯಲು ಒಂದು ಉದಾಹರಣೆಯನ್ನು ಪರಿಗಣಿಸಬಹುದು. ಅಡುಗೆ ಮನೆಯಲ್ಲಿ ಪಾಕಶಾಸ್ತ್ರಕ್ಕೆ ಬೇಕಾಗುವ ಪದಾರ್ಥಗಳೆಲ್ಲ ಇರುತ್ತವೆ: ಅಕ್ಕಿ, ಬೇಳೆ, ತರಕಾರಿ, ಉಪ್ಪು, ಕಾರ ಇತ್ಯಾದಿ. ಇವುಗಳಲ್ಲಿ ಯಾವುದಾದರೂ ಒಂದೇ ಪದಾರ್ಥವನ್ನು ನಾವು ತಿನ್ನಲಾಗದು. ಆದರೆ ಅಡುಗೆಯವರ ನೈಪುಣ್ಯದಿಂದಾಗಿ, ಈ ಪದಾರ್ಥಗಳನ್ನೆಲ್ಲ ಒಂದು ಪೂರ್ವ ನಿಶ್ಚಿತ ರೀತಿಯಲ್ಲಿ ಸೇರಿಸಿ, ಹೊಂದಾಣಿಕೆ ಮಾಡಿ ಸಮ್ಮಿಶ್ರಣ ಮಾಡಿದರೆ. ನಮಗೆ ಸಿಗುವುದು ರಸದೂಟ! ಬಿಡಿಬಿಡಿಯಾಗಿ ನೋಡಿದರೆ ಅಡುಗೆಗೆ ಮುನ್ನ ಈ ಒಂದೊಂದು ಪದಾರ್ಥಗಳೂ ತಮ್ಮದೇ ಆದ ಗುಣಲಕ್ಷಣಗಳನ್ನು ಹೊಂದಿದ್ದವು. ಆದರೆ ಮಿಶ್ರಣದ ನಂತರ ನಮಗೆ ದೊರೆತ ರುಚಿಯೇ ಬೇರೆ.

ಸಮ್ಮಿಶ್ರ ವಸ್ತುವಿನ ತಯಾರಿಕೆಯ ಬಗ್ಗೆ ಒಂದು ಚಾರಿತ್ರಿಕ ಉದಾಹರಣೆಯನ್ನೂ ನೋಡಬಹುದು. ಸಾವಿರಾರು ವರ್ಷಗಳ ಹಿಂದೆ ಬಾಳಿ ಬದುಕಿದ ನಮ್ಮ ಪೂರ್ವಜರು ಒಣಗಿದ ಹುಲ್ಲನ್ನೋ ಇಲ್ಲವೇ ಯೋಗ್ಯವಾದ ಗಿಡಮರಗಳ ನಾರುಗಳನ್ನೋ ಆರಿಸಿ, ಚಿಕ್ಕದಾಗಿ ಕತ್ತರಿಸಿ, ಜೇಡಿಮಣ್ಣಿನೊಂದಿಗೆ ಚೆನ್ನಾಗಿ ಮಿಶ್ರಣ ಮಾಡಿ ಅನಂತರ ಈ ನಾರುಗಳನ್ನೊಳಗೊಂಡ ಮಣ್ಣನ್ನು ಎರಕ ಹುಯ್ದು, ಒಣಗಿಸಿ, ಇಟ್ಟಿಗೆಗಳಾಗಿ ಪರಿವರ್ತಿಸಿದರು. ಆನಂತರ ಆ ಇಟ್ಟಿಗೆಗಳನ್ನು, ಸುಟ್ಟು ಅವಕ್ಕೆ ಶಕ್ತಿಯುಳ್ಳ ಆಕಾರ ಮೆರಗು ದೊರಕಿಸಿ, ಅವನ್ನು ನಿರ್ಮಾಣ ಕಾರ್ಯಗಳಿಗೆ ಆಕರವನ್ನಾಗಿ ಬಳಸಿಕೊಂಡರು.

ಪ್ರಾಚೀನ ಕಾಲದಲ್ಲಿ ಕಟ್ಟಿದ ಇಂಥ ಅನೇಕ ಮನೆಗಳು, ಕಾರ್ಯಾಗಾರಗಳು ಪ್ರಕೃತಿಯ ವಿಕೋಪವನ್ನು ಸತತವಾಗಿ ಎದುರಿಸಿ, ಮಳೆ, ಗಾಳಿ, ಉಷ್ಣತೆ, ಭಾರ, ಹೊಡೆತ ಯಾವುದಕ್ಕೂ ಜಗ್ಗದೆ, ಸಾವಿರಾರು ವರ್ಷಗಳಿಂದ ಸ್ಥಿರವಾಗಿ ನಿಂತಿವೆ. ಆದರೆ, ಇಂತಹ ಶಕ್ತಿ ನಾರಿನಲ್ಲಿ ಮಾತ್ರವೇ ಕಂಡು ಬರುವುದಿಲ್ಲ; ಜೇಡಿಮಣ್ಣಿನಲ್ಲಿ ಮಾತ್ರವೇ ಕಂಡು ಬರುವುದಿಲ್ಲ. ಶಕ್ತಿ ಸಾಮಥ್ರ್ಯ ಕಂಡು ಬರುವುದೆಲ್ಲ ಇವೆರಡರ ಸಮ್ಮಿಶ್ರಣವಾದ ಆ ಇಟ್ಟಿಗೆಗಳಲ್ಲೇ ! ಹಾಗಾದರೆ ಈ ಇಟ್ಟಿಗೆಗಳಲ್ಲಿ ನಾರಿನ ಕೊಡುಗೆ ಏನು? ಜೇಡಿ ಮಣ್ಣಿನ ಕೊಡುಗೆ ಏನು? ಎಂಬುದು ಪರಿಶೀಲನಾರ್ಹ. ನಾರು, ಇಟ್ಟಿಗೆಗೆ ಬೇಕಾದ ಒಳಶಕ್ತಿಯನ್ನು ತುಂಬುತ್ತದೆ. ಸುಟ್ಟ ಜೇಡಿಮಣ್ಣು ಹೊರ ಆಕಾರ, ಗಾತ್ರವನ್ನು ಕೊಟ್ಟು ನಾರುಗಳನ್ನು ಆವರಿಸಿ, ನಾರುಗಳನ್ನು ಕಾಲದಿಂದಾಗುವ ನಾಶದಿಂದ ಕಾಪಾಡುತ್ತದೆ. ಇದೇ ಸಂಕರ್ಮ.

ಆಧುನಿಕ ವೈಶಿಷ್ಟ್ಯ: ಸಂಕರ್ಮದ ಕಲ್ಪನೆ ಆದಿ ಮಾನವನ ಕಾಲದಿಂದ ಮೂಡಿ ಬಂದಿದ್ದರೂ ನಮ್ಮ ಪ್ರಸ್ತುತ ಆಧುನಿಕ ಯುಗದಲ್ಲಿ ಸಮ್ಮಿಶ್ರ ವಸ್ತುಗಳ ಬಗ್ಗೆ ಜ್ಞಾನಾಭಿವೃದ್ಧಿ ಮತ್ತು ಉದ್ಯಮಗಳ ನಿರಂತರ ಏಳಿಗೆಗಳಿಂದಾಗಿ ಸಮ್ಮಿಶ್ರ ವಸ್ತುಗಳ ರೂಪ, ಆಕಾರಗಳು, ಬಳಕೆಗಳು ನಮ್ಮ ನಿತ್ಯ ಜೀವನದ ಒಂದು ಅಂಗವಾಗಿ ಪರಿಣಮಿಸುತ್ತಿವೆ. ಅದರಿಂದಾಗಿ, ಮಿಶ್ರಣಕ್ಕೆ ಅನುಗುಣವಾಗಿ ಬೇಕಾಗುವ ಪದಾರ್ಥಗಳು, ಅವುಗಳನ್ನು ಸಮ್ಮಿಶ್ರಣ ಮಾಡಲು ಅತ್ಯಗತ್ಯವಾದ ಉಪಕರಣಗಳು, ಯಂತ್ರಗಳು; ರಚನೆಗೆ ಬೇಕಾದ ವಿಧಿ ವಿಧಾನಗಳು ಇವೆಲ್ಲವೂ ಕಳೆದ ಐದು ದಶಕಗಳಲ್ಲಿ, ಏಕಕಾಲಿಕವಾಗಿ ವೈಜ್ಞಾನಿಕವಾಗಿಯೂ ತಾಂತ್ರಿಕವಾಗಿಯೂ ಹೊಸ ಹೊಸ ರೂಪಗಳಲ್ಲಿ ಕಾಣುತ್ತಿವೆ. ಇದಕ್ಕೆಲ್ಲ ಹಿನ್ನೆಲೆಯೆಂದರೆ ನಮ್ಮ ಸಮಾಜದಲ್ಲಿ ಇಂದು ಕಂಡು ಬರುತ್ತಿರುವ ತೀವ್ರ ಮೇಲ್ಮಟ್ಟದ ಗ್ರಾಹಕ ಶಕ್ತಿ (ಎಲ್ಲಾ ಕ್ಷೇತ್ರಗಳಲ್ಲೂ ಅಗತ್ಯಕ್ಕೂ ಮೀರಿದ ಹೆಚ್ಚು ಹೆಚ್ಚು ವಸ್ತುಗಳ ಬಳಕೆ-ಇದನ್ನು ಆಧುನಿಕ ಪರಿಭಾಷೆಯಲ್ಲಿ ಕೊಳ್ಳುಬಾಕ ಸಂಸ್ಕøತಿ ಎನ್ನುತ್ತಾರೆ). ಈ ವಿಜ್ಞಾನ ತಂತ್ರಜ್ಞಾನಗಳ ಪ್ರಾಬಲ್ಯಗಳಿಂದ ಮೂಡಿ ಬಂದ ನೂತನ ಉದ್ಯಮಗಳು ಅನೇಕ. ಉದಾಹರಣೆಗೆ: ವಿಮಾನ, ಕ್ಷಿಪಣಿ, ರಾಕೆಟ್, ಮಾನವ ನಿರ್ಮಿತ ಉಪಗ್ರಹಗಳು, ಬಾಹ್ಯಾಕಾಶ ಸಂಶೋಧನೆ ಹಾಗೂ ಯಾತ್ರೆ.

ಲೋಹಗಳೊಡನೆ ಪೈಪೋಟಿ: ಸಮ್ಮಿಶ್ರ ವಸ್ತುಗಳ ಬಳಕೆ ಗಗನಮಟ್ಟಕ್ಕೇರುತ್ತಿರುವುದಕ್ಕೆ ಮತ್ತೊಂದು ಪ್ರಬಲವಾದ ಕಾರಣವಿದೆ. ಅದು ಸಮ್ಮಿಶ್ರ ವಸ್ತುಗಳು ಲೋಹಗಳೊಡನೆ ಬಳಕೆಯ ಸಾಧ್ಯತೆಯಲ್ಲಿ ಒಡ್ಡುತ್ತಿರುವ ಪೈಪೋಟಿ.

ಆಧುನಿಕ ಜೀವನ ಶೈಲಿಯಲ್ಲಿ ಇದುವರೆಗೆ ಉಪಯೋಗಿಸುತ್ತಿರುವ ಮುಖ್ಯ ಪದಾರ್ಥಗಳಲ್ಲಿ ಲೋಹಗಳದ್ದೇ ಶ್ರೇಷ್ಠ ಸ್ಥಾನ. ಉಕ್ಕು, ತಾಮ್ರ, ಹಿತ್ತಾಳೆ, ಅಲ್ಯೂಮಿನಿಯಮ್, ಚಿನ್ನ, ಬೆಳ್ಳಿಗಳಂತಹ ಲೋಹಗಳಂತೂ ನಮ್ಮ ಬದುಕಿನ ರೀತಿಯನ್ನೇ ಮಾರ್ಪಡಿಸಿವೆ; ನಮಗೆ ಜೀವನದಲ್ಲಿ ಅನೇಕ ಬಗೆಯ ಸೌಕರ್ಯಗಳನ್ನೂ ಒದಗಿಸಿವೆ. ಇದೆಲ್ಲ ಸಾಧ್ಯವಾಗಿರುವುದು ಲೋಹಗಳಲ್ಲಿರುವ ವಿಶೇಷ ಗುಣಗಳಿಂದಾಗಿ ಮತ್ತು ಅವುಗಳ ಬಗ್ಗೆ ನೂರಾರು ವರ್ಷಗಳಿಂದ ಸೀಮಿತವಾಗಿರುವ ಅನುಭವದಿಂದಾಗಿ. ಆದರೆ ಈ ಲೋಹಗಳಲ್ಲೂ ಕೆಲವು ಲೋಪದೋಷಗಳಿವೆ. ಲೋಹಗಳಿಗೆ ಸಾಂದ್ರತೆ ಹೆಚ್ಚು. ಲೋಹಗಳು ಪರಿಸರದ ಶಕ್ತಿಗಳನ್ನು ಎದುರಿಸುವ ಸಾಮಥ್ರ್ಯ ಪಡೆದಿಲ್ಲ. ಲೋಹವನ್ನು ಗಣಿಗಳಿಂದ ಪದಾರ್ಥವನ್ನಾಗಿ ಹೊರ ತೆಗೆದು, ಉಪಯೋಗಿಸುವ ವಸ್ತುವಾಗಿ ಮಾರ್ಪಾಡುವ ಕಾರ್ಯದಲ್ಲಿ ನಾನಾ ಹಂತಗಳಿವೆ, ಕಷ್ಟಗಳಿವೆ, ಖರ್ಚುಗಳಿವೆ. ಲೋಹಗಳಿಗೆ ವಿದ್ಯುದ್ವಾಹಕತೆ, ಅಧಿಕೋಷ್ಣವಾಹಕತೆಗಳಂತಹ ಗುಣಗಳಿದ್ದು, ಕೆಲವೊಮ್ಮೆ ಅವೇ ಬಳಕೆಗಳಿಗೆ ಅಡಚಣೆ ಆಗುವುದುಂಟು.

ಹೋಲಿಸಿ ನೋಡಿದಾಗ ಸಮ್ಮಿಶ್ರ ವಸ್ತುಗಳು ಕೆಲವು ಅಂಶಗಳಲ್ಲಿ ಲೋಹಗಳಿಗಿಂತ ಮೇಲ್ಮಟ್ಟ ಗುಣಗಳನ್ನು ಹೊಂದಿವೆ. ಅತಿ ಕಡಿಮೆ ಸಾಂದ್ರತೆ, ವಿದ್ಯುತ್, ಉಷ್ಣ, ಶಬ್ದಗಳನ್ನು ತಡೆಹಿಡಿಯುವ ಶಕ್ತಿ, ಗ್ರಾಹಕರಿಗೆ ಬೇಕಾದ ಆಕಾರ, ಬಣ್ಣಗಳಲ್ಲಿ ಸಿಗುವ ಸೌಲಭ್ಯ ಇತ್ಯಾದಿ. ಸಮ್ಮಿಶ್ರ ವಸ್ತುಗಳ ಅತಿ ಕಡಿಮೆ ಸಾಂದ್ರತೆ ಹೆಚ್ಚು ಗಮನಿಸಬೇಕಾದ ಅಂಶ.

ಯಾವುದೇ ಜಟಿಲ ವಸ್ತುವನ್ನು ಚಲಿಸುವಂತೆ ಮಾಡಲು ಅಥವಾ ಚಲನೆಯಲ್ಲಿರುವ ಯಾವುದೇ ವಸ್ತುವನ್ನು ನಿಶ್ಚಲ ಸ್ಥಿತಿಗೆ ತರುವುದಕ್ಕಾಗಲೀ ಶಕ್ತಿಯನ್ನು ಉಪಯೋಗಿಸಬೇಕಾಗುತ್ತದೆ. ಈ ಕಾರ್ಯದಲ್ಲಿ ವಸ್ತುವಿನ ತೂಕ ಕಡಿಮೆಯಿದ್ದಷ್ಟೂ ಉಪಯೋಗಿಸುವ ಶಕ್ತಿ ಕಡಿಮೆಯಾಗುತ್ತದೆ. ಎಂದೇ ನಮ್ಮ ಇಂದಿನ ಪ್ರಪಂಚ ಶಕ್ತಿ ಕ್ಷಾಮ ಪ್ರಪಂಚವಾಗಿದೆ, ಈ ಕಾರಣದಿಂದಾಗಿ ಸಮ್ಮಿಶ್ರಣ ವಸ್ತುಗಳ ಮೇಲೆ ನಮ್ಮ ತಾಂತ್ರಿಕ ತಜ್ಞರ ದೃಷ್ಟಿ ತೀವ್ರವಾಗಿ ಬಿದ್ದಿದೆ. ಪರಿಣಾಮವಾಗಿ ಬಾಹ್ಯಾಕಾಶ, ವಿಮಾನಯಾನ, ಸಮುದ್ರಯಾನ, ಭೂಮಿಯಾನ, ಯಂತ್ರ ಪ್ರಪಂಚ, ರಕ್ಷಣಾ ಕ್ಷೇತ್ರ, ಆರೋಗ್ಯ ಕ್ಷೇತ್ರ, ಮನೆ-ವಸತಿ, ಆಟ ಪಾಠ, ಮನರಂಜನೆ ಮುಂತಾದ ಎಲ್ಲ ಕ್ಷೇತ್ರಗಳಲ್ಲೂ ಸಮ್ಮಿಶ್ರ ವಸ್ತುಗಳ ಬಳಕೆ ವ್ಯಾಪಕವಾಗಿದೆ.

ಸಮ್ಮಿಶ್ರ ಪದಾರ್ಥಗಳ ಪಟ್ಟಿ; ಸಂಕ್ಷಿಪ್ತ ವಿವರ: ಸಮ್ಮಿಶ್ರ ವಸ್ತುಗಳನ್ನು ಇಂಗ್ಲಿಷ್‍ನಲ್ಲಿ ಕಾಂಪೋಸಿಟ್ ಪ್ರಾಡಕ್ಟ್ಸ್ ಕರೆಯುವ ವಾಡಿಕೆಯಿದೆ. ಈ ವಸ್ತುಗಳ ಇನ್ನೊಂದು ಹ್ರಸ್ವನಾಮ: ಎಫ್‍ಆರ್‍ಪಿ (ಫೈಬರ್ ರೀನ್‍ಫೋರ್ಸ್ಡ್ ಪ್ಲಾಸ್ಟಿಕ್). ಇದಕ್ಕೆ ಕಾರಣವೂ ಉಂಟು. ಸರ್ವಸಾಮಾನ್ಯವಾಗಿ ಆಧುನಿಕ ಸಮ್ಮಿಶ್ರ ವಸ್ತುಗಳ ತಯಾರಿಕೆಯಲ್ಲಿ ಎರಡು ಪದಾರ್ಥಗಳನ್ನು ಅನಿವಾರ್ಯವಾಗಿ ಉಪಯೋಗಿಸುತ್ತಾರೆ. ಒಂದು - ಎಳೆಗಳು, ನೂಲುಗಳು, ಅವುಗಳ ರೂಪಾಂತರಗಳು. ಇನ್ನೊಂದು - ಪ್ಲಾಸ್ಟಿಕ್‍ಗಳು, ಕೆಲವೊಮ್ಮೆ ಲೋಹಗಳು, ನೂಲು ನಾರುಗಳನ್ನು ಆವರಿಸುವ ಪ್ಲಾಸ್ಟಿಕ್ ಲೋಹಗಳಿಗೆ ಮ್ಯಾತೃಕೆ ಎಂದೂ ಪ್ಲಾಸ್ಟಿಕ್‍ಗಳಿಗೆ ರೆಸಿನ್ ಎಂಬ ಹೆಸರೂ ಬಳಕೆಯಲ್ಲಿವೆ. ಪ್ಲಾಸ್ಟಿಕ್ ಮಾಧ್ಯಮ-ಎಳೆ, ನೂಲುಗಳಿಂದ ಬಲಪಡಿಸಲಾಗಿರುವ ಕಾರಣದಿಂದಾಗಿ - `ಪ್ರಬಲಿತ ಪ್ಲಾಸ್ಟಿಕ್ ಆಗುತ್ತದೆ. ವಾಸ್ತವವಾಗಿ ಈ ಎರಡು ಮುಖ್ಯ ಪದಾರ್ಥಗಳಲ್ಲದೆ, ಮಿಶ್ರಣಕ್ಕೆ ಮೊದಲು ಇನ್ನೊಂದು ಪರಿಕರವೂ ಬೇಕು. ಅದು ಸಹಾಯಕ ಪದಾರ್ಥಗಳು, ಇವುಗಳಿಂದಾಗಿ ಮಿಶ್ರಣ ಕಾರ್ಯ ಪರಿಣಾಮಕಾರಿಯಾಗಿ ನಡೆಯುತ್ತದೆ ಅಲ್ಲದೆ ಸಮ್ಮಿಶ್ರ ವಸ್ತುವಿಗೆ ಹೊಸ ಗುಣಲಕ್ಷಣಗಳನ್ನೂ ದೊರಕಿಸಬಹುದು.

ಮುಂದೆ ಕಾಣುವ ಪಟ್ಟಿ 1 ರಲ್ಲಿ ಪ್ರಸ್ತುತ ಔಪಯೋಗಿಕ ಪದಾರ್ಥಗಳನ್ನು ತೋರಿಸಲಾಗಿದೆ. ಅವುಗಳನ್ನು ಮೂರು ವರ್ಗಗಳಾಗಿ ವಿಂಗಡಿಸಲಾಗಿದೆ. ವರ್ಗ ಒಂದು : ಎಳೆಗಳು, ನೂಲುಗಳು ಅವುಗಳಿಂದ ನೇಯ್ದ-ಹೊಸೆದ-ಹೆಣೆದ-ಬಟ್ಟೆಗಳು, ಪದರಗಳು. ವರ್ಗ ಎರಡು : ಪ್ಲಾಸ್ಟಿಕ್ (ರೆಸಿನ್) ಅಥವಾ ಲೋಹದ ಮಾಧ್ಯಮಗಳು (ಮಾತೃಕೆ) ವರ್ಗ ಮೂರು : ಸಹಾಯಕ ಪದಾರ್ಥಗಳು.

ಅನಂತರ ಕಾಣುವ ಪಟ್ಟಿ 2 ರಲ್ಲಿ, ಪಟ್ಟಿ 1 ರಲ್ಲಿ ಕಂಡು ಬಂದ ಕೆಲವು ಮುಖ್ಯ ಪದಾರ್ಥಗಳಿಗೆ ಮತ್ತಷ್ಟು ವಿವರಣೆಗಳನ್ನು ಕೊಡಲಾಗಿದೆ. ಪಟ್ಟಿ 3ರಲ್ಲಿ ಕೆಲವು ಮುಖ್ಯ ಎಳೆ ನೂಲುಗಳನ್ನು ಒಂದಕ್ಕೊಂದು ಹೋಲಿಸಲಾಗಿದೆ.

ಚಿತ್ರ 1 ರಲ್ಲಿ ಈ ಮುಖ್ಯ ಎಳೆ ನಾರುಗಳು ಮಾರುಕಟ್ಟೆಯಲ್ಲಿ ಯಾವ ಯಾವ ರೂಪದಲ್ಲಿ ಉದ್ಯಮಕ್ಕೆ ದೊರಕುತ್ತವೆ ಎಂಬುದನ್ನು ತೋರಿಸಲಾಗಿದೆ. ಪಟ್ಟಿ 4 ರಲ್ಲಿ ಹೆಚ್ಚು ಬಳಕೆಯಲ್ಲಿರುವ ಎರಡು ಪ್ರಮುಖ ಪ್ಲಾಸ್ಟಿಕ್ ಮಾಧ್ಯಮಗಳನ್ನು ಹೋಲಿಸಲಾಗಿದೆ.

ಪಟ್ಟಿ 1: ಸಾಧಾರಣ ಬಳಕೆಯಲ್ಲಿರುವ ಸಮ್ಮಿಶ್ರ ಪದಾರ್ಥಗಳು

ವರ್ಗ 1

ವರ್ಗ 2

ವರ್ಗ 3


ಎಳೆಗಳು, ನೂಲುಗಳಿಂದ ನೇಯ್ದ ಉತ್ಪನ್ನಗಳು ಇತರ ದೃಢೀಕರಿಸುವ ಪದಾರ್ಥಗಳು

ವರ್ಗ 1 ರ ಪದಾರ್ಥದೊಡನೆ ಸಮ್ಮಿಶ್ರವಾಗಿ ರಚನೆಯಾದ ವಸ್ತುವಿಗೆ ಆಕಾರ, ಸುರಕ್ಷತೆ, ಕೊಡುವ ಪದಾರ್ಥಗಳು

ಸಮ್ಮಿಶ್ರಣಕ್ಕೆ ಸಹಾಯಕರವಾಗುವ/ಮೆರಗು ಹಾಗೂ ವಿಶಿಷ್ಟ ಗುಣಕೊಡಬಲ್ಲ ಪದಾರ್ಥಗಳು

(1) ಗಾಜಿನ ನೂಲು ಎ- ಗಾಜಿನ ನೂಲು (ಅಧಿಕ ಕ್ಷಾರೀಯ) ಸಿ- ಗಾಜಿನ ನೂಲು (ರಾಸಾಯನಿಕ) ಡಿ,ಇ,ಕೆ- ಗಾಜಿನ ನೂಲು (ವೈದ್ಯುತ) ಎಸ್- ಗಾಜು (ಅಧಿಕ ತ್ರಾಣದ) ಆರ್- ಗಾಜು (ಪ್ರಬಲಿತ) 1) ಥರ್ಮೋಪ್ಲಾಸ್ಟಿಕ್‍ಗಳು ಪಾಲಿಅಲೆಫಿನ್ (ಪಿಪಿ)/ಪಾಲಿಅಮೈಡ್ಸ್ (ಪಿಎ66 /ಪಿಎ12) / ಪಾಲಿಎಸ್ಟರ್ಸ್(ಪಿಇಟಿ/ಪಿಬಿಟಿ/ಪಿಸಿ)/ ಪಾಲಿಎರಿಲಿನ್ ಸಲ್ಫೈಡ್ ಅಥವಾ ಈಥರ್ (ಪಿಪಿಎಸ್/ ಪಿಇಇಕೆ/ ಪಿಇಇಕೆಕೆ/ ಪಿಇಕೆಇಕೆಕೆ/ ಪಾಲಿ ಕೀಟೋನ್ / ಪಾಲಿ ಸಲ್ಫೋನ್ಸ್ (ಪಿಎಸ್‍ಯು/ಪಿಇಎಸ್) / ಪಾಲಿ ಅಮೈಡ್ಸ್-ಇಮೈಡ್ಸ್ (ಪಿಎಐ)/ ಪಾಲಿಇಮೈಡ್ಸ್ (ಪಿಇಐ/ಟಿಪಿಐ)

1) ತುಂಬಲು ಬಳಸುವ ಕಣರೂಪಿ ಪದಾರ್ಥಗಳು ಕ್ಯಾಲ್ಸಿಯಂಕಾರ್ಬೋನೇಟ್/ಫೇಲ್ಡ್‍ಸ್ಪಾರ್ಸ್/ನೆಪಲೈನ್/ಕೆಯೋಲೈನ್/ಕ್ಲೇ/ಸಿಲಿಕ/ ಆಂಟಿಮೊನಿ ಆಕ್ಸೈಡ್/ಆಂಟಿಮೊನಿ ಟ್ರೈಹೈಡ್ರೇಟ್/ಕಾರ್ಬನ್ ಬ್ಲಾಕ್ ಮತ್ತು ಗ್ರಾಫೈಟ್/ಮೈಕ/ಮೈಕ್ರೊಸ್ಫಿಯರ್ಸ್/ಟಾಲ್ಕ್


(2) ಕಾರ್ಬನ್, ಗ್ರಾಫೈಟ್ ನೂಲುಗಳು

ಮಂದವಾಗಿಸಲು ಬಳಸುವ ಪದಾರ್ಥಗಳು: ಮೆಗ್ನೀಸಿಯಮ್ ಆಕ್ಸೈಡ್, ಕ್ಯಾಲ್ಸಿಂiiï್ಮ ಆಕ್ಸೈಡ್, ಮೆಗ್ನೀಸಿಯಮ್ ಹೈಡ್ರಾಕ್ಸೈಡ್

(3) ಅರಾಮಿಡ್, ಪಾಲಿಎಥಿಲೀನ್ ನೂಲುಗಳು

ಉಷ್ಣವಾಹಕತೆಯನ್ನು ವರ್ಧಿಸಲು ಉಪಯೋಗಿಸುವ ಪದಾರ್ಥಗಳು: ಬೆರಿಲಿಯಮ್ ಆಕ್ಸೈಡ್/ಮೆಗ್ನೀಸಿಯಮ್ ಆಕ್ಸೈಡ್/ ಅಲ್ಯುಮಿನಿಯಮ್ ಆಕ್ಸೈಡ್

(4) ಬೋರಾನ್-ಹೈಸಿಲಿಕಾ-ಕ್ವಾಟ್ರ್ಸ್ ಮತ್ತು ಸೆರಾಮಿಕ್ ನೂಲುಗಳು (2) ಥರ್ಮೋಸೆಟ್ಟಿಂಗ್ ಪ್ಲಾಸ್ಟಿಕ್‍ಗಳು: ಎಫಾಕ್ಸೀಸ್/ವೈನ್‍ಲೈಎಸ್ಟರ್ಸ್/ ಪಾಲಿಎಸ್ಟರ್ಸ್ (ಅಸಂತೃಪ್ತ ಬಗೆಗಳು- ಆರ್ತೋಫ್ತಾಲಿಕ್/ಐಸ್ಫೋಫ್ತಾಲಿಕ್/ ಥೆರ್ಫೇಫ್ತಾಲಿಕ್/ಬಿಸ್‍ಫಿನಾಲ್ ಎ ಫ್ಯೂಮರೆಟ್/ಕ್ಲೋರೆನ್‍ಡಿಕ್/ ಡಿಸೈಕ್ಲೋಪೆನ್‍ಟಡೈನ್ ರೆಸಿನ್)/ ಪಾಲಿಇಮೈಡ್ಸ್ (ಅಧಿಕ ಉಷ್ಣತೆ)/ ಫಿನೊಲಿಕ್ಸ್ ಬಿಸ್‍ಮ್ಯಾಲಿನಿಮೈಡ್ (ಬಿಎಂಐ)/ ಸೈನೆಟ್ ಎಸ್ಟರ್ (ಸಿಇ)/ ಫಿನಾಲಿಕ್ ಟ್ರೈeóÉೈನ್

ವಿದ್ಯುದ್ವಾಹಕತೆಯನ್ನು ಹೆಚ್ಚಿಸಲು ಬಳಸುವ ಪದಾರ್ಥಗಳು: ಬೆಳ್ಳಿ ರೇಕುಗಳು/ ನಿಕಲ್ ಪುಡಿ/ ಅಭ್ರಕ ಗ್ರಾಫೈಟ್ ಕಣಗಳು


ಬಂಧಕ ಕಾಂತಗಳನ್ನು ರೂಪಿಸಲು ಉಪಯೋಗಿಸುವ ಪದಾರ್ಥಗಳು: ಫೆರೈಟ್ ಅಥವಾ ಸೆರಾಮಿಕ್ ಕಾಂತಿಯ ಪುಡಿ


ಮೇಲ್ಮೈ ಕರ್ಶಣಿಯನ್ನು ತಗ್ಗಿಸಲು ಉಪಯೋಗಿಸುವ ಪದಾರ್ಥಗಳು: ಟೆಫ್ಲಾನ್/ ಮಾಲಿಬ್ಡಿನಮ್ ಡೈಸಲ್ಫೈಡ್ ಗ್ರಾಫೈಟ್

(5) ಪಿಬಿಒ/ಪಿಬಿಐ ನೂಲುಗಳು ಪಾಲಿಬೆನ್ಸೋಕ್ಸಾeóÉೂೀಲ್/ ಪಾಲಿಬೆನ್ಸಿಮಿಡeóÉೂೀಲ್

ನೂಲು ನಾರಿಗಳು ಹಾಗೂ ಪ್ಲಾಸ್ಟಿಕ್‍ಗಳನ್ನು ಬಂಧನ ಮಾಡಲು ಉಪಯೋಗಿಸುವ ಪದಾರ್ಥಗಳು: ಕಪ್ಲಿಂಗ್ ಎಜೆಂಟ್ಸ್: ಸೈಲೆನ್ಸ್/ ಟೈಟನೇಟ್ಸ್/ ಜಿರ್‍ಕೊನೇಟ್ಸ್

(6) ನಡುದಿಂಡು ಪದಾರ್ಥಗಳು

                -ಮರ
        -ಗಡಸು ನೊರೆಗಳು 
        -ಜೇನುಗೂಡಾಕೃತಿಗಳು

ಅಂಟಿಕೊಳ್ಳುವ ಮಾಧ್ಯಮಗಳು.


ಇನ್‍ಹಿಬಿಟರ್ಸ್ (ಹ್ರೈಡ್ರೋಕ್ವಿನಾನ್ಸ್)


ಬಣ್ಣ ಮತ್ತು ವರ್ಣಕಗಳು

(7) ಸಂಕರ (ಹೈಬ್ರಿಡ್) ಎಳೆಗಳು, ನೂಲುಗಳು, ನಾರುಗಳು, ನೇಯ್ದ ಬಟ್ಟೆಗಳು 3) ಲೋಹಗಳ ಮಾತೃಕೆಗಳು ಅಲ್ಯುಮಿನಿಯಮ್ ಮಿಶ್ರ ಲೋಹ / ನಿಕಲ್/ ತಾಮ್ರ/ ಸೆರಾಮಿಕ್‍ಗಳು (ಆಕ್ಸೈಡ್‍ಗಳು, ಬೋರೈಡ್‍ಗಳು, ಕಾರ್ಬೈಡ್‍ಗಳು, ನೈಟ್ರೈಡ್‍ಗಳು, ಸಿಲಿಕೈಡ್‍ಗಳು)/ ಕಾರ್ಬೋನೇಷಿಯಸ್ ಮಾತೃಕೆಗಳು (ಕಾರ್ಬನ್ - ಕಾರ್ಬನ್ ಕಂಪೊಸೈಟ್ ತಯಾರಿಕೆಗೆ) ಅಗ್ನಿ ವಿಲಂಬಕಾರಿಗಳು: ಅಲ್ಯುಮಿನಿಯ ಟ್ರೈ ಹೈಡ್ರೇಟ್/ ಆಂಟಿಮೊನಿ ಆಕ್ಸೈಡ್


(8) ಪೂರ್ವ ಮಿಶ್ರಿತ ರೂಪಗಳು: ವರ್ಗ 1 ರ ಕೆಳಗೆ ಪಟ್ಟಿಮಾಡಿರುವ 1), 2), 3) ಮತ್ತು 7) ಸಂಖ್ಯೆಯಿರುವ ಪದಾರ್ಥಗಳು ವರ್ಗ 2 ರ ಕೆಳಗೆ ಕಾಣುವ ಕೆಲವು ಪದಾರ್ಥಗಳೊಂದಿಗೆ ಪೂರ್ವ ಮಿಶ್ರಿತ ಸ್ಥಿತಿಯಲ್ಲಿ ತಯಾರಿಸಿದ ರೂಪಗಳು, ಬಿಎಂಸಿ/ ಝಡ್‍ಎಂಸಿ/ ಎಸ್.ಎಂಸಿ/ ಸಿಐಸಿ/ ಎಲ್‍ಪಿಎಂಸಿ.

ಅತಿನೀಲ ಕಿರಣಗಳ ಹೀರಿಕೆಯ ವಸ್ತುಗಳು: ಟಿನಿಯೊರಿರ್/ ಬೆನ್eóÉೂಫಿನಾಲ್ಸ್, ಬೆನ್‍ಜೊಟ್ರೈಯeóÉೂಲ್ಸ್

(9) ನಿಸರ್ಗದಿಂದ ದೊರೆಯುವ ನಾರುಗಳು

ಲೇಪನಗಳು ಸ್ಥಾಯಿ ವಿದ್ಯುತ್ ಪ್ರತಿರೋಧಕಗಳು

(10) ಪ್ರಬಲಿತ ವ್ಹಿಸ್ಕರ್‍ಗಳು

ತೆಳು ಹೊದಿಕೆ: ವಸ್ತುವಿನ ಹೊರಭಾಗದಲ್ಲಿ ಚಿತ್ತಾರ, ಬಣ್ಣ ಆಕಾರಗಳನ್ನು ಮೂಡಿಸುವುದಕ್ಕೆ


ಮರಳು: ಪಾಲಿಮರ್ ಕಾಂಕ್ರಿಟ್ ಮಾಡಲು ಪಾಲಿಮರ್‍ನಲ್ಲಿ ತುಂಬುವ ಮಾಧ್ಯಮ


ಸವೆತ ನಿರೋಧಿಸುವ ಗುಣವನ್ನು ಹೆಚ್ಚಿಸುವುದಕ್ಕಾಗಿ: ಸಿಲಿಕಾನ್ ಕಾರ್ಬೈಡ್,


ಕಡಿಮೆ ಸಾಂದ್ರತೆಯುಳ್ಳ ತುಂಬುವ ಮಾಧ್ಯಮವಾಗಿ: ಮೈಕ್ರಾನ್ ಗಾತ್ರದ ಬೆಲೂನ್‍ಗಳು


ಪಟ್ಟಿ 2: ಪಟ್ಟಿ 1ರಲ್ಲಿ ಕಾಣುವ ಕೆಲವು ಮುಖ್ಯ ಪದಾರ್ಥಗಳ ಸಂಕ್ಷಿಪ್ತ ವಿವರ ಪದಾರ್ಥ ಸಂಕ್ಷಿಪ್ತ ವಿವರ

ಗಾಜಿನ ಎಳೆಗಳು: ಸಾಂದ್ರತೆಯ ವ್ಯಾಪ್ತಿ: 2.48g/ಛಿಛಿ-2.54g/ಛಿಛಿ ಎಳೆಯ ವ್ಯಾಸದ ವ್ಯಾಪ್ತಿ: 3.8-13 ಮೈಕ್ರಾನ್ಸ್ ಗಾಜನ್ನು ಕರಗಿಸಿ (≈ಖಿ 2600ಲಿಅ ಉಷ್ಣತೆಯಲ್ಲಿ) ಸಣ್ಣ ರಂಧ್ರಗಳ ಮೂಲಕ ಕಳಿಸಿದಾಗ ಮೊದಲು ಗಾಜಿನ ಎಳೆಗಳು ತಯಾರಾಗುತ್ತವೆ. ಗಾಜಿನಲ್ಲಿನ ಅಂಶಗಳು: ಸಿಲಿಕಾನ್, ಅಲ್ಯುಮಿನಾ, ಫೆರಾನ್ಸ್, ಕ್ಯಾಲ್ಸಿಯಮ್, ಮೆಗ್ನೀಸಿಯಂ, ಸೋಡಿಯಂ, ಪೊಟ್ಯಾಸಿಯಂ, ಬೋರಾನ್ ಮತ್ತು ಬೇರಿಯಂ ಇವುಗಳ ಆಕ್ಸೈಡುಗಳಾಗಿದ್ದು ಇವುಗಳ ಪ್ರಮಾಣಗಳ ಬದಲಾವಣೆಯಿಂದಾಗಿ ಎ,ಸಿ,ಇ,ಡಿ,ಆರ್,ಕೆ,ಟೊಳ್ಳು ಎಳೆಗಳೆಂದು ಕರೆಯಲ್ಪಡುತ್ತವೆ. ಎ ಮತ್ತು ಸಿ: ಅಧಿಕ ಕ್ಷಾರ ಮತ್ತು ರಾಸಾಯನಿಕ ನಿರೋಧಕತೆ ಉಳ್ಳದ್ದು. ಎಸ್: ಅಧಿಕ ಎಳೆತದ ಶಕ್ತಿಪಡೆದಿರುತ್ತವೆ ಇ: ಉತ್ತಮ ಅವಿದ್ಯುತ್‍ವಾಹಕ. ಟೊಳ್ಳು: ಟೊಳ್ಳಾಗಿರುವುದುರಿಂದ ಕಡಿಮೆ ಸಾಂದ್ರತೆಯಿರುತ್ತದೆ. ಈ ಎಲ್ಲ ಎಳೆಗಳು ತಯಾರಾದಾಗ ನಿರಂತರವಾಗಿ ಉದ್ದವಿರುತ್ತವೆ. ತಯಾರಿಸಿದಾಗ ಗಾಜಿನ ನೂಲಿನ ವ್ಯಾಸ 3.8-13 ಮೈಕ್ರಾನ್ಸ್ ವ್ಯಾಪ್ತಿಯಲ್ಲಿರುತ್ತದೆ. ಎಲ್ಲ ಎಳೆಗಳನ್ನೂ ಒಂದೇ ಅಕ್ಷದಲ್ಲಿ ಒಂದುಗೂಡಿಸಿದರೆ ಅವು ರೋವಿಂಗ್ಸ್ ಎಂದು ಕರೆಯಲ್ಪಡುತ್ತವೆ. ರೋವಿಂಗ್ಸ್‍ಗಳನ್ನು ಹೊಸೆದರೆ ಅವು ನೂಲಿನ ಎಳೆಗಳಾಗುತ್ತವೆ. ಈ ಸ್ಥಿತಿಯಲ್ಲಿ ಅವನ್ನು ನೇಯ್ಗೆ ಯಂತ್ರದಲ್ಲಿ ನೇಯ್ದು ನಾನಾ ಬಗೆಯ ಗಾಜಿನ ನೂಲಿನ ಬಟ್ಟೆ ಅಥವಾ ವಸ್ತ್ರಗಳನ್ನಾಗಿ ಮಾರ್ಪಡಿಸುತ್ತಾರೆ. ಈ ನೇಯ್ಗೆಯಲ್ಲಿ ನೂಲುಗಳನ್ನು ಘಿ-ಙ ದಿಕ್ಕಿನಲ್ಲಿ ಅಥವಾ ಘಿ,ಙ,Z ದಿಕ್ಕುಗಳಲ್ಲಿ ನೇಯ್ದಾಗ ಅವು 2-ಆ,. 3-ಆ ವಸ್ತ್ರಗಳಾಗುತ್ತವೆ. ಈ ವಸ್ತ್ರಗಳು ನಂತರ ಸಮ್ಮಿಶ್ರಣವಾದಾಗ ರಚನೆಯಾಗುವ ಸಮ್ಮಿಶ್ರ ವಸ್ತುವಿನ ಶಕ್ತಿ ಲಕ್ಷಣಗಳು 2ಆ, 3ಆ ವಸ್ತ್ರಗಳ ಶಕ್ತಿಗಳ ಪ್ರತಿಬಿಂಬವಾಗಿರುತ್ತವೆ. ಕೆಲವೊಮ್ಮೆ ಉದ್ದನೂಲುಗಳನ್ನು ಚಿಕ್ಕ ಚಿಕ್ಕದಾಗಿ ಕತ್ತರಿಸಿ, ನೇಯದೆಯೇ, ಚಾಪೆಯ ರೀತಿಯಲ್ಲಿ ಹರಡಿ ಉಪಯೋಗಿಸಬಹುದು. ಇದಕ್ಕೆ ಚಾಪ್ಡ್ ಸ್ಟ್ರಾಂಡ್ ಮ್ಯಾಟ್ ಎನ್ನುತ್ತಾರೆ. ಸಮ್ಮಿಶ್ರ ವಸ್ತುವಿನ ತಯಾರಿಕೆಯಲ್ಲಿ ಇವನ್ನು ಪದರ ಪದರವಾಗಿ ಜೋಡಿಸಿ, ಯಾವ ಒಂದೂ ನಿಖರ ಅಕ್ಷವನ್ನು ಆಧರಿಸದೆ ಉಪಯೋಗಿಸುತ್ತಾರೆ.

ಕಾರ್ಬನ್/ಗ್ರಾಫೈಟ್ ಎಳೆಗಳು:

ಸಾಂದ್ರತೆಯ ವ್ಯಾಪ್ತಿ : 1.7 g/ಛಿಛಿ-2.15 ಛಿಛಿ ಎಳೆಯ ವ್ಯಾಸದ ವ್ಯಾಪ್ತಿ: 10-15 ಮೈಕ್ರಾನುಗಳು ಎರಡು ರೀತಿಗಳಲ್ಲಿ ಈ ಎಳೆಗಳು ತಯಾರಾಗುತ್ತವೆ. ಒಂದು ಕಪ್ಪುರಾಳ ಮೂಲವಸ್ತುವಾಗಿ, ಇನ್ನೊಂದು ಪ್ಯಾನ್ (ಪಾಲಿಅಕ್ರಿಲೋನೈಟ್ರೈಲ್) ಮೂಲ ವಸ್ತುವಾಗಿ. ಈ ತಯಾರಿಕೆಯ ಕೊನೆಯ ಹಂತದಲ್ಲಿ ಸುಮಾರು 1500ಲಿಅ ಉಷ್ಣತೆಯಲ್ಲಿ ಕಾರ್ಬನ್ ಎಳೆ ಉತ್ಪನ್ನವಾಗುತ್ತದೆ. ಸುಮಾರು 2500ಲಿಅ ಉಷ್ಣತೆಯಲ್ಲಿ ಗ್ರಾಫೈಟ್ ಎಳೆ ಉತ್ಪನ್ನವಾಗುತ್ತದೆ ನೂಲಿನ ಔಪಯೋಗಿಕ ರೂಪಗಳು ಮೇಲೆ ಹೇಳಿದ ಗಾಜಿನ ರೀತಿಗಳಂತೆಯೇ ಇರುತ್ತವೆ.

ಅರಾಮಿಡ್ ಎಳೆಗಳು: ಸಾಂದ್ರತೆಯ ವ್ಯಾಪ್ತಿ : 1.38 g/ಛಿಛಿ-1.44 g/ಛಿಛಿ ಎಳೆಯ ವ್ಯಾಸದ ವ್ಯಾಪ್ತಿ: 6.6-15 ಮೈಕ್ರಾನುಗಳು ಇವಕ್ಕೆ “ಅರೋಮ್ಯಾಟಿಕ್ ಪಾಲಿಅಮೈಡ್” ಎಂದು ಹೆಸರು. ಇವಲ್ಲಿ ಎರಡು ವಿಧಗಳಿವೆ. ಪಾರಾಅರಾಮಿಡ್ ಮತ್ತು ಮೆಟಾಅರಾಮಿಡ್. ಪಾರಾಅರಾಮಿಡ್ ಅನ್ನು ಕೆವ್ಲಾರ್, ಟ್ವಾರಾನ್, ಟೆಕ್ನೊವ, ಅರ್ಮಸ್ ಮತ್ತು ಎಸ್‍ವಿಎಂ ಈ ಹೆಸರುಗಳಲ್ಲಿ ಮಾರಲಾಗುತ್ತಿದೆ. ಮೆಟಾಅರಾಮಿಡ್ ಅನ್ನು ನೊಮೆಕ್ಸ್, ಟೆಜಿನ್, ಕೊನೆಕ್ಸ್ ಈ ಹೆಸರುಗಳಲ್ಲಿ ಮಾರಲಾಗುತ್ತಿದೆ. ಈ ನೂಲುಗಳ ಉಪಯೋಗಗಳು ಮೇಲೆ ತಿಳಿಸಿದ ಗಾಜು, ಕಾರ್ಬನ್ ಎಳೆಗಳಂತೆಯೇ ಇರುತ್ತವೆ. ಇವುಗಳ ದ್ರವನ ಬಿಂದು: > 538ಲಿಅ (ಪಾರಾ ಅರಾಮಿಡ್) ಮತ್ತು >371ಲಿಅ (ಮೆಟಾಅರಾಮಿಡ್)

ಬೋರಾನ್, ಅಧಿಕಸಿಲಿಕಾ, ಕ್ವಾಟ್ರ್ಸ್ ಮತ್ತು ಸೆರಾಮಿಕ್ ಎಳೆಗಳು: ಸಾಂದ್ರತೆಯ ವ್ಯಾಪ್ತಿ 2.2-3.30 g/ಛಿಛಿ ಎಳೆಗಳ ವ್ಯಾಸ 3-140 ಮೈಕ್ರಾನ್‍ಗಳು

ಪ್ರಬಲಿತ ವ್ಹಿಸ್ಕರ್

ಈ ನೂಲಿನ ರಾಸಾಯನಿಕ ನಾಮಗಳು: ಅಧಿಕ ಸಿಲಿಕ (Sio2>99.7%)/ಬೆಸೆದ ಬೆಣಚು(Sio2>99.9%)/ ಬೋರಾನ್/ಸಿಲಿಕಾನ್ ಕಾರ್ಬೈಡ್/ಸಿಲಿಕಾನ್ ಕಾರ್ಬೊನೈಟ್ರೈಡ್/ಟೈಟಾನಿಯಮ್ ಕಾರ್ಬೈಡ್. ಇವುಗಳ ತಯಾರಿಕೆಯ ರೀತಿಗಳು: ಕರಗಿಸಿ ಎಳೆ ಮಾಡುವುದು, ಬಾಷ್ಪ ಸಂಚಯನ ಮತ್ತು ರಾಸಾಯನಿಕ ಪ್ರಕ್ರಿಯೆ. ಈ ನೂಲುಗಳನ್ನು ತೀವ್ರ ಏರಿದ ಉಷ್ಣತೆಯಲ್ಲಿ (≈ 1200ಲಿಅ) ಉಪಯೋಗಿಸಬಹುದು. ಈ ನೂಲುಗಳು ನಿರಂತರವಾಗಿ ಉದ್ದಕ್ಕಿದ್ದು ಕತ್ತರಿಸಿದ ಚಿಕ್ಕ ಚಿಕ್ಕ ಉದ್ದದಲ್ಲೂ ದೊರೆಯುತ್ತವೆ ಈ ನೂಲಿನ ಒಂದು ರೂಪ : ವ್ಹಿಸ್ಕರ್‍ಗಳು, ಈ ರೂಪದಲ್ಲಿ ನೂಲಿನ ಸೂಕ್ಷ್ಮ ರಚನೆಗಳು ಬಿಡಿ ಸ್ಫಟಿಕದಿಂದಾಗಿರುತ್ತದೆ.

ವಿಲಂಬಿತ ಪಾಲಿ ಎಥಿಲೀನ್ ಎಳೆಗಳು: ಸಾಂದ್ರತೆಯ ವ್ಯಾಪ್ತಿ: 0.96-0.97 g/ಛಿಛಿ ವ್ಯಾಸದ ವ್ಯಾಪ್ತಿ: 23-38 ಮೈಕ್ರಾನ್‍ಗಳು

“ಜೆಲ್-ಸ್ಪಿನ್ನಿಂಗ್” ಎಂಬ ನಾಮಾಂಕಿತ ಪದ್ಧತಿಯಲ್ಲಿ ತಯಾರಾಗುವ ಈ ಪಾಲಿಥೀನ್ ನೂಲುಗಳಿಗೆ ಅಧಿಕ ತ್ರಾಣ/ಅಧಿಕ ಮಾಡ್ಯುಲಸ್ ಲಕ್ಷಣಗಳಿದ್ದು ಇವುಗಳ ಉಪಯೋಗಗಳು ವಿಶಿಷ್ಟ ಕ್ಷೇತ್ರದಲ್ಲಿ ಕಂಡು ಬರುತ್ತಿವೆ. ಈ ನೂಲುಗಳಿಂದ ತಯಾರಾದ ಸಮ್ಮಿಶ್ರ ವಸ್ತುಗಳಿಗೆ ತಾಡನಾ ಶಕ್ತಿ ಹೀರಿಕೆ ಲಕ್ಷಣ ಅಧಿಕವಾಗಿದ್ದು, ಅದಕ್ಕಾಗಿಯೆ ಅವುಗಳನ್ನು ಗುಂಡು ನಿರೋಧಕ ಕವಚದಲ್ಲಿ  ಅಳವಡಿಸಲಾಗುತ್ತಿದೆ. ಆದರೆ ಇವುಗಳ ದ್ರವನ ಬಿಂದು ಕಡಿಮೆಯಾಗಿರುವುದರಿಂದಾಗಿ (≈147ಲಿಅ) ಹೆಚ್ಚು ಉಷ್ಣತೆಯ ಪರಿಸರದಲ್ಲಿ ಉಪಯೋಗಿಸಲು ಸಾಧ್ಯವಿಲ್ಲ. ದೊರಕುವ ರೀತಿಗಳು: ಹೊಸೆಯದೇ ಒಂದೇ ದಿಕ್ಕಿನಲ್ಲಿ ಬಳಸಿರುವ ನೂಲುಗಳ ಪದರಗಳು, ನಿರ್ದಿಷ್ಟ ಉದ್ದದಲ್ಲಿ ಕತ್ತರಿಸಿದ ನೂಲುಗಳು, ನೇಯ್ದ ಪದರ/ವಸ್ತ್ರಗಳು

ಎಳೆ ತುಂಬಿದ ಥರ್ಮೋಪ್ಲಾಸ್ಟಿಕ್‍ಗಳು: ಇವು ಉತ್ಕøಷ್ಟ ಸಾಮಥ್ರ್ಯದ ಅಥವಾ ವಿಶಿಷ್ಟ ಪ್ಲಾಸ್ಟಿಕ್ ಮತ್ತು ಗಾಜು/ಕಾರ್ಬನ್/ನೈಸರ್ಗಿಕ ನಾರು ನೂಲುರೂಪಗಳು ಸೇರಿರುವ ಪೂರ್ವ ಮಿಶ್ರಿತ ಪದಾರ್ಥಗಳು. ಪುಡಿ, ಹಲಗೆ, ಗೋಲಿಗಳ ರೂಪದಲ್ಲಿ ಮಾರಾಟ ಮಾಡಲಾಗುತ್ತದೆ. ನೇರವಾಗಿ ಪರಿವರ್ತನಾ ಯಂತ್ರಗಳಿಗೆ ಊಡಿಸುವ ಪದಾರ್ಥಗಳಾಗುತ್ತವೆ.

ಪಿಬಿಐ (ಪಾಲಿಬೆನ್‍ಜಿóೀಮಿಡeóÉೂೀಲ್)/ ಪಿಬಿಒ (ಪಾಲಿಬೆನ್eóÁಕ್ಸಾeóÉೂೀಲ್)/ ಅರೊಮ್ಯಾಟಿಕ್ ಪಾಲಿಎಸ್ಟರ್ ಎಳೆಗಳು: ಸಾಂದ್ರತೆಯ ವ್ಯಾಪ್ತಿ : 1.41-1.56 g/ಛಿಛಿ ಎಳೆಗಳ ವ್ಯಾಸ ≈23 ಮೈಕ್ರಾನ್‍ಗಳು ಇವುಗಳ ಲಾಕ್ಷಣಿಕ ಗುಣಗಳು ಅರಾಮಿಡ್ ನೂಲುಗಳಿಗಿಂತ ಹೆಚ್ಚಾಗಿದ್ದರೂ, ಬೆಲೆ ತುಂಬ ಅಧಿಕವಾಗಿರುವುದರಿಂದ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಉಪಯೋಗಿಸಲಾಗುತ್ತಿದೆ.

ನಡುದಿಂಡು ಪದಾರ್ಥಗಳು:

       -ಮರ
       -ಗಡುಸು ನೊರೆಗಳು
       -ಜೇನುಗೂಡಾಕೃತಿಗಳು

ಮೂರು ಪದಾರ್ಥಗಳ ಒಂದುಗೂಡಿಕೆಯಿಂದ ನಿರ್ಮಾಣವಾಗುವ ಹಲಗೆಗಳನ್ನು ಸ್ಯಾಂಡ್‍ವಿಚ್ ಪ್ಯಾನಲ್ ಎಂದು ಕರೆಯಲಾಗುತ್ತದೆ. ಈ ವಸ್ತು ಹೆಚ್ಚಿನ ದಾಢ್ರ್ಯ (ಸ್ಟಿಫ್‍ನೆಸ್) ಪಡೆದಿದ್ದರೂ ಹಗುರವಾಗಿರುವುದರಿಂದ ಇಂಜಿನಿಯರುಗಳು ನಿರ್ಮಾಣ ಕ್ಷೇತ್ರದಲ್ಲಿ, ಬಾಹ್ಯಾಕಾಶ ಕ್ಷೇತ್ರದಲ್ಲಿ, ಭೂಸಾರಿಗೆ ಮತ್ತಿತರ ಕ್ಷೇತ್ರದಲ್ಲಿ, ಈ ಹಲಗೆಗಳನ್ನು ಅಧಿಕ ಪ್ರಮಾಣದಲ್ಲಿ ಉಪಯೋಗಿಸುತ್ತಿದ್ದಾರೆ. ಈ ಪದಾರ್ಥಗಳಲ್ಲಿ, ನಡುದಿಂಡು (ಕೋರ್ ) ಮುಖ್ಯ ಭಾಗ. ಮರ: ಕಡಿಮೆ ತೂಕದ “ಬಾಲ್ಸಾ”, ಅಥವಾ ಮರದ ಹಲಗೆ, ಅಥವಾ ಪ್ಲೈವುಡ್ ಗಡಸುನೊರೆಗಳು: ಪಾಲಿಸ್ಟೈರೀನ್/ ಪಿವಿಸಿ ಆಧಾರಿತ ಪಾಲಿಯೂರಿಥೇನ್/ ಎಬಿಎಸ್ ಎಪಾಕ್ಸಿಸ್/ ಫಿನೊಲಿಕ್ಸ್/ ಪಾಲಿಪ್ರೊಪಿಲೀನ್/ ಸೆಲ್ಯುಲೋಸ್ ಆಸಿಟೇಟ್ ಇವುಗಳಿಂದ ತಯಾರಿಸಲಾಗುತ್ತವೆ. ಜೇನುಗೂಡಾಕೃತಿಗಳು: ಇವು ಅಲ್ಯೂಮಿನಿಯಮ್ ಹಾಳೆಗಳಿಂದ/ ಕಾಗದ/ ಮೆಟಾಅರಾಮಿಡ್/ ಗಾಜು-ಫಿನಾಲಿಕ್ ಸಮ್ಮಿಶ್ರಣ ವಸ್ತುಗಳಿಂದ ಮಾಡಲಾಗಿವೆ.

ಸಂಯೋಜನಾ ಪದಾರ್ಥಗಳು ಅಥವಾ ಅಚ್ಚಾಗಲು ಮುನ್ನಿನ ಪದಾರ್ಥಗಳು ಇವುಗಳನ್ನು ಬಿಎಂಸಿ (ಬಲ್ಕ್ ಮೋಲ್ಡಿಂಗ್ ಕಾಂಪೌಂಡ್), ಝಡ್‍ಎಂಸಿ (ಝಡ್-ಮೋಲ್ಡಿಂಗ್ ಕಾಂಪೌಂಡ್), ಟಿಎಂಸಿ (ಥಿಕ್ ಮೋಲ್ಡಿಂಗ್ ಕಾಂಪೌಂಡ್), ಎಸ್‍ಎಂಸಿ (ಶೀಟ್ ಮೋಲ್ಡಿಂಗ್ ಕಾಂಪೌಂಡ್), ಎಲ್‍ಪಿಎಂಸಿ (ಲೋ ಪ್ರೇಶರ್ ಮೋಲ್ಡಿಂಗ್ ಕಾಂಪೌಂಡ್), ಸಿಎಂಸಿ (ಕಂಟ್ಯೂಯಸ್ ಇಂಪ್ರೆಗ್‍ನೆಟೇಡ್ ಕಾಂಪೌಂಡ್) ಉದಾಹರಣೆಗಳು. ಇವುಗಳು ಕಮ್ಮಿ ಉದ್ದದ ಗಾಜಿನ ನೂಲು, ಪೇಸ್ಟ್, ಥರ್ಮೋಸೆಟ್ಟಿಂಗ್ ರೆಸಿನ್, ಇನಿಷಿಯೇಟರ್, ಇನ್‍ಹಿಬಿಟರ್, ಮೋಲ್ಡ್ ರಿಲೀಸ್, ತುಂಬಕ ವಸ್ತುಗಳು ಇತ್ಯಾದಿ ಪದಾರ್ಥಗಳಿಂದ ಪೂರ್ವ ಮಿಶ್ರಿತ ರೀತಿಯಲ್ಲಿ ದೊರಕುತ್ತವೆ (ಅಂದರೆ ವರ್ಗ 1+ ವರ್ಗ 2+ ವರ್ಗ 3- ಪಟ್ಟಿ 1ರಲ್ಲಿ). ನೇರವಾಗಿ ಈ ಪದಾರ್ಥವನ್ನು ಒತ್ತುವ ಅಚ್ಚುಗಳಲ್ಲಿಟ್ಟು, ಒತ್ತಡ (1.38-6.9ಒಠಿಚಿ) ಹಾಗೂ ತಾಪಮಾನಕ್ಕೆ (125ಲಿ-160ಲಿಅ) ಒಳಪಡಿಸಿದರೆ ಶೀಘ್ರ ಸಮಯದಲ್ಲಿ ಸಮ್ಮಿಶ್ರಣ ವಸ್ತುಗಳನ್ನು ತಯಾರಿಸಬಹುದು.

ಪ್ರಿಪ್ರೆಗ್‍ಗಳು ಪ್ರಿಪ್ರೆಗ್‍ಗಳು ನೂಲು ಅಥವಾ ನೇಯ್ದ ಬಟ್ಟೆಗಳನ್ನು ಪ್ಲಾಸ್ಟಿಕ್‍ನೊಂದಿಗೆ ಮೊದಲೇ ಸೇರಿಸಿದಾಗ ಕೊಡುವ ರೂಪಗಳು. ಮೇಲೆ ತಿಳಿಸಿದ ಸಂಯೋಜನಾ ಪದಾರ್ಥಗಳಿಗೆ ಹೋಲಿಸಿದರೆ ಪ್ರಿಪ್ರೆಗ್‍ನಲ್ಲಿ ನೂಲಿನ ಅಂಶ (ತೂಕದಲ್ಲಿ) ಹೆಚ್ಚಿದ್ದು, ಬಟ್ಟೆ ಅಥವಾ ಟೇಪ್ ಆಗಿ ದೊರೆಯುತ್ತದೆ. ಸಾಧಾರಣವಾಗಿ ಉಪಯೋಗಿಸುವ ಪ್ಲಾಸ್ಟಿಕ್‍ಗಳು; ಎಪಾಕ್ಸಿ, ಪಾಲಿಎಸ್ಟರ್ ಥರ್ಮೋಸೆಟ್ಟಿಂಗ್ ಜಾತಿಯವು. ನೂಲು/ಬಟ್ಟೆ: ಗಾಜು, ಅರಾಮಿಡ್, ಕಾರ್ಬನ್ ಮತ್ತು ಬೋರಾನ್ ಆಗಿರಬಹುದು. ಪ್ರಿಪ್ರೆಗ್ ತಯಾರಿಕೆಯಲ್ಲಿ ಎರಡು ಪದಾರ್ಥಗಳನ್ನು ಅದಕ್ಕಾಗಿ ಮಾಡಿದ ಯಂತ್ರವೊಂದರಲ್ಲಿ ಒಂದು ಗೂಡಿಸಿ ತಾಪಮಾನ ಹೆಚ್ಚಿಸುತ್ತಾರೆ. ಆಗ ಪ್ಲಾಸ್ಟಿಕ್ ಅಣುಗಳು ಅಡ್ಡಡ್ಡವಾಗಿ ಹೆಣೆಯಲು ತೊಡಗಿದಾಗ (ಕ್ರಾಸ್ ಲಿಂಕಿಂಗ್) ಆ ಘಟ್ಟದಲ್ಲಿ ಅಧಿಕ ತಾಪಮಾನವನ್ನು ತಡೆಗಟ್ಟಿ ನಂತರ ಪದಾರ್ಥವನ್ನು ತೀವ್ರ ಕೆಳಗಿನ ತಾಪಮಾನದಲ್ಲಿ (-18ಲಿಅ) ಕಾದಿಡಲಾಗುತ್ತದೆ. ಈ ಕ್ರಿಯೆಯಿಂದಾಗಿ ಪೂರ್ಣವಾಗಿ ಅಡ್ಡಹೆಣಿಗೆಯನ್ನು ರೂಪಿಸದೆ ಪ್ಲಾಸ್ಟಿಕ್ ರಟ್ಟಿನಂತೆ ಲಕ್ಷಣ ಪಡೆಯುತ್ತದೆ. ಪ್ರಿಪ್ರೆಗ್‍ನ್ನು ಮಾರುವುದು ಹೀಗೆಯೇ. ಕೊಂಡನಂತರ ರಚನಾ ಸಮಯದಲ್ಲಿ ಈ ರಟ್ಟಿನ ಸ್ಥಿತಿಯಲ್ಲಿರುವ ಪ್ರಿಪ್ರೆಗ್ ಪದರಗಳನ್ನು ಒತ್ತಡ ಮತ್ತು ತಾಪಮಾನದೊಂದಿಗೆ ಅಮುಕಿದಾಗ ವಸ್ತುವಾಗಿ ಪರಿವರ್ತನೆಯಾಗುತ್ತದೆ.

ಥರ್ಮೊಪ್ಲಾಸ್ಟಿಕ್‍ಗಳು ಸಮ್ಮಿಶ್ರದಲ್ಲಿ ಇದೊಂದು ಮುಖ್ಯ ಪರಿಕರ. ಪಾಲಿಮರ್ ಜಾತಿಗೆ ಸೇರಿದ ಈ ಪ್ಲಾಸ್ಟಿಕ್ ಕಾಸಿದಾಗ ಮೆತ್ತಗಾಗಿ, ತಣ್ಣಗಾದ ಮೇಲೆ ಯಾವ ರೂಪವನ್ನಾದರೂ ಪಡೆಯಬಹುದು. ನಂತರ ಎಷ್ಟು ಬಾರಿ ಕಾಸಿದರೂ, ತಣ್ಣಗಾದ ಮೇಲೆ ತಮ್ಮ ಮೊದಲಿನ ಲಕ್ಷಣಗಳನ್ನೇ ಪಡೆಯುತ್ತವೆ. ಇದಕ್ಕೆ ಕಾರಣ ಅವುಗಳಲ್ಲಿರುವ ಅಣುಗಳ ಜೋಡಣೆಗಳು. ಜೋಡಣೆಗಳು ಉದ್ದುದ್ದವಾಗಿದ್ದು ಅಣು ಸಂಕೋಲೆಗಳಲ್ಲಿ ಹಿಡಿತ (ವ್ಯಾಂಡರ್‍ವಾಲ್ ಬಲ) ಬಹಳ ಕೆಳ ಮಟ್ಟದ್ದಾಗಿರುತ್ತದೆ. ಇಂತಹ ಪಾಲಿಮರ್‍ಗಳನ್ನು ಕಾಸಿದಾಗ ಈ ಹಿಡಿತದಿಂದ ಹೊರಬಂದು, ಅಣು ಸಂಕೋಲೆಗಳು ಒಂದರ ಮೇಲೊಂದು ಜಾರಿ, ದ್ರವದಂತೆ ಹರಿಯುತ್ತವೆ. ಈ ಲಕ್ಷಣದಿಂದಾಗಿ ಥರ್ಮೋಪ್ಲಾಸ್ಟಿಕ್‍ನಲ್ಲಿ ಮಾಡಿದ ಉಪಯೋಗಿಸಿದ ವಸ್ತುವನ್ನು ಕಾಸಿ, ಕರಗಿಸಿ, ಹೊಸ ರೀತಿಯಲ್ಲಿ ಇನ್ನೊಂದು ವಸ್ತುವನ್ನಾಗಿ ರಚಿಸಬಹುದು (ಪುನ: ಚಕ್ರೀಯತೆ)

ಥರ್ಮೋಸೆಟ್ಟಿಂಗ್ ಪ್ಲಾಸ್ಟಿಕ್‍ಗಳು ಇವು ಕೂಡ ಪಾಲಿಮರ್ ಜಾತಿಗೆ ಸೇರಿದ ಪದಾರ್ಥಗಳೇ. ಆದರೆ ಇವಲ್ಲಿ ಅಣು ಜೋಡಣೆಗಳು ಉದ್ದುದ್ದಕ್ಕೆ ಇದ್ದು ನಂತರ ಈ ಜೋಡಣೆಗಳು ಅಡ್ಡಡ್ಡಾಗಿ ಹೆಣೆಯಲ್ಪಡುತ್ತವೆ. ಇದರಿಂದಾಗಿ ಅವು ಗಟ್ಟಿಯಾದ ಆಕಾರವನ್ನು ಪಡೆಯುತ್ತವೆ. ಅಡ್ಡ ಹೆಣಿಗೆ ಮಾಡುವ ಕಾರ್ಯಕ್ಕೆ ಕ್ಯೂರಿಂಗ್ ಅಥವಾ ಸೆಟ್ಟಿಂಗ್ ಎನ್ನುತ್ತಾರೆ. ಕೆಲವು ಥರ್ಮೋಸೆಟ್ಟಿಂಗ್ ಪ್ಲಾಸ್ಟಿಕ್‍ಗಳಿಗೆ ಕ್ಯೂರಿಂಗ್ ಆಗಲು ತಾಪಮಾನ ಹೆಚ್ಚಿಸಬೇಕು. ಮತ್ತೆ ಕೆಲವು ಕೊಠಡಿ ಉಷ್ಣತೆಯಲ್ಲಿ ವೇಗವರ್ಧಕಗಳ ಸಹಾಯದಿಂದ ಕ್ಯೂರ್ ಆಗುತ್ತವೆ. ಈ ಪೂರ್ಣ ಕ್ರಿಯೆಯನ್ನು ಪಾಲಿಮರೀಕರಣ ಅನ್ನುತ್ತಾರೆ. ಇದಾದ ನಂತರ ಪ್ಲಾಸ್ಟಿಕ್ಕನ್ನು ಕಾಸಿದರೆ ಅದು ಕರಗುವುದಿಲ್ಲ; ಆಕಾರವನ್ನೂ ಬದಲಾಯಿಸುವುದಿಲ್ಲ. ಪಾಲಿಮರೀಕರಣ ಕ್ರಿಯೆಗಳು ಸಾಧಾರಣವಾಗಿ ಬಹಿರುಷ್ಣಕವಾಗಿದ್ದು ಹೊರಬರುವ ಉಷ್ಣಾಂಶವು ಕ್ಯೂರಿಂಗ್‍ಗೆ ಸಹಕಾರ ಮಾಡುತ್ತದೆ.


ಪಟ್ಟಿ 3: ಕೆಲವು ಪ್ರಮುಖ ಎಳೆ ನೂಲುಗಳ ಲಕ್ಷಣಗಳ ಹೋಲಿಕೆ ನೂಲು ಸಾಂದ್ರತೆ


g/ಛಿಛಿ ಯಂಗ್ಸ್ ಮಾಡ್ಯುಲಸ್


ಉಠಿಚಿ ವ್ಯಾಕುಚಿತ ತ್ರಾಣ

ಉಠಿಚಿ ವ್ಯಾಸ


μ ಒ ಗರಿಷ್ಟ ಔಪಯೋಗಿಕ ತಾಪಮಾನ ಲಿಅ

ಇ-ಗಾಜು 2.5-2.6 69-72 1.7-3.5 5-25 350

ಎಸ್-ಗಾಜು 2.48 85 4.8 5-15 300

ಬೋರಾನ್ 2.4-2.6 365-440 2.3-2.8 33-140 2000

ಕಾರ್ಬನ್‍ಹೈಮಾಡ್ಯುಲಸ್ 1.96 517 1.86 8-40 600

ಕಾರ್ಬನ್ ಹೈಸ್ಟ್ರೆಂತ್ 1.80 295 5.60 5.5 500

ಸಿಲಿಕಾನ್‍ಕಾರ್ಬೈಡ್(Siಅ) 2.80 45-480 0.3-4.9 10-12 1300

ಂಟ2ಔ3 3.25 210 1.8 17 1250

Sio2 2.2-2.5 75 5.9 1-3 1100

ನೈಲಾನ್ 66 1.2 <5 1 12 150

ಕೆವ್ಲಾರ್-49 (ಅರಾಮಿಡ್) 1.45 135 3 25 250

ಸ್ಪೆಕ್ಟ್ರಾ- 900 (ಎಚ್‍ಡಿಪಿಇ) 0.97 117 3 38 120

ವ್ಹಿಸ್ಕರ್

ಸಿಲಿಕಾನ್ ಕಾರ್ಬೈಡ್ 3.15 485

35 3 2316

ಸಿಲಿಕಾನ್ ನೈಟ್ರೈಡ್ 3.2 380 11 3 1899


ಪಟ್ಟಿ 4: ಪಾಲಿಮರೀಕರಣವಾದ ಕೆಲವು ಥರ್ಮೋಸೆಟ್ ರೆಸಿನ್‍ಗಳ ಗುಣ-ಹೋಲಿಕೆ ಭೌತ ಗುಣಗಳು ಘಟಕ ಪಾಲಿಎಸ್ಟರ್ ರೆಸಿನ್ ಫಿನಾಲಿಕ್ ರೆಸಿನ್ ಎಪಾಕ್ಸಿ ರೆಸಿನ್ ಎಪಾಕ್ಸಿ ನೊವಾಲಾಕ್ ರೆಸಿನ್ ಪಾಲಿಇಮೈಡ್

ಸಾಂದ್ರತೆ g/ಛಿm3 1.1-1.46 1.3-1.32 1.15-1.35 1.15-1.35 1.35-1.45

ಬಾಗುವ ತ್ರಾಣ ಓ/mm3 80-150 77-120 60-180 60-80 ~100

ಸಂಪೀಡನ ತ್ರಾಣ ಓ/mm2 90-180 85-105 10-200 90-200 >170

ವ್ಯಾಕುಚಿತ ತ್ರಾಣ ಓ/mm2 35-95 42-63 40-140 40-140 ~75

ಗರಿಷ್ಟ ಕೃಷ್ಟಿ % 20-40 15-20 20-100 20-100 10-70

ಟೆನ್‍ಸೈಲ್ ಮಾಡ್ಯುಲಸ್ ಓ/mm2 1500-2000 2800-3500 3000-4500 3000-4500


ಕಂಪ್ರೆಂಷನ್ ಮಾಡ್ಯುಲಸ್ ಓ/mm2 2000-4500


3200

ಶಿಯರ್ ಮಾಡ್ಯುಲಸ್ ಓ/mm2 1400-1600

1300

1200

ಪಾಯಿಸ್ಸಾನ್ ನಿಷ್ಪತ್ತಿ


0.35-0.4

0.33

ಔಷ್ಣೀನೀಯ ವ್ಯಾಕೋಚನ 10-6m/m.ಞ 80-150 80 60 ~60 50-65

ಉಷ್ಣ ಸಹಿಷ್ಣತೆ ಲಿಅ 40-130 200-250 40-180 160-300 280-450


ಚಿತ್ರ-1


ಚಿತ್ರ 1: ಮಾರುಕಟ್ಟೆಯಲ್ಲಿ ದೊರೆಯುವ ನೂಲು ನಾರುಗಳು ರೂಪಗಳು ವಿವರಣೆ: 1. ಎಳೆ : ಈ ಘಟ್ಟದಲ್ಲಿ ಅಕ್ಷದಲ್ಲಿ ಎಳೆಗಳಿಗೆ ಗರಿಷ್ಠ ಶಕ್ತಿಯಿರುತ್ತದೆ. 2 ಎಳೆಗಳ ಗುಂಪು (ಟೋ/ಸ್ಟ್ರಾಂಡ್ಸ್/ರೋವಿಂಗ್ಸ್) 3. ನೂಲು : ಈ ಘಟ್ಟದಲ್ಲಿ ಎಳೆಗಳ ಗುಂಪನ್ನು ಹೊಸೆಯುವುದರಿಂದ ಅಕ್ಷಾವಲಂಬಿತ ಶಕ್ತಿ ಸ್ವಲ್ಪ ಕಮ್ಮಿಯಾಗುತ್ತದೆ. 4. ನೂಲುಗಳನ್ನು ನೇಯಿಗೆ ಯಂತ್ರದಲ್ಲಿ ಬಟ್ಟೆ, ಪದರಗಳನ್ನಾಗಿ ಮಾಡಿದಾಗ ಕಾಣುವ ರೂಪಗಳು. ಈ ಬಟ್ಟೆಯ ಎರಡು ಅಕ್ಷಗಳನ್ನು, ವಾರ್ಪ್ (ತಿಚಿಡಿಠಿ) ಮತ್ತು ವೆಫ್ಟ್ (ತಿeಜಿಣ) ಎಂದು ಕರೆಯುತ್ತಾರೆ- 2ಆ. ಮೂರನೇ ಅಕ್ಷದಲ್ಲೂ ನೂಲು ನೇಯ್ದಾಗ, ಬಟ್ಟೆ ಮೂರು ಆಯಾಮಗಳನ್ನು ಪಡೆದುಕೊಳ್ಳುತ್ತದೆ-3ಆ. ಒಂದು ದಿಕ್ಕಿನ ನೂಲುಗಳು ಇನ್ನೊಂದು ದಿಕ್ಕಿನ ನೂಲುಗಳನ್ನು ನಾನಾ ರೀತಿಯಲ್ಲಿ ಅಡ್ಡಹಾಯಬಹುದು. ಈ ರೂಪಗಳಿಗೆ ಸ್ಟೈಲ್ಸ್ (Sಣಥಿಟes) ಅನ್ನುತ್ತಾರೆ (ಉದಾ: ಠಿಟಚಿiಟಿ ತಿeಚಿve, sಚಿಣiಟಿ ತಿeಚಿve, 8-ಊ ಊಚಿಡಿಟಿess ತಿeಚಿve ಇತ್ಯಾದಿ) 7: ಕತ್ತರಿಸಿದ ಎಳೆಗಳ ಗುಂಪಿನ ಚೂರುಗಳನ್ನು ಅಂಟು ಮಾಧ್ಯಮದೊಡನೆ ಬೆರೆಸಿ ಮಾಡುವ ಚಾಪೆಗಳು. ಈ ಅಂಟು ಮಾಧ್ಯಮ ಮಿಶ್ರಣದಲ್ಲಿ ಪ್ಲಾಸ್ಟಿಕ್ ಮಾತೃಕೆಯಲ್ಲಿ ಲೀನವಾಗುತ್ತದೆ. 6. ನೇಯ್ದ ಎಳೆಗಳ ಗುಂಪುಗಳು: ದೊಡ್ಡ ವಿಸ್ತಾರ ಅಥವಾ ದಪ್ಪವಿರುವ ಸಮ್ಮಿಶ್ರ ವಸ್ತುಗಳನ್ನು ತಯಾರಿಸಲು ಅನುಕೂಲವಾಗುವ ಮಾಡಿದ ರೂಪಗಳೊಂದು. 5 ಮತ್ತು 8: ಪ್ರಿಪ್ರೆಗ್ ಪ್ಲಾಸ್ಟಿಕ್‍ನೊಡನೆ ಪೂರ್ವ ಮಿಶ್ರಿತ ರೂಪಗಳಾಗಿ ನೇಯ್ದ ಬಟ್ಟೆಗಳು, ಎಳೆಗಳ ಗುಂಪುಗಳು. ಇವುಗಳಲ್ಲಿ ಪ್ಲಾಸ್ಟಿಕ್ ಮಾಧ್ಯಮ ಮುಂಚೆಯೇ ಕೂಡಿಸಿರುವುದರಿಂದ, ಅದು ಪಾಲಿಮರೀಕರಣ ಕ್ರಿಯೆಯಲ್ಲಿ ತೊಡಗಿದ್ದು, ನಿರ್ದಿಷ್ಟ ಸಮಯಾವಧಿಯಲ್ಲಿ ವಸ್ತು ತಯಾರಿಕೆಗೆ ಉಪಯೋಗಿಸದಿದ್ದಲ್ಲಿ ಗಟ್ಟಿಯಾಗಿ ನಿಷ್ಟ್ರಯೋಜಕವಾಗುತ್ತದೆ. ಅದಕ್ಕೆ ಮುಂಚೆ ಪಾಲಿಮರೀಕರಣ ವಿಧಿಯನ್ನು ತಾಕ್ಕಾಲಿಕವಾಗಿ ತಡೆಗಟ್ಟಲು ಈ ಪೂರ್ವ ಮಿಶ್ರಿತ ಪದಾರ್ಥವನ್ನು ಕೆಳ ತಾಪಮಾನದಲ್ಲಿ (-22ಲಿಅ) ಕಾದಿಡಲಾಗುತ್ತದೆ.

ಮೇಲೆ ಕಂಡ ಪಟ್ಟಿಗಳಲ್ಲಿರುವ ಪದಾರ್ಥ ವಿವರಗಳನ್ನು ಪರಿಶೀಲನೆ ಮಾಡಿದಾಗ ಸಮ್ಮಿಶ್ರ ವಸ್ತುವಿನ ರಚನೆಯಲ್ಲಿ ಎಷ್ಟು ವೈವಿಧ್ಯಮಯ ಪದಾರ್ಥಗಳ ಬಳಕೆಗಳಿವೆ ಎಂದು ಆಶ್ಚರ್ಯವಾಗಬಹುದು. ಇದನ್ನು ಚಿತ್ರ 2 ರಲ್ಲಿ ಸಾಂಕೇತಿಕವಾಗಿ ತೋರಿಸಲಾಗಿದೆ. ಹೀಗಾಗಿ, ಕಾರ್ಯ ಸಾಧಕವಾದ ಸಮರ್ಥತೆಯುಳ್ಳ ಯಾವುದೇ ಸಮ್ಮಿಶ್ರ ವಸ್ತುವಿನಲ್ಲಿ ಎಳೆ, ನೂಲು ಪ್ರಬಲಿತ, ಪ್ಲಾಸ್ಟಿಕ್ (ಮಾತೃಕೆ) ಮತ್ತು ಸಹಾಯಕ ಪದಾರ್ಥಗಳ ಹೊಂದಾಣಿಕೆಯನ್ನು ಕಾಣಬಹುದು. ಈ ಹೊಂದಾಣಿಕೆ ಸಾಧಿಸಲು, ವೃದ್ಧಿಸಲು ಪ್ರಪಂಚಾದ್ಯಂತ ವಿಜ್ಞಾನಿಗಳು, ಇಂಜಿನಿಯರುಗಳು ಸತತವಾಗಿ ಪ್ರಯತ್ನಿಸುತ್ತಿದ್ದಾರೆ. 1. ಗಾಜು, ಬೋರಾನ್, ಅಧಿಕಸಿಲಿಕಾ ಕ್ವಾಟ್ರ್ಸ್, ಸೆರಾಮಿಕ್ ಎಳೆಗಳು ನೂಲುಗಳು............. 2. ಕಾರ್ಬನ್ ಅರಾಮಿಡ್, ಪಾಲಿಎಥಿಲೀನ್ ಎಳೆಗಳು, ನೂಲುಗಳು ........................ 3. ನಿಸರ್ಗದಿಂದ ದೊರೆಯುವ ನಾರು ನೂಲುಗಳು......................................... 4 ಪ್ಲಾಸ್ಟಿಕ್ ಮಾಧ್ಯಮ: ಥರ್ಮೋಸೆಟ್ಟಿಂಗ್ ಪ್ಲಾಸ್ಟಿಕ್‍ಗಳು,

    ಥರ್ಮೋಪ್ಲಾಸ್ಟಿಕ್‍ಗಳು

5 ಲೋಹದ ಮಾಧ್ಯಮ (ಮಾತೃಕೆ) 6 ಎರಡು ಪದಾರ್ಥಗಳ ನಡುವಣವಿರುವ

 ಅಂತರವಸ್ತು (ಇಲ್ಲಿ ಹೊಂದಾಣಿಕೆ ಬಹುಮುಖ್ಯ)

ಚಿತ್ರ-2


ಚಿತ್ರ 2 ಸಮ್ಮಿಶ್ರ ವಸ್ತುವಿನ ವೈವಿಧ್ಯ : ವಸ್ತುವಿನ ಸಾಮಥ್ರ್ಯಕ್ಕೆ ಮೂಲ ಪದಾರ್ಥಗಳ ಹೊಂದಾಣಿಕೆ ಬಹು ಅಗತ್ಯವಾದದ್ದು.

ಎಳೆ ನೂಲುಗಳ ಮಾಧ್ಯಮಕ್ಕೂ ಪ್ಲಾಸ್ಟಿಕ್ ಮಾಧ್ಯಮಕ್ಕೂ ನಡುವೆ ಇರುವ ಅಂತರಮುಖವನ್ನು ಎರಡು ರಾಷ್ಟ್ರಗಳ ನಡುವಣ ಗಡಿಗಳ ಅಂತರಕ್ಕೆ ಹೋಲಿಸಬಹುದು. ರಾಷ್ಟ್ರಗಳ ನಡುವೆ ಹೊಂದಾಣಿಕೆಯಿಲ್ಲದಿದ್ದರೆ ಗಡಿಗಳಲ್ಲಿ ಹೋರಾಟವಾಗಿ ರಾಷ್ಟ್ರಗಳು ಶಿಥಿಲವಾಗುತ್ತವೆ. ಮಿಶ್ರಣ ಪದಾರ್ಥಗಳ ಹೊಂದಾಣಿಕೆಯಿಲ್ಲದಿದ್ದರೆ ಈ ಅಂತರಮುಖ ನಶಿಸುತ್ತದೆ. ಆಗ ಸಮ್ಮಿಶ್ರಣ ವಸ್ತುವಿನ ಸಾಮಥ್ರ್ಯವೂ ಕುಂದುತ್ತದೆ. ರೂಪ ರಚನೆ - ಮಾರುಕಟ್ಟೆ ವಿಶ್ಲೇಷಣೆ: ಯಾವ ವಸ್ತುವಿಗಾದರೂ ಒಂದು ಅಥವಾ ಹಲವು ಉಪಯೋಗಗಳಿದ್ದು ಅವನ್ನು ಅಳವಡಿಸಿಕೊಳ್ಳಲು ಗ್ರಾಹಕರು ಇದ್ದೇ ಇರುತ್ತಾರೆ. ಕೆಲವೊಮ್ಮೆ ಆಕಸ್ಮಿಕವಾಗಿಯೋ ಅಥವಾ ಇಂಜಿನಿಯರುಗಳ ಸ್ವಪ್ರೇರಣೆಯಿಂದಲೋ ಯಾವುದೋ ಒಂದು ವಸ್ತು ಮಾರುಕಟ್ಟೆಯ ಬಲವಿಲ್ಲದೆಯೇ ಸೃಷ್ಟಿಯಾಗಬಹುದು. ಪರಿಸ್ಥಿತಿ ಹೇಗಿದ್ದರೂ ಸರಿ, ಉದ್ಯಮಗಳು ಸಮ್ಮಿಶ್ರ ವಸ್ತುಗಳನ್ನು ರೂಪಿಸಿ ತಯಾರಿಸುವ ಮುಂಚೆ-ಗ್ರಾಹಕರನ್ನು - ಅವರಿಂದ ಆಗಬಹುದಾದ ವ್ಯಾಪಾರವನ್ನು - ದೀರ್ಘವಾಗಿ ಪರಿಶೀಲಿಸಿ, ಬಂಡವಾಳ ಹೂಡುವುದರಿಂದ ಹಿಡಿದು ವಸ್ತು ತಯಾರಿಕೆ, ವಸ್ತುವಿನ ಮಾರಾಟದ ಬೆಲೆ, ಉತ್ಪನ್ನವಾಗುವ ಲಾಭ ಇವೆಲ್ಲವನ್ನೂ ಸಮರ್ಥಿಸಿಕೊಳ್ಳುತ್ತವೆ. ಒಮ್ಮೊಮ್ಮೆ ಗ್ರಾಹಕನಿಗೆ ಬೇಕಾದ ವಸ್ತು ಆಗಲೇ ಇದ್ದಿರಬಹುದು. ಆದರೆ ಆ ವಸ್ತುವಿನ ಉಪಯೋಗದಲ್ಲಿ ಗ್ರಾಹಕನಿಗೆ ಕೆಲವು ಕುಂದು ಕೊರತೆಗಳು ಕಂಡು ಬಂದಿರಬಹುದು. ಇಲ್ಲವೇ ವಸ್ತುವಿನ ಯಾವುದಾದರೊಂದು ಗುಣಲಕ್ಷಣ ತೊಂದರೆ ಮಾಡುತ್ತಿರಬಹುದು. ಉದಾಹರಣೆಗೆ: ಕೆಲವು ವಸ್ತುಗಳು ಲೋಹದಲ್ಲಿ ತಯಾರಾಗಿದ್ದು ಲೋಹ ಸಂಕ್ಷಾರಣ ಹೊಂದಿ, ಬಳಕೆಯ ಕಾಲಾವಧಿ ತೀವ್ರ ಕಡಿಮೆಯಾಗಿರಬಹುದು. ಅಥವಾ ವಸ್ತುವಿನ ಭಾರ ಹೆಚ್ಚಾಗಿರಬಹುದು. ಇಲ್ಲವೇ ವಿದ್ಯುತ್ ವಾಹಕ ಗುಣವಿದ್ದು ಉಪಯೋಗ ಕ್ಷೇತ್ರದಲ್ಲಿ ಅಪಾಯ ತೋರಬಹುದು. ಎಲ್ಲವೂ ಸರಿಯಿದ್ದರೂ ವಸ್ತುವಿನ ಬೆಲೆ ದುಬಾರಿಯಾಗಿರಬಹುದು. ಇಂತಹ ಸೂಕ್ಷ್ಮವಿಷಯಗಳನ್ನು ಗ್ರಾಹಕ ವಿಶ್ಲೇಷಣೆಯಲ್ಲಿ ಸಂಗ್ರಹಿಸಲಾಗುತ್ತದೆ. ಸಮ್ಮಿಶ್ರ ಪದಾರ್ಥಗಳ ಗ್ರಾಹಕ ವಿಶ್ಲೇಷಣೆಯ ಕಾರ್ಯ ವಿಶ್ವಾದ್ಯಂತ ದೊಡ್ಡ ಪ್ರಮಾಣದಲ್ಲಿ ಸರ್ಕಾರ ಪೋಷಿತವಾಗಿಯೋ, ಸ್ವಂತವಾಗಿಯೋ ಅನೇಕ ರೀತಿಗಳಲ್ಲಿ ಕಾರ್ಯಗತವಾಗುತ್ತಿದೆ. ಸಮ್ಮಿಶ್ರ ವಸ್ತುಗಳು; ಅವುಗಳ ತಾಂತ್ರಿಕ ಪ್ರಗತಿ; ಅವುಗಳ ಹೊಸ ಉಪಯೋಗಗಳು ಇವೆಲ್ಲವನ್ನೂ ವಿಚಾರಗೋಷ್ಠಿ, ಸಮ್ಮೇಳನ, ವಸ್ತು ಪ್ರದರ್ಶನದಲ್ಲಿ ಎಲ್ಲರೂ ಒಂದುಗೂಡಿ, ವಿವೇಚನೆ ನಡೆಸುತ್ತಾರೆ. ಭಾರತ, ಚೈನಾ, ಮಲೇಶಿಯಾ, ಸಿಂಗಪೂರ್, ಅಮೆರಿಕಾ, ಯೂರೋಪ್ ದೇಶಗಳು ಈ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಕೆಲವೆಡೆ ಆಗುವ ವಾರ್ಷಿಕ ವಸ್ತು ಪ್ರದರ್ಶನಗಳಲ್ಲಿ ಹೊಸ ಬಳಕೆಗಳು, ಹೊಸ ವಸ್ತುಗಳು, ಯಂತ್ರಗಳು, ಉಪಕರಣಗಳು, ಪದಾರ್ಥಗಳು ಪ್ರದರ್ಶನದಲ್ಲಿರುತ್ತವೆ. ಗ್ರಾಹಕ ವಿಶ್ಲೇಷಣೆಯಿಂದಾಗಿ ಉದ್ಯಮಗಳಿಗಾಗುವ ಒಂದು ಉಪಯೋಗವೇನೆಂದರೆ- ಬಳಕೆಯ ಮನ್ನೋಟದ ಬಗ್ಗೆ ಮಾಹಿತಿಯನ್ನು ದೊರಕಿಸಿಕೊಳ್ಳುವುದು; ಇದುವರೆವಿಗೂ ಯಾವ ಯಾವ ದೇಶದಲ್ಲಿ ಸಮ್ಮಿಶ್ರಣ ವಸ್ತುಗಳ ಬಳಕೆ ಹೇಗಿವೆ? ಯಾವ ಪ್ರಮಾಣದಲ್ಲಿದೆ? ಪ್ರಸ್ತುತ ಬಳಕೆಗಳ ಪ್ರಮಾಣ ಹೆಚ್ಚಾಗುವ ಅಥವಾ ಕಮ್ಮಿಯಾಗುವ ಸಂಭವಗಳಿವೆಯೆ? ಹೊಸ ಕೈಗಾರಿಕಾ ಕ್ಷೇತ್ರವಾಗಲೀ ಅಥವಾ ನೂತನ ಬಳಕೆಗಳಾಗಲಿ ಮೂಡುವ ಸಂದರ್ಭಗಳೇನಾದರೂ ಇವೆಯೆ? ಇದರಿಂದಾಗಿ ಪದಾರ್ಥಗಳ ಬೆಳೆವಣಿಗೆ ಯಾವ ರೀತಿಯದ್ದಾಗಿರಬಹುದು? ಲೋಹಗಳ ಮತ್ತಿತರ ವಸ್ತುಗಳ ಪ್ರಗತಿ, ಪೈಪೋಟಿ ಯಾವ ದಿಕ್ಕಿನಲ್ಲಿ ಸಾಗಿದೆ? ಎಂಬುದರ ಕೂಲಂಕಷ ವಿವರಗಳನ್ನು ಪಡೆಯ ಬೇಕಾಗುತ್ತದೆ. ಇಂತಹ ಗ್ರಾಹಕ ವಿಶ್ಲೇಷಣೆಯಿಂದ ಹೊರಬಂದ ಒಂದೆರಡು ಮಾಹಿತಿಗಳನ್ನು (ಮಾದರಿ ರೂಪದಲ್ಲಿ) ಈ ಮುಂದೆ ಚಿತ್ರರೂಪಗಳಲ್ಲಿ ತೋರಿಸಲಾಗಿದೆ:

ಚಿತ್ರ-3


ಚಿತ್ರ-4

ಚಿತ್ರ 4: ಭಾರತದಲ್ಲಿ ತಯಾರಾಗುವ ಸಮ್ಮಿಶ್ರ ವಸ್ತುಗಳ ಬಳಕೆಗಳ ರೂಪಗಳು. (ಂ: ವಾಯು, ಬಾಹ್ಯಾಕಾಶ, ಕ್ಷಿಪಣಿ ಕ್ಷೇತ್ರ, ಃ: ರೈಲ್ವೆ, ಟ್ಯಾಂಕ್ ವಿದ್ಯುತ್ ಕೈಗಾರಿಕಾ ಕ್ಷೇತ್ರ, ಅ: ಸಾಮಾನ್ಯ ಕೈಗಾರಿಕಾ ಕ್ಷೇತ್ರ, ಆ: ಆಟೋ ಮೊಬೈಲ್, ಶೈತ್ಯ ಗೋಪುರ-ದೂರಸಂಪರ್ಕ ಕ್ಷೇತ್ರದಲ್ಲಿ ಕೊಳವೆಗಳು ವಾಯುಶಕ್ತಿ ಕ್ಷೇತ್ರ, ಇ: ಕೈಗಾರಿಕಾ ಕ್ಷೇತ್ರದಲ್ಲಿ ಬಳಸುವ ಟ್ಯಾಂಕ್‍ಗಳು, ಸ್ನಾನದ ತೊಟ್ಟಿಗಳು, ಈ: ಗ್ರಾಹಕ ವಸ್ತುಗಳು/ಕ್ರೀಡಾಕ್ಷೇತ್ರ) ಯುಕ್ತತಾ ವಿಶ್ಲೇಷಣೆ: ಇದು ಗ್ರಾಹಕ ವಿಶ್ಲೇಷಣೆಯ ನಂತರ ಇಂಜಿನಿಯರುಗಳು ನಡೆಸುವ ಹಂತ. ಯಾವುದೋ ಒಂದು ವಸ್ತುವಿಗೆ ಗ್ರಾಹಕರಿಂದ ಬಳಕೆ ಇದೆ ಎಂದು ಕಂಡು ಬಂದಾಗ, ಇಂಜಿನಿಯರುಗಳು ಕೆಲವು ವಿಷಯಗಳನ್ನು ಸಮರ್ಥಿಸಬೇಕು. ಅವು: ವಸ್ತುವಿನ ಬಳಕೆ ಯಾವ ರೀತಿಯದ್ದು? ಬಳಕೆಯಲ್ಲಿ ವಸ್ತುವಿನ ಪರಿಸರ ಯಾವ ರೀತಿಯದ್ದಾಗಿರುತ್ತದೆ? ವಸ್ತುವಿಗೆ ಯಾವ ವಿಶಿಷ್ಟ ಗುಣಗಳು ಗ್ರಾಹಕ ಅಳವಡಿಕೆಗೆ ಮುಖ್ಯ? ಯಾವ ಬಗೆಯ ಪದಾರ್ಥಗಳ ಹೊಂದಾಣಿಕೆಯಿಂದಾಗಿ, ಆ ವಿಶಿಷ್ಟ ಗುಣಗಳು ಲಭ್ಯವಾಗಿವೆ? ಮೇಲ್ಕಂಡ ಪ್ರಶ್ನೆಗಳಿಗೆ ಮೊದಲ ಉತ್ತರ ದೊರಕಿದಲ್ಲಿ, ಮುಂದಿನ ಹಂತವಾದ ವಸ್ತು ರಚನಾ ಕಾರ್ಯಕ್ಕೆ ತೊಡಗುತ್ತಾರೆ. ಮೊದಲೇ ತಿಳಿಸಿದಂತೆ, ಸಮ್ಮಿಶ್ರ ವಸ್ತುಗಳಿಗೆ ಪದಾರ್ಥಗಳ ಹೊಂದಾಣಿಕೆಯಿಂದಾಗಿ ಅನೇಕಾನೇಕ ಗುಣ ಲಕ್ಷಣಗಳನ್ನು ಕಲ್ಪಿಸಬಹುದು. ಇದಕ್ಕೆ ಕಾರಣ ಮಿಶ್ರಣ ಪದಾರ್ಥಗಳಲ್ಲಿರುವ ವೈವಿಧ್ಯ (ಈ ವೈವಿಧ್ಯ ಲೋಹಗಳಲ್ಲಿ ಕಂಡು ಬರುವುದಿಲ್ಲ). ಸಂಕರ್ಮದಿಂದಾಗಿ ದೊರಕುವ ಗುಣಲಕ್ಷಣಗಳು ಮತ್ತು ಅವುಗಳಿಂದ ಯಾವ ಬಗೆಯ ವಸ್ತುಗಳನ್ನು ರೂಪಿಸಬಹುದು ಎಂಬ ಔಚಿತ್ಯವನ್ನು ಕೆಳಗೆ ಕಾಣಿಸಿರುವ ಚಿತ್ರ 5 ರಲ್ಲಿ ನಿರೂಪಿಸಲಾಗಿದೆ. ಸಮ್ಮಿಶ್ರ ವಸ್ತುವಿನ ವಿಶೇಷ ಗುಣಗಳು ಎಳೆ, ನೂಲುಗಳ ಪ್ರಧಾನ ಅಕ್ಷದಲ್ಲಿ ಅತ್ಯುಚ್ಚ ಶಕ್ತಿ ಸಾಮಥ್ರ್ಯಗಳಿದ್ದು, ಪ್ಲಾಸ್ಟಿಕ್ ಮಾಧ್ಯಮದಲ್ಲಿ ಎಳೆಗಳನ್ನು ಯಾವ ದಿಕ್ಕಿನಲ್ಲಾದರೂ ವಸ್ತುವಿನಲ್ಲಿ ಜೋಡಿಸುವ ಸೌಲಭ್ಯ. ಎಳೆ (ಉದಾ: ಗಾಜು) ಮತ್ತು ಪ್ಲಾಸ್ಟಿಕ್ ಪದಾರ್ಥಗಳೆರಡೂ ವಿದ್ಯುತ್ ಅವಾಹಕಗಳು ಹಾಗೂ ಸೂಕ್ಷ್ಮತರಂಗ ಶಕ್ತಿಗೆ ಪಾರಕ, ಕನಿಷ್ಠ ಪರಾವೈದ್ಯುತ ಸ್ಥಿರಾಂಕ ಗುಣ ಎಳೆ (ಉದಾ: ಕಾರ್ಬನ್) ಬಳಕೆಯಿಂದ ವಸ್ತುವನ್ನು ಸೂಕ್ಷ್ಮ ತರಂಗ/ರೇಡಿಯೋ ಆವೃತ್ತಿ ಪ್ರತಿಫಲಕ ಆಗಿ ಮಾಡಬಹುದು ಅಧಿಕ ಸಿಲಿಕಾ/ಸೆರಾಮಿಕ್ ಎಳೆಗಳ ಮತ್ತು ಕೆಲವು ಪ್ಲಾಸ್ಟಿಕ್ ಹೊಂದಾಣಿಕೆಯಿಂದಾಗಿ ಅಪಕ್ಷರಣ ನಿರೋಧಕತೆ ಹಾಗೂ ಅತಿ ಉಷ್ಣ ನಿರೋಧಕತೆ ಪಡೆಯಬಹುದು.

ವಿಶೇಷಗುಣಗಳನ್ನು ಉಲ್ಲೇಖಿಸುವ ಸಾಂಕೇತಿಕ ಚಿತ್ರಗಳು

ಚಿತ್ರ-5-1 ಚಿತ್ರ-5-2 ಚಿತ್ರ-5-3 ಚಿತ್ರ-5-4

ವಿಶೇಷ ಗುಣಗಳಿಂದಾಗಿ ರಚನೆಯಾಗಬಲ್ಲ ಸಮ್ಮಿಶ್ರ ವಸ್ತುಗಳು

ನಿರ್ಮಾಣ ದೂಲಗಳು, ಸೇತು ಕಂಬಿಗಳು, ತ್ರಾಣಧಾರಣ ಸಲಕರಣೆಗಳು, ಒತ್ತಡ ನಿಭಾಯಿಸುವ ವೆಸೆಲ್‍ಗಳು ಏರ್‍ಕ್ರಾಫ್ಟ್ ರ್ಯಾಡೋಮ್, ಪ್ರಿಂಟೆಡ್ ಸಕ್ರ್ಯೂಟ್ ಬೋರ್ಡ್‍ಗಳು, ವಿದ್ಯುತ್ ಚಾಪ ಕುಲುಮೆ, ವಿದ್ಯುತ್ ಛಾಪ ಕುಲುಮೆಗಳು ಆಂಟೆನಾ, ಇಎಂಐ ಕವಚ, ಫ್ಯಾರಡೇ ಪಂಜರ, ಸ್ಥಾಯೀವಿದ್ಯುದಾವೇಶವನ್ನು ನಲುಗಿಸಲು ಮಾಡುವ ಸಾಧನಗಳು ರಾಕೆಟ್‍ಗಳು, ಕ್ಷಿಪಣಿಗಳು, ನಾಜóಲ್‍ಗಳು, ತಾಪ ನಿರೋಧಕ ಕವಚಗಳು

ಸಮ್ಮಿಶ್ರವಸ್ತುವಿನ ವಿಶೇಷ ಗುಣಗಳು

ಎಳೆಗಳ ಉತ್ಕøಷ್ಟ ತ್ರಾಣ, ತಾಡನಾ ಶಕ್ತಿ ಹೀರಿಕೆಯ ಲಕ್ಷಣಗಳು (ಎಸ್-ಗಾಜು, ಎಚ್‍ಡಿಪಿಇ ಇತ್ಯಾದಿ), ಸಮ್ಮಿಶ್ರಣದ ಅತಿ ಕಡಿಮೆ ಸಾಂದ್ರತೆ, ಪಥ ವಿಚಲನೆ, ಸುನಮ್ಯ ಲಕ್ಷಣ, ಸೆರಾಮಿಕ್ ಅಥವಾ ಉಕ್ಕಿನ ರಕ್ಷಣಾ ಕವಚಗಳಿಗಿಂತ ಹೆಚ್ಚು ಸುಲಭವಾದ ಉಪಯೋಗಿಕೆ ಗಡಸು ನೊರೆಗಳಿಂದ ತಯಾರಾಗುವ ಸ್ಯಾಂಡ್‍ವಿಚ್ ಹಲಗೆಗಳು. ಕಡಿಮೆ ಸಾಂದ್ರತೆ ಮತ್ತು ಉಷ್ಣ ಹಾಗೂ ಶಬ್ದ ನಿರೋಧಕ ಗುಣಲಕ್ಷಣಗಳು ಪರಿಸರ ಮತ್ತು ರಾಸಾಯನಿಕ ನಿರೋಧಕ- ವಿಶೇಷವಾಗಿ ಆಮ್ಲ, ಪ್ರತ್ಯಾಮ್ಲ, ದ್ರಾವಕ, ಲವಣ, ಉಷ್ಣತೆ, ಆದ್ರ್ರತೆಗೆ; ಥರ್ಮೋಸೆಟ್/ಧರ್ಮೋಪ್ಲಾಸ್ಟಿಕ್‍ಗಳನ್ನು ಬೇಕಾದ ಆಕೃತಿಗೆ ಸುಲಭವಾಗಿ ತರಬಹುದಾದ ಗುಣ.

ವಿಶೇಷ ಗುಣಗಳನ್ನು ಉಲ್ಲೇಖಿಸುವ ಸಾಂಕೇತಿಕ ಚಿತ್ರಗಳು

ಚಿತ್ರ-5-5 ಚಿತ್ರ-5-6 ಚಿತ್ರ-5-7

ವಿಶೇಷ ಗುಣಗಳಿಂದಾಗಿ ರಚನೆಯಾಗಬಲ್ಲ ಸಮ್ಮಿಶ್ರ ವಸ್ತುಗಳು ಸ್ವರಕ್ಷಣೆ, ವಾಹನರಕ್ಷಣೆ (ಗುಂಡು ನಿರೋಧಕ ವ್ಯವಸ್ಥೆ) ಪೂರ್ವ ನಿರ್ಮಾಣ ಮಾಡಿದ ಗೃಹ, ರಕ್ಷಣಾ ರಚನೆಗಳು, ವಾಹನ ಭಾಗಗಳು, ಶೀತಲ ಭಂಡಾರ ಶಬ್ದದಮನಕಾರಿಗಳು, ವಿಮಾನ ಕವಚಗಳು ರಾಸಾಯನಿಕ ಸಲಕರಣೆ, ಕೊಳವೆ ಮಾರ್ಗ, ದಾಸ್ತಾನು ವಾಹನಗಳು, ತೀರದಾಚೆಯ ಅಟ್ಟಣಿಗೆಗಳು, ತೇಲು ಚೀಲಗಳು, ದೋಣಿ, ನೌಕೆಯ ಭಾರಿ ರಚನೆಗಳು, ಆಟೊಮೊಬೈಲ್ ಬಿಡಿಭಾಗಗಳು.


ಸಮ್ಮಿಶ್ರ ವಸ್ತುಗಳ ವಿಶೇಷ ಗುಣಗಳು ನಿರ್ದಿಷ್ಟ ಎಳೆ ಮತ್ತು ಅವುಗಳ ಓರಣವನ್ನು ಆಧರಿಸಿ ಪಡೆದ ಸದೃಢ ಹಾಗೂ ಉತ್ಪನ್ನ ಕಂಪನ ಅಡಗಿಸುವ ಗುಣ. ಸಂಕೀರ್ಣ ಆಕಾರ ಮೈದಳೆಯುವ ಸೌಲಭ್ಯ ಬೆಳಕು ಎಕ್ಸ್-ಕಿರಣಗಳಿಗೆ ಪಾರಕತೆ, ಪಾರದೀಪಕತೆ ಅಧಿಕ ವ್ಯಾಕ್ಯೂಂ/ ಉಷ್ಣತೆಯ ಸನ್ನಿವೇಶದಲ್ಲಿ ರಚನೆಗಳ ಸ್ಥಿರತೆ, ಉಷ್ಣತೆಯಲ್ಲಿ ಹಿಗ್ಗುವ ಗುಣವನ್ನು ನಿಯಂತ್ರಿಸಿ ಶೂನ್ಯಕ್ಕೆ ತರುವುದು, ನಿರ್ದಿಷ್ಟ ಕಡಿಮೆ ತೂಕ ಕಾರ್ಬನ್ ಎಳೆಗಳ ಸಮ್ಮಿಶ್ರದ ಚಕ್ರೀಯ ದಣಿವು ನಿರೋಧಕತೆ ಅತ್ಯಂತ ಕಡಿಮೆ ಭಾರ

ವಿಶೇಷ ಗುಣಗಳನ್ನು ಉಲ್ಲೇಖಿಸುವ ಸಾಂಕೇತಿಕ ಚಿತ್ರಗಳು

ಚಿತ್ರ-5-8 ಚಿತ್ರ-5-9 ಚಿತ್ರ-5-10 ಚಿತ್ರ-5-11

ವಿಶೇಷ ಗುಣಗಳಿಂದಾಗಿ ರಚನೆಯಾಗಬಲ್ಲ ಸಮ್ಮಿಶ್ರ ವಸ್ತುಗಳು ಗಾಳಿಯಂತ್ರದ ತಿರುಗು ರೆಕ್ಕೆಗಳು, ತಿರುಚಕ್ರಗಳು, ಫ್ಯಾನು ಮೇಲ್ಚಾವಣಿ ಹೊದಿಕೆ, ಕಟ್ಟಡ, ಗುಮ್ಮಟ, ವೈದ್ಯಕೀಯ ತಪಾಸಣೆಗೆ ಬಳಸುವ ಎಕ್ಸ್-ಕಿರಣ ಮೇಜು ಉಪಗ್ರಹ ಮತ್ತು ಅಂತರಿಕ್ಷ ನೌಕೆಗಳಿಗೆ ಅಳವಡಿಸುವ ರಚನೆಗಳು ಆಂಟೆನಾ ಪ್ರತಿಫಲಕಗಳು ಹೆಲಿಕಾಪ್ಟರ್ ಬ್ಲೇಡುಗಳು ಆಟೋಮೊಬೈಲ್‍ನ ಷಾಫ್ಟ್‍ಗಳು


ಚಿತ್ರ 5 ಮುಂದುವರೆದದ್ದು ವಸ್ತು ವಿನ್ಯಾಸ: ವಿನ್ಯಾಸ ವಿಶ್ಲೇಷಣೆ: ಇಂಜಿನಿಯರುಗಳ ಕೆಲಸದಲ್ಲಿ ಇದೊಂದು ಅತಿ ಮುಖ್ಯವಾದ ಘಟ್ಟ., ಈ ಘಟ್ಟದಲ್ಲಿ ವಸ್ತುವು ಮೊದಲನೆಯ ಆಕಾರವನ್ನು ರೇಖಾ ಚಿತ್ರದ ರೂಪದಲ್ಲಿ ಪಡೆಯುತ್ತದೆ. ಇದಕ್ಕೂ ಮುನ್ನ ಮಾಡಬೇಕಾದ ಕಾರ್ಯಗಳು ಅನೇಕವಿವೆ: ಆ ವಸ್ತುವಿನ ವಿಶಿಷ್ಟಗುಣಗಳನ್ನು ಖಚಿತಪಡಿಸುವುದು; ಆ ವಸ್ತುವಿನ ಆಕಾರ, ಅಳತೆ, ಗಾತ್ರವನ್ನು ಖಚಿತಪಡಿಸುವುದು; ವಸ್ತುವಿನ ಬಳಕೆಯಲ್ಲಿ ಕಾಣುವ ರೀತಿ ನೀತಿಗಳು, ಪರಿಸರ ಇತ್ಯಾದಿಗಳನ್ನು ಗಣನೆಗೆ ತೆಗೆದುಕೊಳ್ಳುವುದು; ಸಮ್ಮಿಶ್ರ ವಸ್ತುವಿನಲ್ಲಿ ಯಾವ ಯಾವ ಪದಾರ್ಥಗಳನ್ನು ಯಾವ ಅನುಪಾತದಲ್ಲಿ ಯಾವ ಅಕ್ಷದಲ್ಲಿ ಜೋಡಿಸಬೇಕು; ವಸ್ತುವಿಗೆ ಯಾವ ರೀತಿಯ ಹೊರಕವಚ ಅಥವಾ ರಕ್ಷಣೆ ಕೊಡಬೇಕು; ವಸ್ತುವನ್ನು ಇನ್ನೊಂದು ವಸ್ತುವಿಗೆ ಜೋಡಿಸಬೇಕೆ? ಅಂಟಿಸಬೇಕೆ? ಇತ್ಯಾದಿ. ಈ ಗುಣಗಳನ್ನೆಲ್ಲಾ ಒಳಗೊಂಡ ಮೊದಲನೆಯ ಪರಿಕಲ್ಪನೆಯನ್ನು, ರೇಖಾ ಚಿತ್ರದ ಮೂಲಕ ಪಡೆಯುತ್ತಾರೆ. ಈಗ ಕಂಪ್ಯೂಟರ್‍ನಲ್ಲಿ ಸಿಎಡಿ (ಕಂಪ್ಯೂಟರ್ ಏಡೆಡ್ ಡ್ರಾಫ್ಟಿಂಗ್) ಸಾಫ್ಟ್‍ವೇರ್ ಬಳಕೆಯಿಂದಾಗಿ, ಈ ಕಾರ್ಯವನ್ನು ಸುಲಭವಾಗಿ, ವೇಗವಾಗಿ ಮಾಡಬಹುದು. ಕಂಪ್ಯೂಟರ್‍ನಿಂದ ಹೊರಬಂದ ರೇಖಾ ಚಿತ್ರದ ಘಟ್ಟದ ವಸ್ತುವನ್ನು ದೀರ್ಘವಾದ ರಾಚನಿಕ, ಔಷ್ಣೀಯ/ ಕಾರ್ಯನಿರ್ವಾಹಕ ವಿಶ್ಲೇಷಣೆಗೆ ಒಳಪಡಿಸಿದಾಗ: ಬಳಕೆಯಲ್ಲಿ ಆ ವಸ್ತು ತನ್ನ ಮೇಲೆ ಎರಗುವ ಪರಿಸ್ಥಿತಿಗಳನ್ನು ಹೇಗೆ ಎದುರಿಸುತ್ತದೆ? ಜಗ್ಗುತ್ತದೆಯೇ? ವಿಕಾರವಾಗುತ್ತದೆಯೆ? ಬಣ್ಣ ಕಳೆದುಕೊಳ್ಳುತ್ತದೆಯೆ? ನಿರೀಕ್ಷಿಸಿದ ಮಟ್ಟಕ್ಕೂ ಕೆಳಗೆ ನಶಿಸುತ್ತದೆಯೆ? ಇಲ್ಲವೇ ಆ ಮಟ್ಟಕ್ಕೂ ಮೇಲೆ ತಡೆಯುತ್ತದೊ? ಹಾಗಾಗಿ ಮಿಶ್ರಣದಲ್ಲಿ ಏನಾದರೂ ಬದಲಾವಣೆ ಮಾಡಬೇಕೆ? ಕೊನೆಗೆ ವಸ್ತುವಿನ ತೂಕ ಸರಿಯಾಗಿ ತೋರುತ್ತಿದೆಯೆ? ಇಂತಹ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರ ದೊರೆಯುವವರೆಗೂ ಹಿಂದೆ ಮುಂದೆ ಪರಿಕಲ್ಪನೆಯ ಜಂಜಾಟ ನಡೆಯುತ್ತದೆ. ಇದಕ್ಕೆ ಅಪೇಕ್ಷಿತ ಗುಣಮಟ್ಟ ಸಾಧನೆ ಎನ್ನುತ್ತಾರೆ. ಅನಂತರ ಕೊನೆಯ ಘಟ್ಟದಲ್ಲಿ, ಬಳಕೆಯ ಪರಿಸರದಲ್ಲಿ, ವಸ್ತುವಿನ ಮೇಲೆ ಬೀಳುವ ಎಳೆತ, ಸಂಕೋಚತ್ವ, ತಾಡನೆ ಮತ್ತಿತರ ಸಂದರ್ಭದಲ್ಲಿ ಆಗುವ ಆಕಾರ ವಿಕಾರಗಳನ್ನು ಕಂಪ್ಯೂಟರ್‍ನಲ್ಲೇ ಅನುಕಲ್ಪಿಸಿ, ಸುರಕ್ಷತಾ ಅಂಶ ಸಮರ್ಪಕವೇ ಎಂದು ನೋಡಿ ಈ ವಿನ್ಯಾಸ ಸರಿಯಿದೆ; ತಯಾರಿಕೆಗೆ ಅಭ್ಯಂತರವಿಲ್ಲ; ಆದರೆ ತಯಾರಿಕೆಯ ದೃಷ್ಟಿಯಿಂದ ಇಂತಿಂತಹ ಬದಲಾವಣೆಗಳು ಬೇಕು; ಕೊನೆಯದಾಗಿ ವಸ್ತುವಿನಲ್ಲಿ ಮಿಶ್ರಣಕ್ಕೆ ಆಯ್ಕೆಯಾದ ಪದಾರ್ಥಗಳ ಪಟ್ಟಿ ಸರಿಯಾಗಿದೆ, ಅವುಗಳ ಬೆಲೆಗಳನ್ನು ಕಮ್ಮಿ ಮಾಡಲು ಕೆಲವು ಮಾರ್ಗಗಳಿವೆ-ಇಂತಹ ಪ್ರಶ್ನೆಗಳನ್ನು ವಿವೇಚಿಸಿ, ವಿನ್ಯಾಸವನ್ನು ಕೊನೆಯ ಮಟ್ಟಕ್ಕೆ ತರುತ್ತಾರೆ. ಇಂತಹ ವಿನ್ಯಾಸ ಕಾರ್ಯದಿಂದ ಹೊರಬಂದ ಕೆಲವು ಮಾದರಿ ಫಲಿತಗಳನ್ನು ಈ ಮುಂದೆ ಚಿತ್ರಗಳಲ್ಲಿ ತೋರಿಸಲಾಗಿದೆ. ಈ ಕಾರ್ಯಕ್ಕೆ ಉಪಯೋಗಿಸುವ ವಿಧಿಗೆ ಪರಿಮಿತ ಫಲಕ ವಿಶ್ಲೇಷಣೆ (ಎಫ್‍ಇಎಂ) ಎಂದು ಕರೆಯುತ್ತಾರೆ.

ಚಿತ್ರ-6

ಚಿತ್ರ 6 ಎಫ್‍ಇಎಂ ವಿಶ್ಲೇಷಣೆಯಿಂದ ರೂಪಿತವಾದ ಒಂದು ಸಮ್ಮಿಶ್ರ ಕ್ಯಾಬಿನೆಟ್

ಚಿತ್ರ-7

ಚಿತ್ರ 7 ಎಫ್‍ಇಎಂ ವಿಶ್ಲೇಷಣೆಯಿಂದ ರೂಪಿತವಾದ ಒಂದು ಸಮ್ಮಿಶ್ರ ಧಾರಕ (ಕಂಟೈನರ್)

ಯಾಂತ್ರಿಕ ಮತ್ತು ಭೌತ ಗುಣಗಳು: ಮೊದಲೇ ತಿಳಿಸಿದಂತೆ, ವಸ್ತು ವಿನ್ಯಾಸದ ಕಾರ್ಯದಲ್ಲಿ, ಸಮ್ಮಿಶ್ರಣದಿಂದಾಗಿ ಯಾವ ಸಮ್ಮಿಶ್ರಣದ ಗುಂಪು ಯಾವ ರೀತಿಯ ಲಕ್ಷಣಗಳನ್ನು ತೋರಿಸುತ್ತದೆ ಎಂದು ತಿಳಿದಿರಬೇಕು ಅದರಲ್ಲೂ ಯಾಂತ್ರಿಕ ಗುಣಗಳು ಬಹಳ ಮುಖ್ಯವಾದ ಲಕ್ಷಣಗಳು. ಈ ಲಕ್ಷಣಗಳ ಪ್ರಮಾಣಗಳನ್ನು ಪರೀಕ್ಷೆ ಮಾಡುವ ಮಾದರಿಗಳ ಮೇಲೆ ಅಳೆದು ತಿಳಿಯಬೇಕು. ಹೋಲಿಕೆಗಾಗಿ ಹಾಗೂ ಮಾದರಿಯಾಗಿ ಕೆಲವು ಸಮ್ಮಿಶ್ರಣ ಗುಂಪುಗಳಿಂದ ಮೂಡಿ ಬರುವ ಲಕ್ಷಣಗಳನ್ನು ಪಟ್ಟಿ 5 ರಲ್ಲಿ ಕೊಡಲಾಗಿದೆ.

ಪಟ್ಟಿ 5: ಸಮ್ಮಿಶ್ರ ವಸ್ತುಗಳ ಮಾದರಿ ಯಾಂತ್ರಿಕ ಗುಣಗಳು ಗುಣಗಳು ಅರಾಮಿಡ್/ಎಪಾಕ್ಸಿ ಅರಾಮಿಡ್/ ಎಪಾಕ್ಸಿ ಎಚ್‍ಟಿ ಕಾರ್ಬನ್/ಎಪಾಕ್ಸಿ ಎಚ್‍ಎಂ ಕಾರ್ಬನ್/ ಎಪಾಕ್ಸಿ ಇ-ಗಾಜು /ಎಪಾಕ್ಸಿ ಎಸ್-ಗಾಜು /ಎಪಾಕ್ಸಿ

ರೇಖಾತ್ಮಕ ವ್ಯಾಕುಚಿತ ತ್ರಾಣ ಏg/mm2

ಟ್ರಾನ್‍ವರ್ಸ್ ವ್ಯಾಕುಚಿತ ತ್ರಾಣ,

ಏg/mm2

ಇನ್ ಪ್ಲೇನ್ ಒಪನ ತ್ರಾಣ, ಏg/mm2

ರೇಖಾತ್ಮಕ ವ್ಯಾಕುಚಿತ ತ್ರಾಣ, ಏg/mm2

ಟ್ರಾನ್ಸ್‍ವರ್ಸ್ ವ್ಯಾಕುಚಿತ ತ್ರಾಣ, ಏg/mm2

ಟ್ರಾನ್ಸ್‍ವರ್ಸ್ ಒಪನ (ದಪ್ಪದ ದಿಕ್ಕಿನಲ್ಲಿ) ಬಲ , ಏg/mm2

ರೇಖಾತ್ಮಕ ವ್ಯಾಕುಚಿತ ಮಾಡ್ಯುಲಸ್, ಏg/mm2

ಟ್ರಾನ್ಸ್‍ವರ್ಸ್ ವ್ಯಾಕುಚಿತ ಮಾಡ್ಯುಲಸ್, ಏg/mm2

ಇನ್-ಪ್ಲೇನ್ ಒಪನ ಮಾಡ್ಯುಲಸ್, ಏg/mm2

ಪಾಯಿಸಾನ್ ನಿಷ್ಪತ್ತಿ

ಟ್ರಾನ್‍ವರ್ಸ್ (ದಪ್ಪದ ದಿಕ್ಕಿನಲ್ಲಿ) ಒಪನ ಮಾಡ್ಯುಲಸ್, ಏg/mm2

ಸಾಂದ್ರತೆ ಏg/ಜm2


167.18


0.51


2.65


17.43


5.04


2.32


353


7070


123.7


0.348


112

~1.4

147.6


0.911


4.14


18.65


5.2


-


475.8


8827


151.27


0.289


-

~1.4


171.6


2.76


5.81


65.31


10.95


5.33


710


15016


338.8


0.314


213

~1.7


76.49


0.736


2.45


29.32


4.98


-


411


33668


292.16


0.283


-

~1.7


103.6


1.49


6.38


42.59


3.92


2.4


704.9


3695


422.8


0.298


225

1.8-2.0

148.9


0.886


5.38


42.04


4.64


-


931


5166


366.2


0.285


-

1.8-2.2


ಪಟ್ಟಿಯ ಕೊನೆಯಲ್ಲಿ ತೋರಿಸಿರುವ ಸಮ್ಮಿಶ್ರಣ ವಸ್ತುಗಳ ಸಾಂದ್ರತೆಯ ಸಂಖ್ಯೆಗಳನ್ನು ಲೋಹಗಳಿಗೆ ಹೋಲಿಸಿದಾಗ ಕಾಣುವುದು:

    ಪದಾರ್ಥ				ಸಾಂದ್ರತೆ

ಲೋಹ-ಅಲ್ಯೂಮಿನಿಯಮ್ 2.8g/ಛಿಛಿ ಲೋಹ-ಸ್ಟೀಲ್ 7.8g/ಛಿಛಿ ಲೋಹ-ಟೈಟಾನಿಯಮ್ ಅಲಾಯ್ 4.8g/ಛಿಛಿ ಸಮ್ಮಿಶ್ರ ವಸ್ತುಗಳು (ವ್ಯಾಪ್ತಿ) 1.4 g/ಛಿಛಿ-2.2g/ಛಿಛಿ ಸಾಂದ್ರತೆಯ ಹಿನ್ನಲೆಯಲ್ಲಿ ನೋಡಿದರೆ ಲೋಹಗಳಿಗೆ ತೂಕ ಹೆಚ್ಚು. ಆದರೆ ಅದರಿಂದಾಗಿ ಲೋಹಗಳು ನಿಷ್ಪ್ರಯೋಜಕ ಪದಾರ್ಥಗಳೆಂದು ಹೇಳಲಾಗುವುದಿಲ್ಲ. ಅನೇಕ ಗುಣಗಳು ಸಮ್ಮಿಶ್ರ ವಸ್ತುಗಳಿಗಿಂತ ಅಧಿಕವಾಗಿರಬಹುದು. ಹಾಗಾಗಿ, ಲೋಹಗಳ ಉಪಯೋಗಗಳೂ ಅನಿವಾರ್ಯವಾಗಿ ಕಂಡು ಬಂದರೆ, ಸಮ್ಮಿಶ್ರ ವಸ್ತುವಿನಲ್ಲಿ ವಿನ್ಯಾಸದ ಘಟ್ಟದಲ್ಲೇ ಒಂದು ಲೋಹದ ಅಂಗವನ್ನೂ ಸೇರಿಸಬಹುದು. ಇದಕ್ಕೆ ಸಂಕರಣ ಅನ್ನುತ್ತಾರೆ. ಅದೇ ರೀತಿಯಲ್ಲಿ ಯಾವುದೇ ಸಮ್ಮಿಶ್ರ ವಸ್ತು ಆಯ್ದುಕೊಂಡ ಪದಾರ್ಥಗಳಿಂದಾಗಿ ಬೇಕಾದ ಲಕ್ಷಣಗಳನ್ನು ಪಡೆಯದಿದ್ದರೆ, ಮಿಶ್ರಣ ಘಟ್ಟದಲ್ಲೇ ಪೂರ್ವ ನಿಶ್ಚಿತವಾಗಿ ಪದಾರ್ಥಗಳನ್ನು ಬೆರಕೆ ಮಾಡಬಹುದು. ಉದಾಹರಣೆ: ಗಾಜಿನ ನೂಲುಗಳು + ಕಾರ್ಬನ್ ನೂಲುಗಳು + ಎಪಾಕ್ಸಿ ಪ್ಲಾಸ್ಟಿಕ್ ಗಾಜಿನ ನೂಲುಗಳು + ಅರಾಮಿಡ್ ನೂಲುಗಳು + ಎಪಾಕ್ಸಿ ಪ್ಲಾಸ್ಟಿಕ್ ಇವಕ್ಕೂ ಸಂಕರಣ ಪದ ಅನ್ವಯಿಸುತ್ತದೆ. ಇನ್ನಷ್ಟು ಲಕ್ಷಣಗಳ ಹೋಲಿಕೆಗಳನ್ನು ಕೆಳಗೆ ಕೊಡಲಾಗಿದೆ: ಲಕ್ಷಣ ಸಮ್ಮಿಶ್ರ ವಸ್ತು ಅಲ್ಯೂಮಿನಿಯಮ್ ಸ್ಟೀಲ್ ವ್ಯಾಕುಚಿತ ತ್ರಾಣ ಒಓ/m2 63-3600( 80-430 190-310 ವ್ಯಾಕುಚಿತ ಮಾಡ್ಯುಲಸ್ ಉಓ/ m2 6-240( 70 200 ಸಂಕುಚಿತ ತ್ರಾಣ ಒಓ/ m2 100-480( 84 220

ವಿನ್ಯಾಸ ಕಾರ್ಯದಲ್ಲಿ, ಹೋಲಿಸಿದಾಗ, ಕೆಲವು ಗುಣಗಳ ಅನುಪಾತಗಳು ಹೀಗೆ ಕಂಡು ಬರುತ್ತದೆ: (ಈ ಹೋಲಿಕೆಗಳ ಉದ್ದೇಶ: ಯಾವ ಗುಣಲಕ್ಷಣಗಳಲ್ಲಿ ಸಮ್ಮಿಶ್ರಣ ವಸ್ತುಗಳನ್ನು ಲೋಹಗಳಿಗಿಂತ ಲಾಭದಾಯಕವಾಗಿ ಉಪಯೋಗಿಸಬಹುದು ಎಂಬ ಅರಿವಿಗಾಗಿ.)

ಲಕ್ಷಣ ಸಮ್ಮಿಶ್ರ ವಸ್ತು ಟೈಟಾನಿಯಂ ಲೋಹ ಸ್ಟೀಲ್ ಲೋಹ ಅಲ್ಯೂಮಿನಿಯಂ ಲೋಹ

ವ್ಯಾಕುಚಿತ ತ್ರಾಣ 2( 0.6 1 0.5

ವಿಶೇಷ ತ್ರಾಣ (ತ್ರಾಣ ಸಾಂದ್ರತೆ) 2-8( 1 1 1


ವ್ಯಾಕುಚಿತ ಮಾಡ್ಯುಲಸ್ 0.6-0.8 ( 0.5 1 0.4

ವಿಶೇಷ ಮಾಡ್ಯುಲಸ್ (ಮಾಡ್ಯುಲಸ್ ಸಾಂದ್ರತೆ) 1.4-4.5(

1 1 1

ಚಕ್ರೀಯ ದಣಿವನ್ನು ಎದುರಿಸುವ ಶಕ್ತಿ 1.6-4.5( 1.6 1 0.70


ಮೂಲ ಸಂಖ್ಯೆ 1 ಸ್ಟೀಲ್‍ಗೆ ಅನ್ವಯಿಸುತ್ತದೆ ( ತೋರಿಸಿರುವ ಸಂಖ್ಯೆಗಳು: ಅವುಗಳ ವ್ಯಾಪ್ತಿ ಸಮ್ಮಿಶ್ರಣದಲ್ಲಿ ಉಪಯೋಗಿಸಿರುವ ಪದಾರ್ಥಗಳ ಮೇಲೆ, ಅವುಗಳ ಪ್ರಮಾಣಗಳ ಮೇಲೆ ಮತ್ತು ಅವುಗಳ (ಎಳೆ/ನಾರುಗಳ) ಜೋಡಣೆ-ದಿಕ್ಕು (ಅಕ್ಷ)ಗಳ ಮೇಲೆ ಅವಲಂಬಿಸಿರುತ್ತದೆ. ಕೆಲವು ಉಷ್ಣಗುಣಗಳ ಹೋಲಿಕೆ: ಸಮ್ಮಿಶ್ರ ವಸ್ತು ಸ್ಟೀಲ್ ಲೋಹ ಅಲ್ಯೂಮಿನಿಯಂ ಲೋಹ ಉಷ್ಣ ವ್ಯಾಕೋಚನ ಲಿಅ ಘಿ 10-4 ≈ 0-33 11-18 22-23

ಉಷ್ಣ ವಾಹಕತೆ W/m ಲಿಅ 0.2-0.35 46-110 140-190

ಶಾಖ ನಿರೋಧಕ ಗುಣ ಲಿಅ 175-260 820-1150 350

ವಿದ್ಯುತ್ ಲಕ್ಷಣಗಳು: ವಿದ್ಯುತ್ ಕ್ಷೇತ್ರಗಳಲ್ಲಿ ಅನೇಕ ಸಮ್ಮಿಶ್ರ ವಸ್ತುಗಳ ಬಳಕೆಗಳಿದ್ದು ವಿನ್ಯಾಸ ಕಾರ್ಯದಲ್ಲಿ ಪರಿಗಣಿಸುವ ಕೆಲವು ಲಕ್ಷಣಗಳನ್ನು ಕೆಳಗೆ ಕೊಡಲಾಗಿದೆ: (ಸಂಖ್ಯೆಗಳು ಗಾಜಿನ ಎಳೆಯ ಆಧಾರಿತ ಸಮ್ಮಿಶ್ರ ವಸ್ತುಗಳ ವ್ಯಾಪ್ತಿ)

ಪವರ್ ಫ್ಯಾಕ್ಟರ್ (1 ಒಊZ; ಣಚಿಟಿ δ) 0.0025-0.03 ಪವರ್ ಫ್ಯಾಕ್ಟರ್ (100 ಒಊZ, ಣಚಿಟಿ δ) ≈ 0.0025 ಪರ್ಮಿಸಿವಿಟಿ (1 ಒಊZ) 3.8-4.7 ಎಣ್ಣೆಯಲ್ಲಿ ವಿದ್ಯುತ್ ತ್ರಾಣ (90ಲಿಅ, ಞಗಿ/mm ) 6-15 ಲ್ಯಾಮಿನೆಟ್ ಬ್ರೇಕ್‍ಡೌನ್ (ಎಣ್ಣೆಯಲ್ಲಿ, 90ಲಿಅ, ಞಗಿ) 5-50 ಇನ್‍ಸ್ಯೂಲೇಷನ್ ನಿರೋಧಕ ಶಕ್ತಿ (ನೀರಿನಲ್ಲಿ 24 ಗಂಟೆಗಳ ನಂತರ: ಮೆಗ್ ಓಹ್ಮ್ಸ್) 10-5ಘಿ104 ತಾಪಮಾನ ಮೌಲ್ಯ ನಿಗದಿ ಕ್ಲಾಸ್ ಃ-ಊ ರಾಸಾಯನಿಕ ಗುಣಗಳು: ರಾಸಾಯನಿಕ ಕೈಗಾರಿಕೆಯಲ್ಲಿ ಕಾಣಬರುವ ಕೆಳಕಂಡ ವಾತಾವರಣಗಳಲ್ಲಿ ಸಮ್ಮಿಶ್ರ ವಸ್ತು ಯಾವ ರೀತಿಯ ಪ್ರತಿಕ್ರಿಯೆ ತೋರಿಸುತ್ತದೆ ಎಂದು ವಿಶ್ಲೇಷಣೆ ಮಾಡಬೇಕಾಗುತ್ತದೆ: ಪ್ರಬಲ ಆಮ್ಲಗಳು ಪ್ರಬಲ ಆಕ್ಸಿಡೆಂಟ್‍ಗಳು ಸಾರರಿಕ್ತ ಪ್ರತ್ಯಾಮ್ಲ ಮತ್ತು ಲವಣಗಳು ಪ್ರಬಲ ಪ್ರತ್ಯಾಮ್ಲಗಳು ಕ್ಲೊರಿನೀಕೃತ ದ್ರಾವಕಗಳು ಎಸ್ಟರ್ಸ್ ಮತ್ತು ಕೀಟೋನ್ಸ್ ಆಲಿಫ್ಯಾಟಿಕ್ ದ್ರಾವಕಗಳು ಆರೋಮ್ಯಾಟಿಕ್ ದ್ರಾವಕಗಳು ವಿನ್ಯಾಸ ಇಂಜಿನಿಯರುಗಳಲ್ಲದೆ ಅನೇಕ ಪ್ಲಾಸ್ಟಿಕ್ ತಯಾರಿಕರೂ ಕೂಡ ಮೇಲ್ಕಂಡ ಲಕ್ಷಣಗಳನ್ನು ಅವರವರ ಪದಾರ್ಥಗಳಿಗೆ ಅನ್ವಯಿಸುವ ಹಾಗೆ ನಿರ್ಧರಿಸಿ ಗ್ರಾಹಕರಿಗೆ ಮಾಹಿತಿಯನ್ನು ಕೊಡುತ್ತಾರೆ. ಇತರ ಲಕ್ಷಣಗಳು: ಎಲ್ಲವನ್ನೂ ಪಟ್ಟಿ ಮಾಡಲು ಸಾಧ್ಯವಿಲ್ಲ ಆದರೆ ಬಳಕೆಗೆ ಅನುಗುಣವಾಗಿ ಸಮ್ಮಿಶ್ರ ವಸ್ತುಗಳ ಇನ್ನೂ ಅನೇಕ ಗುಣಲಕ್ಷಣಗಳಿವೆ. ಇವು ನಾನಾ ಕ್ಷೇತ್ರದಲ್ಲಿ ಅಳವಡಿಕೆಯಿಂದಾಗಿ ಹೊರಬಂದ ಮಾಹಿತಿಗಳಾಗಿದ್ದು ವಿನ್ಯಾಸ ಕಾರ್ಯಕ್ಕೆ ಬಳಸಲಾಗುತ್ತದೆ. ಪೂರ್ವ ನಿಶ್ಚಿತ ಗುಣಗಳು: ಮಿಶ್ರಣ ತಾಂತ್ರಿಕತೆಯಲ್ಲಿ ಒಂದು ಮಹತ್ವದ ಕಾರ್ಯವೆಂದರೆ ಮಿಶ್ರಣಕ್ಕೆ ಮುಂಚೆಯೇ ವಸ್ತುವಿಗೆ ಯಾವ ರೀತಿಯ ಲಕ್ಷಣಗಳಿರಬೇಕೆಂದು ಪೂರ್ವ ನಿರ್ಧಾರ ಮಾಡಬಹುದು (ಈ ಸೌಲಭ್ಯ ಲೋಹಗಳ ವಸ್ತುವಿನ ವಿನ್ಯಾಸದಲ್ಲಿ ಸಾಧ್ಯವಿಲ್ಲ. ಲೋಹಗಳ ಗುಣಗಳು ಮುಂಚಿನಿಂದ ವಸ್ತು ತಯಾರಿಕೆಯವರೇಗೂ ಒಂದೇ ಆಗಿರುತ್ತವೆ) ಉದಾಹರಣೆಗೆ: ಸಮ್ಮಿಶ್ರ ವಸ್ತುವಿಗೆ ಸಾಂದ್ರತೆ ಹೆಚ್ಚಿಸಬೇಕೆ? ಕಡಿಮೆ ಮಾಡಬೇಕೆ? ಎರಡೂ ಸಾಧ್ಯ. ವಸ್ತುವಿನಲ್ಲಿರುವ ಎಳೆ/ನೂಲುಗಳ, ಪ್ಲಾಸ್ಟಿಕ್‍ಗಳ ಅನುಪಾತ ಬದಲಿಸಿದರೆ ಸಾಕು. ಸಮ್ಮಿಶ್ರ ವಸ್ತು ಬಳಕೆಯಲ್ಲಿ ತಾಡನೆ ಸಹಿಸಬಹುದೆ? ಸಾಧ್ಯ. ಅದಕ್ಕೆ ಅನುಗುಣವಾದ ಪ್ಲಾಸ್ಟಿಕ್ಕನ್ನು ಮಿಳಿತ ಮಾಡಿದಾರಾಯಿತು. ಸಮ್ಮಿಶ್ರ ವಸ್ತುವಿನ ಬಳಕೆಯಲ್ಲಿ ಹೆಚ್ಚು ಎಳೆತದ ಬಲವನ್ನು ಪ್ರದರ್ಶಿಸಬೇಕೆ? ಸಾಧ್ಯ. ಎಳೆತವಿರುವ ಅಕ್ಷದಲ್ಲಿ ನೂಲುಗಳನ್ನು ಜೋಡಿಸಿದರಾಯಿತು. ಸಮ್ಮಿಶ್ರ ವಸ್ತುವನ್ನು ಮಂದೊಷ್ಣ ವಾಹಕವಾಗಿಯೋ ಅಥವಾ ಅವಿದ್ಯುದ್ವಾಹಕವಾಗಿಯೋ ಮಾಡಬೇಕೆ? ಸಾಧ್ಯ. ಪ್ಲಾಸ್ಟಿಕ್, ನೂಲುಗಳ ಆಯ್ಕೆಯಿಂದ. ಸಮ್ಮಿಶ್ರ ವಸ್ತುಗಳನ್ನು ವಿದ್ಯುದ್ವಾಹಕವಾಗಿ ಮಾಡಬಹುದೆ? ಸಾಧ್ಯ. ವಿದ್ಯುದ್ವಾಹಕ ನೂಲುಗಳಾದ ಕಾರ್ಬನ್ ನೂಲುಗಳನ್ನು ಉಪಯೋಗಿಸಬಹುದು. ಅಲ್ಲದೆ ಹೊರಕವಚವಾಗಿ ದಹನಗುಣದ ಬಣ್ಣ ಕೊಡಲು ಸಾಧ್ಯ. ಸಮ್ಮಿಶ್ರ ವಸ್ತುವಿಗೆ ಶಬ್ದ ನಿಯಂತ್ರಣ ಸಾಧ್ಯವೆ? ಸಾಧ್ಯ. ಸಮ್ಮಿಶ್ರಣದಲ್ಲಿ ಅಂತರ ವಸ್ತುಗಳಾಗಿ ಗಡಸು ನೊರೆಗಳನ್ನೋ ಮರದ ಹಲಗೆಗಳನ್ನೋ ಇಟ್ಟರಾಯಿತು. ಸಮ್ಮಿಶ್ರ ವಸ್ತುವನ್ನು ಹೊರಾಂಗಣದ ಬಳಕೆಯಿಂದ ಆಗುವ ಹಾನಿಗಳಿಂದ ರಕ್ಷಿಸಬಹುದೆ? ಸಾಧ್ಯ ಪಟ್ಟಿ 1 ರಲ್ಲಿ ಮೂರನೇ ವರ್ಗವನ್ನು ನೋಡಿ. ಇನ್ನಿತರ ಲಕ್ಷಣಗಳನ್ನು ಹೇಗೆ ಪಡೆಯಬಹುದೆಂದು ಅರಿವಾಗುತ್ತದೆ. ಮೇಲೆ ಹೇಳಿದ ಸೌಲಭ್ಯಗಳು ಸಮ್ಮಿಶ್ರ ವಸ್ತುವಿನ ವಿನ್ಯಾಸ ಕಾರ್ಯದಲ್ಲಿ ಮಾತ್ರ ಲಭ್ಯ. ಹೀಗಾಗಿ, ಸಮ್ಮಿಶ್ರ ವಸ್ತುಗಳ ರಚನೆಯಲ್ಲಿ ತೊಡಗಿರುವ ಇಂಜಿನಿಯರುಗಳಿಗೆ ಉತ್ಕøಷ್ಟ ವಸ್ತುಗಳನ್ನು ರೂಪಿಸಲು ಮಹಾವಕಾಶವಾಗಿ ಕಂಡು ಬಂದಿದೆ. ಲೋಹದ ವಸ್ತುವಿನೊಂದಿಗೆ ವಿನಿಮಯ: ವಿನ್ಯಾಸದ ಸಮಯದಲ್ಲಿ ಇಂಜಿನಿಯರುಗಳು ಯೋಚಿಸಬೇಕಾದ ಇನ್ನೊಂದು ವಿಷಯ-ಪ್ರಸ್ತುತ ಲೋಹದಲ್ಲಿರುವ ವಸ್ತುವನ್ನು ಸಮ್ಮಿಶ್ರ ವಸ್ತುವಾಗಿ ಪರಿವರ್ತಿಸಬಹುದೆ ಎಂದು ಉದಾಹರಣೆಗೆ ಪಟ್ಟಿ 6ಅನ್ನು ನೋಡಬಹುದು. ಪಟ್ಟಿ 6: ಲೋಹದ ವಸ್ತುಗಳ ವಿನಿಮಯ ಸಾಧ್ಯತೆ

ಪ್ರಸ್ತುತ ವಸ್ತುಗಳು, ಅವುಗಳ ಪದಾರ್ಥಗಳು ವಿನಿಮಯ ಸಾಧ್ಯತೆಯುಳ್ಳ ಸಮ್ಮಿಶ್ರದ ಗುಣಗಳು

1 ದೋಣಿಗಳು, ಹಡಗಿನ ಮೇಲ್ಭಾಗಗಳು (ಮರ, ಸ್ಟೀಲ್) ಉತ್ಕøಷ್ಟ ಸಂಕ್ಷಾರಣ ನಿರೋಧಕತೆ, ಹಗುರ, ಅಚ್ಚು ಹಾಕಬಲ್ಲ ಗುಣ, ದುರಸ್ತಿಗೆ ಒಳಪಡುವ ಗುಣ

2 ಮೋಟಾರ್ ಕಾರ್‍ನ ಹೊರ ಭಾಗಗಳು (ಸ್ಟೀಲ್) 1ರಲ್ಲಿ ಇದ್ದಂತೆ + ತಾಡನಾ (Imಠಿಚಿಛಿಣ) ನಿರೋಧಕತೆ + ಅಧಿಕ ಪ್ರಮಾಣದಲ್ಲಿ ಮಿತ ಖರ್ಚಿನಲ್ಲಿ ಉತ್ಪಾದಿಸುವ ಸಾಮಥ್ರ್ಯ + ಪುನಃ ಚಕ್ರೀಯತೆ

3 ರಾಸಾಯನಿಕ ಸಾಧನಗಳು (ಉಕ್ಕು ಮತ್ತು ಕಾಂಕ್ರೀಟ್) 1ರಲ್ಲಿ ಇದ್ದಂತೆ

4 ವಿಮಾನ, ಕ್ಷಿಪಣಿ, ಉಪಗ್ರಹಗಳ ಭಾಗಗಳು 2ರಲ್ಲಿ ಇದ್ದಂತೆ + ಅಧಿಕ ವಿಶೇಷ ತ್ರಾಣ + ಅಧಿಕ ವಿಶೇಷ ದೃಢತೆ

5 ಅಧಿಕ ವೋಲ್ಟೆಜ್ ನಿರೋಧಕ ಸ್ನಾನದ ತೊಟ್ಟಿ (ಸೆರಾಮಿಕ್, ಮರ) 1ರಲ್ಲಿ ಇದ್ದಂತೆ + ಉತ್ತಮವಾದ ವಿದ್ಯುನ್ನಿರೋಧಕ ಗುಣಗಳು

6 ಪೀಠೋಪಕರಣ (ಉಕ್ಕು, ಅಲ್ಯುಮಿನಿಯಂ, ಮರ) 1ರಲ್ಲಿ ಇದ್ದಂತೆ

7 ರಕ್ಷಣಾ ಶಿರಸ್ತ್ರಾಣ ಮತ್ತು ಶರೀರ ರಕ್ಷಣೆ, ವಾಹನ ರಕ್ಷಣೆ (ಉಕ್ಕು, ಸೆರಾಮಿಕ್ಸ್) ಉತ್ಕøಷ್ಟ ಗುಂಡು ನಿರೋಧಕತೆ, ಹಗುರ, ಅನುಕೂಲತೆಗೆ ಒದಗುವ ಗುಣ, ಅಧಿಕ ಪ್ರಮಾಣದ ಶಕ್ತಿ ಹೀರಿಕೆ

8 ಸಿವಿಲ್ ರಚನೆಗಳು (ಕಾಂಕ್ರೀಟ್ + ಉಕ್ಕು) ಹಳೆಯ ರಚನೆಗಳ ಪುನರ್ವಸತೀಕರಣ. ಉದಾ: ಭೂಕಂಪನಾನಂತರದ, ಹಳೆಯ ಸೇತುವೆ


ಮೇಲೆ ತಿಳಿಸಿದ ಎಲ್ಲಾ ಗುಣಲಕ್ಷಣಗಳೂ ಸಮ್ಮಿಶ್ರಣದ ಅಂಗಗಳಾದ ಎಳೆ, ನೂಲು ಮತ್ತು ಪ್ಲಾಸ್ಟಿಕ್ ಮಾಧ್ಯಮದಿಂದ ಮೂಡಿ ಬಂದಂತವು, ಒಂದು ಸಮ್ಮಿಶ್ರಣದಲ್ಲಿ ಎಳೆ/ನೂಲು ಭಾಗವೆಷ್ಟು, ಪ್ಲಾಸ್ಟಿಕ್ ಭಾಗವೆಷ್ಟು ಎಂಬ ಅನುಪಾತ ಬಹಳ ಮುಖ್ಯ, ಇದನ್ನು ಎರಡು ರೀತಿಯಲ್ಲಿ ನೋಡಬಹುದು - ಸಮ್ಮಿಶ್ರಣದಲ್ಲಿ ನೂಲಿನ ಅಂಶ-ತೂಕ ರೀತ್ಯ - ಸಮ್ಮಿಶ್ರಣದಲ್ಲಿ ನೂಲಿನ ಅಂಶ-ಗಾತ್ರ ರೀತ್ಯ ಸಮ್ಮಿಶ್ರ ವಸ್ತುವಿನ ಒಂದು ಹಲಗೆಯನ್ನು ಉದಾಹರಣೆಗೆ ತೆಗೆದುಕೊಂಡರೆ, ಹಲಗೆಯಲ್ಲಿ ಯಾವ ದಿಕ್ಕಿನಲ್ಲಿ ನೂಲು (ತೂಕದ ಲೆಕ್ಕದಿಂದಾಗಲೀ, ಗಾತ್ರದ ಲೆಕ್ಕದಿಂದಾಗಲೀ) ಹೆಚ್ಚಾಗಿ ಇರುತ್ತದೋ, ಆ ದಿಕ್ಕಿನಲ್ಲಿ ಹಲಗೆಯ ತ್ರಾಣ ಹಾಗೂ ದೃಢತೆ ಕೂಡ ಹೆಚ್ಚಾಗಿರುತ್ತದೆ. ಅಂದರೆ, ಗರಿಷ್ಠ ಗುಣಗಳು ದೊರೆಯಬೇಕಾದರೆ ಒಂದೇ ದಿಕ್ಕಿನಲ್ಲಿ ನೂಲು ಜೋಡಿಸಬೇಕು. ಇದಕ್ಕೆ ಏಕಮುಖ ಜೋಡಣೆ ಎನ್ನಬಹುದು. ನೂಲುಗಳನ್ನು ಅಡ್ಡಡ್ಡಾಗಿ ಜೋಡಿಸಿದರೆ, ಅದು ದ್ವಿಮುಖ ಜೋಡಣೆಯಾಗುತ್ತದೆ. ತ್ರಾಣ ಮತ್ತು ದೃಢತೆ ಕೂಡ ದ್ವಿಮುಖ ದಿಕ್ಕಿನಲ್ಲಿ ಬದಲಾಯಿಸುತ್ತವೆ. ಇಲ್ಲವೇ ಹಲಗೆಯಲ್ಲಿ ಎಲ್ಲ ನೂಲುಗಳನ್ನು ಯಾದೃಚ್ಛಿಕವಾಗಿ ಜೋಡಿಸಿದರೆ ತ್ರಾಣ ಹಾಗೂ ದೃಢತೆ ಗುಣಗಳು ಕಮ್ಮಿಯಾಗಿ ಎಲ್ಲೆಡೆಯೂ ಹೆಚ್ಚು ಕಮ್ಮಿ ಕನಿಷ್ಠವಾಗಿ ಒಂದೇ ಸಮನಾಗಿ ತೋರುತ್ತವೆ, ಚಿತ್ರ 8ರಲ್ಲಿ ಸಮ್ಮಿಶ್ರಣದ ಈ ವರ್ತನೆಯನ್ನು ಚಿತ್ರ ರೂಪದಲ್ಲಿ ತೋರಿಸಿದೆ. ಮೇಲೆ ಚರ್ಚಿಸಿದ ಯಾಂತ್ರಿಕ ಗುಣಗಳು ಮಾತ್ರವಲ್ಲದೆ, ಇನ್ನೂ ಅನೇಕ ನೂಲು ಪ್ಲಾಸ್ಟಿಕ್ ಮೇಲೆ ಅವಲಂಬಿತವಾದ ಗುಣಲಕ್ಷಣಗಳು ಹೀಗೆಯೇ ಅಕ್ಷ ನಿರ್ದೇಶಿತವಾಗಿ ವರ್ತಿಸುತ್ತವೆ.

ಚಿತ್ರ-8-1

ಗಾಜು ನೂಲಿನ ಅಂಶ (% ಅಂಶ-ತೂಕ)

ಚಿತ್ರ-8-2

ಗಾಜು ನೂಲಿನ ಅಂಶ (% ಅಂಶ-ಗಾತ್ರ) ಚಿತ್ರ:8 ಒಂದು ಸಮ್ಮಿಶ್ರ ಹಲಗೆಯಲ್ಲಿ ನೂಲಿನ ಅಂಶದ ಪಾತ್ರ: (ಉದಾ: ಗಾಜುನೂಲು + ಥರ್ಮೋಸೆಟ್ ಪ್ಲಾಸ್ಟಿಕ್ ಸಮ್ಮಿಶ್ರಣ)

           1:ಏಕಮುಖ ಜೋಡಣೆ 2: ದ್ವಿಮುಖ ಜೋಡಣೆ  3: ಯಾದೃಚ್ಛಿಕ ಜೋಡಣೆ

ವಸ್ತುರಚನೆ, ತಯಾರಿಕೆ: ಈ ಘಟ್ಟದಲ್ಲಿ ಇದುವರೆಗೂ ಊಹಾ ಪ್ರಪಂಚದಲ್ಲಿ ಸೃಷ್ಟಿಯಾಗಿದ್ದ ವಸ್ತುವನ್ನು ವಾಸ್ತವ ಪ್ರಪಂಚಕ್ಕೆ ತರಲಾಗುತ್ತೆ. ಇದಕ್ಕೇ ಮೀಸಲಾದ ತಜ್ಞರು ಈ ಕಾರ್ಯವನ್ನು ಕೈಗೊಳ್ಳುತ್ತಾರೆ. ಇದು ಕೆಲವು ಹಂತಗಳಲ್ಲಿ ಜರಗುತ್ತದೆ: ಅಚ್ಚುಗಳು, ಯಂತ್ರೋಪಕರಣಗಳು: ಇವುಗಳು ವಸ್ತು ರಚನಾ ಕಾರ್ಯದಲ್ಲಿ, ವಸ್ತುವಿಗೆ ಆಕಾರ, ಹೊರ ಮೆರಗು ಕೊಡುವುದಲ್ಲದೆ, ಪದಾರ್ಥಗಳು ಸಮ್ಮಿಶ್ರಣವಾಗಿ ಹೊರಬರುವ ತನಕ, ಪದಾರ್ಥಗಳ ಜೋಡಣೆಗಳನ್ನು ಕಾಪಾಡುತ್ತವೆ. ಕೆಲವೊಮ್ಮೆ ಮಿಶ್ರಣ ಕಾರ್ಯದಲ್ಲಿ ವಸ್ತುವಿಗೆ ಒತ್ತಡ ಕೊಡಬೇಕಾಗುತ್ತದೆ ಇಲ್ಲವೇ ಅದರ ತಾಪಮಾನವನ್ನು ಹೆಚ್ಚಿಸಬೇಕಾಗುತ್ತದೆ. ಇವೆಲ್ಲವನ್ನು ಅಚ್ಚುಗಳು ನಿರ್ವಹಿಸುತ್ತವೆ. ಕೆಲವೊಮ್ಮೆ ತಯಾರು ಮಾಡಬೇಕಾದ ವಸ್ತುಗಳ ಸಂಖ್ಯೆ ಬಹಳ ಕಡಿಮೆಯಾಗಿದ್ದಿರಬಹುದು. ಆಗ ತಾತ್ಕಾಲಿಕ ಕಾರ್ಯಕ್ಕೆಂದೇ ಅಚ್ಚುಗಳನ್ನು ತಯಾರಿಸುತ್ತಾರೆ. ಇವಕ್ಕೆ `ತಾತ್ಕಾಲಿಕ ಅಚ್ಚುಗಳು ಎನ್ನಬಹುದು. ಇವನ್ನು ರಬ್ಬರ್, ಮರ, ಪ್ಲಾಸ್ಟರ್ ಆಫ್ ಪ್ಯಾರಿಸ್, ಸಿಮೆಂಟ್, ಗಡಸು ನೊರೆಗಳಲ್ಲಿ ಮಾಡಬಹುದು. ಮಾಡುವ ರೀತಿಗಳು ಅನೇಕ. ಅಚ್ಚು ತಯಾರಿಕೆಗೆ ಬೇಕಾಗುವ ಮೊದಲನೆಯ ವಿವರ: ವಸ್ತುವಿನ ಆಕಾರ ಮತ್ತು ಅದರ ಆಯಾಮಗಳು ಹಾಗೂ ಆಯಾಮಗಳ ಮಿತಿಗಳು. ಅವುಗಳ ಆಧಾರದ ಮೇಲೆ ಅಚ್ಚುಗಳನ್ನು ಎರಕವಾಗಿ ಹೊಯ್ದೋ, ಕತ್ತರಿಸಿಯೋ, ಸೇರಿಸಿಯೋ, ಅಂಟಿಸಿಯೋ ಆಕಾರವನ್ನು ಪಡೆಯುತ್ತಾರೆ. ತಯಾರು ಮಾಡಬೇಕಾದ ವಸ್ತುಗಳ ಸಂಖ್ಯೆ ಹೆಚ್ಚಾಗಿದ್ದು ಮರುಬಳಕೆ ಹೆಚ್ಚಾಗಿದ್ದಲ್ಲಿ, ಅಚ್ಚುಗಳನ್ನು ಸ್ಟೀಲ್, ಅಲ್ಯೂಮಿನಿಯಮ್ ಅಥವಾ ಸಮ್ಮಿಶ್ರ ವಸ್ತುಗಳಿಂದಲೇ ಮಾಡಲಾಗುತ್ತದೆ, ಅನಂತರ ಅಚ್ಚಿನ ಕೆಲವು ಭಾಗಗಳಲ್ಲಿ ಮೆರಗು ಮತ್ತಿತ್ತರ ವಿಶಿಷ್ಟ ರೂಪಗಳನ್ನು ಕೊಡಲಾಗುತ್ತದೆ. ಕೆಲವೊಮ್ಮೆ, ಮಿಶ್ರಣ ಕಾರ್ಯದಲ್ಲಿ ವಸ್ತುವಿನ ತಾಪಮಾನ 150ಲಿ-200ಲಿಅ ವರೆಗೂ ಇರಬಹುದು. ಇಂತಹ ಸನ್ನಿವೇಶದಲ್ಲಿ ಅಚ್ಚು ಆಕಾರದಲ್ಲಿ ದೊಡ್ಡದಾಗುತ್ತದೆ (ಉಷ್ಣ ವ್ಯಾಕೋಚನ) ಅದನ್ನು ಅನುಸರಿಸಿ ವಸ್ತುವು ನಿರ್ದಿಷ್ಟ ಉದ್ದ ಗಾತ್ರದಿಂದ ಬದಲಾಯಿಸಬಹುದು. ಅದಕ್ಕಾಗಿ ಇನ್‍ವರ್ ಲೋಹದಿಂದ ಅಚ್ಚುಗಳನ್ನು (ಶೂನ್ಯ ವ್ಯಾಕೋಚನ) ಉಪಯೋಗಿಸಬಹುದು. ಅಥವಾ ಕಾರ್ಬನ್ ಎಳೆಗಳ ಆಧಾರಿತ ಸಮ್ಮಿಶ್ರ ವಸ್ತುವಿನಿಂದಲೇ ತಯಾರಿಸಿದ ಅಚ್ಚನ್ನೂ ಉಪಯೋಗಿಸಬಹುದು. ಇವುಗಳ ಉಷ್ಣ ವ್ಯಾಕೋಚನ ಶೂನ್ಯ ಸಮೀಪ ಮೌಲ್ಯ ಪಡೆದಿರುತ್ತೆ. ಕೆಲವೊಮ್ಮೆ ತಯಾರಾದ ವಸ್ತುವಿನ ಆಕಾರ ಚೆಂಡಿನ ಹಾಗೆ ಇದ್ದು, ಒಳ ಆಕಾರಕ್ಕೆ ಇಟ್ಟಿದ್ದ ಅಚ್ಚಿನ ಭಾಗ ಹೊರಗೆ ತೆಗೆಯಲು ಸಾಧ್ಯವಾಗದಿರಬಹುದು. ಆಗ ಅಂತಹ ಅಚ್ಚನ್ನು ಕಡಿಮೆ ದ್ರವನ ಬಿಂದು ಯುಟಿಕ್ಟಿಕ್ ಮಿಶ್ರಲೋಹ ಅಥವಾ ನೀರಿನಲ್ಲಿ ಕರಗಿ ಹೊರಗೆ ತೆಗೆಯಲು ಆಗುವ ಮರಳು ಅಂಟು ಮಾಧ್ಯಮದ ಮಿಶ್ರಣ ಪದಾರ್ಥಗಳಿಂದ ಮಾಡಿ, ಹೊರತೆಗೆಯಲು ಸೌಲಭ್ಯ ಮಾಡಿಕೊಳ್ಳಬೇಕಾಗುತ್ತದೆ. ಒಟ್ಟಿನಲ್ಲಿ ಅಚ್ಚುಗಳ ತಯಾರಿಕೆ ಬಹಳ ಪರಿಣತಕಾರ್ಯ. ಬಹುವಾಗಿ ಅನುಭವವುಳ್ಳ ತಜ್ಞರು ಕೈಗೊಳ್ಳಬೇಕಾಗುತ್ತದೆ. ಕೆಳ ಕಾಣುವ ಚಿತ್ರಗಳಲ್ಲಿ ಕೆಲವು ಅಚ್ಚುಗಳನ್ನು ಉದಾಹರಣೆಗಳಾಗಿ ತೋರಿಸಲಾಗಿದೆ:

ಚಿತ್ರ-9

ಚಿತ್ರ-10

ಚಿತ್ರ-11


ಚಿತ್ರ 9: ಸಮ್ಮಿಶ್ರ ವಸ್ತುವಿನಿಂದಲೇ ತಯಾರಾದ ಅಚ್ಚು. ಇದರಿಂದ ಸಮ್ಮಿಶ್ರ್ರ ಆ್ಯಂಟಿನಾ ಡಿಷ್‍ಗಳು ತಯಾರಾಗುತ್ತವೆ. ಚಿತ್ರ 10: ಸ್ಟೀಲ್‍ನಿಂದ ಮಾಡಿದ ಅಚ್ಚುಗಳು. ಚಿತ್ರ 11: ಅಲ್ಯೂಮಿನಿಯಮ್‍ನಿಂದ ಮಾಡಿದ ಅಚ್ಚುಗಳು. ಹೆಚ್ಚು ತಾಪಮಾನದಲ್ಲಿ ಉಪಯೋಗಿಸುವ ಈ ಎರಡು ಲೋಹದ ಅಚ್ಚುಗಳು ಉಪಗ್ರಹದ ಬಳಕೆಗೆ ಬೇಕಾಗುವ ಸಮ್ಮಿಶ್ರ ವಸ್ತುಗಳ ತಯಾರಿಕೆಗೆ ಉಪಯೋಗಿಸಲಾಗಿದೆ. ಸಮ್ಮಿಶ್ರಣ ಮಾಡುವ ಯಂತ್ರಗಳು: ಇವುಗಳಲ್ಲಿ ಅನೇಕ ಬಗೆಯಿವೆ. ಕೆಲವು ಮಾನವ ಚಾಲಿತ ಯಂತ್ರಗಳಾದರೆ ಮತ್ತೆ ಹಲವು ಪೂರ್ಣವಾಗಿ ಕಂಪ್ಯೂಟರ್ ಚಾಲಿತವಾಗಿವೆ. ರಚನೆಯ ವಿಧಾನಗಳನ್ನು ಅನುಸರಿಸಿ ಯಂತ್ರಗಳನ್ನು ರೂಪಿಸಲಾಗುತ್ತದೆ. ಯಂತ್ರದ ಉತ್ಪತ್ತಿ ಎಷ್ಟಿರಬೇಕು ಎಂಬುದರ ಮೇಲೆ ಯಂತ್ರದ ಆಕಾರ, ವ್ಯವಸ್ಥೆಗಳು ಅವಲಂಬಿಸಿರುತ್ತವೆ. ಈ ಎಲ್ಲ ಯಂತ್ರಗಳೂ ಮೂಲಭೂತವಾಗಿ ಮಾಡಬೇಕಾದ ಕಾರ್ಯಗಳು ಕೆಲವಿವೆ: ಎಳೆ/ನೂಲು/ನಾರುಗಳನ್ನು, ಅವುಗಳೊಂದಿಗೆ ಮಿಶ್ರಣ ಮಾಡುವ ಪ್ಲಾಸ್ಟಿಕ್ ಮಾಧ್ಯಮವನ್ನು ಪೂರ್ವ ಸಿದ್ಧತೆಯೊಂದಿಗೆ ಅಚ್ಚಿನಲ್ಲಿ ಅಳವಡಿಸುವುದು. ಈ ಕಾರ್ಯದಲ್ಲಿ ಪದಾರ್ಥಗಳ ಬಳಕೆಯನ್ನು ಹತೋಟಿ ಯಲ್ಲಿಟ್ಟಿರುವುದು ವಸ್ತುವನ್ನು ಒಂದೊಂದಾಗಿ ಮಾಡಿ ಮುಗಿಸಬಹುದು ಇಲ್ಲವೇ ನಿರಂತರವಾಗಿ ಮಾಡುವ ಸೌಲಭ್ಯ ಕೊಡುವುದು

ಯಂತ್ರ ಚಾಲನೆಯಲ್ಲಿ ತೊಡಗಿರುವ ಸಿಬ್ಬಂದಿಗೆ, ತಯಾರಿಕೆಯ ಪರಿಸರಕ್ಕೆ ಯಾವ ರೀತಿಯ ಧಕ್ಕೆಯೂ ಬರದ ಹಾಗೆ ಕಾಪಾಡುವುದು

ವಸ್ತು ಪರಿವರ್ತನೆಗೆ ಬೇಕಾಗುವ ಕೆಲವು ಕ್ರಿಯೆಗಳನ್ನು ಒದಗಿಸುವುದು (ಉದಾ: ತಾಪಮಾನ ಹೆಚ್ಚುವಿಕೆ; ನಿರ್ವಾತ ಪರಿಸರ; ಅನಿಲದಿಂದಲೋ ದ್ರವಗಳಿಂದಲೋ ಒತ್ತಡ ಕೊಡುವುದು, ನೂಲುಗಳ ಪ್ರಮಾಣ ಮತ್ತು ಅವುಗಳ ಜೋಡಣೆಯ ದಿಕ್ಕು ಅಥವಾ ಅಕ್ಷಗಳ ಮೇಲೆ ನಿಯಂತ್ರಣ ಇತ್ಯಾದಿ). ಬಹು ಮುಖ್ಯವಾದ ಕ್ರಿಯೆಯೆಂದರೆ- ಪಾಲಿಮರೀಕರಣ (ತಾಪಮಾನ ಹೆಚ್ಚಿದಾಗ ಥರ್ಮೋಪ್ಲಾಸ್ಟಿಕ್ ಇರುವ ಮಿಶ್ರಣವಾದರೆ, ಥರ್ಮೋಪ್ಲಾಸ್ಟಿಕ್ ಮೆತ್ತಗಾಗಿ, ನಂತರ ಕರಗಿ, ಅಚ್ಚಿನಲ್ಲಿರುವ ಆಕಾರವನ್ನು ಪೂರ್ಣವಾಗಿ ಆವರಿಸುತ್ತದೆ ನಂತರ ತಾಪಮಾನದ ಏರಿಕೆಯನ್ನು ತಡೆಗಟ್ಟಿ ವಸ್ತುವನ್ನು ಅಚ್ಚಿನಿಂದ ಹೊರತೆಗೆಯಬಹುದು. ಥರ್ಮೋಸೆಟ್ಟಿಂಗ್ ಪ್ಲಾಸ್ಟಿಕ್ ಮಿಶ್ರಣದಲ್ಲಿದ್ದಾಗ, ತಾಪಮಾನ ಹೆಚ್ಚಾದಂತೆ, ಪ್ಲಾಸ್ಟಿಕ್ ಮೆತ್ತಗಾಗಿ, ಕರಗಿ, ಅಚ್ಚಿನ ಆಕಾರ ಮತ್ತು ನೂಲು ಮಾಧ್ಯಮಗಳನ್ನು ಸಂಪೂರ್ಣವಾಗಿ ಆವರಿಸಿ, ಅನಂತರ ಹಂತ ಹಂತದಲ್ಲಿ ದ್ರವರೂಪದಿಂದ ಘನ ರೂಪವನ್ನು ಹೊಂದುತ್ತದೆ. ಈ ಕ್ರಿಯೆಯಲ್ಲಿ ಸ್ನಿಗ್ಧತೆ ಹೆಚ್ಚಾಗುತ್ತ ಬಂದು ಪಾಕಗಟ್ಟಿ (ಹರಿಯಲಾರದ ಸ್ಥಿತಿ) ಅನಂತರ ಘನೀಭವಿಸುತ್ತದೆ. ಕೊನೆಯ ಘಟ್ಟದಲ್ಲಿ ವಸ್ತುವಿನ ಆಕಾರ ಅಚ್ಚಿನಲ್ಲಿ ಮೂಡುತ್ತದೆ) ಸಮ್ಮಿಶ್ರಣ ವಿಧಾನಗಳು: ಉದ್ಯಮದಲ್ಲಿ ಇವು ಅನೇಕ ರೀತಿ ರೂಪಗಳನ್ನು ಹೊಂದಿವೆ. ಕೆಲವು ಮುಖ್ಯ ವಿಧಾನಗಳನ್ನು ಚಿತ್ರ ರೂಪದಲ್ಲಿ ಕೆಳಗೆ ವಿವರಿಸಲಾಗಿದೆ.:ಚಿತ್ರ 12 - ಚಿತ್ರ 23 ತಯಾರಿಕೆಯ ವಿಧಾನಗಳು ಉಲ್ಲೇಖನಾ ಚಿತ್ರಗಳು ತಯಾರಿಕೆಯ ವಿಧಾನ


ಚಿತ್ರ-12 ಕೈಜೋಡಣೆ: ಅತ್ಯಂತ ಸರಳವಾದ ಪದ್ಧತಿ. ಕೈನಲ್ಲೇ ಅಚ್ಚಿನ(1)ಮೇಲೆ ಪ್ರಬಲಗೊಲಿಸಿ (2) ಜೋಡಿಸಿ ದ್ರವ ರೂಪದ ರೆಸಿನ್‍ನನ್ನು (3) ಸುರಿದು, ಒದ್ದೆಮಾಡಿ, ಬ್ರಷ್ (4) ಮತ್ತು ರೋಲರ್ (5) ಗಳಿಂದ ಮಿಶ್ರಿತ ಪದಾರ್ಥಗಳನ್ನು ಒತ್ತಿ, ಹಿಡಿದು ನಿಲ್ಲಿಸಿ, ಅನಂತರ ಕೊಠಡಿ ಉಷ್ಣತೆಯಲ್ಲಿಯೋ ಅಥವಾ ಹೆಚ್ಚಿನ ತಾಪಮಾನದಲ್ಲೋ ರೆಸಿನ್‍ನನ್ನು ಪಾಲಿಮರೀಕರಣ ಮಾಡುವುದು.


ಚಿತ್ರ-13 ಸಿಂಚನ: ಈ ರೀತಿಯಲ್ಲಿ, ನೂಲುಗಳು ನಿರಂತರವಾಗಿದ್ದು ಕೈಲಿ ಹಿಡಿದ ಕತ್ತರಿಸುವ ಗನ್‍ನಿಂದ ಚಿಕ್ಕ ಚಿಕ್ಕದಾಗಿ ಕತ್ತರಿಸಿ ಅಚ್ಚಿನ (1) ಮೇಲೆ ನೂಲನ್ನು ಎಸೆಯುತ್ತದೆ. ಏಕಕಾಲಿಕವಾಗಿ, ಮತ್ತೊಂದು ಗನ್ (3) ನಿಂದ ರೆಸಿನ್‍ನನ್ನು ಕೂಡ ಹಾಗೆಯೇ ಎರಚಿ, ಎರಡು ಮಾಧ್ಯಮಗಳನ್ನೂ ಬೆರೆಸಿಕೊಂಡು ಸಿಂಚನವಾಗಿ ಅಚ್ಚಿನ ಮೇಲೆ ಸಮ್ಮಿಶ್ರಣವಾಗುತ್ತದೆ



ಚಿತ್ರ-14 ನಿರ್ವಾತ ಚೀಲ ಅಚ್ಚೊತ್ತುವಿಕೆ: ಈ ರೀತಿಯಲ್ಲಿ ಅಚ್ಚಿನ (1) ಮೇಲೆ ಮೊದಲು ನೂಲಿನ/ರೆಸಿನ್‍ನ ಮಾಧ್ಯಮಗಳನ್ನಿಟ್ಟು, ಸುತ್ತಲೂ ಅವನ್ನು ನಿರ್ವಾತ ಚೀಲದಿಂದ (3) ಆವರಿಸಿ, ಚೀಲಕ್ಕೂ ಸಮ್ಮಿಶ್ರಣ ನಡುವೆ ಇರುವ ಗಾಳಿಯನ್ನು ಹೊರಗೆಳೆದಾಗ, ಚೀಲದ ಮೇಲೆ 1 ಬಾರ್‍ನಷ್ಟು ಅಟ್ಮಾಸ್ಪಿಯರಿಕ್ ಒತ್ತಡ ಬೀಳುತ್ತದೆ. ಇದು ಮಿಶ್ರಣವನ್ನು ಒತ್ತಿ ಹಿಡಿಯುತ್ತದೆ.


ಚಿತ್ರ-15 ಒತ್ತಡ ಚೀಲ ಅಚ್ಚೋತ್ತುವಿಕೆ: ಇದು ನಿರ್ವಾತ ಚೀಲ ಅಚ್ಚೊತ್ತುವಿಕೆಯ ಪದ್ಧತಿಗೆ ವ್ಯತಿರಿಕ್ತವಾದದ್ದು. ಇಲ್ಲಿ ಅಚ್ಚಿನೊಳಗೆ (1)ಮಿಶ್ರಣವಿಟ್ಟನಂತರ, (2) ಚೀಲದಂತಹ ಮಾಧ್ಯಮವನ್ನು (3) ಹೊದೆಸಿ ಅದರ ಮೇಲೆ ಗಾಳಿಯ ಒತ್ತಡ ಹಾಕುವುದು (4)



ಚಿತ್ರ-16 ಆಟೋಕ್ಲೇವ್ ಅಚ್ಚೊತ್ತುವಿಕೆ: ಈ ರೀತಿಯಲ್ಲಿ ಅಚ್ಚನ್ನು (1) ಆಟೋಕ್ಲೇವ್ (2) ಎಂಬ ಯಂತ್ರದಲ್ಲಿಟ್ಟು, ಮಿಶ್ರಣವನ್ನು, (2) ನಿರ್ವಾತ ಚೀಲದಲ್ಲಿ(3) ಆವರಿಸಿ, ಚೀಲದ ಹೊರಗಡೆ ಒತ್ತಡ(ಗಾಳಿಯಿಂದ ಇಲ್ಲವೇ ನೈಟ್ರೋಜನ್ ಅನಿಲದಿಂದ) ಕೊಟ್ಟು, ವಸ್ತುವನ್ನು ಏರಿಸಿದ ತಾಪಮಾನದಲ್ಲಿ ಪಾಲಿಮರೀಕರಣ ಮಾಡಲಾಗುತ್ತದೆ. ಈ ಪದ್ಧತಿಯಿಂದ ಹೊರಬರುವ ವಸ್ತುಗಳ ಬಳಕೆ ವಿಮಾನ, ಕ್ಷಿಪಣಿ, ಬಾಹ್ಯಾಕಾಶ ಕ್ಷೇತ್ರಗಳಲ್ಲಿ ಹೆಚ್ಚು.


ಚಿತ್ರ-17 ರೆಸಿನ್ ವರ್ಗಾವಣಾ ಅಚ್ಚೊತ್ತುವಿಕೆ: ಈ ರೀತಿಯಲ್ಲಿ ಅಚ್ಚು ಎರಡು ಭಾಗಗಳಲ್ಲಿದ್ದು (1,2) ಮಧ್ಯಾಂತರ ಜಾಗದಲ್ಲಿ ಮೊದಲು ಪ್ರಬಲಿತವನ್ನು (3) ನ್ನು ಜೋಡಿಸಿಟ್ಟು ನಂತರ ರೆಸಿನ್ ಮಿಶ್ರಣ(4) ವನ್ನು ಒಳಗೆ ತಳ್ಳುತ್ತಾರೆ. ಈ ಕಾರ್ಯದಲ್ಲಿ ಸಹಕಾರಕ್ಕೆ ನಿರ್ವಾತವನ್ನು (5) ಬಳಸಬಹುದು.


ಚಿತ್ರ-18 ತಂತು ಸುತ್ತುವಿಕೆ (ಹೆಲಿಕಲ್) ಇಲ್ಲಿ ಅಚ್ಚು ಉರುಳೆ ಆಕಾರದಲ್ಲಿದ್ದು ಯಂತ್ರದಲ್ಲಿ ತಿರುಗಿತ್ತಿರುತ್ತದೆ (1). ನೂಲುಗಳು (2) ರೆಸಿನ್ ಜೊತೆಗೆ ಹೊಂದಿಕೊಳ್ಳಲು ರೆಸಿನ್ ತೋಯಿಸಿ (3) ಮೂಲಕ ಹೋಗಿ, ಒದ್ದೆಯಾಗಿ ಅಚ್ಚಿನ ಸುತ್ತಲೂ ಸುತ್ತಿಕೊಂಡು ವಸ್ತುವಿನ ರೂಪವನ್ನು ಪಡೆಯುತ್ತದೆ. ನೂಲು ರೆಸಿನ್‍ನೊಡನೆ ಪೂರ್ವ ಮಿಶ್ರಿತವಾಗಿರುವ ರೂಪದಲ್ಲೂ ಇರಬಹುದು. ಕೊಳಾಯಿಗಳು ಈ ಕ್ರಮದಲ್ಲಿ ತಯಾರಾಗುತ್ತವೆ.


ಚಿತ್ರ-19 ತಂತು ಸುತ್ತುವಿಕೆ (ಧ್ರುವೀಯ): ಮೇಲೆ ಹೇಳಿದ ರೀತಿಯೇ ಇದು. ಆದರೆ ಇಲ್ಲಿ ಅಚ್ಚು (1) ಗೋಳಕಲ್ಪ ಆಕಾರದಲ್ಲಿರುತ್ತದೆ. ಸಮ್ಮಿಶ್ರ ಒತ್ತಡ ಪೀಪಾಯಿಗಳನ್ನು ಮಾಡುವ ರೀತಿಯಿದು.


ಚಿತ್ರ-20 ಸಂಪೀಡನ ಅಚ್ಚೊತ್ತುವಿಕೆ (ಬಿಸಿ/ಶೈತ್ಯ ಒತ್ತುವಿಕೆ): ಈ ಪದ್ಧತಿಯಲ್ಲಿ ಮಿಶ್ರಣವನ್ನು (2) ಎರಡು ಭಾಗಗಳುಳ್ಳ ಅಚ್ಚಿನ (1) ಅಂತರದಲ್ಲಿಟ್ಟು, ಜಲಜನ್ಯ ಒತ್ತುವಿಕೆಯಿಂದ ಒತ್ತಡ ಮಾಡಲಾಗುತ್ತದೆ, ಜೊತೆಗೆ ಅಚ್ಚನ್ನು ವಿದ್ಯುತ್‍ನಿಂದಲೋ, ಬಿಸಿ ಎಣ್ಣೆಯ ಮಾಧ್ಯಮ ದಿಂದಲೋ ಹೆಚ್ಚಿನ ತಾಪಮಾನಕ್ಕೆ ಕೂಡ ಕೊಂಡೊಯ್ಯಬಹುದು.


ಚಿತ್ರ-21 ಪಲ್‍ಟ್ರೂಷನ್: ಇದೊಂದು ಮಹತ್ವ ಪೂರ್ಣ ಪದ್ಧತಿಯಾಗಿದೆ. ನೂಲುಗಳನ್ನು (1) ಒಂದುಗೂಡಿಸಿ, ರೆಸಿನ್‍ನನ್ನು ತೋಯಿಸಿ (2) ಒದ್ದೆಮಾಡಿ ನಂತರ ವಸ್ತುವಿನ ಆಕಾರವನ್ನು ಕೊಡಬಲ್ಲ ಅಚ್ಚಿನಲ್ಲಿ (3) ಒದ್ದೆಯಾದ ನೂಲಿನ ಮಾಧ್ಯಮವನ್ನು ಎಳೆಯುತ್ತಾರೆ. ಅಚ್ಚನ್ನು ಹೆಚ್ಚಿನ ತಾಪಮಾನದಲ್ಲಿಟ್ಟಿದ್ದು, ಅಚ್ಚಿನ ಮೂಲಕ ಪ್ರಯಾಣಿಸುವಾಗ, ಸಮ್ಮಿಶ್ರವು ಪಾಲಿಮರೀಕರಣವಾಗಿ ಹೊರಬಂದಾಗ ಉಪಯೋಗಿಸುವ ವಸ್ತುವಾಗಿ ನಿರಂತರ ಉದ್ದಗಳಲ್ಲಿ ದೊರೆಯುತ್ತದೆ. ಈ ವಸ್ತುಗಳನ್ನು (ಆ್ಯಂಗಲ್, ಕೊಳವೆ, ನಳಿಕೆ ವಿಶೇಷ ವಿಭಾಗದಲ್ಲಿ) ನಿರ್ಮಾಣ ಕ್ಷೇತ್ರದಲ್ಲಿ ಬಹುವಾಗಿ ಉಪಯೋಗಿಸಲಾಗುತ್ತಿದೆ.


ಚಿತ್ರ-22 ನಿರಂತರ ಹಾಳೆ ನಿರ್ಮಾಣ: ಇದು ನಿರಂತರವಾಗಿ ಸಮ್ಮಿಶ್ರ ಹಲಗೆಗಳನ್ನು ತಯಾರಿಸುವ ರೀತಿ ಗಾಜಿನ ಪದರಗಳನ್ನು (1) ರೆಸಿನ್‍ನೊಡನೆ ಬೆರೆಸಿ (2) ಸ್ವಲ್ಪ ಒತ್ತಡದೊಂದಿಗೆ ಹದ ಕೋಣೆಯ ಮೂಲಕ ಅಧಿಕ ತಾಪಮಾನದೊಂದಿಗೆ ಹಾಯಿಸಿದಾಗ, ಹಲಗೆಯಂತಹ ವಸ್ತುವು ಹೊರಗೆ (4) ನಿರಂತರವಾಗಿ ಲಭಿಸುತ್ತದೆ.

ಚಿತ್ರ-23 ಇಬ್ಬಂಧಿ ಅಚ್ಚೊತ್ತುವಿಕೆ: ಈ ಹಲಗೆಗಳನ್ನು ಹೊರ ಚರ್ಮ(1)ಗಳ ಮಧ್ಯದಲ್ಲಿ ಗಡಸು ನೊರೆಯಿಂದ (2) ಕೂಡಿಸಿ ಅಂಟಿಸುತ್ತಾರೆ. ಈ ಕಾರ್ಯವನ್ನು ನಿರಂತರವಾಗಿ ಮಾಡುವ ಯಂತ್ರಗಳೂ ಈಗ ಲಭ್ಯ.


ಮೇಲೆ ಉಲ್ಲೇಖಿಸಿದ ವಿಧಾನಗಳಲ್ಲದೆ ಪ್ರಪಂಚಾದ್ಯಂತ ಇನ್ನೂ ಅನೇಕ ವಿಧಿ-ವಿಧಾನಗಳು ಬಳಕೆಯಲ್ಲಿದ್ದು ಎಲ್ಲವನ್ನೂ ಪಟ್ಟಿಮಾಡುವುದು ಕಷ್ಟ. ಉದಾ: ಥರ್ಮೊಸೆಟ್ ಟ್ರಾನ್ಸ್‍ಫರ್ ಮೋಲ್ಡಿಂಗ್; ನಿರ್ವಾತ ಇಂಪ್ರೀಗ್ನೇಷನ್, ರೀನ್‍ಫೋರ್ಡ್ಸ್ ರೆಸಿನ್ ಇನ್‍ಜೆಕ್ಷನ್ ಮೋಲ್ಡಿಂಗ್, ಸೆನ್‍ಟ್ರಿಫ್ಯೂಗಲ್ ಕಾಸ್ಟಿಂಗ್, ಕಂಟಿನ್ಯೂಸ್ ಪೈಪ್ ಮೇಕಿಂಗ್, ಥರ್ಮೋ ಫಾರ್ಮಿಂಗ್ (ಥರ್ಮೋಪ್ಲಾಸ್ಟಿಕ್‍ಗಳಿಕೆ), ಇನ್‍ಜೆಕ್ಷನ್ ಮೋಲ್ಡಿಂಗ್ (ಥರ್ಮೋಪ್ಲಾಸ್ಟಿಕ್‍ಗಳಿಗೆ) ಇತ್ಯಾದಿ. ಕಾರ್ಬನ್-ಕಾರ್ಬನ್ ಸಮ್ಮಿಶ್ರ ವಸ್ತು ತಯಾರಿಕೆ: ಇದೊಂದು ವಿಶಿಷ್ಟ ತಯಾರಿಕಾ ವಿಧಾನ. ಕಾರ್ಬನ್-ಕಾರ್ಬನ್ ಸಮ್ಮಿಶ್ರಣ ವಸ್ತು ವಿಮಾನ ಹಾಗೂ ಬಾಹ್ಯಾಕಾಶ ಕ್ಷೇತ್ರದಲ್ಲಿ ಬಹಳವಾಗಿಯೇ ಉಪಯೋಗ ಪಡೆದಿದೆ. 1650ಲಿಅ ತಾಪಮಾನದವರೆಗೂ ತಡೆದುಕೊಳ್ಳುವ ಶಕ್ತಿ ಹೊಂದಿದ್ದು, ತೀವ್ರ ಕಡಿಮೆ ನೀಳ ವ್ಯಾಕೋಚನ ಸಹಾಂಕ, ಉತ್ಕರ್ಷಣ ನಿರೋಧಕತೆ ಮತ್ತು ತಾಡನಾ ನಿರೋಧಕತೆ ಗುಣಗಳನ್ನು ಹೊಂದಿರುತ್ತದೆ. ಇದಕ್ಕೆ ಕಾರಣವೆಂದರೆ: ಈ ವಸ್ತುವಿನಲ್ಲಿ ಒಂದರಿಂದ ಹಲವಾರು ಅಕ್ಷಗಳಲ್ಲಿ ಕಾರ್ಬನ್ ನೂಲುಗಳನ್ನು ಪೂರ್ವ ನಿರ್ಧಾರದಿಂದಲೇ ಜೋಡಿಸಿ, ಆ ಜ್ಯಾಮಿತಿಯಲ್ಲೇ ಅವನ್ನು ಕಾರ್ಬನ್ ಮಾತೃಕೆ ಜೊತೆ ಒಂದು ಗೂಡಿಸುವುದು. ಈ ಒಂದುಗೂಡಿಸುವ ಕಾರ್ಯ ಎರಡು ಬಗೆಗಳಾಗಿವೆ. ಒಂದು : ಪೂರ್ವವರ್ತಿ ಆರ್ಗಾನಿಕ್ ಪದಾರ್ಥದ ಕಾರ್ಬನೀಕರಣ. ಇನ್ನೊಂದು: ಪೈರೋಲಿಟಿಕ್ ಗ್ರಾಫೈಟಿನ ಬಾಷ್ಪ ಸಂಚಯನ (ಇದು 800ಲಿಅ-1500ಲಿಅ ವ್ಯಾಪ್ತಿಯ ತಾಪಮಾನದಲ್ಲಿ ಆಗುತ್ತದೆ). ಈ ಮಿಶ್ರಣದಲ್ಲಿ ಕಾರ್ಬನ್ ನೂಲುಗಳು ನಿರಂತರವಾಗಿ ಉದ್ದವಿರಬಹುದು ಅಥವಾ ಸಣ್ಣದಾಗಿ ಕತ್ತರಿಸಿದ ತುಂಡುಗಳಾಗಿರಬಹುದು. ತಯಾರಿಕೆಯ ಕೊನೆಯ ಹಂತಗಳು: ಈ ಹಂತದಲ್ಲಿ ತಯಾರಾದ ವಸ್ತುಗಳು ಅನೇಕ ಚಿಕ್ಕ (ಆದರೆ ಮುಖ್ಯವಾದ) ಕಾರ್ಯಗಳಿಗೆ ಒದಗುವುದರಿಂದ ಗ್ರಾಹಕರಿಗೆ ಮುಟ್ಟುವ ಸ್ಥಿತಿಯನ್ನು ಪಡೆಯುತ್ತವೆ ಅವುಗಳು: ಕತ್ತರಿಸುವುದು, ಸವರುವುದು, ಕೊರೆಯುವುದು, ಬೊಲ್ಟ್ ಮಾಡುವುದು, ಬಣ್ಣ ಹಾಕುವುದು, ಜೋಡಣೆ/ಕೂಡಿಸುವುದು ಇತ್ಯಾದಿ. ಈ ಎಲ್ಲ ಕಾರ್ಯಗಳಿಗೂ ವಿದ್ಯುತ್ ಚಾಲಿತ, ವಾಯು ಚಾಲಿತ ಉಪಕರಣಗಳನ್ನು ಉದ್ಯಮಗಳು ಹೇರಳವಾಗಿ ಉಪಯೋಗಿಸುತ್ತಿವೆ. ಸಮ್ಮಿಶ್ರ ವಸ್ತುಗಳಿಗೆಂತಲೇ ಈಗ ಉದ್ಯಮದಲ್ಲಿ ಕತ್ತರಿಸುವ ಸಾಧನಗಳನ್ನು ಮಾಡಲಾಗುತ್ತಿದೆ. ಏಕೆಂದರೆ, ಸಮ್ಮಿಶ್ರ ವಸ್ತುವನ್ನು ಕತ್ತರಿಸುವ ವೇಗ ಬೇರೆಯಾಗಿರಬೇಕು. ಅನೇಕ ವೇಳೆ ಕತ್ತರಿಸುವ ಯಂತ್ರಗಳು ಅತಿಯಾಗಿ ಸವೆಯುತ್ತವೆ. ಕತ್ತರಿಸುವ ಕಾರ್ಯದಲ್ಲಿ ಪರಿಸರಕ್ಕೆ ದೂಳು ಏರಿಸುತ್ತದೆ. ಇದನ್ನು ನಿರ್ವಾತ ತಂತ್ರದಿಂದ ಮೂಲಕ ಪರಿಹಾರ ಮಾಡಬೇಕು. ಪ್ರಪಂಚಾದ್ಯಂತ ಪ್ರತಿದಿನವೂ ರಚನಾ ವಿಧಾನಗಳಲ್ಲಿ ತಾಂತ್ರಿಕ, ವೈಜ್ಞಾನಿಕ ಜ್ಞಾನ ವೃದ್ಧಿಯಿಂದಾಗಿ, ಪ್ರಗತಿಪರ ಬದಲಾವಣೆಗಳು ಆಗುತ್ತಲೇ ಇವೆ. ಉದಾಹರಣೆಗೆ: ಪೂರ್ವ ನಿರ್ಮಿತ ವ್ಯವಸ್ಥಾ ವಸ್ತುಗಳು. ಇಂತಹ ವಸ್ತುಗಳನ್ನು ಯಾವುದಾದರೂ ಒಂದು ಕೇಂದ್ರಿಯ ಸ್ಥಳದಲ್ಲಿ ತಯಾರಿಸಿ, ಗ್ರಾಹಕರಿರುವೆಡೆ ಕೊಂಡೊಯ್ದು ಸ್ಥಳದಲ್ಲೇ ಜೋಡಿಸುವ ಸೌಲಭ್ಯವಿದೆ. ಇದರಿಂದಾಗಿ ಮೂಡಿಬಂದಿರುವ ಬಳಕೆಗಳು- ವಸತಿಗಳು, ಟ್ಯಾಂಕ್‍ಗಳು, ಪೈಪುಗಳು, ಪ್ರಾಜೆಕ್ಟ್ ಕಾರ್ಯಗಾರಗಳು, ತಾತ್ಕಾಲಿಕ ಕಾರ್ಯಾಲಯಗಳು, ನೀರು ಸಾಗಿಸುವ ನಾಲೆಯ ಅಸ್ತರಿಗಳು, ಸೇತುವೆಗಳು ಇತ್ಯಾದಿ. ಪ್ರಸ್ತುತ ನಿರ್ಮಾಣ ವಸ್ತುಗಳಾದ ಸ್ಟೀಲ್, ಕಾಂಕ್ರಿಟ್‍ನಿಂದ ಈ ಬಗೆಯ ಕಾರ್ಯಗಳನ್ನು ನಿರ್ವಹಿಸುವುದು ತೀವ್ರ ಕಷ್ಟಕರ ಸಂಗತಿ. ಆಧುನಿಕ ಮಾನವ ಬಾಹ್ಯಾಕಾಶದತ್ತ ವಲಸೆ ಹೋಗುವ ಸಂಭವವಿದೆ. ಹೀಗಾಗಿ ಬಾಹ್ಯಾಕಾಶದಲ್ಲಿ, ಭೂಮಿಯಿಂದ ಕೊಂಡೊಯ್ದ ಸಮ್ಮಿಶ್ರ ಪದಾರ್ಥಗಳನ್ನು, ಸಮ್ಮಿಶ್ರ ವಸ್ತುವನ್ನಾಗಿ ಅಲ್ಲಿರುವ ನಿರ್ವಾತ ಪರಿಸರದಲ್ಲಿ ಹೇಗೆ ಪರಿವರ್ತಿಸಬಹುದು ಎಂದು ಅಮೆರಿಕೆಯಲ್ಲಿ ಅಧ್ಯಯನ ನಡೆಯುತ್ತಿದೆ. ಮೇಲೆ ಕಾಣಿಸಿದ ರಚನಾ ವಿಧಾನಗಳನ್ನು ಅವಲೋಕಿಸಿದರೆ, ಸಮ್ಮಿಶ್ರ ವಸ್ತುಗಳ ಬಗ್ಗೆ ವಿಶ್ವಾದಂತ್ಯ ಆಗಿರುವ ಪ್ರಗತಿ ಮೆಚ್ಚತಕ್ಕದ್ದೇ. ಈ ತಾಂತ್ರಿಕತೆಯಲ್ಲಿ ರಾಸಾಯನಿಕ ವಿಜ್ಞಾನ, ವಸ್ತು ವಿಜ್ಞಾನ, ಯಾಂತ್ರಿಕ/ರಚನಾ ವಿಜ್ಞಾನ ತಾಂತ್ರಿಕತೆ, ಎಲೆಕ್ಟ್ರಾನಿಕ್ಸ್, ಟೆಕ್ಸ್‍ಟೈಲ್, ಕಂಪ್ಯೂಟರ್ ತಾಂತ್ರಿಕತೆಗಳೆಲ್ಲವೂ ಅಡಗಿವೆ. ಒಂದು ವಿಧದಲ್ಲಿ ಈ ತಾಂತ್ರಿಕತೆಯೇ ಸಮ್ಮಿಶ್ರಣದಿಂದ ಮೂಡಿ ಬರುವ `ಸಂಕರಣ'ಗೆ ಒಂದು ಉತ್ತಮ ಉದಾಹರಣೆ! ಗುಣಮಟ್ಟ: ಉಳಿದ ಉದ್ಯಮಗಳಲ್ಲಿರುವಂತೆ ಸಮ್ಮಿಶ್ರ ವಸ್ತುಗಳಿಗೂ ಗುಣಮಟ್ಟವನ್ನು ಗ್ರಾಹಕರಿಗೆ ತೃಪ್ತಿಕರವಾದ ರೀತಿಯಲ್ಲಿ ಒದಗಿಸುವುದು ಅನಿವಾರ್ಯ. ಇದಕ್ಕಾಗಿ ನಾನಾ ಹಂತಗಳಲ್ಲಿ ನಡೆಯುವ ಕಾರ್ಯಗಳನ್ನು ಸಂಕ್ಷಿಪ್ತವಾಗಿ ಕೆಳಗೆ ಸೂಚಿಸಲಾಗಿದೆ. (ಚಿ) ವಸ್ತು ವಿನ್ಯಾಸ ಹಂತದಲ್ಲಿ ವಿನ್ಯಾಸದ ವಿಶ್ವಾಸಾರ್ಹತೆ (b) ವಿನ್ಯಾಸದಲ್ಲಿ ಉಪಯೋಗಿಸುವ ಪದಾರ್ಥಗಳ ಲಕ್ಷಣಗಳ ವಿಶ್ವಾಸಾರ್ಹತೆ/ವಸ್ತು ಪರೀಕ್ಷೆಯ ದತ್ತಾಂಶ (ಛಿ) ವಸ್ತುವನ್ನು ಆದಿಮ ಪ್ರರೂಪವಾಗಿ ನಿರ್ಮಿಸಿ ಅದನ್ನು ಪ್ರಯೋಗಕ್ಕೆ ಒಳಪಡಿಸಿ ಅದು ಪೂರ್ವ ನಿಶ್ಚಿತ ಗುಣಮಟ್ಟವನ್ನು ಪ್ರದರ್ಶಿಸುತ್ತಿದೆಯೇ ಎಂದು ಖಚಿತ ಪಡಿಸುವುದು (ವಿನ್ಯಾಸ ಮೌಲ್ಯಮಾಪನ) (ಜ) ತಯಾರಿಕೆಯಲ್ಲಿ ಉಪಯೋಗಿಸುವ ಪ್ರತಿಯೊಂದು ಪದಾರ್ಥಗಳನ್ನು ಪರಿಶೀಲಿಸಿ ಅವುಗಳ ಗುಣಲಕ್ಷಣಗಳ ವ್ಯಾಪ್ತಿಯನ್ನು ನೋಡಿ, ಅವು ಒಪ್ಪಬಹುದಾದ ವ್ಯಾಪ್ತಿಯಲ್ಲಿವೆಯೇ ಎಂದು ನಿರ್ಧರಿಸುವುದು. (e) ತಯಾರಿಕೆಯ ಕ್ರಿಯೆಯಲ್ಲಿ ಕಾಣಬರುವ ಎಲ್ಲ ನಿಯಂತ್ರಣ ಪ್ರಮಿತಿಗಳ ಮೇಲೆ ಹತೋಟಿಯಿಟ್ಟಿರುವುದು (ಪ್ರಕ್ರಿಯಾ ನಿಯಂತ್ರಣ). ಈಗಿನ ಉದ್ಯಮಗಳಲ್ಲಿ `ಗುಣಮಟ್ಟ ನಿರ್ವಹಣೆ ಒಂದು ಕಾರ್ಪೋರೇಟ್ ಧ್ಯೇಯವಾಗಿದೆ. ಅದರ ವ್ಯಾಪ್ತಿಯಲ್ಲಿ ಕೆಳಕಂಡ ವಿಶಿಷ್ಟ ವ್ಯವಸ್ಥೆಗಳನ್ನು ಕಾಣಬಹುದು: (ಚಿ) ಐಎಸ್‍ಒ ಪದ್ಧತಿ ಜಾರಿಗೆ ತರುವುದು (b) ವಸ್ತು ಪರೀಕ್ಷಾ ಪ್ರಯೋಗಾಲಯಗಳು (ಇದರಲ್ಲಿ ಯಾಂತ್ರಿಕ, ಭೌತಿಕ ಮತ್ತು ರಾಸಾಯನಿಕ ಗುಣಗಳ ಪರೀಕ್ಷೆ ಮಾಡಲು ಉಪಕರಣಗಳಿರಬೇಕು). ಮಾಡುವ ರೀತಿ ನೀತಿಗಳು ವ್ಯವಸ್ಥಿತಿಯಲ್ಲಿರಬೇಕು (b) ಸ್ಥಾಯಿ ಮತ್ತು ಚಲನಾತ್ಮಕ ಪರೀಕ್ಷೆ (ಛಿ) ಧ್ವಂಸ ಮತ್ತು ಧ್ವಂಸ ರಹಿತ ಪರೀಕ್ಷೆ (ಜ) ದುರಸ್ತಿ ತಂತ್ರಜ್ಞಾನ ಮತ್ತು ಅದರ ಸಮರ್ಥತೆ. (e) ಗುಣಮಟ್ಟದ ದಾಖಲಾತಿ (ಜಿ) ಗುಣಮಟ್ಟದ ಪರಿಶೋಧನೆ (g) ಗುಣಮಟ್ಟ ತಜ್ಞರಿಂದ ಪ್ರಮಾಣ ಪತ್ರ ಮತ್ತು ಪ್ರಕ್ರಿಯೆ ಬಗ್ಗೆ ತಜ್ಞರಿಂದ ಪ್ರಮಾಣ ಪತ್ರ ನಿರ್ದಿಷ್ಟ ವಿವರಣೆ ಮತ್ತು ಶಿಷ್ಟತೆ: ಸಮ್ಮಿಶ್ರಣ ತಾಂತ್ರಿಕತೆಯಲ್ಲಿ ಇಂಜಿನಿಯರಿಂಗ್ ಪರೀಕ್ಷಾ ಶಿಷ್ಟತೆ, ವಸ್ತು ಮತ್ತು ಪ್ರಕ್ರಿಯೆ ನಿರ್ದಿಷ್ಟ ವಿವರಣೆಗಳನ್ನು ಬಹಳವಾಗಿಯೇ ಬಳಸಲಾಗುತ್ತಿದೆ. ಇಂಜಿನಿಯರಿಂಗ್ ಪರೀಕ್ಷೆಗಳು (ಭೌತ, ಯಾಂತ್ರಿಕ, ರಾಸಾಯನಿಕ, ಉಷ್ಣ ಸಂಬಂಧೀ ಮತ್ತು ವಿದ್ಯುತ್ ಸಂಬಂಧಿತವಾದವುಗಳು). ಸಮ್ಮಿಶ್ರಣ ತಾಂತ್ರಿಕತೆಯಲ್ಲಿ ಶಿಷ್ಟತೆಗಳನ್ನು ಅಳವಡಿಸಲು ಅನೇಕ ಸಂಸ್ಥೆಗಳು ಕೆಲಸ ಮಾಡುತ್ತಿವೆ. ಅವುಗಳಲ್ಲಿ ಕೆಲವು: * ಅಮೆರಿಕನ್ ಸೊಸೈಟಿ ಫಾರ್ ಟೆಸ್ಟಿಂಗ್ ಅಂಡ್ ಮೆಟಿರೀಯಲ್ಸ್ (ಎಎಸ್‍ಟಿಎಂ), ಯುಎಸ್‍ಎ * ಸಪ್ಲೇಯರ್ಸ್ ಆಫ್ ಅಡ್ವಾನ್ಡ್ಸ್ ಕಂಪೋಸಿಟ್ಸ್ ಮೆಟಿರೀಯಲ್ಸ್ ಅಸೋಸಿಯೇಷನ್ (ಎಸ್‍ಎಸಿಎಂಎ), ಯುಎಸ್‍ಎ * ಡಿರ್ಪಾಟ್‍ಮೆಂಟ್ ಆಫ್ ಡಿಫೆನ್ಸ್ (ಡಿಒಡಿ), ಯುಎಸ್‍ಎ * ಕಂಪೋಸಿಟ್ ಮೆಟಿರೀಯಲ್ಸ್ ಕ್ಯಾರಕ್ಟರೈಸೇಷನ್ ಇನ್‍ಕಾರ್ಪೋರೇಟೆಡ್ (ಸಿಎಂಸಿ), ಯುಎಸ್‍ಎ * ಯುರೋಪಿಯನ್ ಅಸೋಸಿಯೇಷನ್ ಆಫ್ ಏರೋಸ್ಪೇಸ್ ಮ್ಯಾಮ್ ಫ್ಯಾಕ್ಷನ್ಸ್ (ಎಇಸಿಎಂಎ) * ಜಪಾನಿಸ್ ಇಂಡಸ್ಟ್ರೀಯಲ್ ಸ್ಟ್ಯಾಂಡರ್ಡ್ಸ್ (ಜೆಐಎಸ್) * ಜರ್ಮನ್ ಸ್ಟ್ಯಾಂಡರ್ಡ್ಸ್ (ಡಿಐಎನ್) * ಫ್ರೆಂಚ್ ಸ್ಟ್ಯಾಂಡರ್ಡ್ಸ್ (ಎಎಫ್‍ಎನ್‍ಒಆರ್) * ಐಎಸ್‍ಒ/ಟಿಸಿಬಿ1 ಸಬ್ ಕಮಿಟಿ ಆಫ್ ಐಎಸ್‍ಒ, ಐಎಸ್‍ಒ ಸ್ಟ್ಯಾಂಡರ್ಡ್ಸ್ * ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (ಎನ್‍ಎಎಸ್‍ಎ), ಯುಎಸ್‍ಎ * ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್‍ಎಎ), ಯುಎಸ್‍ಎ ಸಕ್ರ್ಯೂಲರ್ಸ್ * ಇತರೆ ಪ್ರೊಪ್ರೈಟರಿ/ಪ್ರೈವೇಟ್ ಸ್ಟ್ಯಾಂಡರ್ಡ್ಸ್ ಭಾರತದಲ್ಲಿ ಭಾರತೀಯ ಮಾನಕ ಸಂಸ್ಥೆ (ಬಿಐಎಸ್) ಕೂಡ ಈ ದಿಕ್ಕಿನಲ್ಲಿ ಕಾರ್ಯ ನಡೆಸಿ ಹಲವಾರು ಶಿಷ್ಟತೆಗಳನ್ನು ನಿಗದಿಪಡಿಸಿದೆ. ಬಳಕೆ - ವಿಶ್ವಾದ್ಯಂತ: ನೂರು ವರ್ಷಗಳ ಹಿಂದಿನಿಂದಲೇ ಪ್ಲಾಸ್ಟಿಕ್ ಮತ್ತು ರಬ್ಬರ್‍ಗಳ ಬಳಕೆ ಪ್ರಪಂಚದಲ್ಲಿ ಪ್ರಬಲವಾಗತೊಡಗಿತು. ಇದಕ್ಕೆ ಕಾರಣ ಮೋಟರ್ ಕಾರ್ ಮತ್ತು ಎಲೆಕ್ಟ್ರಾನಿಕ್ಸ್ ಉದ್ಯಮಗಳ ಏಳಿಗೆ. ಸಮ್ಮಿಶ್ರ ವಸ್ತುಗಳ ಬಳಕೆಗೆ ಕಳೆದ ಐದು ದಶಕಗಳಲ್ಲಿ ಪುಟ ಕೊಟ್ಟ ಉದ್ಯಮಗಳೆಂದರೆ: ವಿಮಾನ ತಯಾರಿಕೆ, ಕ್ಷಿಪಣಿ ಮತ್ತು ರಾಕೆಟ್ ಹಾಗೂ ಮಾನವ ನಿರ್ಮಿತ ಉಪಗ್ರಹಗಳ ಉದ್ಯಮಗಳು ಮತ್ತು ಸಾರಿಗೆ/ಕ್ರೀಡಾ ಸರಕು ಕೈಗಾರಿಕೆ. ಈ ಕ್ಷೇತ್ರದಲ್ಲಿ ಬಳಕೆಯ ಪ್ರಮಾಣ ಮಾತ್ರವಲ್ಲ ಬಳಕೆಯ ರೀತಿನೀತಿಗಳೂ ಬದಲಾಗಿವೆ. ವಿಮಾನ, ರಾಕೆಟ್ ಕ್ಷೇತ್ರಗಳಲ್ಲಂತೂ ಬೆಲೆ ಎಷ್ಟಾದರೂ ಸರಿ, ಗುಣಲಕ್ಷಣಗಳು ಪ್ರಸ್ತುತ ಪದಾರ್ಥಗಳಿಗಿಂತ ಹೆಚ್ಚಿದ್ದರೆ ಆ ಪದಾರ್ಥಗಳು ತಕ್ಷಣವೇ ಬಳಕೆಗೆ ಬರುತ್ತವೆ. ರಕ್ಷಣಾ ಕ್ಷೇತ್ರದಲ್ಲೂ ಅಷ್ಟೆ. ಈಗ ವಿಶ್ವಾದ್ಯಂತ 2500ಕ್ಕೂ ಹೆಚ್ಚು ಸಮ್ಮಿಶ್ರ ಪದಾರ್ಥಗಳ ತಯಾರಿಕೆಯ ಉದ್ಯಮಗಳಿವೆ. ಈ ಉದ್ಯಮಗಳಿಗೆ ಸಹಕಾರವಾಗಿ 250ರಷ್ಟು ಅಚ್ಚು ತಯಾರಿಕರಿದ್ದಾರೆ; 550ರಷ್ಟು ಯಂತ್ರ ತಯಾರಕರಿದ್ದಾರೆ. 100ರಷ್ಟು ತಂತ್ರಾಂಶ ಕಂಪೆನಿಗಳಿವೆ; 200 ಸಮಾಲೋಚಕ ಕನ್ಸ್‍ಲ್ಟೆಂಟ್ ಕಂಪೆನಿಗಳಿವೆ; 300ಕ್ಕೂ ಹೆಚ್ಚು ಸಂಶೋಧನಾ ಕೇಂದ್ರಗಳು ತರಬೇತಿ ಕೇಂದ್ರಗಳು ಇತರ ಸೇವಾ ಕ್ಷೇತ್ರಗಳಿವೆ. 1200ಕ್ಕೂ ಹೆಚ್ಚು ವಸ್ತು ತಯಾರಿಕರಿದ್ದಾರೆ ವಸ್ತು ತಯಾರಕರನ್ನು ಆಯಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೃಷಿ, ವೈಮಾನಿಕ, ಸಲಕರಣಾ ನಿರ್ಮಾಣ, ಕಟ್ಟಡ ನಿರ್ಮಾಣ, ಗ್ರಾಹಕ ಉತ್ಪಾದನೆ. ಹೀಗೆ ವಿಂಗಡಿಸಬಹುದು. ಈ ವಿಂಗಡನೆಗಳಿಂದಲೇ ಸಮ್ಮಿಶ್ರ ವಸ್ತುಗಳ ಬಳಕೆಯ ವ್ಯಾಪ್ತಿ ಎಷ್ಟಿದೆ ಎಂದು ಊಹಿಸಬಹುದು. ವಿಶ್ವಾದ್ಯಂತ ಬಳಕೆಯ ಗಾತ್ರದ ಬಗ್ಗೆ ಇರುವ ಮಾಹಿತಿಗಳ ಪ್ರಕಾರ: 2004ರಲ್ಲಿ 530,000 ಟನ್ನುಗಳಷ್ಟಿದ್ದು, 2010ರಲ್ಲಿ 760,000 ಟನ್ನುಗಳಷ್ಟು ಹೆಚ್ಚಾಗುವ ಸಂಭವವಿದೆ. ವಿಶ್ವಾದ್ಯಂತ ಬಳಕೆಗಳನ್ನು ಕೆಳಕಂಡ ಚಿತ್ರಗಳೊಡನೆ ಪಟ್ಟಿ ಮಾಡಲಾಗಿದೆ. ಬಳಕೆಗಳು ದಿನಂಪ್ರತಿ ಹೊಸದಾಗುತ್ತಿವೆ; ಬದಲಾಗುತ್ತಿವೆ. ಹೀಗಾಗಿ ಇವೆಲ್ಲ ಒಂದು ಸೂಚನಾರ್ಹ ಉದಾಹರಣೆಗಳೆಂದೇ ನೋಡಬೇಕು ಅಷ್ಟೆ.

ಚಿತ್ರ-24

ಚಿತ್ರ 24: ನಿರ್ಮಾಣ ಕ್ಷೇತ್ರ ಮತ್ತು ಇತರ ಕೈಗಾರಿಕೆಗಳು ವಸತಿ ಮತ್ತು ಕಾರ್ಯಗಾರಗಳ ನಿರ್ಮಾಣಕ್ಕೆ ಸಮ್ಮಿಶ್ರ ವಸ್ತುಗಳನ್ನು ಫಲಕಗಳಾಗಿ, ಛಾವಣೆಗಳಾಗಿ, ಕಿಟಕಿ ಬಾಗಿಲುಗಳಾಗಿ, ಶೌಚಾಲಯ ವ್ಯವಸ್ಥೆಯಾಗಿ ಉಪಯೋಗಿಸಲಾಗುತ್ತದೆ. ಇತ್ತೀಚೆಗೆ ಆಗುತ್ತಿರುವ ನೂತನ ಪ್ರಯೋಗಗಳು: ಹೊಸದಾಗಿ ಸಿದ್ಧಪಡಿಸಿದ ಸೇತುವೆಗಳು; ಇಲ್ಲವೇ ಭೂಕಂಪದ ನಂತರ ಕಾಂಕ್ರೀಟ್‍ನಲ್ಲಿದೆ ಪೂರ್ವ ರಚನೆಗಳನ್ನು ಸಮ್ಮಿಶ್ರ ವಸ್ತುವಿನಿಂದೊಳಗೂಡಿ, ದುರಸ್ತಿಮಾಡುವುದು. ಬಳಕೆಗಳ ವ್ಯಾಪ್ತಿಯಲ್ಲಿ ಕೊಳವೆಗಳು, ಸುರಂಗಗಳ, ರಸ್ತೆಯ ಬದಿಗಳನ್ನು ಧೃಢೀಕರಿಸುವ ಇತ್ಯಾದಿ ಉದಾಹರಣೆಗಳನ್ನು ಕಾಣಬಹುದು. ಸಮ್ಮಿಶ್ರ ವಸ್ತುವಿನ ಆಯ್ಕೆಗೆ ಸ್ಫೂರ್ಥಿತ ಗುಣ: ಪರಿಸರ ಮತ್ತು ರಾಸಾಯನಿಕ ನಿರೋಧಕ ಶಕ್ತಿ. ಯಂತ್ರದ ಭಾಗಗಳು, ಅಚ್ಚುಗಳು, ನಿರ್ಮಾಣ ದೂಲಗಳು, ರೋಬೋಟ್‍ಗಳ ಚಲನಾಂಗಗಳು, ನೇಯ್ಗೆ ಯಂತ್ರದಲ್ಲಿ ವೇಗ ಗತಿಯಲ್ಲಿ ಚಲಿಸುವ ಸಾಧನೆಗಳು ಇವೆಲ್ಲವೂ ಬಳಕೆಯ ವ್ಯಾಪ್ತಿಯ ಮತ್ತಷ್ಟು ಉದಾಹರಣೆಗಳು. ಇಲ್ಲಿ ಉಪಯೋಗಿಸುವ ವಿಶೇಷ ಗುಣಗಳು: ಸಮ್ಮಿಶ್ರ ವಸ್ತುಗಳ ಕಡಿಮೆ ಸಾಂದ್ರತೆ, ಉತ್ಕøಷ್ಟ ತ್ರಾಣ ಮತ್ತು ತಾಡನಾ ಶಕ್ತಿ.

ಚಿತ್ರ-25

ಚಿತ್ರ 25: ಸಾರಿಕೆ ಕ್ಷೇತ್ರ (ಭೂಮಿ ಹಾಗೂ ಸಮುದ್ರ) ಈ ಶಕ್ತಿಕ್ಷಾಮ ಪ್ರಪಂಚದಲ್ಲಿ ಮುಂದಕ್ಕೆ ಹೇಗೆ ಚಲಿಸುವುದು ಎಂಬುದೊಂದೇ ಗಹನವಾದ ಪ್ರಶ್ನೆ. ವೇಗ ಚಲನೆಗೆ ಹೆಚ್ಚಾಗಿ ಇಂಧನ ಉಪಯೋಗಿಸಬೇಕು. ಇಲ್ಲವೇ ಚಲಿಸುವ ಸಾಧನದ ತೂಕ ಕಮ್ಮಿಯಾಗಿರಬೇಕು. ಹೀಗಾಗಿ ಮೋಟಾರ್ ಕಾರ್‍ಗಳು, ಟ್ರಕ್‍ಗಳು, ಟ್ರೈನ್‍ಗಳು, ಬಸ್ಸುಗಳು, ಸಮುದ್ರಯಾನಕ್ಕೆ ಬೇಕಾಗುವ ದೋಣಿಗಳು - ಹಡಗುಗಳು. ಇವೆಲ್ಲವೂ ಕಡಿಮೆ ಸಾಂದ್ರತೆಯುಳ್ಳ ಹಾಗೂ ಪರಿಸರ ಶಕ್ತಿಗಳನ್ನು ನಿರೋಧಿಸಬಲ್ಲ ಸಮ್ಮಿಶ್ರವಸ್ತುಗಳ ಬಳಕೆಗೆ ಶರಣು ಹೋಗಿವೆ. ಇಡೀ ಭಾಗಗಳು ಅಥವಾ ಪೂರ್ಣ ವ್ಯವಸ್ಥೆಗಳೆಲ್ಲವೂ ಸಮ್ಮಿಶ್ರ ಬಳಕೆಗೆ ಒಳಗಾಗುತ್ತಿವೆ. ಇವುಗಳಲ್ಲಿ ಅನೇಕ ಭಾಗಗಳು, ವ್ಯವಸ್ಥೆಗಳು ಫರ್ಮೋಪ್ಲಾಸ್ಟಿಕ್ ಅವಲಂಬಿತ ಸಮ್ಮಿಶ್ರ ವಸ್ತುಗಳಾಗಿದ್ದು, ಪುನಃ ಚಕ್ರೀಕರಣ ಮಾಡುವ ಸಾಧ್ಯತೆ ಬಹಳವಾಗಿ ತೋರುತ್ತಿದೆ.


ಚಿತ್ರ-26

ಚಿತ್ರ 26: ಬಾಹ್ಯಾಕಾಶ ಕ್ಷೇತ್ರ ಹಾಗೂ ಆಧುನಿಕ ವಿಜ್ಞಾನ ಸಂಶೋಧನೆ ಈ ಕ್ಷೇತ್ರದಲ್ಲಿ ಕಳೆದ ಐದು ದಶಕಗಳಲ್ಲಿ ಆಗಿರುವ ತಾಂತ್ರಿಕ ಹಾಗೂ ವೈಜ್ಞಾನಿಕ ಪ್ರಗತಿಗಳು ಅನೇಕ. ಅವುಗಳಿಂದಾಗಿ ಇಂದು ಮಾನವ ನಮ್ಮ ಸೂರ್ಯ ಮಂಡಲದಲ್ಲಿನ ಇತರೇ ಗ್ರಹಗಳಿಗೆ ವಲಸೆ ಹೋಗುವ ದಿಟ್ಟತನ ಪಡೆದಿದ್ದಾನೆ. ಅಷ್ಟೇ ಅಲ್ಲದೆ ಚಂದ್ರ, ಮಂಗಳ ಗ್ರಹಗಳಿಂದ ಅಲ್ಲಿ ದೊರಕುವ ವಿಶೇಷ ಲೋಹಗಳನ್ನು ಭೂಮಿಗೆ ವರ್ಗಾಯಿಸುವ ಯೋಜನೆಯನ್ನೂ ಮಾಡುತ್ತಿದ್ದನೆ. ಚಂದ್ರನ ಬಳಿ ಸೌರಭ ಶಕ್ತಿ ತಯಾರಿಕೆಯ ವ್ಯವಸ್ಥೆ, ಶೂನ್ಯ ಗುರುತ್ವಾಕರ್ಷಣೆ ಸ್ಫೂರ್ಥಿತ ಉದ್ಯಮಗಳು, ಅವುಗಳನ್ನು ನಿಭಾಯಿಸಲು ಅಲ್ಲೇ ನಿರ್ಮಾಣವಾಗಬೇಕಾದ ಬಾಹ್ಯಾಕಾಶ ವಸತಿ ವ್ಯವಸ್ಥೆ ಇಂತಹ ವಿನ್ಯಾಸಗಳಲ್ಲೂ ತೊಡಗಿದ್ದಾನೆ. ಹೀಗಾಗಿ ಮುಂದಿನ ವರುಷಗಳಲ್ಲಿ ಉಡಾವಣೆಯಾಗುವ ರಾಕೆಟ್ಟುಗಳು, ಉಪಗ್ರಹಗಳು ಗುರುತ್ವಾಕರ್ಷಣೆಯನ್ನು ನಿರೋಧಿಸಿ ಆದಷ್ಟು ತೂಕವುಳ್ಳ, ಗಾತ್ರಗಳುಳ್ಳ ವಸ್ತುಗಳನ್ನು ಭೂಮಿಯಿಂದ ಆಕಾಶಕ್ಕೆ ರವಾನಿಸಬೇಕು. ಸಮ್ಮಿಶ್ರ ವಸ್ತುಗಳ ಉಪಯೋಗ ಹೀಗಾಗಿ ಈ ಕ್ಷೇತ್ರದಲ್ಲಿ ಅನಿವಾರ್ಯವಾಗುತ್ತಿದೆ.

ಚಿತ್ರ-27

ಚಿತ್ರ 27: ಕ್ರೀಡೆ ಮತ್ತು ಇತರ ಮನರಂಜನಾ ಕ್ಷೇತ್ರಗಳು ಪ್ರಸ್ತುತ ತಾಂತ್ರಿಕಯುಗದಲ್ಲಿ `ಕ್ರೀಡೆ ಒಂದು ವೈಜ್ಞಾನಿಕ-ತಾಂತ್ರಿಕ ಸ್ಪರ್ಧೆಯಾಟವಾಗಿ ತೋರಿಬರುತ್ತದೆ. ಒಲಂಪಿಕ್ಸ್ ಕೂಟಗಳಲ್ಲಿ ಕಾಣಬರುವ ಕ್ರೀಡಾ ಸಾಮಗ್ರಿಗಳನ್ನು ವಿಶ್ಲೇಷಿಸಿದರೆ ಸಮ್ಮಿಶ್ರ ವಸ್ತುಗಳ ಬಳಕೆ ಎಷ್ಟರ ಮಟ್ಟಿಗಿದೆ ಎಂಬುದು ಆಶ್ಚರ್ಯಕರ ಸಂಗತಿ ಟೆನ್ನಿಸ್, ರ್ಯಾಕೆಟ್‍ಗಳು, ಸ್ಕೀಗಳು, ಪೋಲ್‍ವಾಲ್ಟ್‍ಗಳು, ಸ್ಪರ್ಧಾ ದೋಣಿಗಳು, ಮೋಟರ್ ಕಾರ್‍ಗಳು (ರೇಸಿಂಗ್), ಹಾಕಿ ಕೋಲುಗಳು, ಸೈಕಲ್ ಮತ್ತು ಮೋಟರ್ ಸೈಕಲ್ಲುಗಳು, ಈಜು ಕೊಳಗಳು, ಮಂಜು ಹಿಮ ಪ್ರದೇಶಗಳಲ್ಲಿ ಹೊರವಲಯದ ಆಟಗಳಿಗೆ - ವಿಹಾರಕ್ಕೆ ಬೇಕಾಗುವ ಸಲಕರಣೆಗಳು - ಇವೆಲ್ಲವೂ ಸಮ್ಮಿಶ್ರ ವಸ್ತುಗಳಿಂದ ದೊರೆಯುವ ಉತ್ಕøಷ್ಟ ಗುಣ ಮಟ್ಟದಿಂದಾಗಿ - ಇಂದು ಉಪಯೋಗಿಸಲ್ಪಡುತ್ತಿವೆ.

ಚಿತ್ರ-28

ಚಿತ್ರ 28: ಬಯೋ ಮೆಡಿಕಲ್ ಕ್ಷೇತ್ರ ವೈದ್ಯಕೀಯ ವಿಜ್ಞಾನದ ಪ್ರಗತಿಯೊಡನೆ ಸಮಕಾಲೀನವಾಗಿ ವಿಶಿಷ್ಟ ಪದಾರ್ಥಗಳ ಬಳಕೆಗಳೂ ಹೆಚ್ಚುತ್ತಿವೆ. ಆಧುನಿಕ ರೋಗ ತಪಾಸಣೆಯ ಕೇಂದ್ರಗಳಲ್ಲಿ, ಸಮ್ಮಿಶ್ರ ವಸ್ತುಗಳ ಬಳಕೆ ವಿಶಿಷ್ಟವಾದುದ್ದು: ಎಕ್ಸ್-ಕಿರಣ, ಅಲ್ಟ್ರಾಸಾನಿಕ್ಸ್ ಯಂತ್ರಗಳ ಭಾಗಗಳು, ರೋಗಿ ಮಲಗುವ ಫಲಕಗಳು; ಗಾಲಿ ಕುರ್ಚಿಗಳು ಉದಾಹರಣೆಗಳು. ಅಂಗವಿಲಕರಿಗೆ ಚಲನೆಗೆ ಅನುಗುಣವಾಗಿ ನಿರ್ಮಿಸಿರುವ ಕೃತಕ ಕೈಕಾಲುಗಳು ಮತ್ತೊಂದು ಮುಖ್ಯ ಬಳಕೆ. ಕೃತಕ ಮಾನವನನ್ನೇ ಅಥವಾ ಅಂಗಾಂಗಗಳನ್ನೇ ವಿನ್ಯಾಸಿಸುತ್ತಿರುವ ಈ ಯುಗದಲ್ಲಿ ಮಾನವ ದೇಹದೊಳಗೂ ಸಮ್ಮಿಶ್ರ ವಸ್ತುಗಳ ವ್ಯಾಪ್ತಿ ಹೊಕ್ಕಿದೆ. ಉದಾ: ಕೃತಕ ಮೂಳೆಗಳು, ಅವುಗಳ ಚಾಲನ ವ್ಯವಸ್ಥೆಗಳು; ಹೃದಯದ ವಾಲ್ಬ್‍ಗಳು; ಒಳ ಚರ್ಮ/ಮಾಂಸದ ಭಾಗಗಳು ಇತ್ಯಾದಿ.

ಚಿತ್ರ-29

ಚಿತ್ರ 29: ರಾಸಾಯನಿಕ, ಅನಿಲ ಮತ್ತು ತೈಲ ಕ್ಷೇತ್ರಗಳು ಈ ಕ್ಷೇತ್ರಗಳಲ್ಲಿ ಎದುರಿಸಬೇಕಾದ ಪರಿಸರದ ಲಕ್ಷಣಗಳು: ಪ್ರತ್ಯಾಮ್ಲ, ದ್ರಾವಕ, ಲವಣ, ಉಷ್ಣತೆ ಹಾಗೂ ಆರ್ದತೆ, ಈ ಲಕ್ಷಣಗಳನ್ನು ಎದುರಿಸಲು ಯಾವ ಲೋಹಗಳಿಗೂ ಮುಕ್ತವಾಗಿ ಶಕ್ತಿಯಿಲ್ಲದ ಕಾರಣ ಸಮ್ಮಿಶ್ರ ವಸ್ತುಗಳು (ತಮ್ಮದೇ ಆದ ನಿರೋಧಕ ಶಕ್ತಿಯ ಹಿನ್ನೆಲೆಯಿಂದಾಗಿ) ಹೇರಳವಾಗಿ ಉಪಯೋಗಕ್ಕೆ ಬಂದಿವೆ. ರಾಸಾಯನಿಕ ಕೈಗಾರಿಕೆಯ ಕಾರ್ಯಗಾರದ ಅಂಗಗಳು; ಯಂತ್ರೋಪಕರಣಗಳು; ಕೊಳವೆ ವ್ಯವಸ್ಥೆಗಳು, ಟ್ಯಾಂಕುಗಳು, ತೈಲ ಕ್ಷೇತ್ರಕ್ಕೆ ಬೇಕಾಗುವ ಸಮುದ್ರ ತೀರದ/ಸಮುದ್ರದಡಿಯ ಕಾರ್ಯಾಗಾರಗಳ ಅಂಗಾಂಗಗಳು, ತೇಲುವ ಕಾರ್ಯಾಲಯಗಳು, ತೈಲ ಮತ್ತು ರಾಸಾಯನಿಕ ಪದಾರ್ಥಗಳನ್ನು ಸಂಗ್ರಹಣೆ ಮತ್ತು ರವಾನಿಸುವ ಸಾಧನಗಳು - ಇವೆಲ್ಲವೂ ಪ್ರಸ್ತುತ ಬಳಕೆಗಳು.

ಚಿತ್ರ-30

ಚಿತ್ರ 30: ವಿದ್ಯುತ್, ಎಲೆಕ್ಟ್ರಾನಿಕ್ಸ್, ಶಕ್ತಿ ಮತ್ತು ಸಂಪರ್ಕೋದ್ಯಮ ಕ್ಷೇತ್ರಗಳು ಮೂಲ ಪದಾರ್ಥಗಳ ಹೊಂದಾಣಿಕೆಯಿಂದಾಗಿ ಸಮ್ಮಿಶ್ರ ವಸ್ತುಗಳ ಗುಣಲಕ್ಷಣಗಳನ್ನು ವ್ಯತಿರಿಕ್ತವಾಗಿಯೂ ವಿನ್ಯಾಸಕಾರರು ಪಡೆಯಬಹುದು. ಹೀಗಾಗಿ ವಿದ್ಯುತ್ ಆವಾಹಕ ಮತ್ತು ಸೂಕ್ಷ್ಮತರಂಗ ಶಕ್ತಿಗೆ ಪಾರಕವಾದ ಗುಣಗಳು ಒಂದು ಮುಖವಾದರೆ, ಸೂಕ್ಷ ತರಂಗ/ರೇಡಿಯೋ ಆವೃತ್ತಿ ಪ್ರತಿಫಲಕ, ಸ್ಥಾಯೀ ವಿದ್ಯುದಾವೇಶವನ್ನು ನಲುಗಿಸಲು ಬೇಕಾದ ಗುಣ; ಇವೆಲ್ಲವೂ ಇನ್ನೊಂದು ಮುಖ. ಇವೆಲ್ಲವನ್ನೂ ಸಮ್ಮಿಶ್ರ ವಸ್ತುವಿನಲ್ಲಿ ಅಡಗಿಸುವ ಸೌಲಭ್ಯದಿಂದಾಗಿ ಈ ಕ್ಷೇತ್ರದಲ್ಲಿ ಇಂದು ಕಾಣುಬರುವ ಉಪಯೋಗಗಳು ಅನೇಕ: ಶಕ್ತಿ ಉತ್ಪಾದನ ಯಂತ್ರಗಳ ಭಾಗಗಳು; ಸಾಗಿಸುವ ತಂತಿಗಳನ್ನು ಹೊರುವ ಕಂಬಗಳು, ಅಡ್ಡಕೈಗಳು, ಟ್ರಾನ್ಸ್‍ಫಾರ್ಮರ್ ಭಾಗಗಳು; ವಿದ್ಯುತ್ ಕಾರ್ಯಗಾರಗಳಲ್ಲಿ ಬೇಕಾಗುವ ಸಕ್ರ್ಯೂಟ್ ಬ್ರೇಕರ್‍ಗಳು, ಬ್ಯಾಟರಿ ಪೆಟ್ಟಿಗೆಗಳು; ರಕ್ಷಣಾ ಕವಚಗಳು-ಸಾಧನಗಳು; ಆ್ಯಂಟೆನಾಗಳು, ಟೆಲಿಸ್ಕೋಪ್‍ಗಳ ಭಾಗಗಳು ಇತ್ಯಾದಿ.

ಚಿತ್ರ-31

ಚಿತ್ರ 31: ರಕ್ಷಣಾ ಕ್ಷೇತ್ರ ಇತರ ಉದ್ಯಮಗಳಲ್ಲಿರುವಂತೆ ರಕ್ಷಣಾ ಕ್ಷೇತ್ರದಲ್ಲಿ ಖರ್ಚಿನ ಮಿತಿ ಅಷ್ಟಾಗಿ ಇಲ್ಲದಿದ್ದು ಕಾರ್ಯ ಸಾಧನೆಗೆ ಮಾತ್ರ ಪ್ರಾಮುಖ್ಯತೆ ಇರುತ್ತದೆ. ಹೀಗಾಗಿ ಪ್ರಸ್ತುತ ಬಳಕೆಗಳು ಅನೇಕ: ಗುಂಡು ನಿರೋಧಕ ಯೋಧಕ ಮತ್ತು ವಿಮಾನಕ್ಕೆ ಬೇಕಾಗುವ ಕವಚಗಳು; ಸಮ್ಮಿಶ್ರ ಹೊರ ದೇಹವುಳ್ಳ ಟ್ಯಾಂಕುಗಳು, ಗುಂಡು ನಿರೋಧಕ ಟ್ರಕ್ಕುಗಳು, ಉಗ್ರಾಣಗಳು; ದಿಢೀರ್ ಜೋಡಣೆಗೆ ಬೇಕಾಗುವ ಪೂರ್ವ ನಿರ್ಮಿತ ಸೇತುವೆಗಳು; ಮದ್ದುಗಳನ್ನು ಕ್ಷಿಪಣಿಗಳನ್ನು ಒಯ್ಯುವ ಸಾಧನಗಳು; ಕ್ಷಿಪಣಿಗಳ ಹೊರಕವಚಗಳು - ಭಾಗಗಳು; ರೇಡಿಯೋ ಸಂಪರ್ಕ ಸಾಧನೆಗಳು; ಅಣು ಯುದ್ಧದ ಪರಿಸರಕ್ಕೆ ರಕ್ಷಣೆ ಕೊಡಬಲ್ಲ ವಸತಿಗಳು ಇತ್ಯಾದಿ.

ಚಿತ್ರ-32

ಚಿತ್ರ 32: ರಕ್ಷಣಾ ಹೆಲಿಕಾಪ್ಟರ್ ಮತ್ತು ರಕ್ಷಣಾ ವಿಮಾನ (ರಕ್ಷಣಾ ಕ್ಷೇತ್ರ) ಪ್ರಸ್ತುತ ಪರಿಸರದಲ್ಲಿ ದೇಶ ರಕ್ಷಣೆಯ ಬಹು ಮುಖ್ಯ ಅಂಗವೆಂದರೆ: ವಾಯುಸೇನೆ. ವಾಯುಸೇನೆಯವರು ಉಪಯೋಗಿಸುವ ವಿಮಾನಗಳು ಅತಿ ವೇಗದಿಂದ, ದಕ್ಷತೆಯಿಂದ ಶತ್ರು ಶಕ್ತಿಯನ್ನು ನಾಶಮಾಡಬೇಕು. ಅಲ್ಲದೆ ಶತ್ರುಗಳ ರಾಡಾರ್ ಮತ್ತಿತ್ತರ ರಕ್ಷಣಾ ವ್ಯವಸ್ಥೆಗಳಿಗೆ, ತಪಾಸಣೆಗೆ ಶರಣುಹೋಗದೆ ಮರಳಿ ತಾಯ್ನಾಡನ್ನು ತಲುಪಬೇಕು. ಹೀಗಾಗಿ ವಾಯುಸೇನೆಯ ವಿಮಾನ ಚಾಲಕನ ಸಲಕರಣೆಗಳಿಂದ ಹಿಡಿದು, ವಿಮಾನವೇ (ಭಾಗಗಳು ಸೇರಿ) ಸಂಪೂರ್ಣ ಸಮ್ಮಿಶ್ರ ವಸ್ತುಗಳ ಬಳಕೆಗೆ ಲಭ್ಯವಾಗಿದೆ. ಹೆಲಿಕಾಪ್ಟರ್ ಬ್ಲೇಡುಗಳು, ರ್ಯಾಡೋಮ್‍ಗಳು, ಹೊರವಲಯದ ರೆಕ್ಕೆಗಳು - ಅವುಗಳ ಅಂಗಗಳು; ಒಳಭಾಗುದ ಆಸನಗಳು, ಆಹಾರ ವರ್ಗಾಯಿಸುವ ಗಾಡಿಗಳು, ಹಲಗೆಗಳು, ಫಲಕಗಳು, ಎಂಜಿನ್ನಿನ ಹೊರ - ಒಳ ಭಾಗಗಳು ಉದಾಹರಣೆಗಳಾಗಿವೆ. ಸಮ್ಮಿಶ್ರ ವಸ್ತುಗಳ ಕಡಿಮೆ ಸಾಂದ್ರತೆ, ಉತ್ಕøಷ್ಟ ತ್ರಾಣ, ತಾಡನಾ ಶಕ್ತಿಗಳನ್ನು ವಿಮಾನ ವಿನ್ಯಾಸಕರು ಬಳಸಿಕೊಳ್ಳುತ್ತಾರೆ. ಅತಿ ಉಷ್ಣತೆ ಪರಿಸರವುಳ್ಳ ಭಾಗಗಳಲ್ಲೂ ಸಮ್ಮಿಶ್ರ ಬಳಕೆ ಕಂಡು ಬರುತ್ತಿದೆ, ಅಲ್ಯೂಮಿನಿಯಂ, ಟೈಟಾನಿಯಂ ತರಹದ ಲೋಹಗಳೊಡನೆ ತೀವ್ರ ಪೈಪೋಟಿ ಕಾಣುತ್ತಿದೆ.

ಚಿತ್ರ-33

ಚಿತ್ರ 33: ಸಾರ್ವಜನಿಕ ವಿಮಾನ ಕ್ಷೇತ್ರ ರಕ್ಷಣಾ ವಿಮಾನ - ಹೆಲಿಕಾಪ್ಟರ್‍ಗಳಲ್ಲಿ ಕಾಣುಬರುವ ಸಮ್ಮಿಶ್ರ ವಸ್ತುಗಳ ತಾಂತ್ರಿಕತೆ ಹಾಗೂ ಉಪಯೋಗಗಳು ಸಾರ್ವಜನಿಕ ಸಾರಿಗೆ ವಿಮಾನಗಳಿಗೂ ಲಭ್ಯವಾಗಿವೆ. ಇಸವಿ 2005ರಲ್ಲಿ ಫ್ರಾನ್ಸ್ ದೇಶದ ಏರ್‍ಬಸ್ ಕಂಪೆನಿಯವರು ಪ್ರಾಯೋಗಿಕವಾಗಿ ಪ್ರಥಮ ಹಾರಾಟ ನಡೆಸಿದ ಏರ್‍ಬಸ್ ಎ-380 ವಿಮಾನ, 421 ಟನ್‍ಗಳಷ್ಟು ಭಾರವಿದ್ದು, ಅದರ ಶೇಕಡಾ 30ರಷ್ಟು ಭಾಗಗಳು ಸಮ್ಮಿಶ್ರ ವಸ್ತುಗಳಲ್ಲೇ ಮಾಡಲಾಗಿತ್ತು! ಮಿಕ್ಕ ಪ್ರಮುಖ ವಿಮಾನ ತಯಾರಿಕರೂ ಇದೇ ದಿಟ್ಟಿನಲ್ಲಿ ಸಾಗಿದ್ದಾರೆ. ಇದರಿಂದ ದೊರೆಯುವ ಲಭ್ಯ ; ಇಂಧನದ ಬಳಕೆಯ ಗಾತ್ರವನ್ನು ಮಿತಿಗೊಳಿಸುವುದು; ಇಲ್ಲವೇ ಅಷ್ಟೇ ಇಂಧನದ ಬಳಕೆಯ ಪ್ರಮಾಣದಲ್ಲಿ ಇನ್ನೂ ಹೆಚ್ಚಿನ ಪ್ರಯಾಣಿಕರನ್ನು ಸಾಗಿಸುವುದು.

ಭಾರತದಲ್ಲಿ ಬಳಕೆ: 1960ರಿಂದ ಭಾರತದಲ್ಲಿ ಸಮ್ಮಿಶ್ರ ವಸ್ತುಗಳ ಬಳಕೆ ಪ್ರಾರಂಭವಾಯಿತು. ಅಂದಿನಿಂದ ಇಲ್ಲಿಯವರೆಗೂ ಈ ಬಳಕೆಯ ಪ್ರಕಾರಗಳು ವಿವಿಧ ರೀತಿಗಳಾಗಿವೆ. ಭಾರತದಲ್ಲಿ ಬಳಕೆಯ ಕ್ಷೇತ್ರಗಳೆಂದರೆ: 1960: ವಿಮಾನ ಕ್ಷೇತ್ರ, ಬಾಹ್ಯಾಕಾಶ, ರಕ್ಷಣಾ ಕ್ಷೇತ್ರಗಳು 1970: ರೈಲ್ವೆ, ಟ್ಯಾಂಕ್ ಮತ್ತು ವಿದ್ಯುತ್ ಕ್ಷೇತ್ರಗಳು 1980: ಕೈಗಾರಿಕಾ ಕ್ಷೇತ್ರಗಳು 1990: ಆಟೋಮೋಟಿವ್, ಶೈತ್ಯಕಾರಿ ಗೋಪುರಗಳು, ಟೆಲಿಕಾಮ್, ಪೈಪುಗಳು, ವಾಯುಶಕ್ತಿ ಯಂತ್ರ ಕ್ಷೇತ್ರಗಳು 2000: ತೊಟ್ಟಿ, ಸ್ನಾನದ ತೊಟ್ಟಿ, ಬಾಗಿಲುಗಳು, ನಿರ್ಮಾಣ ಕ್ಷೇತ್ರಗಳು 2010 ಗ್ರಾಹಕ ವಸ್ತುಗಳು/ಕ್ರೀಡಾ ಕ್ಷೇತ್ರಗಳು. ಸಮ್ಮಿಶ್ರ ವಸ್ತುಗಳ ಉತ್ಪಾದನೆ ಭಾರತದಲ್ಲಿ 1960ರಲ್ಲಿ ಸುಮಾರು 1,000 ಟನ್ನುಗಳಿದ್ದು 2010ರ ಹೊತ್ತಿಗೆ 250,000 ಟನ್ನುಗಳಷ್ಟು ಆಗಬಹುದು ಎಂದು ಅಂದಾಜಿದೆ. 2003ರಲ್ಲಿ ಬಳಕೆಯ, ಸುಮಾರು ಶೇಕಡಾ 13 ಅವಲಂಬಿತ ಸಮ್ಮಿಶ್ರ ವಸ್ತುಗಳಾಗಿದ್ದು, ಮತ್ತೆಲ್ಲಾ ಥರ್ಮೋಸಿಟ್ಟಿಂಗ್ ಅವಲಂಬಿತ ಸಮ್ಮಿಶ್ರ ವಸ್ತುಗಳಾಗಿದ್ದವು. ಇದರ ಹಿನ್ನೆಲೆಯಲ್ಲಿ ಭಾರತದಲ್ಲಿ ಈಗ 15 ಉದ್ಯಮಗಳು ಪಾಲಿಎಸ್ಟರ್, ವೈನೈಲ್ ಎಸ್ಟರ್, ಫಿನಾಲಿಕ್ ರೆಸಿನ್‍ಗಳನ್ನು ತಯಾರಿಸುತ್ತಿವೆ. ಎರಡು ದೊಡ್ಡ ಉದ್ಯಮಗಳು ಎಪಾಕ್ಸಿರೆಸಿನ್ ತಯಾರಿಕೆ ಮಾಡುತ್ತಿವೆ. ಗಾಜು ನೂಲಿನ ಅದರ ರೂಪಾಂತರಗಳನ್ನು ನಾಲ್ಕು ಸಂಸ್ಥೆಗಳು ತಯಾರಿಸುತ್ತಿವೆ. ಮಿಕ್ಕ ಪದಾರ್ಥಗಳನ್ನೆಲ್ಲಾ ಬಳಕೆದಾರರು ಆಮದು ಮಾಡಿಕೊಳ್ಳುತ್ತಾರೆ . ಸಮ್ಮಿಶ್ರ ವಸ್ತುಗಳ ತಯಾರಿಕೆಯಲ್ಲಿ ತೊಡಗಿರುವ ಪ್ರಮುಖ ಉದ್ಯಮಗಳ ಸಂಖ್ಯೆ (ಅಂದಾಜು) ಹೀಗಿವೆ: ಪೈಪುಗಳ ತಯಾರಿಕೆ-5; ವಾಯುಶಕ್ತಿ ಯಂತ್ರಗಳಿಗೆ ಬಳಸುವ ಅಲಗುಗಳ ತಯಾರಿಕೆ-4, ಟ್ಯಾಂಕುಗಳ ತಯಾರಿಕೆ-10; ರೈಲ್ವೆ ವಸ್ತುಗಳ ತಯಾರಿಕೆ-3; ಶೈತ್ಯಕಾರಿ ಗೋಪುರಗಳು ಕ್ಷೇತ್ರ-5; ಆಟೋಮೋಟಿವ್ ಕ್ಷೇತ್ರ -11, ವಿದ್ಯುತ್ ಕ್ಷೇತ್ರ -5; ರಕ್ಷಣಾ ಕ್ಷೇತ್ರ -10; ಟೆಲಿಕಾಮ್ ಕ್ಷೇತ್ರ -3 ಪಲ್‍ಟ್ರೂಷನ್ ಕ್ಷೇತ್ರ-5; ಇತರೇ ಕ್ಷೇತ್ರಗಳು-5, ಸರ್ಕಾರ ಕ್ಷೇತ್ರದಲ್ಲಿ ಇಲ್ಲಿಯವರೆಗೂ ಎಚ್‍ಎಎಲ್ (ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್), ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗ ಶಾಲೆಗಳು (ಎನ್‍ಎಎಲ್), ಐಎಸ್‍ಆರ್‍ಒ (ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆ), ಡಿಆರ್‍ಡಿಒ (ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ) ಇವುಗಳು ತಮ್ಮದೇ ಆದ ಕಾರ್ಯಾಗಾರಗಳಲ್ಲಿ ಸಮ್ಮಿಶ್ರ ವಸ್ತುಗಳನ್ನು ತಯಾರಿಸಿತ್ತಿದ್ದು, ಇತ್ತೀಚೆಗೆ, ಹೊರಗಿನ ಉದ್ಯಮಗಳಿಗೆ ತಯಾರಿಕೆಯ ಅಧಿಕಾರವನ್ನು ಕೊಡುತ್ತಿದ್ದಾರೆ. ತಯಾರಿಕೆಯ ವಿದಾನಗಳನ್ನು ನೋಡಿದಾಗ ಭಾರತದಲ್ಲಿ ಕೆಳಕಂಡ ವಿಭಾಗಗಳು ಕಾಣುತ್ತವೆ. ಕೈಜೋಡಣೆ≈ 40% ಸಂಪೀಡನ ಅಚ್ಚೊತ್ತುವಿಕೆ ≈ 18% ಇನ್‍ಜೆಕ್ಷನ್ ಅಚ್ಚೊತ್ತುವಿಕೆ ≈ 16% ಪಲ್‍ಟ್ರೂಷನ್ ≈ 12% ತಂತು ಸುತ್ತುವಿಕೆ ≈ 6% ರೆಸಿನ್ ವರ್ಗಾವಣೆ ಅಚ್ಚೊತ್ತುವಿಕೆ ≈ 6% ಇತರ ರೀತಿಗಳು (ಆಟೋಕ್ಲೇವ್ ಇತ್ಯಾದಿ) ≈ 2%

ಬಳಕೆಗಳ ವ್ಯಾಪ್ತಿ: ಪೈಪುಗಳು:  : ಒಳ ಚರಂಡಿ ಪೈಪುಗಳು, ಅಸ್ತರಿಗಳು (ಥರ್ಮೋಪ್ಲಾಸ್ಟಿಕ್ ಸೇರಿ) ಟ್ಯಾಂಕುಗಳು ಮತ್ತು ರಾಸಾಯನಿಕ ಕೈಗಾರಿಕಾ ಸಾಧನಗಳು:  : ಎಫ್‍ಆರ್‍ಪಿ ಟ್ಯಾಂಕುಗಳು, ಕೊಳವೆ, ಅಸ್ತರಿ, ಫಿಟ್ಟಿಂಗ್‍ಗಳು ವಾಲ್ವ್‍ಗಳು, ಫ್ಯಾನ್‍ಗಳು ವಾಯುಶಕ್ತಿ:  : ಎಫ್‍ಆರ್‍ಪಿ ಬ್ಲೇಡುಗಳು, ನಾಜóಲ್‍ಗಳು

ಭಾರತೀಯ ರೈಲ್ವೆ:  : ಎಫ್‍ಆರ್‍ಪಿ ಕಿಟಕಿಗಳು, ಬಾಗಿಲುಗಳು, ಟಾಯಿಲೆಟ್ ಮಾಡ್ಯೂಲುಗಳು, ಸೈಡ್ ಪ್ಯಾನಲ್ಸ್, ಡೀಸೆಲ್ ಎಂಜಿನ್‍ನ ಮುಂಭಾಗ, ವಾಶ್ ಬೇಸಿನ್‍ಗಳು,

ಶೈತ್ಯಕಾರಿ ಗೋಪುರಗಳು:  : ಬ್ಲೇಡ್‍ಗಳು, ಅವುಗಳ ಸುತ್ತಿನ ನಿರ್ಮಾಣಗಳು

ಮೋಟಾರು ವಾಹನ ಕೈಗಾರಿಕೆ:  : ಜೀಪಿನ ಮೇಲ್ಭಾಗ, ಕಾರಿನ ಒಳಭಾಗಗಳು ಕಾರುಗಳ ಹೊರಭಾಗಗಳು ಟ್ರಾಕ್ಟರ್ ಭಾಗಗಳು, ರೇಡಿಯೇಟರ್ ಗ್ರಿಲ್

ವಿದ್ಯುತ್ ಕೈಗಾರಿಕೆ:  : ವಿದ್ಯುನ್ನಿರೋಧಕ ತೆಳುಹಾಳೆಗಳು, ಪಿಸಿಬಿ, ಸ್ವಚರ್ಣೆ ಬ್ಯಾಟರಿ ಇತ್ಯಾದಿ

ಸಾಗರ ಕೈಗಾರಿಕೆ:  : ದೋಣಿ- ಶಕ್ತಿ ಚಾಲಿತ ದೋಣಿ ಇತ್ಯಾದಿ

ದೂರಸಂಪರ್ಕ ಕೈಗಾರಿಕೆ: : ದೃಕ್ ಕೇಬಲ್‍ಗಳು ಆ್ಯಂಟಿನ್ಸಾ

ಪಲ್‍ಟ್ರ್ಯೂಷನ್ ಕೈಗಾರಿಕೆ ಮತ್ತು ಸಾಧನಗಳು: : ಸಾಗರ ತೀರ-ತೀರದಾಚೆ ರಾಸಾಯನಿಕ ಸ್ಥಾವರ ಸ್ಥಾಪಿಸಲು

ಆಪರೆ ನಿರ್ಮಾಣ ಕೈಗಾರಿಕೆ: : ಆಟೋಮೋಟಿವ್ ಬ್ರೇಕ್ಸ್

ಕಟ್ಟಡ ನಿರ್ಮಾಣ: : ಪಾರದೀಪಕ ಮೇಲ್ಚಾವಣಿ-ಗೋಪುರ ಈಜುಕೊಳ, ಸ್ನಾನ ತೊಟ್ಟಿ ಇತ್ಯಾದಿ

ರಕ್ಷಣಾ ಕ್ಷೇತ್ರ:  : ಗುಂಡು ನಿರೋಧಕ ವಸ್ತ್ರ ಇತ್ಯಾದಿ ಕ್ಷಿಪಣಿಗಳ ಸಾಗುವಿಕೆಗೆ ಬೇಕಾದ ಕಂಟೈನರ್ಸ್, ಕ್ಷಿಪಣಿಗಳ ಉಡಾವಣೆಗೆ ಬೇಕಾದ ಲಾಂಚರ್ ಟ್ಯೂಬುಗಳು; ಸಿಡಿ ಮದ್ದುಗಳನ್ನು ಕಾಪಾಡಲು ಇಡುವ ಡಬ್ಬಗಳು, ಸೇತುವೆಗಳು, ಇತ್ಯಾದಿ

ವಿಮಾನ ಕ್ಷೇತ್ರ:  : ವಿಮಾನದ ಹೊರ ಭಾಗಗಳು, ಭಾಗಗಳು

ಬಾಹ್ಯಾಕಾಶ:  : ರಾಕೆಟ್‍ಗಳ ಮೋಟಾರ್ ಕೇಸಿಂಗುಗಳು, ನಾಜóಲ್ಲುಗಳು, ತಾಪ ರಕ್ಷಕಗಳು ಶೀಲ್ಡ್‍ಗಳು, ಹಲಗೆಗಳು, ಉಪಗ್ರಹದ ಸೌರಭ ಹಲಗೆಗಳು, ಆ್ಯಂಟೆನಾಗಳು

ವೈದ್ಯಕೀಯ:  : ಎಕ್ಸ್-ಕಿರಣ ಮೇಜುಗಳು ಇತ್ಯಾದಿ.

ಭಾರತದಲ್ಲಿ ಸಮ್ಮಿಶ್ರಣಕ್ಕೆ ಅಗತ್ಯವಾದ ಪದಾರ್ಥಗಳೆಲ್ಲವೂ ದೊರೆಯುವುದಿಲ್ಲ. ಉದಾಹರಣೆಗೆ: ಗಾಜು ನೂಲು ರೂಪಾಂತರಗಳು ಕೆಲವು ಪ್ಲಾಸ್ಟಿಕ್‍ಗಳು ಭಾರತದಲ್ಲಿ ತಯಾರಾದರೂ, ಕಾರ್ಬನ್ ನೂಲುಗಳು, ಪೂರ್ವಮಿಶ್ರಿತ ಪದಾರ್ಥಗಳು ಕೆಲವು ಅಂಟು ಮಾಧ್ಯಮಗಳು, ಒಳ್ಳೆ ಲಕ್ಷಣಗಳುಳ್ಳ ಅಂತರವಸ್ತು ಪದಾರ್ಥಗಳು (ಅಲ್ಯೂಮಿನಿಯಂ/ಅರಾಮಿಡ್ ಜೇನುಗೂಡಾಕೃತಿಗಳು), ಎತ್ತರದ ತಾಪಮಾನಗಳಿಗೆ ಹೋಗಬಲ್ಲ ಪ್ಲಾಸ್ಟಿಕ್‍ಗಳು -ಇವೆಲ್ಲವನ್ನೂ ಈಗ ಆಮದು ಮಾಡಲಾಗುತ್ತಿದೆ. ಇವುಗಳ ಬಗ್ಗೆ ತಾಂತ್ರಿಕ ಸಂಶೋಧನೆಯ ಕಾರ್ಯಗಳು ಕೆಲವೆಡೆ ನಡೆಯುತ್ತಿವೆ. ಹೀಗಾಗಿ ಈ ರೀತಿಯ ಪದಾರ್ಥಗಳಿಂದ ತಯಾರಾಗುವ ಬಳಕೆಗಳು ಸದ್ಯಕ್ಕೆ ಬಾಹ್ಯಾಕಾಶ, ಕ್ಷಿಪಣಿ ಮತ್ತು ವಿಮಾನ ಉದ್ಯಮಗಳಲ್ಲಿ ಮಾತ್ರ ನೋಡಬಹುದು. ಸಮ್ಮಿಶ್ರ ವಸ್ತುಗಳ ಬಳಕೆಯನ್ನು ಹೆಚ್ಚಿಸಲು ಮತ್ತು ಅದರ ಬಗ್ಗೆ ಅಧ್ಯಯನ ಸಂಶೋಧನೆಗಳನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮೂಲಕ ಉದ್ಯಮಗಳಿಗೆ, ಸಂಶೋಧನಾ ಕೇಂದ್ರಗಳಿಗೆ ಹಾಗೂ ವಿಶ್ವವಿದ್ಯಾಲಯಗಳಿಗೆ ನೆರವು ನೀಡುತ್ತಿದೆ. ಇಂಡಿಯನ್ ಸೊಸೈಟಿ ಫಾರ್ ಅಡ್ವಾನ್ಸ್‍ಮೆಂಟ್ ಆಫ್ ಮೆಟೀರಿಯಲ್ಸ್ ಅಂಡ್ ಪ್ರೊಸೆಸಸ್ (ISಂಒPಇ), ಎಫ್.ಆರ್.ಪಿ. ಇನ್ಸ್‍ಸ್ಟಿಟ್ಯೂಟ್ ಇಂತಹ ಸಂಸ್ಥೆಗಳು ಸಮ್ಮಿಶ್ರ ವಸ್ತುಗಳ ಮೇಲೆ ವಾರ್ಷಿಕ ವಿಚಾರ ಗೋಷ್ಠಿ ಹಾಗೂ ವಸ್ತು ಪ್ರದರ್ಶನಗಳನ್ನು ಹಮ್ಮಿಕೊಂಡಿವೆ. ಇತ್ತೀಚೆಗೆ ಭಾರತದಲ್ಲಿ ಯಂತ್ರ ರಚನ ಕಾರ್ಯಗಳಲ್ಲೂ ಪ್ರಗತಿ ಕಾಣಬಹುದು. ತಂತಿ ಸುತ್ತುವಿಕೆ, ಆಟೋಕ್ಲೇವ್, ರೆಸಿನ್ ವರ್ಗಾವರಣ ಅಚ್ಚೊತ್ತುವಿಕೆ ಪಲ್‍ಟ್ರೂಷನ್ ಇಂತಹ ರಚನಾ ಪದ್ಧತಿಗಳಿಗೆ ಬೇಕಾದ ವಿಶಿಷ್ಟ ಯಂತ್ರಗಳೂ ತಯಾರಾಗುತ್ತಿವೆ. ಅದರೊಂದಿಗೆ ಬೇಕಾದ ತಂತ್ರಾಂಶಗಳನ್ನೂ ಮಾರಲಾಗುತ್ತಿದೆ. ಭಾರತದಲ್ಲಿ ತಯಾರಾಗಿ ಬಳಕೆಯಲ್ಲಿರುವ ಕೆಲವು ಸಮ್ಮಿಶ್ರ ವಸ್ತುಗಳ ಚಿತ್ರಗಳನ್ನು ಕೆಳಗಡೆ ತೋರಿಸಲಾಗಿವೆ.


ಚಿತ್ರ-34

ಚಿತ್ರ 34: ಭಾರತದ ಬಾಹ್ಯಾಕಾಶ ಸಂಶೋಧನೆ ಹಾಗೂ ಅದರಿಂದ ಮೂಡಿ ಬಂದ ತಾಂತ್ರಿಕ ಉಪಯೋಗಿಕೆ ಒಂದು ಉತ್ಕøಷ್ಟ ಸ್ಥಾನವನ್ನು ಪಡೆದಿದೆ. ಇದಕ್ಕಾಗಿ ಉಡಾವಣೆ ಮಾಡುತ್ತಿರುವ ರಾಕೆಟ್‍ಗಳೂ ಮತ್ತು ಉಪಗ್ರಹಗಳು ಅನೇಕ ರೀತಿಯಲ್ಲಿ ಸಮ್ಮಿಶ್ರ ವಸ್ತುಗಳನ್ನು ಬಳಸಿವೆ. ಉದಾ: ರಾಕೆಟ್ ಹಂತಗಳ ಕೇಸಿಂಗ್‍ಗಳು, ನಾಜûಲುಗಳು, ಉಷ್ಣ ಕವಚಗಳು, ಒತ್ತಡ ಪೀಪಾಯಿಗಳು, ಆ್ಯಂಟನಾಗಳು, ಸೌರ ಫಲಕಗಳು ಇತ್ಯಾದಿ. ಕಮ್ಮಿ ಸಾಂದ್ರದ ಸಮ್ಮಿಶ್ರ ವಸ್ತುಗಳ ಉಪಯೋಗದಿಂದಾಗಿ, ರಾಕೆಟ್ಟುಗಳು ಕೊಂಡೊಯ್ಯುವ ಉಪಗ್ರಹಗಳ ತೂಕಗಳೂ ಏರುತ್ತಿವೆ; ಅದರಿಂದಾಗಿ ಲಭ್ಯವಾಗುವ ಸೇವೆಗಳ ವ್ಯಾಪ್ತಿಯೂ ಹೆಚ್ಚಾಗುತ್ತಿದೆ.


ಚಿತ್ರ-35

ಚಿತ್ರ-36

ಚಿತ್ರ-37

ಚಿತ್ರ-38

ಚಿತ್ರ-39


ಚಿತ್ರ 35: ಉಪಗ್ರಹದಲ್ಲಿಡುವ ಕಾರ್ಬನ್ ನೂಲು ಆಧಾರಿತ ಸಂಪರ್ಕ ಆ್ಯಂಟಿನ; ಚಿತ್ರ 36: ಪಿಎಸ್‍ಎಲ್‍ವಿ (ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್) ಉಡಾವಣಾ ರಾಕೆಟ್‍ನಲ್ಲಿ ಒಂದು ಹಂತವನ್ನು ಇನ್ನೊಂದು ಹಂತಕ್ಕೆ ಸೇರಿಸುವ ಇಂಟರ್‍ಸ್ಟೇಜ್ (ಕಾರ್ಬನ್ ನೂಲು ಆಧಾರಿತ) ಚಿತ್ರ 37: ಪಿಎಸ್‍ಎಲ್‍ವಿಯ 3ನೇ ಹಂತದ ರಾಕೆಟ್ ಮೋಟಾರ್ ಕೇಸ್ (ಅರಾಮಿಡ್ ನೂಲು ಆಧಾರಿತ) ಚಿತ್ರ 38: ಗಾಜು ನೂಲು ಆಧಾರಿತ ಸಮ್ಮಿಶ್ರ ಒತ್ತಡ ಪೀಪಾಯಿ: ಇದರಲ್ಲಿ ಅನಿಲವನ್ನು 300 ಬಾರ್‍ಗೂ ಅತಿಯಾದ ಒತ್ತಡ ತಡೆ ಹಿಡಿಯುವ ಶಕ್ತಿಯಿರುತ್ತದೆ. ಚಿತ್ರ 39: ನಿರ್ದೇಶಿತ ಉಪಗ್ರಹ ಉಡಾವಣಾ ವಾಹನ (ಎಎಸ್‍ಎಲ್‍ವಿ) ಯಲ್ಲಿ ಉಪಯೋಗಿಸಿದ ಶಾಖ ರಕ್ಷಣಾ ಕವಚಗಳು ಇವು ಒಳಗಡೆ ಇರುವ ಉಪಗ್ರಹ ಹಾಗೂ ನಾಲ್ಕನೇ ರಾಕೆಟ್ ಹಂತವನ್ನು ಹೆಚ್ಚು ತಾಪಮಾನ ಪಡೆಯದ ಹಾಗೆ ಕಾಪಾಡುತ್ತವೆ.

ಚಿತ್ರ-40

     ಚಿತ್ರ 40: ಹಂಸಾ ಊಓW		

ಚಿತ್ರ-41 ಚಿತ್ರ 41: ಸರಸ್


ಚಿತ್ರ-42 ಚಿತ್ರ 42: ಎಲಿವೇಟರ್ (ಹಂಸಾ)


ಚಿತ್ರ-43

        				 ಚಿತ್ರ 43: ಏಲಿರಾನ್ (ಹಂಸಾ)

ಚಿತ್ರ 40: ಪೂರ್ಣವಾಗಿ ಸಮ್ಮಿಶ್ರ ವಸ್ತುವಿನಲ್ಲೇ ರಚಿತವಾಗಿರುವ ಭಾರತೀಯ ವಿಮಾನ: ಹಂಸ, ಇದರ ಕೆಲವು ಪ್ರಮುಖ ಅಂಗಗಳನ್ನು ಚಿತ್ರ 42 ಮತ್ತು ಚಿತ್ರ 43 ರಲ್ಲೂ ಕಾಣಬಹುದು. ಚಿತ್ರ 41: ಭಾರತದಲ್ಲಿ ತಯಾರಾದ ಮತ್ತೊಂದು ವಿಮಾನ: ಸರಸ್. ಇದರಲ್ಲಿ ಹಂತ ಹಂತವಾಗಿ ಅಲ್ಯೂಮಿನಿಯಂ ಭಾಗಗಳನ್ನು ಸಮ್ಮಿಶ್ರ ವಸ್ತುಗಳಿಂದ ವಿನಿಮಯ ಮಾಡುವ ಯೋಜನೆಗಳಿವೆ.


ಚಿತ್ರ-44 ಚಿತ್ರ 44: ಲಘು ಯುದ್ಧ ವಿಮಾನ (ಎಲ್‍ಸಿಎ)

ಚಿತ್ರ-45 ಚಿತ್ರ 45: ಟ್ರೌಸರ್ ಡಕ್ಟ್

ಚಿತ್ರ-46 ಚಿತ್ರ 46: ಲ್ಯಾಂಡಿಂಗ್ ಗೇರ್ ಡೋರ್


ಚಿತ್ರ-47 ಚಿತ್ರ 47: ಸೆಂಟರ್ ಪ್ಯೂಸಿಲಾಜ್ ಪಾರ್ಟ್

ಚಿತ್ರ-48 ಚಿತ್ರ 48: ರಡರ್ ಟಾರ್ಕ್‍ಶಾಪ್ಟ್


ಚಿತ್ರ 44: ಭಾರತದಲ್ಲೇ ರೂಪಿಸಿ ನಿರ್ಮಾಣಗೊಂಡ ಲಘು ಯುದ್ಧ ವಿಮಾನ-ಎಲ್.ಸಿ.ಎ. ಈ ವಿಮಾನವನ್ನು ದೇಶದ ರಕ್ಷಣಾ ಕಾರ್ಯಕ್ಕೆ ಸದ್ಯದಲ್ಲೇ ಅಳವಡಿಸಿಕೊಳ್ಳಲಾಗುತ್ತಿದೆ. ಈ ವಿಮಾನದ ಉನ್ನತ ಕಾರ್ಯನಿರ್ವಹಣೆಯ ಲಕ್ಷಣಗಳು, ಸಮ್ಮಿಶ್ರ ವಸ್ತುಗಳ ಬಳಕೆಯಿಂದಾಗಿ ಮೂಡಿ ಬಂದಿವೆ. ಅದರಲ್ಲಿ ಉಪಯೋಗಿಸುವ ಕೆಲವು ಭಾಗಗಳನ್ನು ಚಿತ್ರಗಳು 45, 46, 47 ಮತ್ತು 48ರಲ್ಲಿ ಕಾಣಬಹುದು. ಈ ಭಾಗಗಳು ಕಾರ್ಬನ್ ಮತ್ತು ಗಾಜು ನೂಲಿನ ಆಧಾರಿತವಾಗಿವೆ.

ಚಿತ್ರ-49

ಚಿತ್ರ 49: ಗಾಜು ನೂಲು ಆಧಾರಿತ ಸಮ್ಮಿಶ್ರ ಬಾಗಿಲುಗಳು (ಮೇಲೆ; ಮುಂದಿನ ಬಾಗಿಲು, ಬೆಡ್‍ರೂಮ್ ಬಾಗಿಲು, ಟಾಯಿಲೆಟ್ ಬಾಗಿಲು); ಮಧ್ಯ (ಎಡಗಡೆ) ಬೊಂಬಿನ ನಾರಿನ ಆಧಾರಿತ ಸಮ್ಮಿಶ್ರ ಟಾಯಿಲೆಟ್ (ಶೌಚಗೃಹ); ಕೆಳಗಡೆ; ಬೊಂಬು ನಾರಿನ ಆರಾಧಿತ ಮನೆ ; ಬಲಗಡೆ, ಕೆಳಗೆ; ಬೊಂಬು ನಾರಿನ ಆಧಾರಿತ ಚಾವಡಿ ಹಲಗೆಗಳು.

ರಕ್ಷಣಾ ಕ್ಷೇತ್ರದಲ್ಲಿ ಸಮ್ಮಿಶ್ರ ವಸ್ತುಗಳ ಪಾತ್ರ ಬಹು ಮುಖ್ಯವಾದುದು. ಯೋಧರನ್ನ ರಕ್ಷಣೆ ಮಾಡಲು ಈಗ ಗುಂಡು ನಿರೊಧಕ ಕವಚಗಳನ್ನು (ಬುಲೆಟ್ ಪ್ರೂ¥ósï ಜಾಕೆಟ್ಸ್), ಶಿರ ರಕ್ಷಣೆಗೆ ಹೆಲ್ಮೆಟ್‍ಗಳನ್ನು ಉಪಯೋಗಿಸುತ್ತಾರೆ ಇತ್ತೀಚೆಗೆ ದೊರಕುವ ನೂತನ ನೂಲುಗಳಿಂದಾಗಿ (ಉದಾ: ಅರಾಮಿಡ್, ಊPPಇ). ಈ ಸಾಧನಗಳು ಬಹು ಕಡಿಮೆ ತೂಕದಲ್ಲಿದ್ದು, ಸ್ಟೀಲ್ ಸೆರಾಮಿಕ್‍ನಂತಹ ಹೆಚ್ಚು ತೂಕವಿದ್ದ ವಸ್ತುಗಳನ್ನು ಪಕ್ಕಕ್ಕೆ ತಳ್ಳಿವೆ.


ಚಿತ್ರ-50-1

ಚಿತ್ರ-50-2

ಚಿತ್ರ-51

ಚಿತ್ರ 50: ರಲ್ಲಿ ಕಾಣಿಸಿರುವ ಕವಚ 9ಮಿಮಿ ಪಿಸ್ತೂಲ್‍ನಿಂದ ಹೊಡೆದ ಗುಂಡನ್ನು ತಡೆಯಬಲ್ಲದು. ಚಿತ್ರ 51: ರಲ್ಲಿ ಕಾಣಿಸಿರುವ ವಿಶೇಷ ರಕ್ಷಣಾ ಹಲಗೆಯಿಂದಾಗಿ, ಇನ್ನೂ ಹೆಚ್ಚಿನ ಭೇದ್ಯತೆಯಿರುವ ಏಕೆ-47; ಎಸ್‍ಎಲ್‍ಆರ್ 7.6. ಇಂತಹ ಗುಂಡುಗಳನ್ನೂ ತಡೆಯಬಹುದು.

ಚಿತ್ರ-52

ಚಿತ್ರ-53

ಚಿತ್ರ 52ರಲ್ಲಿ ನೌಕಾ ಪಡೆಯ ಯೋಧರು ಉಪಯೋಗಿಸುವ ತೇಲುವ ರಕ್ಷಣಾ ಕವಚ ತೋರಿಸಿದೆ. ಚಿತ್ರ 53 ರಲ್ಲಿ ತೋರಿಸಿರುವ ರಕ್ಷಣಾ ಹಲಗೆಗಳನ್ನು ನಾನಾ ರೀತಿ ಉಪಯೋಗಿಸಬಹುದು; ಮಡಿಸಿ-ಬಿಚ್ಚಲಾಗುವ ತಾತ್ಕಾಲಿಕ ಆವರಣದಲ್ಲಿ ಯೋಧರು ಅಡಗಿಕೊಂಡು ಶತ್ರುಗಳನ್ನು ಎದುರಿಸಬಹುದು. ಇಲ್ಲವೇ ಈ ಹಲಗೆಗಳನ್ನು ಯೋಧರ ಕುಟೀರಗಳ ಗೋಡೆಗಳ ಹೊರೆಗೆ, ಅವರನ್ನು ಕೊಂಡೊಯ್ಯುವ ಟ್ರಕ್‍ಗಳ ಹೊರಭಾಗಕ್ಕೆ ವಿಮಾನದ, ನೌಕಾ ಪಡೆಯ ದೋಣಿಗಳ ಹೊರಗೆ ಅಳವಡಿಸಿಕೊಂಡು ಮದ್ದು ಗುಂಡುಗಳಿಂದ ರಕ್ಷಣೆ ಪಡೆಯಬಹುದು.

ಚಿತ್ರ-54

ಚಿತ್ರ-55


ಚಿತ್ರ 54: ಕ್ಷಿಪಣಿ ಕೊಂಡೊಯ್ಯುವ ಕಂಟೈನರ್ ಮದ್ದು-ಅಭೇದ್ಯ ಹಲಗೆಗಳಿಂದ ರಚಿತವಾದದ್ದು. ಚಿತ್ರ 55: ಲಾಂಚರ್ ಟ್ಯೂಬ್‍ಗಳು (ಕ್ಷಿಪಣಿಗಳನ್ನು ಉಡಾಯಿಸಲು ಉಪಯೋಗಿಸುವ ಸಾಧನಗಳು).ಈ ಟ್ಯೂಬ್‍ಗಳಲ್ಲಿ ಅತಿ ವೇಗದಿಂದ ಹೊರಬೀಳುವ ಕ್ಷಿಪಣಿ ಅತಿ ಹೆಚ್ಚಿನ ಅಪಕ್ಷರಣ ಹಾಗೂ ಉಷ್ಣತೆಯುಳ್ಳ ಪರಿಸರವನ್ನು ಉಂಟುಮಾಡುತ್ತದೆ. ಸಮ್ಮಿಶ್ರಣ ವಸ್ತುವಿಗೆ ಇವನ್ನು ತಡೆಯುವ ಶಕ್ತಿಯಿದೆ.

ಚಿತ್ರ-56

ಚಿತ್ರ-57

ಚಿತ್ರ 56 ರಲ್ಲಿ ಸ್ಯಾಂಡ್‍ವಿಚ್ ಹಲಗೆಗಳಿಂದ ನಿರ್ಮಿತ ಕಂಟೈನರ್ ಕಾಣಬಹುದು. ಕಮ್ಮಿ ತೂಕದಿಂದಾಗಿ ಟ್ರಕ್ಕಿನ ಇಂಧನ ಉಪಯೋಗಿಕೆಯು ಕಡಿಮೆ; ಒಳಗಡೆ ಕಡಿಮೆ ತಾಪಮಾನವನ್ನು ಬಳಸಿ, ಹಣ್ಣು, ಐಸ್ ಕ್ರೀಮ್, ಆಹಾರ ಇತರೆ ಕ್ಷೀಣಿಸುವ ಪದಾರ್ಥಗಳನ್ನು ಸಾಗಸಬಹುದು. ಇದೇ ರೀತಿಯಲ್ಲಿ ತಾತ್ಕಾಲಿಕ ತಂಗುದಾಣಗಳು ಮತ್ತು ರಕ್ಷಣಾ ಕ್ಯಾಬಿನ್‍ಗಳನ್ನು ನಿರ್ಮಿಸಬಹುದು. ಚಿತ್ರ 57: ಇನ್‍ಸಾಟ್ ಉಪಗ್ರಹಗಳೊಡನೆ ಸಂಪರ್ಕಿಸಲು ಉಪಯೋಗಿಸುವ ಸಮ್ಮಿಶ್ರ ಆ್ಯಂಟೆನಾಗಳು.

ಚಿತ್ರ-58

ಚಿತ್ರ 58 ಚಿತ್ರ 58: ಪ್ರಯೋಗಕ್ಕೆಂದೇ ತಯಾರಿಸಿರುವ ಸಮ್ಮಿಶ್ರ ಜಾಲಕ ರಚನೆಗಳು (ಲ್ಯಾಟಿಸ್). ಇವನ್ನು ಪ್ರೇಷಣಾ ತಂತಿಗಳಲ್ಲಿ ಅಡ್ಡ ಕೂಡಿಕೆಯಾಗಿ (ಕ್ರಾಸ್ ಆರ್ಮ್ಸ್) ಉಪಯೋಗಿಸುವ ಸಾಧ್ಯತೆ ಇದೆ. ಸಮ್ಮಿಶ್ರ ವಸ್ತುಗಳ ಬಳಕೆಯನ್ನು ಭಾರತದಲ್ಲಿ ವೃದ್ಧಿ ಮಾಡಲು, ಭಾರತ ಸರ್ಕಾರವೂ ಅನೇಕ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಿದೆ. ಕೇಂದ್ರ ಸರ್ಕಾರದ ಅಂಗವಾದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಆಶ್ರಯದಲ್ಲಿ ಅಡ್ವಾನ್ಸ್ಡ್ ಕಾಂಪೊಸೈಟ್ಸ್ ಪ್ರೊಗ್ರಾಮ್ (ಟೈಫಾಕ್) ಎಂಬ ಸಂಸ್ಥೆಯನ್ನು ಸ್ಥಾಪಿಸಿ, ಉದ್ಯಮಗಳಿಗೆ ಸಂಶೋಧನಾಲಯಗಳಿಗೆ ಹಾಗೂ ವಿಶ್ವ ವಿದ್ಯಾಲಯಗಳಿಗೆ ಆರ್ಥಿಕ ನೆರವು ಮತ್ತಿತ್ತರ ಸಹಾಯ ನೀಡುತ್ತಿದೆ. ಇದರಿಂದಾಗಿ ಇತ್ತೀಚೆಗೆ ಅನೇಕ ಹೊಸ ಬಗೆಯ ಬಳಕೆಗಳು ಭಾರತದಲ್ಲಿ ಕಂಡು ಬರುತ್ತಿದೆ. ಕೆಳಗೆ ಕಾಣುವ ಕೆಲವು ಚಿತ್ರಗಳಲ್ಲಿ ಇವನ್ನು ತೋರಿಸಲಾಗಿದೆ.

ಚಿತ್ರ-59

ಚಿತ್ರ-60

ಚಿತ್ರ-61


ಚಿತ್ರ 59: ಮೊಣಕಾಲಿನ ಕೆಳಭಾಗದಲ್ಲಿ ಧರಿಸಲು ಸಮ್ಮಿಶ್ರ ವಸ್ತುವಿನಿಂದ ತಯಾರಿಸಿದ ಕೃತಕ ಕಾಲು (ಮೋಹನ ಆರ್ಥೋಟಿಕ್ಸ್ ಅಂಡ್ ಪ್ರೋಸ್ತೆಟಿಕ್ಸ್ ಸೆಂಟರ್ ಚೆನ್ನೈ). ಚಿತ್ರ 60: ಭೂಕಂಪನ ನಿರೋಧಕ ಯೋಜನೆಯಲ್ಲಿ ನಿರ್ಮಿಸಿದ ಸೆಣಬು ನಾರು ಅವಲಂಬಿತ ಸಮ್ಮಿಶ್ರ ಮನೆಗಳು (ಕಚ್ಛ್, ಗುಜರಾತ್). ಚಿತ್ರ 61: ಕೊಂಕಣ ರೈಲ್ವೆಗೆ ಪ್ರಯೋಗ ಮಾಡುತ್ತಿರುವ `ಸ್ಕೈ ಬಸ್ ಕೋಚ್ (ಕಿನೆಕೋಪ್ರೈ. ಲಿ. ಪಣಜಿ) 150 ಜನರನ್ನು ಸಾಗಿಸುವಷ್ಟು ದೊಡ್ಡದು.

ಚಿತ್ರ-62

ಚಿತ್ರ-63

ಚಿತ್ರ-64


ಚಿತ್ರ 62: ಎಫ್‍ಆರ್‍ಪಿ ಕನೊಪಿ, ಇಎಂಯು, ರೈಲ್ವೆ ಕೋಚ್‍ಗಳಿಗೆ ಮುಂದಿರುವ ಹೊರ ಕವಚ (ಕಿನೆಕೊ ಪ್ರೈ ಲಿ ಪಣಜಿ). ಚಿತ್ರ 63: ಎಫ್‍ಆರ್‍ಪಿ ಸ್ಲೀಪರ್ಸ್; ರೈಲ್ವೆಗೆ ಪ್ರಯೋಗದಲ್ಲಿರುವ ಇವುಗಳು ಕಾಂಕ್ರೀಟ್ ಹಾಗೂ ಮರದಲ್ಲಿ ಮಾಡುವ ಸ್ಲೀಪರ್ಸ್ ಬದಲು ಪ್ರಾಯೋಗಿಕವಾಗಿ ಉಪಯೋಗಿಸಲಾಗುತ್ತಿದೆ (ಆರ್‍ಡಿ(ಇ) ಇಂಜಿನಿಯರ್ಸ್, ಡಿಆರ್‍ಡಿಡಿ, ಪುಣೆ/ಆರ್‍ಡಿಎಸ್‍ಒ ಲಕ್ನೋ). ಚಿತ್ರ 64: ಶೌಚಮನೆ ಮಾಡ್ಯೂಲ್; ರೈಲ್ವೆಯ ಕೋಚಿನಲ್ಲಿ ಅಳವಡಿಸಿರುವುದು; (ಹಿಂದೂಸ್ತಾನ್ ಫೈಬರ್ ಗ್ಲಾಸ್ ಲಿ. ವಡೋದರ).

ಚಿತ್ರ-65

ಚಿತ್ರ 65: ಸಮ್ಮಿಶ್ರ ವಿಹಾರ ದೋಣಿ ಎಂ.ವಿ. ವೃಂದಾ. ಇದೊಂದು ತೇಲುತ್ತಿರುವ ಪ್ರವಾಸಿ ಗೃಹ (ಪ್ರಾಗ ಸಾಗರ ಪ್ರೈ ಲಿ, ಕೊಯಂಬತ್ತೂರು).


ಚಿತ್ರ-66

ಚಿತ್ರ-67

ಚಿತ್ರ-68

ಚಿತ್ರ-69

ಚಿತ್ರ-70

ಚಿತ್ರ-71

ಚಿತ್ರ 66: ಎಫ್‍ಆರ್‍ಪಿ ಗಿಯರ್ ಕೇಸ್ (ರೈಲ್ವೆ ಇಂಜಿನ್‍ಗಳಿಗೆ) (ಪರ್‍ಮಾಲಿ ವ್ಯಾಲೆಸ್, ಬೋಪಾಲ್).. ಚಿತ್ರ 67: ಡೀಸೆಲ್ ಜನರೇಟರ್‍ಗೆ ಸಮ್ಮಿಶ್ರ ಶಬ್ದ ನಿಯಂತ್ರಣ ಕವಚ (ಸುಪಾಲ್ ಎಫ್‍ಆರ್‍ಪಿ ಪ್ರೈ.ಲಿ, ಹೈದರಾಬಾದ್). ಚಿತ್ರ 68, 69: ಪಲ್‍ಟ್ರೂಷನ್ ಸೆಕ್ಷನ್‍ಗಳಲ್ಲಿ ಮಾಡುವ ನಿರ್ಮಾಣ ಕಾರ್ಯಗಳಿಗೆ ಒಂದು ಉದಾಹರಣೆ- ಗ್ರೇಟಿಂಗ್ಸ್- ರಾಸಾಯನಿಕ ತಯಾರಿಕೆಯ ಕಾರ್ಖಾನೆಯ ಒಂದು ಅಂಗ. ಚಿತ್ರ 70: ಸೌರಶಕ್ತಿಗಾಗಿ ಬಳಸುವ ಎಫ್‍ಆರ್‍ಪಿ ವಿಂಡ್ ಟಬ್ರೈನ್ ಬ್ಲೇಡ್. 45 ಮೀ ಗಳಿಗೂ ಉದ್ದಕ್ಕಿರುವ ಈ ಬ್ಲೇಡ್‍ಗಳಿಂದಾಗಿ, ಈ ಶಕ್ತಿಕ್ಷಾಮ ಪ್ರಪಂಚದಲ್ಲಿ ಇದರ ಬಳಕೆ ಏರುತ್ತಿದೆ. (ಎಲ್‍ಎಂ ಗ್ಲಾಸ್ ಫೈಬರ್, ಬೆಂಗಳೂರು). ಮುನ್ನೋಟ: ಸಮ್ಮಿಶ್ರಣದ ಬಗ್ಗೆ ಉಪಯೋಗಿಸುವ ಪದಾರ್ಥಗಳ ಬಗ್ಗೆ ನಡೆಯುತ್ತಿರುವ ನಿರಂತರ ಪರಿಶೋಧನೆಯಿಂದಾಗಿ ಮುಂಬರುವ ಕಾಲದಲ್ಲಿ ಕೆಳಕಂಡ ಹೊಸಬಳಕೆಗಳು/ಪ್ರಗತಿ ಸಾಧ್ಯವಾಗಬಹುದು. ಟೈಟಾನಿಯಮ್ ಅವಲಂಬಿತ, ಕಾರ್ಬನ್-ಕಾರ್ಬನ್, ಸೆರಾಮಿಕ್‍ಅವಲಂಬಿತ, ಕಾಪರ್ (ಅu)- ಕಾರ್ಬನ್ ಅವಲಂಬಿತ ಸಮ್ಮಿಶ್ರಣಗಳು ಬಳಕೆಗಳನ್ನು ಅತಿ ಎತ್ತರದ ತಾಪಮಾನಗಳಿಗೆ ಕೊಂಡೊಯುತ್ತಿವೆ. ಪರಿಸರ ಸಂರಕ್ಷಣೆಯಿಂದಾಗಿ `ಹಸುರು ಸಮ್ಮಿಶ್ರ ವಸ್ತುಗಳು ಬರಲಿವೆ, ಇವುಗಳು ಪೂರ್ಣವಾಗಿ ಪುನರ್ ಉಪಯೋಗಕ್ಕೆ ಲಭ್ಯ; ಪರಿಸರಕ್ಕೆ ಯಾವ ರೀತಿಯ ಹಾನಿಯನ್ನೂ ಮಾಡುವುದಿಲ್ಲ ಹೆಚ್ಚು ಗುಣಲಕ್ಷಣವುಳ್ಳ ಕಾರ್ಬನ್ ನೂಲಿನ ಉಪಯೋಗದಿಂದಾಗಿ, ನಿರ್ಮಾಣ ಕ್ಷೇತ್ರದಲ್ಲಿ, ಕಟ್ಟಡಗಳ ಪುನರ್ವಸತಿ ಭೂಕಂಪಾನಾ ನಂತರ ಸೇತುವೆ-ಕಟ್ಟಡಗಳ ದುರಸ್ತಿ ಇಂತಹ ಕ್ಷೇತ್ರದಲ್ಲಿ ಪ್ರಗತಿ. ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಮಾನವನ ಅಂಗಾಗಳಿಗೆ ಹೊಸ ರಕ್ಷಣಾ ರೂಪಗಳು, ಅಂಗನ್ಯೂನತೆಗಳನ್ನು ಸರಿಪಡಿಸುವ ಸಾಧನಗಳಲ್ಲಿ ಹೆಚ್ಚು ಅನುಕೂಲಗಳು ದೊರಕಬಹುದು ರಕ್ಷಣಾ ಕ್ಷೇತ್ರದಲ್ಲಿ ನೂತನ ರಕ್ಷಣಾ ಉಪಾಯಗಳು, ಯುದ್ಧ ಟ್ಯಾಂಕ್, ರಕ್ಷಣಾ ವಾಹನಗಳು ಹಾಗೂ ಯುದ್ಧ ವಿಮಾನಗಳು, ಪೈಲೆಟ್ ಇಲ್ಲದೆಯೇ ಓಡಿಸುವ ವಿಮಾನಗಳು ಸಾರಿಗೆಯ (ಭೂಮಿ, ವಾಯು, ಸಮುದ್ರ) ರೀತಿ ನೀತಿಗಳೇ ಬದಲಾಗುವ ಸಂಭವ. (ಸ್ಮಾರ್ಟ್ ರಚನೆಗಳು) ಒಳಗೊಂಡ ನೂತನ ವಿಮಾನಗಳು, ಮೋಟಾರ್ ಕಾರ್‍ಗಳು ಇತ್ಯಾದಿ. ವೇಗ ವೇಗವರೆಗೆ ಅಲೆಶಕ್ತಿ, ವಾಯುಶಕ್ತಿಯನ್ನು ದೊರೆಕಿಸಿಕೊಳ್ಳು ಸಮ್ಮಿಶ್ರ ವಸ್ತುವಿನ ಹೆಚ್ಚು ಬಳಕೆಗಳು, ಸಮ್ಮಿಶ್ರಣಕ್ಕೆ ಮುಂಚೆ ಉಪಯೋಗಿಸುವ ಪದಾರ್ಥಗಳು ಹಾಗೂ ಮಿಶ್ರಣ ಕಾರ್ಯದಲ್ಲಿ ಉಪಯೋಗಿಸುವ ಯಂತ್ರಗಳ ಸಲಕರಣೆಗಳ ಹೊಸ ರೂಪಗಳಿಂದಾಗಿ, ಕಾರ್ಮಿಕ ಸಿಬ್ಬಂದಿಗಳಿಗೆ ಹೆಚ್ಚಿನ ಸಂರಕ್ಷತೆ. ಶಕ್ತಿ ಸಂರಕ್ಷಣೆ ಕಾರ್ಯಕ್ಕೆ ಸಮ್ಮಿಶ್ರ ವಸ್ತುವಿನ ಉಪಯೋಗದಿಂದ ಹೆಚ್ಚಿದ ಕೊಡುಗೆ. “ನ್ಯಾನೋ” ಸಮ್ಮಿಶ್ರ ವಸ್ತುಗಳು: ಕೇವಲ ನಾಲ್ಕು ವರ್ಷಗಳ ಹಿಂದೆ ಕಂಡು ಹಿಡಿದ ಈ ವಸ್ತುವಿನ ಉಪಯೋಗ ಬಹಳವಾಗಿ ಬೆಳೆಯುವ ಸಂಭವವಿದೆ. ಇವುಗಳ ಕಟ್ಟಡ ಬ್ಲಾಕ್:1-3 ಮಿಮಿ ವ್ಯಾಸವುಳ್ಳ ಕಾರ್ಬನ್ ಎಳೆ (ಸಿಂಗಲ್ ವಾಲ್ ಕಾರ್ಬನ್ ನ್ಯಾನೊ ಟ್ಯೂಬ್), ದೊಡ್ಡ ಅಣುಗಳಿಂದ ಮಾಡಿದ್ದು, ಉರುಳೆ ಆಕಾರದಲ್ಲಿರುತ್ತದೆ. ಇದಕ್ಕೆ ಸ್ಟೀಲ್ ಲೋಹಕ್ಕೆ ಹೋಲಿಸಿದಾಗ 100 ರಷ್ಟು ಹೆಚ್ಚಾಗಿ ಕರ್ಷಕ ತ್ರಾಣ ಇದ್ದು ಒಳ್ಳೆಯ ವಿದ್ಯುತ್ ಹಾಗೂ ಉಷ್ಣವಹನ ಲಕ್ಷಣಗಳನ್ನು ಪಡೆದಿವೆ. ಮುಂಬರುವ ಉಪಯೋಗಗಳಲ್ಲಿ ಕೆಲವು: ಅರೆ ವಾಹಕಗಳ ಸಾಧನಗಳು, ಮೋಟಾರು ವಾಹನದ ಬಿಡಿಭಾಗಗಳು, ಸುಧಾರಿಸಿದ ಎಳೆಗಳಿಂದ ಮಡಿದ ಗುಂಡು ನಿರೋಧಕ ಸೊಂಟ್ ಕವಚ, ಪ್ಲಾಸ್ಟಿಕ್ ಭಾಗಗಳು ಅತಿ ಶಕ್ತಿ ಮತ್ತು ಕಮ್ಮಿ ಸಾಂದ್ರತೆಯುಳ್ಳದು; ಫ್ಯೂಯೆಲ್ ಸೆಲ್ ಭಾಗಗಳು- ಎಲೆಕ್ಟ್ರೋಡ್, ಸೆನ್ಸರ್, ಆಕ್ಚ್ಯುಂÉುೀಟರ್ಸ್ ಇತ್ಯಾದಿ. ಇಂತಹ ವಸ್ತುಗಳಲ್ಲಿ ಒಂದೇ ದಿಕ್ಕಿನಲ್ಲಿ(ಅಕ್ಷ) ನ್ಯಾನೋ ಟ್ಯೂಬುಗಳನ್ನು ಓರಣ ಮಾಡುವುದು ಮುಖ್ಯ. ಹೆಚ್ಚು ತ್ರಾಣ ಉಳ್ಳ ಪಾಲಿಮರ್ ಪದಾರ್ಥದಲ್ಲಿ ಇವುಗಳನ್ನು ಜೋಡಿಸಿ ಸಮ್ಮಿಶ್ರ ಮಾಡಲಾಗುತ್ತದೆ. ತಾಂತ್ರಿಕತೆಯಲ್ಲಿ ಕಾರ್ಮಿಕ ಸುರಕ್ಷತೆ ಮತ್ತು ಮಾಲಿನ್ಯ ನಿವಾರಣೆ ಎಲ್ಲಾ ಕೈಗಾರಿಕಾ ಕ್ಷೇತ್ರದಲ್ಲೂ ಇರುವ ಹಾಗೆ: - ನಂಜು (ಜೀವಕ್ಕೆ ಅಪಾಯ ತರುವ ವಿಷಗಳು) - ಅಪಾಯ (ನಂಜಿಗೆ ವ್ಯಕ್ತಿ ಒಡ್ಡಿಗೊಂಡಾಗ ಎಷ್ಟರ ಮಟ್ಟಿಗೆ ನಂಜು ಆಗಿದೆ) -ಅಪಾಯ ಸಂಭವ (ಅಪಾಯದಿಂದಾಗಿ ದೇಹಕ್ಕೆ ಕೆಟ್ಟದಾಗುವ ಸಂಭವನೀಯತೆ) ಮೂರು ಅಂಶಗಳೂ ಬಹು ಮುಖ್ಯವಾದವು ಸಮ್ಮಿಶ್ರಣದ ಕೈಗಾರಿಕೆಯಲ್ಲಿ, ಸಮ್ಮಿಶ್ರಣ ಕ್ರಿಯೆಯಲ್ಲಿ ನಾನಾ ರೀತಿಯ ರಾಸಾಯನಿಕ ಬಾಷ್ಪ, ದೂಳು, ವಾಸನೆಯುಳ್ಳ ಗಾಳಿ, ಶಬ್ದ ಇವೆಲ್ಲವನ್ನೂ ಕಾರ್ಮಿಕರು ಎದುರಿಸಬೇಕಾಗುತ್ತದೆ. ಅಂತಹ ಪರಿಸರದಲ್ಲಿ ಒಬ್ಬ ವ್ಯಕ್ತಿ. - ಕಣ್ಣು, ಚರ್ಮ, ಕೈಗಳ ಮೂಲಕ ನಂಜುಕಾರಕಗಳನ್ನು ಮುಟ್ಟಬಹುದು, ಪಡೆಯಬಹುದು - ಉಸಿರಾಟದಿಂದ ಶ್ವಾಸಕೋಶದೊಳಗೆ ನಂಜನ್ನು ಎಳೆದುಕೊಳ್ಳಬಹುದು - ದೇಹದ ಒಳಗೆ ಆಹಾರದ ಮುಲಕ ನಂಜುಗಳನ್ನು ಸಾಗಿಸಬಹುದು - ಆಕಸ್ಮಿಕವಾಗಿ ಚೂಪು ಪದಾರ್ಥಗಳಿಂದ ಗಾಯವಾಗಿ ದೇಹದೊಳಗೆ ನಂಜು ಹೋಗಬಹುದು. ಕಾರ್ಮಿಕ ಕಾನೂನು ಹಾಗೂ ಕೈಗಾರಿಕಾ ಸುರಕ್ಷತಾ ಕಾಯ್ದೆ ಮೂಲಕವಾಗಿ ಆಗಲೆ ಉದ್ಯಮಗಳಲ್ಲಿ ಅನೇಕ ರೀತಿಯ ನಿಯಂತ್ರಣ ವಿಧಿಗಳು ನಿಯಮ ಜಾರಿಗಿವೆ. ಉದಾಹರಣೆಗೆ ಅಮೆರಿಕದ ರಾಷ್ಟ್ರೀಯ ಸುರಕ್ಷತಾ ಸಮಿತಿ (ಎನ್‍ಎಸ್‍ಸಿ) ಸಮ್ಮಿಶ್ರಣ ಉದ್ಯಮಕ್ಕೆ ಅನ್ವಯಿಸುವ ಕೆಲವು ನಿಯಂತ್ರಣಗಳನ್ನು ಹೊರತಂದಿದೆ.: ಉದಾ: ಸಂರಕ್ಷಣಾ ನಿಯಂತ್ರಣ, ಆ ಕುರಿತು ತಿಳಿದು ಶಿಕ್ಷಣ ತರಪೇತಿ, ಮಾಹಿತಿ ನಿಭಾಯಿಸುವ ಪರಿ ವ್ಯಕ್ತಗತ ಆರೋಗ್ಯ ಇತ್ಯಾದಿ. ಸುರಕ್ಷತಾ ನಿಯಂತ್ರಣ, ವ್ಯಕ್ತಿಗತ ನಿಯಂತ್ರಣ, ಶಿಕ್ಷಣ ಮತ್ತು ತರಪೇತಿ, ಮಾಹಿತಿ ನಿರ್ವಹಣೆ, ಪ್ರಕ್ರಿಯಾ ನಿಯಂತ್ರಣ, ವೈಯಕ್ತಿಕ ಆರೋಗ್ಯ, ಎಚ್ಚರಿಕೆ ಸೂಚನೆಗಳು, ಮನೆವಾರ್ತೆ, ತುರ್ತು ಯೋಜನೆಗಳು, ಹವಾ ವ್ಯವಸ್ಥೆ, ವೈದ್ಯಕೀಯ ನಿಯಂತ್ರಣ, ಇಂಜಿನಿಯರಿಂಗ್ ವಿಧಿವಿಧಾನಗಳು, ವೈಕ್ತಿಕ ರಕ್ಷಣಾ ಉಪಕರಣಗಳು ಮತ್ತು ಆಡಳಿತಾತ್ಮಕ ನಿಯಂತ್ರಣಗಳು. ಮೇಲೆ ಹೇಳಿದ ಆತ್ಮ ಸಂರಕ್ಷಣಾ ಸಾಧನಗಳು ರಕ್ಷಣಾ ಕಾರ್ಯದಲ್ಲಿ ಬಹು ಮುಖ್ಯ ಅಂಗ. ಇದರ ಆವೃತ್ತಿಯಲ್ಲಿರುವುದು: ಕೈಗಡಸು, ಚರ್ಮ ಮುಲಾಮು, ಸುರಕ್ಷಾ ಕನ್ನಡಕ, ನೇತ್ರ ರಕ್ಷಣೆ, ಮುಖವಾಡ, ಉಸಿರಾಟದ ಸಂರಕ್ಷಕಗಳು ಇತ್ಯಾದಿ. ಇದಲ್ಲದೆ, ಪ್ಲಾಸ್ಟಿಕ್, ನೂಲು ಮತ್ತಿತರ ಪದಾರ್ಥಗಳ ತಯಾರಕರು ಕೂಡ ನಂಜಿನ ಬಗ್ಗೆ ಮಾಹಿತಿಯನ್ನು ಗ್ರಾಹಕರಿಗೆ ಒದಗಿಸಿ ಮುನ್ನೆಚ್ಚರ ಕೊಡುತ್ತಾರೆ. ಈ ನಿಟ್ಟಿನಲ್ಲಿ ಪೂರ್ಣ ಸಂರಕ್ಷಣೆಯನ್ನು ಪಡೆಯಲು ಅಸಾಧ್ಯವಾಗದಿದ್ದರೂ, ಪದಾರ್ಥ ತಯಾರಕರು, ಯಂತ್ರ ತಯಾರಕರೂ, ಮಿಶ್ರಣ ವಿಜ್ಞಾನಿಗಳೂ ಸತತವಾಗಿ ದುಡಿಯುತ್ತಲೇ ಇದ್ದಾರೆ. ವಿಲೇವಾರಿ ಮತ್ತು ಪುನಃಚಕ್ರೀಕರಣ ಅನೇಕ ದಶಕಗಳಿಂದ ಲಕ್ಷ ಲಕ್ಷ ಟನ್ನುಗಳ ಪ್ರಮಾಣದಲ್ಲಿ ತಯಾರಾಗುತ್ತಿರುವ ಸಮ್ಮಿಶ್ರ ವಸ್ತುಗಳು ಗ್ರಾಹಕರಿಂದ ಉಪಯೋಗವಾದೊಡನೇ ಬೇಡವಾದ ಕಸವಾಗುತ್ತದೆ. ಹೀಗಾಗಿ, ಇವುಗಳ ವಿಲೇವಾರಿಯನ್ನು ಪರಿಸರಕ್ಕೆ ಧಕ್ಕೆ ತರದ ಹಾಗೆ ಹೇಗೆ ಜಾರಿಗೆ ತರುವುದು ಮತ್ತು ಆ ವಸ್ತುಗಳನ್ನು ಪುನಃ ಚಕ್ರೀಕರಣ ಮಾಡಬಹುದೆ? ಎಂಬ ಪ್ರಶ್ನೆಗಳು ಎಲ್ಲರನ್ನೂ ಕಾಡುತ್ತಿವೆ. ಈ ದಿಟ್ಟಿನಲ್ಲಿ ಒಂದು ರೀತಿಯ ಸಮರ್ಪಕ ಉತ್ತರ ಥರ್ಮೋಪ್ಲಾಸ್ಟಿಕ್ ಆಧಾರಿತ ವಸ್ತುಗಳಿಗೆ ದೊರಕಿದೆ. ಅವನ್ನೆ ಕರಗಿಸಿ, ಕರಗಿದ ಮಿಶ್ರಣದಿಂದ ಪ್ಲಾಸ್ಟಿಕ್ಕನ್ನೂ ನೂಲು ನಾರುಗಳನ್ನೂ ವಿಂಗಡಿಸಿ, ಅವನ್ನು ಮತ್ತೊಮ್ಮೆ ಮಿಶ್ರಣ ಕಾರ್ಯಕ್ಕೆ ಉಪಯೋಗಿಸಲು ಸಾಧ್ಯವಾಗಿದೆ. ಆದರೆ ಪುನ:ಮಿಶ್ರಣ ಮತ್ತು ಪುನಃ ಚಕ್ರೀಕರಣ ಮಾಡಿದಾಗ ಮೊದಲಿದ್ದ ಗುಣಲಕ್ಷಣಗಳು ಕೆಲವೊಮ್ಮೆ ನಶಿಸುತ್ತವೆ. ಈ ಕೊರತೆಯನ್ನು ಹೋಗಲಾಡಿಸಲು ಮಿಶ್ರಣದಲ್ಲಿ ಹೊಸ ಪದಾರ್ಥಗಳ ಬಳಕೆಯೂ ಆಗುತ್ತದೆ. ಥರ್ಮೋಪ್ಲಾಸ್ಟಿಕ್ ಮರುಪಯೋಗಕ್ಕೆ ತ್ರೀವಿ ರೀತಿಯಲ್ಲಿ ಪುಟಕೊಟ್ಟಿರುವ ಕಾರಣ: ಯೂರೋಪ್, ಅಮೆರಿಕ, ಜಪಾನ್‍ನಲ್ಲಿ ಮೋಟಾರ್ ಕಾರು ಉದ್ಯಮಗಳು ದೊಡ್ಡ ಪ್ರಮಾಣದಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುವುದರಿಂದ. ಹಾಗೂ ಅಲ್ಲಿಯ ಸರ್ಕಾರಗಳು ಎಚ್ಚೆತ್ತು ಇದರ ಬಗ್ಗೆ ಹೊಸ ನಿಯಮಾವಳಿಗಳನ್ನು ತರುತ್ತಿರುವುದರಿಂದ. ಥರ್ಮೋಸೆಟ್ ಆಧಾರಿತ ವಸ್ತುಗಳ ವಿಲೇವಾರಿ ಹಾಗೂ ಪುನಃ ಚಕ್ರೀಕರಣ ಅಷ್ಟು ಸುಲಭವಲ್ಲ. ಏಕೆಂದರೆ: ಥರ್ಮೋಸೆಟ್ ವಸ್ತುಗಳನ್ನು ಮತ್ತೊಮ್ಮೆ ಕರಗಿಸಲು ಸಾಧ್ಯವಿಲ್ಲ. ಹೀಗಾಗಿ, ಇವುಗಳನ್ನು ಪೂರ್ವನಿರ್ಧಿತ ಜಾಗಗಳಲ್ಲಿ ನೆಲದಲ್ಲಿ ಹೂಳುವುದು ಇಲ್ಲವೇ ಸುಡುಗೂಡುಗಳಲ್ಲ್ಲಿ ಸುಟ್ಟು ಪೂರ್ಣವಾಗಿ ಆಕ್ಸಿಡೀಕರಣ ಮಾಡುವುದು: ಇವೆರಡು ಮಾರ್ಗಗಳಾಗಿ ತೋರುತ್ತಿವೆ. ಆದರೆ ಈ ಕಾರ್ಯಗಳಿಗೂ ಅಡಚಣೆಗಳಿವೆ. ಮೊದಲನೆಯದಾಗಿ, ಹೂಳಲು ಜಾಗಗಳು ವಿರಳವಾಗುತ್ತಿವೆ. ಅದಲ್ಲದೆ ಹೂಳಿದ ನಂತರ ಕೆಳಗಿರುವ ಅಂತರ್ಜಲ ಮಟ್ಟಕ್ಕೆ ಪ್ಲಾಸ್ಟಿಕ್‍ನ ದೀರ್ಘಕಾಲಿಕ ಸಂರ್ಪಕ ಆಗುವ ಸಂಭವವಿದೆ (ಪ್ಲಾಸ್ಟಿಕ್‍ಗಳು ಜೈವಶಿಥಿಲೀಯವಲ್ಲದ ಪದಾರ್ಥಗಳು) ಸುಡುಗೂಡುಗಳಿಂದ ಹೊರಬಂದ ಕಾರ್ಬನ್‍ಯುಕ್ತ ತ್ಯಾಜ್ಯವನ್ನು ಮತ್ತೆಲ್ಲಾದರೂ ವಿಲೇವಾರಿ ಮಾಡಬೇಕು. ಅದಕ್ಕೆ ಮರುಪಯೋಗಗಳಿಲ್ಲ ಥರ್ಮೋಸೆಟ್ ವಸ್ತುಗಳನ್ನು ಪುನಃಚಕ್ರೀಕರಣ ಮಾಡಲು ಇನ್ನೆರಡು ವಿಧಾನಗಳನ್ನು ಉದ್ಯಮಗಳು ಪರಿಶೀಲಿಸುತ್ತಿವೆ. ಅವು: (ಚಿ) ಉಪಯೋಗಿಸಿದ ವಸ್ತುವನ್ನು ಒಡೆದು, ಕತ್ತರಿಸಿ, ಅರೆದು, ಪುಡಿಯಾಗಿಯೋ ಗೋಲಿಗಳ ರೂಪದಲ್ಲೋ, ಮತ್ತೊಮ್ಮೆ ಮಿಶ್ರಣಕ್ಕೆ ಕಳಿಸುವುದು

(b) ಉಷ್ಣ ವಿಭಜನೆಯ ಮಾರ್ಗದಿಂದ ಆಕ್ಸಿಜನ್‍ರಹಿತ ಪರಿಸರದಲ್ಲಿ ಕಾಸಿ, ಮೂಲ ಪದಾರ್ಥಗಳ ಕೆಲವು ಅಂಶಗಳನ್ನಾದರೂ ದಕ್ಕಿಸಿಕೊಳ್ಳುವುದು ಮೇಲ್ಕಂಡ ಕಾರ್ಯವಿಧಾನಗಳು ಉಪಯೋಗಿಸಿದ ವಸ್ತುಗಳಿಗೆ ಮಾತ್ರ ಸೀಮಿತವಾದುದಲ್ಲ. ಇವು ಉತ್ಪಾದನಾ ವ್ಯರ್ಥ ಪದಾರ್ಥ ಅಥವಾ ಪ್ರಕ್ರಿಯಾ ವ್ಯರ್ಥ ಪದಾರ್ಥ ಎಂದು ಹೊರ ಎಸೆಯುವ ಪದಾರ್ಥಗಳಿಗೂ ಅನ್ವಯಿಸುತ್ತದೆ. (ಉದಾ: ಪೂರ್ವ ಮಿಶ್ರಿತ ಪದಾರ್ಥ: ಕಾರ್ಬನ್ ಪ್ರಿಪೆಗ್) ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ವಿಲೇವಾರಿ ಮತ್ತು ಪುರ್ನಚಕ್ರೀಕರಣಗಳ ಹಿನ್ನೆಲೆ ಈ ಕೆಳಕಂಡ ಧ್ಯೇಯಗಳಿವೆ: ಉಪಯೋಗಿಸಿದ ವಸ್ತುವನ್ನು ಹಳೆಯ ರೂಪ, ಆಕಾರದಲ್ಲೇ ಮತ್ತೊಮ್ಮೆ ಉಪಯೋಗಿಸುವುದು ಉಪಯೋಗಿಸಿದ ವಸ್ತುವನ್ನು ಕಡಿಮೆ ಗುಣಲಕ್ಷಣ ಬೇಕಿರುವ ಕಡೆ ಮರುಬಳಸುವುದು ಉಪಯೋಗಿಸುವ ವಸ್ತುಗಳಿಂದ ಆದಷ್ಟು ಹೆಚ್ಚು ಅಂಶದಲ್ಲಿ ಮೂಲ ಪದಾರ್ಥಗಳನ್ನು ಹೊರ ತೆಗೆಯುವುದು ಪ್ಲಾಸ್ಟಿಕ್‍ಗಳನ್ನು ಸುಡುವಾಗ ಅದರಿಂದ ಬಿಡುಗಡೆಯಾದ ಶಾಖ ಶಕ್ತಿಯನ್ನು ಇನ್ನಾವ ಕಾರ್ಯಕ್ಕಾದರೂ ಉಪಯೋಗಿಸುವುದು ಮೇಲ್ಕಂಡ ಪ್ರಯತ್ನಗಳು ಪೂರ್ಣವಾಗಿ ಫಲಿಸದಿದ್ದಲ್ಲಿ ನಮ್ಮ ಮುಂದಿನ ಪೀಳಿಗೆಗೆ, ಪರಿಸರಕ್ಕೆ ಆಗುವ ಹಾನಿಯನ್ನು ಊಹೆ ಮಾಡಲೂ ಸಾಧ್ಯವಿಲ್ಲ. (ಸಿ.ಆರ್.ಸತ್ಯ)